Attaullah Khan: ಗೆಳತಿ ಕೊಂದು ಜೈಲಲ್ಲಿ ಬರೆದ ಹಾಡುಗಳು ಸೂಪರ್​ ಡೂಪರ್​: ಬಾಲಿವುಡ್​ ಗಾಯಕನ ರೋಚಕ ಕಥೆ!

By Suvarna NewsFirst Published Jan 23, 2023, 9:30 PM IST
Highlights

80- 90ರ ದಶಕದಲ್ಲಿ ಬಾಲಿವುಡ್​ನಲ್ಲಿ ಖ್ಯಾತಿ ಗಳಿಸಿದ ದುಃಖಭರಿತ ಹಾಡುಗಳಲ್ಲಿ ಬಹುತೇಕವುಗಳನ್ನು ಬರೆದದ್ದು ಗಾಯಕ ಅತಾವುಲ್ಲಾ ಖಾನ್​ ಅವರು. ಇವರ್ಯಾರು? ಇವರ ಜೀವನದ ರೋಚಕ ಕಥೆ ಇಲ್ಲಿದೆ...
 

1995 ರಲ್ಲಿ ಬಿಡುಗಡೆಗೊಂಡ ಗುಲ್ಶನ್​ ಕುಮಾರ್​ ನಿರ್ದೇಶನದ ಬ್ಲಾಕ್​ಬ್ಲಸ್ಟರ್​ 'ಬೇವಫಾ ಸನಮ್' (Bewafa Sanam) ಚಿತ್ರ ನೆನಪಿದೆಯಾ?  ಈ ಸಿನಿಮಾದ  ನಾಯಕ ಖ್ಯಾತ ಕ್ರಿಕೆಟಿಗನಾಗಿರುತ್ತಾನೆ.  ಸುಳ್ಳು ಆರೋಪ ಹೊರಿಸಿ ಆತನನ್ನು ಜೈಲಿಗೆ ಕಳುಹಿಸಲಾಗುತ್ತದೆ. ನಂತರ ಆತನ  ಗೆಳತಿ ಬೇರೊಬ್ಬರನ್ನು ಮದುವೆಯಾಗಲು ತಯಾರಿ ನಡೆಸುತ್ತಾಳೆ.  ಇದರಿಂದ ಕೊತಕೊತ ಕುದಿಯುವ ನಾಯಕ,  ಜೈಲಿನಿಂದ ಹೋಗಿ ಗೆಳತಿಯನ್ನು ಕೊಂದು ಬರುತ್ತಾನೆ, ಮೊದಲು ನಿರಪರಾಧಿಯಾಗಿದ್ದರೂ ಜೈಲುವಾಸಿಯಾದ ಈತ ಈಗ ನಿಜವಾಗಿಯೂ ಅಪರಾಧಿಯಾಗಿ ಜೈಲು (Jail) ಸೇರುತ್ತಾನೆ. ಇದು 'ಬೇವಫಾ ಸನಮ್' ಚಿತ್ರದ ಕಥೆ. ಈ ಚಿತ್ರದ ಹಾಡುಗಳು ದೇಶಾದ್ಯಂತ ಸದ್ದು ಮಾಡಿದ್ದವು. ಅದರಲ್ಲಿಯೂ  'ಅಚ್ಚಾ ಸಿಲಾ ದಿಯಾ ತೂನೆ ಮೇರೆ ಪ್ಯಾರ್ ಕಾ' (ನನ್ನ ಪ್ರೀತಿಗೆ ನೀನು ತಕ್ಕ ಉಪಕಾರ ಮಾಡಿದೆ) ಹಾಡನ್ನು ಹಾಡುವ ಮೂಲಕ ಗಾಯಕ ಸೋನು ನಿಗಮ್ ರಾತ್ರೋರಾತ್ರಿ ಸ್ಟಾರ್ ಆದರು. ಈ ಹಾಡು ಇಂದಿಗೂ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಯೂರಿಬಿಟ್ಟಿದೆ.  

