ಅರ್ಬಾಜ್ ಖಾನ್ ಹೊಸ ಪತ್ನಿ ಶುರಾ ಖಾನ್ ಪಾಪರಾಜಿಗಳಿಗೆ ಮುಖ ತೋರಿಸದೇ ತಲೆ ತಗ್ಗಿಸಿ ನಡೆದುಕೊಂಡು ಹೋಗಿದ್ದರಿಂದ ಸಕತ್ ಟ್ರೋಲ್ಗೆ ಒಳಗಾಗಿದ್ದಾರೆ.
ನಟ ಸಲ್ಮಾನ್ ಖಾನ್ ಸಹೋದರ, ನಟಿ ಮಲೈಕಾ ಶರಾವತ್ ಮಾಜಿ ಪತಿ, ರೂಪದರ್ಶಿ ಜಾರ್ಜಿಯಾ ಆಂಡ್ರಿಯಾನಿ ಮಾಜಿ ಲಿವ್ ಇನ್ ಪಾರ್ಟನರ್ ಅರ್ಬಾಜ್ ಖಾನ್ ಇತ್ತೀಚೆಗೆ ಮದುವೆಯಾಗಿದ್ದು, ನವವಧುವಿನ ಜೊತೆ ಲೈಫ್ ಎಂಜಾಯ್ ಮಾಡುತ್ತಿದ್ದಾರೆ. ಸಹೋದರಿ ಅರ್ಪಿತಾ ಖಾನ್ ಶರ್ಮಾ ಅವರ ಮನೆಯಲ್ಲಿ ಕೆಲವೇ ಅತಿಥಿಗಳ ಸಮ್ಮುಖದಲ್ಲಿ 56 ವರ್ಷದ ಅರ್ಬಾಜ್ ಖಾನ್ ಅವರು ತಮಗಿಂತ 22 ವರ್ಷ ಚಿಕ್ಕವಳಾದ 33 ವರ್ಷದ ಶುರಾ ಖಾನ್ ಅವರ ಕೈಹಿಡಿದಿದ್ದಾರೆ. ಪತ್ನಿಯ ಹೆಸರು ಶುರಾ ಖಾನ್. ಇವರು ಮೇಕಪ್ ಕಲಾವಿದೆಯಾಗಿ ಕೆಲಸ ಮಾಡುತ್ತಿದ್ದಾರೆ. ಶುರಾ ಖಾನ್ ಮತ್ತು ಅರ್ಬಾಜ್ ಖಾನ್ ಅವರು ಪಾಟ್ನಾ ಶುಕ್ಲಾ ಸೆಟ್‌ನಲ್ಲಿ ಭೇಟಿಯಾದರು. ಅಲ್ಲಿಂದ ಇವರ ನಡುವೆ ಪ್ರೀತಿ ಅರಳಿದೆ ಎನ್ನಲಾಗಿದೆ. ಶುರಾ ಖಾನ್ ಅವರು, ರವೀನಾ ಟಂಡನ್ ಮತ್ತು ಅವರ ಮಗಳು ರಾಶಾ ಥದಾನಿ ಅವರ ಮೇಕಪ್ ಕಲಾವಿದರಾಗಿ ಕೆಲಸ ಮಾಡುತ್ತಿದ್ದಾರೆ.
ಇವರ ವಯಸ್ಸಿನ ಅಂತರ ನೋಡಿ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಈ ಜೋಡಿ ಸಕತ್ ಟ್ರೋಲ್ ಕೂಡ ಆಗುತ್ತಿದೆ. ಮದುವೆ ಮನೆಗೆ ಬರುವಾಗಿನಿಂದಲೂ ಹಲವು ವಿಡಿಯೋಗಳಲ್ಲಿ ಶುರಾ ಖಾನ್ ಪಾಪರಾಜಿಗಳ ಕ್ಯಾಮೆರಾ ಎದುರು ನೇರವಾಗಿ ಮುಖಕೊಡದೇ ಮುಖ ಮುಚ್ಚಿಕೊಳ್ಳುವುದನ್ನು ನೋಡಬಹುದು. ಇದೀಗ ಹನಿಮೂನ್ ಮೂಡ್ನಲ್ಲಿರೋ ಜೋಡಿ ಏರ್ಪೋರ್ಟ್ನಲ್ಲಿ ಕಾಣಿಸಿಕೊಂಡಿದೆ. ಈ ಸಂದರ್ಭದಲ್ಲಿ ಪಾಪರಾಜಿಗಳ ಕ್ಯಾಮೆರಾ ಕಣ್ಣಿಗೆ ಜೋಡಿ ಸೆರೆಯಾಗಿದೆ. ತಮ್ಮ ಫೋಟೋ, ವಿಡಿಯೋ ಮಾಡುವುದನ್ನು ಮೊದಲೇ ಅರಿತಿರುವ ಶುರಾ ಖಾನ್ ಅವರು ಕ್ಯಾಪ್ ಧರಿಸಿ ಬಂದಿದ್ದಾರೆ. ಈ ಕ್ಯಾಪ್ ಹಾಕಿಕೊಂಡು ತಮ್ಮ ಮುಖ ಮರೆಮಾಚುವುದು ಅವರ ಉದ್ದೇಶ. ಅದೇ ರೀತಿ ತಲೆಯನ್ನು ಬಗ್ಗಿಸಿಕೊಂಡು ಕ್ಯಾಪ್ನಲ್ಲಿ ಮುಖ ಎಲ್ಲಿಯೂ ಕಾಣದಂತೆ ಮಾಡಿದ್ದಾರೆ. ಅರ್ಬಾಜ್ ಖಾನ್ ಹಸನ್ಮುಖರಾಗಿ ಕ್ಯಾಮೆರಾಕ್ಕೆ ಪೋಸ್ ನೀಡುತ್ತಿದ್ದರೆ, ಶುರಾ ಮಾತ್ರ ಅಪ್ಪಿತಪ್ಪಿಯೂ ಮುಖ ತೋರಿಸಲಿಲ್ಲ. ಇದರಿಂದ ಅವರು ಸಕತ್ ಟ್ರೋಲ್ಗೆ ಒಳಗಾಗುತ್ತಿದ್ದಾರೆ.
