
ಬಾಲಿವುಡ್ (Bollywood) ಚಿತ್ರರಂಗದಲ್ಲಿ ಗಣ್ಯರು ಮತ್ತು ಜನರ ಗಮನ ಸೆಳೆಯುತ್ತಿರುವುದು ಕತ್ರಿನಾ ಕೈಫ್ (Katrina Kaif) ಮತ್ತು ವಿಕ್ಕಿ ಕೌಶಲ್ (Vicky Kaushal) ಅದ್ಧೂರಿ ಮದುವೆ. ಟೈಟ್ ಸೆಕ್ಯೂರಿಟಿಯಲ್ಲಿ (Security) ನಡೆಯುತ್ತಿರುವ ಈ ಮದುವೆ ಕಾರ್ಯಕ್ರಮಕ್ಕೆ ಬರುತ್ತಿರುವ ಜನರಿಗೆ ಸೀಕ್ರೆಟ್ ಕೋಡ್ (Secret Code) ಕೊಟ್ಟಿದ್ದಾರೆ ಎನ್ನಲಾಗಿದೆ. ಈಗಾಗಲೇ ಮದುವೆಗೆ ಆಗಮಿಸುವ ಅತಿಥಿಗಳಿಗೆ ಮೊಬೈಲ್ ತರುವುದನ್ನು ಬ್ಯಾನ್ ಮಾಡಿದ್ದಾರೆ, ಮತ್ತೆ ಯಾಕೆ ಕೋಡ್ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ (Social Media) ಹರಿದಾಡುತ್ತಿರುವ ಗಾಸಿಪ್ ಪ್ರಕಾರ ಇದೇ ತಿಂಗಳು ಮದುವೆ ನಡೆಯಲಿದ್ದು, ಆಗಮಿಸುತ್ತಿರುವ ಪ್ರತಿಯೊಬ್ಬ ಅತಿಥಿಗೂ ಸೀಕ್ರೆಟ್ ಕೋಡ್ ನೀಡಲಿದ್ದಾರೆ. ಎಂಟ್ರಿ ಮಾತ್ರವಲ್ಲದೇ ಹೋಟೆಲ್‌ನಲ್ಲಿ ಉಳಿದುಕೊಳ್ಳಲು, ಅದರ ಬಾಗಿಲು ತೆಗೆಯಲು ಕೂಡ ಇದೇ ಕೋಡ್ ಬಳಸಬೇಕಂತೆ. ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳು ಮದುವೆಯಲ್ಲಿ ಫೋನ್ ಬ್ಯಾನ್ (Mobile Ban) ಪಾಲಿಸಿ ಫಾಲೋ ಮಾಡುತ್ತಾರೆ. ಈಗ ಕತ್ರಿನಾ ಮತ್ತು ವಿಕ್ಕಿ ಕೂಡ ಅದೇ ರೂಲ್ ಫಾಲೋ ಮಾಡುತ್ತಿದ್ದಾರೆ. ಡೆಸ್ಟಿನೇಷನ್ ಮದುವೆ (Destinantion wedding) ಆಗಿರುವ ಕಾರಣ ಯಾವ ಪ್ಯಾಪರಾಜಿಗೂ ಅನುಮತಿ ನೀಡಿಲ್ಲ.
ರಾಜಸ್ಥಾನದಲ್ಲಿರುವ Sawai ಮೋಧ್‌ಪುರ್ ಹೊಟೇಲ್‌ನಲ್ಲಿ ಮದುವೆ ಏರ್ಪಾಟು ಮಾಡಲಾಗಿದೆ. ಓಮಿಕ್ರೋನ್ ವೈರಸ್ (Omicron Virus) ಹೆಚ್ಚಾಗುತ್ತಿರುವ ಕಾರಣ ರೆಡಿ ಮಾಡಿರುವ ಲಿಸ್ಟ್‌ನ ಮತ್ತೆ ಫಿಲ್ಟರ್ ಮಾಡುವ ಪ್ಲಾನ್‌ನಲ್ಲಿದ್ದಾರಂತೆ. ಕತ್ರಿನಾ ಕುಟುಂಬಕ್ಕೆ ಆತ್ಮೀಯವಾಗಿರುವ ಸಲ್ಮಾನ್ ಖಾನ್ (Salman Khan) ಫ್ಯಾಮಿಲಿ ಕೂಡ ಸೆಲೆಕ್ಟೆಡ್ ಲಿಸ್ಟ್‌ನಲ್ಲಿ ಇದ್ದಾರೆ, ಅವರ ಜೊತೆ ಕಬೀರ್ ಖಾನ್ (Kabir Khan) ಆಗಮಿಸಲಿದ್ದಾರೆ ಎನ್ನಲಾಗಿದೆ.
