Radhe Shyam: ಸಿನಿಪ್ರಿಯರ ಮನಗೆದ್ದ ಪ್ರಭಾಸ್-ಪೂಜಾ ಹೆಗ್ಡೆ ರೊಮ್ಯಾಂಟಿಕ್ ಸಾಂಗ್

Published : Dec 02, 2021, 12:19 AM ISTUpdated : Dec 02, 2021, 12:21 AM IST
Radhe Shyam: ಸಿನಿಪ್ರಿಯರ ಮನಗೆದ್ದ ಪ್ರಭಾಸ್-ಪೂಜಾ ಹೆಗ್ಡೆ ರೊಮ್ಯಾಂಟಿಕ್ ಸಾಂಗ್

ಸಾರಾಂಶ

ಸೌತ್ ನಟ ಪ್ರಭಾಸ್(Prabhas) ಯಾರ ಜೊತೆ ನಟಿಸಿದರೂ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿರುತ್ತೆ. ಈ ಬಾರಿ ರಾಧೆ ಶ್ಯಾಮ್(Radhe Shyam) ಸಿನಿಮಾದಲ್ಲಿ ಪೂಜಾ ಜೊತೆ ನಟಿಸಿರೋ ಪ್ರಭಾಸ್ ರೊಮ್ಯಾಂಟಿಕ್ ಸಾಂಗ್ ಬಿಡುಗಡೆಯಾಗಿದೆ. ಹೇಗಿದೆ ನೋಡಿ ಹೇಳಿ.

ಪ್ರಭಾಸ್(Prabhas) ಅಭಿನಯದ ಬಹುನಿರೀಕ್ಷಿತ ಸಿನಿಮಾ ರಾಧೆ ಶ್ಯಾಮ್‌(Radhe Shyam)ನಿಂದ ರೊಮ್ಯಾಂಟಿಕ್ ಸಾಂಗ್ ಬಿಡುಗಡೆಯಾಗಿದೆ. ಪೂಜಾ ಹಾಗೂ ಪ್ರಭಾಸ್ ಜೋಡಿ ಪರ್ಫೆಕ್ಟ್ ಕಪಲ್ ಆಗಿ ಕಾಣಿಸಿಕೊಂಡಿದ್ದು ಸಿನಿ ಪ್ರಿಯರು ಸದ್ಯ ಈ ಹಾಡನ್ನು ಗುನುಗುತ್ತಿದ್ದಾರೆ. ಮುಂಬರುವ ಪ್ಯಾನ್ ಇಂಡಿಯಾ ಸಿನಿಮಾ ರಾಧೆ ಶ್ಯಾಮ್‌ ಚಿತ್ರತಂಡ ಬುಧವಾರ 'ಆಶಿಕಿ ಆ ಗಯಿ'(Ashiqui aa gayi) ಎಂಬ ಹಾಡಿನ ಮ್ಯೂಸಿಕಲ್ ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ. ಪ್ರಭಾಸ್ ಪೂಜಾ ಅವರೊಂದಿಗಿನ ಸಂಬಂಧದ ಚಂದದ ಕಥೆ ಹೇಳುವುದರೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ. ನಾನು ಪ್ರೀತಿಗಾಗಿ ಸಾಯುವವನಲ್ಲ, ನಾನು ಫ್ಲರ್ಟ್ ಮಾಡಲು ಬಯಸುತ್ತೇನೆ ಎಂದು ಪ್ರಭಾಸ್ ಹೇಳುವುದನ್ನು ಕೇಳಬಹುದು.

