ಬಾಕ್ಸಾಫೀಸ್ ನಲ್ಲಿ 305 ಕೋಟಿ ಗಳಿಸಿದ ಕಿಂಗ್ ಖಾನ್ ಶಾರುಖ್ ಡಂಕಿ; ಯಾಕಾಯ್ತು ಕಡಿಮೆ ಕಲೆಕ್ಷನ್?

By Shriram Bhat  |  First Published Dec 30, 2023, 12:47 PM IST

ಶಾರುಖ್ ಈ ಹಿಂದಿನ ಸಿನಿಮಾಗಳಾದ ಪಠಾಣ್ ಹಾಗೂ ಜವಾನ್ ಸಿನಿಮಾಗಳು ಭರ್ಜರಿ ಕಲೆಕ್ಷನ್ ಮಾಡಿದ್ದವು. ಈ ಎರಡು ಚಿತ್ರಗಳು 1000 ಕೋಟಿ ಕ್ಲಬ್ ಸೇರಿದ್ದವು. 


ಬಾಲಿವುಡ್ ಬಾದ್ ಷಾ ಶಾರುಖ್​ ಖಾನ್​ ಅಭಿನಯದ ‘ಡಂಕಿ’ ಸಿನಿಮಾ ಬಿಡುಗಡೆಯಾಗಿ 7 ದಿನ ಕಳೆದಿದೆ. ಡಿಸೆಂಬರ್​ 21ರಂದು ಈ ಚಿತ್ರ ಬಿಡುಗಡೆ ಆಗಿತ್ತು. ಕ್ಲಾಸ್​ ಸಿನಿಮಾ ಆದ್ದರಿಂದ ಡಂಕಿ (Dinki) ನಿಧಾನಗತಿಯಲ್ಲಿ ಕಲೆಕ್ಷನ್​ ಮಾಡಿದೆ. ಒಟ್ಟು ಏಳು ದಿನಗಳಲ್ಲಿ ಈ ಸಿನಿಮಾದ ಕಲೆಕ್ಷನ್​  305 ಕೋಟಿ ರೂಪಾಯಿ ಆಗಿದ್ದು, ಭಾರತದಲ್ಲಿಯೇ 150 ಬಾಚಿಕೊಂಡಿದೆ. ಈ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ಹಂಚಿಕೊಂಡಿದೆ. 

ಶಾರುಖ್ (Shah Rukh Khan)ಈ ಹಿಂದಿನ ಸಿನಿಮಾಗಳಾದ ಪಠಾಣ್ ಹಾಗೂ ಜವಾನ್ ಸಿನಿಮಾಗಳು ಭರ್ಜರಿ ಕಲೆಕ್ಷನ್ ಮಾಡಿದ್ದವು. ಈ ಎರಡು ಚಿತ್ರಗಳು 1000 ಕೋಟಿ ಕ್ಲಬ್ ಸೇರಿದ್ದವು. ಅದರಂತೆ ಡಂಕಿ ಸಿನಿಮಾವೂ ಅದ್ಭುತ ಪ್ರದರ್ಶನ ಕಾಣುತಿದೆ. ರಿಲೀಸ್ ಆದ ಮೊದಲ ದಿನವೇ 29 ಕೋಟಿ ಕಲೆಕ್ಷನ್ ಮಾಡಿದ್ದ ಚಿತ್ರ ಹಂತ ಹಂತವಾಗಿ  ಒಳ್ಳೆ ಮೊತ್ತವನ್ನೇ ತನ್ನದಾಗಿಸಿಕೊಂಡಿದೆ.

Tap to resize

Latest Videos

ಚೆನ್ನೈನಲ್ಲಿ ಖ್ಯಾತ ನಟ ದಳಪತಿ ವಿಜಯ್ ಮೇಲೆ ಚಪ್ಪಲಿ ಎಸೆತ; ಕಿಡಿಗೇಡಿ ವಿರುದ್ಧ ತೀವ್ರಗೊಂಡ ಆಕ್ರೋಶ

'ಡಂಕಿ’ ಸಿನಿಮಾದಲ್ಲಿ ಶಾರುಖ್​​ ಖಾನ್​ ಜೊತೆ ತಾಪ್ಸಿ ಪನ್ನು, ವಿಕ್ಕಿ ಕೌಶಲ್​, ಬೊಮನ್​ ಇರಾನಿ, ವಿಕ್ರಂ ಕೊಚ್ಚರ್​, ಅನಿಲ್​ ಗ್ರೋವರ್​ ಮುಂತಾದವರು ನಟಿಸಿದ್ದಾರೆ. ರಾಜ್​ಕುಮಾರ್​ ಹಿರಾನಿ ಅವರು ಪ್ರತಿ ಸಿನಿಮಾದಲ್ಲೂ ಒಂದು ಗಟ್ಟಿಯಾದ ಕಥಾವಸ್ತು ಆಯ್ಕೆ ಮಾಡಿಕೊಳ್ಳುತ್ತಾರೆ. ಅಕ್ರಮವಾಗಿ ದೇಶಗಳ ಗಡಿ ದಾಟುವವರ ಬಗ್ಗೆ ‘ಡಂಕಿ’ ಸಿನಿಮಾದಲ್ಲಿ ತೋರಿಸಲಾಗಿದೆ.

ಮುಗೀತು ಪ್ರಭಾಸ್ ಕಥೆ ಅಂತಿದ್ದವರ ಕೆನ್ನೆಗೆ ಬಿತ್ತು ಭಾರೀ ತಪರಾಕಿ; ಡಾರ್ಲಿಂಗ್ ಮಿಂಚಿಂಗ್!

ಡಂಕಿ ಚಿತ್ರವನ್ನು ಜಿಯೋ ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೇನ್‌ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಗೌರಿ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ನಿರ್ಮಿಸಿದ್ದಾರೆ. ರಾಜ್ ಕುಮಾರ್ ಹಿರಾನಿ ಹಾಗೂ ಶಾರುಖ್ ಕಾಂಬಿನೇಷನ್ ವರ್ಕೌಟ್ ಆಗಿದ್ದು, ಪ್ರೇಕ್ಷಕರು ಈ ಜೋಡಿಯ ಸಿನಿಮಾಗೆ ಜೈಕಾರ ಹಾಕುತ್ತಿದ್ದಾರೆ.

ಹೊಸಬಳೊಂದಿಗೆ ಅರ್ಜನ್ ಕಪೂರ್ ಕುಚ್‌ ಕುಚ್‌; ವಿರಹ ವೇದನೆಯಲ್ಲಿ ಬೇಯುತ್ತಿರುವ ಮಲೈಕಾಗೆ ಯಾರು ಗತಿ!

click me!