ದೀಪಾವಳಿ (Diwali) ದಿನದಂದು ಕತ್ರಿನಾ ಮತ್ತು ವಿಕ್ಕಿ ಪ್ರೈವೇಟ್ ಆಗಿ ಎಂಗೇಜ್ ಆಗಿದ್ದರು ಎನ್ನಲಾಗಿದೆ. ಹಿಂದೂ ಮತ್ತು ಮುಸ್ಲಿಂ ಸಂಪ್ರದಾಯದಂತೆ ಮದುವೆ ನಡೆಯಲಿದೆ ಎನ್ನಲಾಗಿದೆ. ಮದುವೆ ನಂತರ ಮಾಡಬೇಕಾದ ಪ್ಲಾನ್ ಕೂಡ ಇಗಲೇ ಮಾಡಿದೆಯಂತೆ ಜೋಡಿ. ಇಬ್ಬರೂ ಒಟ್ಟಿಗೇ ಬಂಡವಾಳ ಹಾಕಿ ಕೋಟಿ ಕೋಟಿ ಬೆಲೆ ಬಾಳುವ ಅಪಾರ್ಟ್‌ಮೆಂಟ್ (Apartment) ಒಂದನ್ನು ಖರೀದಿಸಿದ್ದಾರೆ. ಮದುವೆ ಕಾರ್ಯಕ್ರಮಕ್ಕೆ ಕತ್ರಿನಾ ಖರ್ಚು ಮಾಡುತ್ತಿರುವ ರೀತಿ ಬಗ್ಗೆ ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ. ಕೆಲವೇ ಸಿನಿಮಾಗಳಲ್ಲಿ ನಟಿಸುತ್ತಿರುವ ಕತ್ರೀನಾಗೆ ಸಂಭಾವನೆ ಬರುತ್ತಿರುವುದು ಜಾಹೀರಾತುಗಳಿಂದ ಮಾತ್ರವೇ.
ಕತ್ರಿನಾ ಮತ್ತು ವಿಕ್ಕಿ ಮದುವೆ ಬಗ್ಗೆ ದಿನಕ್ಕೊಂದು ಹೊಸ ಸುದ್ದಿಗಳು ಹೊರ ಬರುತ್ತಿದೆ. ಇಂದು ರಿವೀಲ್ ಆಗಿರುವ ಮಾಹಿತಿ ಪ್ರಕಾರ ಕತ್ರಿನಾ ಮದುವೆ ಆದ ನಂತರ ಚಿತ್ರರಂಗಕ್ಕೆ ಗುಡ್ ಬೈ ಹೇಳುತ್ತಾರೆ ಎನ್ನಲಾಗಿದೆ. ಆದರೆ ಮದುವೆ ದಿನಾಂಕ ಬಗ್ಗೆ, ಜನರ ಬಗ್ಗೆ ಯಾವ ಮಾಹಿತಿಯೂ ರಿವೀಲ್ ಮಾಡಿಲ್ಲ. ಇಷ್ಟೆಲ್ಲಾ ಗಾಳಿ ಸುದ್ದಿಗಳು ಹರಿದಾಡುತ್ತಿದ್ದರೂ, ಈ ಜೋಡಿ ಮಾತ್ರ ಮದುವೆ ತುಟಿಕ್ ಪಿಟಿಕ್ ಎನ್ನುತ್ತಿಲ್ಲ. ಅಷ್ಟಕ್ಕೂ ಇವರಿಬ್ಬರೂ ನಿಜವಾಗಲೂ ಮದುವೆಯಾಗುತ್ತಿರುವುದು ಹೌದಾ, ಎನ್ನುವ ಅನುಮಾನವೂ ಹಲವರಲ್ಲಿ ಕಾಡುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.