ಈ ಚಿತ್ರದ 'ಅಚ್ಚಾ ಸಿಲಾ ದಿಯಾ ತೂನೆ ಮೇರೆ ಪ್ಯಾರ್ ಕಾ' ಗಾಯನ ಸೇರಿದಂತೆ ಚಿತ್ರದಲ್ಲಿನ  ಹಿಟ್​ ಹಾಡುಗಳನ್ನು ಬರೆದವರು ಗಾಯಕ ಅತಾವುಲ್ಲಾ ಖಾನ್ (Attaullah Khan).  ಈ ಚಿತ್ರದ ಕಥೆಯು ಅತಾವುಲ್ಲಾ ಖಾನ್​ ಅವರ ನಿಜ ಜೀವನದ ಕಥೆಯಾಗಿದೆ. ಅತಾವುಲ್ಲಾ ಅವರು ಗೆಳತಿಯನ್ನು ಕೊಂದು ಜೈಲು ಸೇರಿದ ಮೇಲೆ ಅಲ್ಲಿ ಈ ಚಿತ್ರಕ್ಕೆ ಹಾಡುಗಳನ್ನು ರಚಿಸಿದ್ದಾರೆ. ಅದಕ್ಕಾಗಿಯೇ ಈ ಹಾಡುಗಳಲ್ಲಿ ಅಷ್ಟೊಂದು ನೋವಿನ ಭಾವವಿದೆ ಎಂಬ ಸುದ್ದಿ ಹರಡಿದ್ದು,  ಈಗಲೂ ಅದನ್ನು ನಂಬುವವರು ಇದ್ದಾರೆ. ಆದರೆ 80ರ ದಶಕದಲ್ಲಿ ಹರಿದಾಡುತ್ತಿದ್ದ ಈ ಸುದ್ದಿ ಶುದ್ಧ ಸುಳ್ಳು ಎನ್ನುವುದನ್ನು ಅತಾವುಲ್ಲಾ ಖಾನ್​ ಅವರು ಈಗ ತಿಳಿಸಿದ್ದು, ಅಂದಿನ ದಿನಗಳ ಗಾಳಿಸುದ್ದಿಯ ಬಗ್ಗೆ ವಿಷಾದಿಸಿದ್ದಾರೆ. 

NiKhil Kumarswamy: ಬರ್ತ್​ಡೇ ದಿನವೇ ಅಭಿಮಾನಿಗಳಿಗೆ ಗುಡ್​ನ್ಯೂಸ್​ ಕೊಟ್ಟ ನಿಖಿಲ್​ ಕುಮಾರಸ್ವಾಮಿ ​

 80ರ ದಶಕದ ಹಲವು ಬಾಲಿವುಡ್​ (Bollywood) ಚಿತ್ರಗಳನ್ನು ಮುಂಬೈನಿಂದ ಹಳ್ಳಿಗಳ ಅಂಗಳಕ್ಕೂ ಕೊಂಡೊಯ್ಯುವಲ್ಲಿ ಅತಾವುಲ್ಲಾ ಖಾನ್​ ಅವರ ಕೊಡುಗೆ ಅಪಾರವಾಗಿದೆ. ಭಾರತದಲ್ಲಿ 80 ರ ದಶಕದ ದಶಕವು ಸಂಗೀತ ಲೋಕಕ್ಕೆ ಬಹಳ ವಿಶೇಷವಾಗಿದೆ. ಅದೇ ದಶಕದಲ್ಲಿ, ಕ್ಯಾಸೆಟ್ ಕ್ರಾಂತಿ  ಸಂಗೀತದ ವ್ಯಾಪ್ತಿಯನ್ನು  ಹಳ್ಳಿಗಳಿಗೆ ವಿಸ್ತರಿಸಿತು. ಇದಾದ ನಂತರ, ಸಂಗೀತವನ್ನು ಸಾಮಾನ್ಯ ಜನರ ಬಳಿಗೆ ಕೊಂಡೊಯ್ಯಲು ಕೆಲವು ತಾರೆಯರು ಮುಂದೆ ಬಂದರು ಮತ್ತು ಅವರ ಹಾಡುಗಳು ನಗರಗಳಿಂದ ಹಳ್ಳಿಗಳಿಗೆ ಮತ್ತು ಬೀದಿಗಳಿಂದ ಪಾರ್ಟಿಗಳಿಗೆ ಅನುರಣಿಸಿದವು. ಅಂತಹ ಒಬ್ಬ ತಾರೆಯೇ ಈ ಪಾಕಿಸ್ತಾನದ (Pakistan) ಮೂಲದ ಅತಾವುಲ್ಲಾ ಖಾನ್. 

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮಿಯಾನ್ವಾಲಿ ಪ್ರದೇಶದಲ್ಲಿ ಜನಿಸಿದ ಅತಾವುಲ್ಲಾ ಖಾನ್ ಅವರು ತಮ್ಮ ನೋವಿನ ಹಾಡುಗಳಿಗೆ ಹೆಸರುವಾಸಿಯಾಗಿದ್ದರು. 1992ರಲ್ಲಿ, ಸಂಗೀತ ಲೋಕದ  ಕೊಹಿನೂರ್‌ ವಜ್ರಗಳನ್ನು ಪರೀಕ್ಷಿಸಿದವರು ಆಭರಣ ವ್ಯಾಪಾರಿ ಗುಲ್ಶನ್ ಕುಮಾರ್.  ಗಾಯಕ ಅತಾವುಲ್ಲಾ ಖಾನ್ ಅವರ ಕಣ್ಣಿಗೆ ಬಿದ್ದರು. ಗುಲ್ಶನ್ ಕುಮಾರ್ ಅವರು ಅತಾವುಲ್ಲಾ ಖಾನ್ ಅವರೊಂದಿಗೆ 'ಬೇದರ್ದಿ ಸೇ ಪ್ಯಾರ್ ಕಾ' ಆಲ್ಬಂ (Album) ಮಾಡಿದರು. ಈ ಆಲ್ಬಂ ಭಾರತದಲ್ಲಿ ಸೂಪರ್ ಹಿಟ್ ಆಗಿತ್ತು. ಅವರ ಒಂದು ಆಲ್ಬಂ ಭಾರತದಲ್ಲೂ ಹಿಟ್ ಆಯಿತು. ಕ್ಯಾಸೆಟ್ ಟೇಪುಗಳು ದೇಶದ ಹಳ್ಳಿಗಳು ಮತ್ತು ಪ್ರದೇಶಗಳನ್ನು ತಲುಪಿದ್ದವು. 