ಅಪ್ಪ-ಮಗಳ ಥರ ಜೋಡಿ ಇದೆ ಎಂದು ನೂರಾರು ಮಂದಿ ಕಮೆಂಟ್ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೆಲ್ಲಾ ಬೇಕಿತ್ತಾ ನಿಮಗೆ, ಬೇರೆ ಯಾರೂ ಸಿಗ್ತಾ ಇರಲಿಲ್ವಾ ಎಂದು ಶುರಾ ಅವರಿಗೆ ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಇನ್ನು ಹಲವರು ಶುರಾ ಖಾನ್ ಮುಖ ತೋರಿಸದ ಕಾರಣ, ಅಪ್ಪನ ವಯಸ್ಸಿನವನ ಜೊತೆ ಮದ್ವೆಯಾಗಿ ಇದೀಗ ಮುಖ ಮುಚ್ಚಿಕೊಂಡರೆ ಹೇಗೆ? ಅವನೇ ಬೇಕು ಅಂತ ಮದ್ವೆಯಾಗಿರುವಾಗ ಅರ್ಬಾಜ್ನಂತೆ ಎಲ್ಲರನ್ನೂ ಫೇಸ್ ಮಾಡು ಎನ್ನುತ್ತಿದ್ದಾರೆ.
ಅಂದಹಾಗೆ, ಅರ್ಬಾಜ್ ಖಾನ್ ಅವರ ಮೊದಲ ಮದುವೆ ನಡೆದದ್ದು ಹಾಟೆಸ್ಟ್ ನಟಿ ಮಲೈಕಾ ಅರೋರಾ ಜೊತೆ. ಈ ಜೋಡಿಗೆ 21 ವರ್ಷದ ಮಗ ಅರ್ಹಾನ್ ಖಾನ್ ಇದ್ದಾನೆ. 2017ರಲ್ಲಿ ಈ ಜೋಡಿ ಬೇರ್ಪಟ್ಟಿದೆ. ಮಲೈಕಾ ಅರೋರಾಗೆ ಈಗ 49 ವರ್ಷ ವಯಸ್ಸು. ಅರ್ಬಾಜ್ ಖಾನ್ ಜೊತೆ ಬೇರ್ಪಟ್ಟ ಬಳಿಕ 12 ವರ್ಷ ಚಿಕ್ಕವಾಗಿರುವ ನಟ ಅರ್ಜುನ್ ಕಪೂರ್ (Arjun Kapoor) ಜೊತೆ ಕೆಲ ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ ಮಲೈಕಾ. ಮಲೈಕಾ ಅರ್ಜುನ್ ಕಪೂರ್ ಜೊತೆ ಡೇಟಿಂಗ್ನಲ್ಲಿದ್ದರೂ ಮಗನಿಗಾಗಿ ಆಗಾಗ್ಗೆ ಅರ್ಬಾಜ್ ಖಾನ್ರನ್ನು ಭೇಟಿಯಾಗುವುದು, ತಬ್ಬಿಕೊಳ್ಳುವುದು ನಡೆದಿದೆ. ಇದಾದ ಬಳಿಕ ಅರ್ಬಾಜ್ ಖಾನ್, ಕೆಲ ವರ್ಷಗಳಿಂದ ಇಟಲಿಯ ನಟಿ ಮತ್ತು ರೂಪದರ್ಶಿಯಾಗಿದ್ದು ಜಾರ್ಜಿಯಾ ಆಂಡ್ರಿಯಾನಿ ಜೊತೆ ಸಂಬಂಧದಲ್ಲಿದ್ದರು. ಅಧಿಕೃತವಾಗಿ ಮದ್ವೆಯಾಗದಿದ್ದರೂ ಪತಿ-ಪತ್ನಿಯಂತೆ ಬಾಳುತ್ತಿದ್ದರು. ನಂತರ ಇಬ್ಬರೂ ಬ್ರೇಕಪ್ ಆಗಿದ್ದರು.
ಧಾರ್ಮಿಕ ಭಾವನೆಗಳಿಗೆ ಧಕ್ಕೆ: ಅನಿಮಲ್ ನಟ ರಣಬೀರ್ ಕಪೂರ್ ವಿರುದ್ಧ ದೂರು- ಅಷ್ಟಕ್ಕೂ ಆಗಿದ್ದೇನು?