
ಮುಂಬೈ(ಜೂ.10) ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಸದ್ಯ ಚಂದು ಚಾಂಪಿಯನ್ ಚಿತ್ರದ ಮೂಲಕ ಭಾರಿ ಸಂಚಲನ ಸೃಷ್ಟಿಸಿದ್ದಾರೆ. ಈಗಾಗಲೇ ಚಿತ್ರದ ಟ್ರೇಲರ್ ಭಾರಿ ಕುತೂಹಲ ಮೂಡಿಸಿದೆ.ಬಾಲಿವುಡ್‌ನ ಬಹುಬೇಡಿಕೆಯ ನಟನಾಗಿ ಹೊರಹೊಮ್ಮಿರುವ ಕಾರ್ತಿಕ್ ಆರ್ಯನ್ ಶೂಟಿಂಗ್, ಸಿನಿಮಾ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಬ್ಯೂಸಿಯಾಗಿದ್ದಾರೆ. ಇದರ ಪರಿಣಾಮ ಕಾರ್ತಿಕ್ ಆರ್ಯನ್‌ಗೆ ಲಕ್ಷ ಲಕ್ಷ ರೂಪಾಯಿ ನಷ್ಟವಾಗಿದೆ. ಹೌದು, ಕಾರ್ತಿಕ್ ಆರ್ಯನ್‌ಗೆ ಇಲಿಯೊಂದು ಲಕ್ಷ ರೂಪಾಯಿ ನಷ್ಟ ಮಾಡಿದೆ. ಸದಾ ಬ್ಯೂಸಿಯಾಗಿರುವ ಕಾರಣ ಆರ್ಯನ್ 4.7 ಕೋಟಿ ರೂಪಾಯಿ ಮೆಕ್ಲರೆನ್ ಕಾರಿನ ವೈಯರ್, ಮ್ಯಾಟ್ ಸೇರಿದಂತೆ ಹೆಲೆವೆಡೆ ಇಲಿ ಕಚ್ಚಿ ಹಾಳು ಮಾಡಿದೆ.
2022ರಲ್ಲಿ ನಟ ಕಾರ್ತಿಕ್ ಆರ್ಯನ್‌ಗೆ ಭೂಲ್ ಭೂಲಯ್ಯ 2 ಚಿತ್ರ ಭಾರಿ ಹಿಟ್ ನೀಡಿತ್ತು. ಭರ್ಜರಿ ಯಶಸ್ಸು ಕಂಡ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಈ ಚಿತ್ರದ ಯಶಸ್ಸಿನ ಬಳಿಕ ಟಿ ಸೀರಿಸ್ ಮುಖ್ಯಸ್ತ ಭೂಷನ್ ಕುಮಾರ್ ಅಚ್ಚರಿ ಉಡುಗೊರೆಯನ್ನು ಕಾರ್ತಿಕ್ ಆರ್ಯನ್‌ಗೆ ನೀಡಿದ್ದರು. 4.7 ಕೋಟಿ ರೂಪಾಯಿ ಮೌಲ್ಯದ ಮೆಕ್ಲರೆನ್ ಜಿಟಿ ಕಾರನ್ನು ಉಡುಗೊರೆಯಾಗಿ ಕಾರ್ತಿಕ್ ಆರ್ಯನ್‌ಗೆ ನೀಡಿದ್ದರು.
ನೋ ಪಾರ್ಕಿಂಗ್‌ನಲ್ಲಿ ಕಾರು ನಿಲ್ಲಿಸಿದ ಕಾರ್ತಿಕ್ ಆರ್ಯನ್; ವ್ಯಂಗ್ಯವಾಡಿದ ಮುಂಬೈ ಪೊಲೀಸ್
ಕಾರ್ತಿಕ್ ಆರ್ಯನ್ ಬಳಿ ಇತರ ಕೆಲ ದುಬಾರಿ ಕಾರುಗಳಿವೆ. ಈ ಪೈಕಿ ಮೆಕ್ಲರೆನ್ ಸೂಪರ್ ಕಾರು. ಶೂಟಿಂಗ್, ಸಿನಿಮಾಗಳಲ್ಲಿ ಬ್ಯೂಸಿಯಾಗಿರುವ ಕಾರಣ ಕಾರ್ತಿಕ್ ಆರ್ಯನ್‌ಗೆ ಮೆಕ್ಲರೆನ್ ಕಾರು ಬಳಸಲು ಸಾಧ್ಯವಾಗುತ್ತಿಲ್ಲ. ಇದರಿಂದ ನಿಲ್ಲಿಸಿದ್ದ ಮೆಕ್ಲೆರೆನ್ ಕಾರಿಗೆ ಇಲಿಗಳು ದಾಳಿ ಮಾಡಿದೆ. ಕಾರಿನ ಮ್ಯಾಟ್ ಹಾಗೂ ವೈಯರ್ ಕಚ್ಚಿ ಹಾಳು ಮಾಡಿದೆ.
ಮೆಕ್ಲೆರೆನ್ ಕಾರನ್ನು ಬಳಸಲು ಆಗದ ಪರಿಸ್ಥಿತ ಎದುರಾಗಿದೆ. ಕಾರು ಸರಿಮಾಡಲು ಮೆಕ್ಲೆರೆನ್ ಶೋ ರೂಂಗೆ ಸೂಚನೆ ನೀಡಿದ್ದಾರೆ. ಮೆಕ್ಲರೆನ್ ಕಾರನ್ನು ಟೋ ಮಾಡಿಕೊಂಡು ಶೂ ರೂಂ ತಲುಪಿಸಲಾಗಿದೆ. ಇದೀಗ ಕಾರು ಸರಿ ಮಾಡಲು ಲಕ್ಷ ಲಕ್ಷ ರೂಪಾಯಿ ಖರ್ಚು ಮಾಡಬೇಕಿದೆ. ಈ ಕುರಿತ ಲಲನ್‌ಟಾಪ್ ಸಂದರ್ಶನದ ವೇಳೆ ಸ್ವತಃ ಕಾರ್ತಿಕ್ ಆರ್ಯನ್ ಈ ಮಾಹಿತಿ ಬಿಚ್ಚಿಟ್ಟಿದ್ದಾರೆ.
ಕಾರ್ತಿಕ್ ಆರ್ಯನ್ ಹೆಚ್ಚಾಗಿ ರೇಂಜ್ ರೋವರ್ ಕಾರು ಬಳಸುತ್ತಾರೆ. ಇತ್ತೀಚೆಗೆ ಕಾರ್ತಿಕ್ ರೇಂಜ್ ರೋವರ್ ಕಾರು ಖರೀದಿಸಿದ್ದರು. ಇದರ ಜೊತೆಗೆ ಇತರ ಕೆಲ ದುಬಾರಿ ಕಾರುಗಳಿವೆ.
ಮಾಜಿ ಗೆಳತಿ ಜೊತೆ ಕಾರ್ತಿಕ್ ಆರ್ಯನ್; ಮತ್ತೆ ಒಂದಾಗಿ ಎಂದ ಫ್ಯಾನ್ಸ್!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.