Shah Rukh Khan: ಮಧ್ಯರಾತ್ರಿ 2 ಗಂಟೆಗೆ ಸಿಎಂಗೆ ಕರೆ ಮಾಡಿ ರಕ್ಷಣೆ ಕೋರಿದ ಕಿಂಗ್‌​ ಖಾನ್​!

ಗುಲ್ಶನ್ ಕುಮಾರ್ ತಮ್ಮ ಸಹೋದರ ಕಿಶೋರ್ ಕುಮಾರ್ (Kishor Kumar) ಜೊತೆಗೂಡಿ 1995 ರಲ್ಲಿ 'ಬೇವಫಾ ಸನಮ್' ಚಿತ್ರವನ್ನು ನಿರ್ಮಿಸಿದರು. ಈ ಚಿತ್ರದ ಹಾಡುಗಳು ದೇಶಾದ್ಯಂತ ಸದ್ದು ಮಾಡಿತ್ತು. ಇಷ್ಟು ಸದ್ದಾಗುತ್ತಿದ್ದಂತೆಯೇ ಅತಾವುಲ್ಲಾ ಖಾನ್​ ಅವರ ಕುರಿತಾಗಿ ಬಹಳ ಸುದ್ದಿಗಳೇ ಹರಡಿ ಬಿಟ್ಟವು. ಅಂದಹಾಗೆ ಅತಾವುಲ್ಲಾ ಖಾನ್ ಸರಳ ಕುಟುಂಬದಲ್ಲಿ ಜನಿಸಿದ ಅತ್ಯುತ್ತಮ ಗಾಯಕ.  ತಂದೆಯ ಇಚ್ಛೆಗೆ ವಿರುದ್ಧವಾಗಿ, ಅತಾವುಲ್ಲಾ ಖಾನ್ 12 ನೇ ವಯಸ್ಸಿನಲ್ಲಿಯೇ  ಹೃದಯಕ್ಕೆ ಹತ್ತಿರವಾದ ಹಾಡುಗಳನ್ನು ಬರೆದರು.  ಇದಾದ ನಂತರ ಹಲವು ವರ್ಷಗಳ ಕಾಲ ಸತತ ಹೋರಾಟ ನಡೆಸಿ ಸಂಗೀತ (Music) ಕ್ಷೇತ್ರದಲ್ಲಿ ಸಾಧನೆ ಮಾಡುತ್ತಲೇ ಬಂದರು.  

ಕೇವಲ 22 ವರ್ಷಗಳಲ್ಲಿ, ಅತಾವುಲ್ಲಾ ಖಾನ್ ಪಾಕಿಸ್ತಾನದಲ್ಲಿ ಸಾಕಷ್ಟು ಖ್ಯಾತಿಯನ್ನು ಗಳಿಸಿದ್ದರು. ಅತಾವುಲ್ಲಾ ಖಾನ್ ಅವರ ಹಾಡುಗಳು, 'ಬೇವಫಾ ಯುನ್ ತೇರಾ ಮುಸ್ಕುರಾನಾ' 'ದಿಲ್ ತೋಡ್ ಕೆ ಹಸ್ತಿ ಹೋ ಮೇರಾ' 'ಬೇವಫಾ ತೇರಾ ಮುಸ್ಕುರಾನಾ' 'ಮುಜ್ಕೋ ಯೇ ತೇರಿ ಬೇವಫಾ ಯಿ ಮರ್ ದಲೇಗಿ' 'ಅಚ್ಚಾ ಸಿಲಾ ದಿಯಾ ತೂನೇ ಮೇರೆ ಪ್ಯಾರ್ ಕಾ' ಪಾಕಿಸ್ತಾನದಲ್ಲಿಯೂ ವ್ಯಾಪಕವಾಗಿ ಕೇಳಿಬಂದಿವೆ. ಇಂದಿಗೂ ಮನಸ್ಸಿಗೆ ನೋವಾದಾಗ, ತುಂಬಾ ದುಃಖದಿಂದ ಅಳಬೇಕು ಎನ್ನಿಸಿದಾಗ ಇವರ ಹಾಡುಗಳನ್ನು ಕೇಳುವವರೂ ಇದ್ದಾರೆ. 

click me!