ಬೈಕಿನಲ್ಲಿ ಸುಂದರವಾದ ಯುರೋಪಿಯನ್ ರಸ್ತೆಗಳ ಮೂಲಕ ಪ್ರಯಾಣಿಸುವಾಗ ಕಪಲ್ ಮಧ್ಯೆ ಶುರುವಾಗುವ ಪ್ರಣಯವನ್ನು ಹಾಡಿನ ಉಳಿದ ಭಾಗವು ತೋರಿಸುತ್ತದೆ. ಆಶಿಕಿ ಆ ಗಯಿ ಸಂಯೋಜನೆಯ ಜೊತೆಗೆ, ಮಿಥೂನ್ ಹಾಡಿನ ಸಾಹಿತ್ಯವನ್ನೂ ಬರೆದಿದ್ದಾರೆ. ಅವರು ಅರ್ಜಿತ್ ಸಿಂಗ್ ಅವರೊಂದಿಗೆ ಟ್ರ್ಯಾಕ್ ಅನ್ನು ಕೂಡ ಮಾಡಿದ್ದಾರೆ.

ರಾಧೆ ಶ್ಯಾಮ್ ಅವರು ರಾಧಾ ಕೃಷ್ಣ ಕುಮಾರ್ ಬರೆದು ನಿರ್ದೇಶಿಸಿದ್ದಾರೆ. ಈ ಚಿತ್ರವು 1970 ರ ಯುರೋಪ್ ಹಿನ್ನಲೆಯಲ್ಲಿದೆ ಎಂದು ಹೇಳಲಾಗುತ್ತದೆ, ಪ್ರಭಾಸ್ ವಿಕ್ರಮಾದಿತ್ಯ ಎಂಬ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಚಿತ್ರದ ಟೀಸರ್ ವಿಕ್ರಮಾದಿತ್ಯನನ್ನು ಪ್ರತಿಯೊಬ್ಬರ ಭೂತ ಮತ್ತು ಭವಿಷ್ಯವನ್ನು ತಿಳಿದಿರುವ ಕೆಲವು ವಿಲಕ್ಷಣ ಕೌಶಲ್ಯಗಳನ್ನು ಹೊಂದಿರುವ ವ್ಯಕ್ತಿ ಎಂದು ತೋರಿಸಿದೆ. "ನಾನು ದೇವರಲ್ಲ, ಆದರೆ ನಾನು ನಿಮ್ಮಲ್ಲಿ ಒಬ್ಬನಲ್ಲ" ಎಂದು ಪ್ರಭಾಸ್ ಟೀಸರ್‌ನಲ್ಲಿ ಹೇಳಿದ್ದಾರೆ.

ಫ್ಯಾಂಟಸಿ ಲೋಕದಲ್ಲಿ ಪ್ರಭಾಸ್-ಪೂಜಾ ಹೆಗ್ಡೆ

ಪ್ರಭಾಸ್ ಮತ್ತು ಪೂಜಾ ಹೆಗ್ಡೆ(Pooja hegde) ಜೊತೆಗೆ, ಚಿತ್ರದಲ್ಲಿ ಸಚಿನ್ ಖೇಡೇಕರ್, ಪ್ರಿಯದರ್ಶಿ ಪುಲಿಕೊಂಡ, ಭಾಗ್ಯಶ್ರೀ, ಮುರಳಿ ಶರ್ಮಾ, ಕುನಾಲ್ ರಾಯ್ ಕಪೂರ್, ರಿದ್ಧಿ ಕುಮಾರ್, ಸಾಶಾ ಚೆಟ್ರಿ ಮತ್ತು ಸತ್ಯನ್ ಕೂಡ ನಟಿಸಿದ್ದಾರೆ. ರಾಧೆ ಶ್ಯಾಮ್ ಜನವರಿ 14 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾ SS ರಾಜಮೌಳಿಯ RRR ಮತ್ತು ಪವನ್ ಕಲ್ಯಾಣ್ ಅವರ ಭೀಮ್ಲಾ ನಾಯಕ್ ಡೇಟ್ ಜೊತೆ ಕ್ಲಾಶ್ ಆಗಲಿದೆ. ಇದು ಮುಂದಿನ ವರ್ಷ ಸಂಕ್ರಾಂತಿ ರಜಾದಿನಗಳಲ್ಲಿ ಬಿಡುಗಡೆಯಾಗಲಿದೆ.

ಈ ಹಿಂದೆ ಚಿತ್ರತಂಡ ಪ್ರಭಾಸ್ ಹುಟ್ಟುಹಬ್ಬದ ಪ್ರಯುಕ್ತ ವಿಕ್ರಮಾದಿತ್ಯನ ಲುಕ್‌ನ್ನು ಪರಿಚಯಿಸಿತ್ತು. ರೊಮ್ಯಾಂಟಿಕ್​ ಕಥಾ ಹೊಂದಿರುವ ಈ ಚಿತ್ರದಲ್ಲಿ ಪ್ರಭಾಸ್, ವಿಕ್ರಮಾದಿತ್ಯ ಎಂಬ ಲವರ್​ ಬಾಯ್ (Lover Boy)​ ಲುಕ್​ನಲ್ಲಿ ಕಾಣಿಸಿಕೊಂಡಿದ್ದು, ಪೂಜಾ ಹೆಗ್ಡೆ ಪ್ರೇರಣಾ ಪಾತ್ರವನ್ನು ನಿರ್ವಹಿಸಲಿದ್ದಾರೆ.  ರಾಧಾ ಕೃಷ್ಣ ಕುಮಾರ್ (Radha Krishna Kumar) ನಿರ್ದೇಶನವಿರುವ ಈ ಚಿತ್ರಕ್ಕೆ ಭೂಷಣ್ ಕುಮಾರ್, ವಂಶಿ ಮತ್ತು ಪ್ರಮೋದ್ ನಿರ್ಮಾಣ ಮಾಡಿದ್ದಾರೆ. ಜಸ್ಟಿನ್ ಪ್ರಭಾಕರನ್ ಸಂಗೀತ ಸಂಯೋಜನೆ, ಮನೋಜ್ ಪರಮಹಂಸ ಛಾಯಾಗ್ರಹಣ ಮತ್ತು ಕೋಟಗಿರಿ ವೆಂಕಟೇಶ್ವರ ರಾವ್ ಸಂಕಲನ ಚಿತ್ರಕ್ಕಿದೆ. 

'ರಾಧೆ ಶ್ಯಾಮ್' ಚಿತ್ರದ ಚಿತ್ರೀಕರಣ ಇದುವರೆಗೆ ಹೈದರಾಬಾದ್, ಟುರಿನ್ (ಇಟಲಿ) ಮತ್ತು ಜಾರ್ಜಿಯಾದಲ್ಲಿ ನಡೆದಿದ್ದು, ಸಚಿನ್ ಖೇಡೇಕರ್, ಭಾಗ್ಯಶ್ರೀ, ಕುನಾಲ್ ರಾಯ್ ಕಪೂರ್, ಸತ್ಯನ್, ಪ್ರಿಯದರ್ಶಿ, ಮುರಳಿ ಶರ್ಮಾ, ಸಶಾ ಚೆಟ್ರಿ, ರಿದ್ಧಿ ಕುಮಾರ್ ಸೇರಿದಂತೆ ಇತರರು ಚಿತ್ರದ ತಾರಾಬಳಗದಲ್ಲಿದ್ದಾರೆ. ಚಿತ್ರವು 2022ರ ಜನವರಿ 14ರಂದು ತೆಲುಗು ಮಾತ್ರವಲ್ಲದೇ ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ತೆರೆಕಾಣಲಿದೆ. ಇದೀಗ ಚಿತ್ರತಂಡ ಬಿಡುಗಡೆ ಮಾಡಿರುವ ರೊಮ್ಯಾಂಟಿಕ್ ಸಾಂಗ್ ಮೂಲಕ ಈ ಜೋಡಿಯ ಕೆಮೆಸ್ಟ್ರಿ ಪ್ರೇಕ್ಷಕರಲ್ಲಿ ಮತ್ತಷ್ಟು ಕುತೂಹಲ ಹೆಚ್ಚಿಸುತ್ತದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?
10 ಭಾಷೆಗಳಲ್ಲಿ 90 ಸಿನಿಮಾಗಳು, ಗಂಗೂಲಿ ಜೊತೆ ಅಫೇರ್ ವದಂತಿ.. 50 ವರ್ಷವಾದರೂ ಮದುವೆಯಾಗದ ನಟಿ ಯಾರು?