ಸಿನಿಮಾರಂಗ ಗ್ಲಾಮರ್ ದುನಿಯಾ. ಇಲ್ಲಿ ಎಷ್ಟು ಬೋಲ್ಡ್ ಆಗಿರ್ತಾರೋ ಅಷ್ಟು ಆಫರ್ಸ್ ಎನ್ನುವ ಸ್ಥಿತಿ ಇದೆ. ಕಲೆಗಿಂತ ಕಲಾವಿಧೆಯರ ದೇಹಕ್ಕೆ ಹೆಚ್ಚು ಬೆಲೆ. ಅನೇಕ ನಟಿಯರು ತಮ್ಮ ಕಷ್ಟವನ್ನು ಈಗಾಗಲೇ ಬಿಚ್ಚಿಟ್ಟಿದ್ದಾರೆ. ಈಗ ಇನ್ನೊಬ್ಬ ನಟಿ ಹೇಳಿಕೆ ಚರ್ಚೆಯಲ್ಲಿದೆ.
ಬಾಲಿವುಡ್ ಒಂದು ದೊಡ್ಡ ಸಮುದ್ರ. ಇಲ್ಲಿಗೆ ಬರೋರು ತುಂಬಾ ದಿನ ಉಳಿಯೋದಿಲ್ಲ. ಉಳಿದವರು ಕೂಡ ಸಾಕಷ್ಟು ಹೋರಾಟಗಳನ್ನು ನಡೆಸಿರ್ತಾರೆ. ಬಾಲಿವುಡ್ ಸಿನಿಮಾಗಳಲ್ಲಿ ಛಾನ್ಸ್ ಸಿಗೋದೇ ಬಹಳ ಕಷ್ಟದ ಕೆಲಸ. ಅದ್ರಲ್ಲೂ ನಾಲ್ಕಕ್ಕಿಂತ ಹೆಚ್ಚು ಚಿತ್ರಗಳಲ್ಲಿ ನಟಿಸಿ ಯಶಸ್ವಿಯಾಗ್ಬೇಕು ಅಂದ್ರೆ ಬರೀ ನಟನೆ ಮಾತ್ರವಲ್ಲ ಗ್ಲಾಮರ್ ಗೆ ಹೆಚ್ಚು ಆದ್ಯತೆ ನೀಡ್ಬೇಕು. ಹಿರೋಯಿನ್ ಗಳು ಬಳಕುವ ಬಳ್ಳಿಯಾಗ್ಬೇಕು. ನಿರ್ಮಾಪಕರ ನಿರೀಕ್ಷೆಯಂತೆ ಕೆಲಸ ಮಾಡ್ಬೇಕು ಎನ್ನುವ ಅನೇಕ ನಿಯಮಗಳು ಇಲ್ಲಿವೆ. ಸಿನಿಮಾಗೆ ತಕ್ಕಂತೆ ತೂಕ ಏರಿಕೆ, ಇಳಿಕೆ ಕಾಮನ್ ಆದ್ರೂ ನಿರ್ಮಾಪಕರ, ಸಿನಿಮಾ ಮೇಕರ್ಸ್ ಇಷ್ಟದ ಬಗ್ಗೆಯೂ ಹಿರೋಯಿನ್ಸ್ ಗಮನ ಹರಿಸ್ಬೇಕಾಗುತ್ತೆ. ಅದೆಷ್ಟೂ ಹಿರೋಯಿನ್ಸ್ ಅವರ ಕಾಟ ತಾಳಲಾರದೆ ಇಂಡಸ್ಟ್ರಿ ಬಿಟ್ಟಿದ್ದಾರೆ. ಮತ್ತೆ ಕೆಲವರು ಎಲ್ಲವನ್ನು ಎದುರಿಸಿ ಮುನ್ನುಗ್ಗುತ್ತಿದ್ದಾರೆ. ಇನ್ನೊಂದಿಷ್ಟು ನಟಿಯರು ಅವರು ಹೇಳಿದಂತೆ ಮೇಕ್ ಓವರ್ ಗೆ ಮುಂದಾಗ್ತಾರೆ. ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಂಡ ಸಾಕಷ್ಟು ಕಲಾವಿಧೆಯರು ಬಾಲಿವುಡ್ ನಲ್ಲಿದ್ದಾರೆ. ಮದುವೆ ನಂತ್ರ ಬಣ್ಣದ ಲೋಕತೊರೆದು ದೂರವಿರುವ ನಟಿಯೊಬ್ಬಳು ಈಗ ಹಳೆ ದಿನಗಳನ್ನು ಮೆಲುಕು ಹಾಕಿದ್ದಾರೆ. ದೈಹಿಕ ಬದಲಾವಣೆಗೆ ನಿರ್ಮಾಪಕರು ಒತ್ತಡ ಹೇರಿದ್ದರು ಎಂಬ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.
ಸಮೀರಾ ರೆಡ್ಡಿ (Sameera Reddy) ಸದ್ಯ ಬಾಲಿವುಡ್ (Bollywood) ನಿಂದ ದೂರವಿದ್ದಾರೆ. ಹಿಂದೂಸ್ತಾನ್ ಟೈಮ್ಸ್ ಗೆ ನೀಡಿದ ಸಂದರ್ಶನದಲ್ಲಿ ತಮ್ಮ ವೃತ್ತಿ ಜೀವನದ ಕರಾಳ ಅನುಭವವನ್ನು ಅವರು ಬಹಿರಂಗಪಡಿಸಿದ್ದಾರೆ. ವೃತ್ತಿ ಜೀವನದ ಉನ್ನತ ಸ್ಥಾನದಲ್ಲಿರುವಾಗ ಸ್ತನದ ಗಾತ್ರ ಹೆಚ್ಚಿಸಿಕೊಳ್ಳುವಂತೆ ಒತ್ತಡ ಹೇರಲಾಯ್ತು. ಆದ್ರೆ ಶಸ್ತ್ರಚಿಕಿತ್ಸೆ (surgery) ಗೆ ಒಳಗಾಗಿ ನನ್ನ ದೇಹವನ್ನು ಬದಲಿಸಿಕೊಳ್ಳಲು ನಾನು ಸಿದ್ಧನಿರಲಿಲ್ಲ ಎಂದು ಸಮೀರಾ ರೆಡ್ಡಿ ಹೇಳಿದ್ದಾರೆ. ಸಮೀರಾ, ಎಲ್ಲರೂ ಮಾಡಿಕೊಳ್ತಿದ್ದಾರೆ, ನಿಮಗೇಕೆ ಬೇಡ ಎಂದು ಅನೇಕರು ಸಮೀರಾ ರೆಡ್ಡಿ ಮುಂದೆ ಪ್ರಶ್ನೆ ಇಟ್ಟಿದ್ದರಂತೆ. ಪ್ಲ್ಯಾಸ್ಟಿಕ್ ಸರ್ಜರಿ ಮತ್ತು ಬೊಟಾಕ್ಸ್ ಮಾಡಿಸುವವರ ಬಗ್ಗೆ ನಾನೇನು ಹೇಳ್ತಿಲ್ಲ. ಆದ್ರೆ ನನಗೆ ಇದು ಇಷ್ಟವಿಲ್ಲ. ಆಂತರಿಕವಾಗಿ ಚೆನ್ನಾಗಿರೋದು ಮುಖ್ಯ ಎಂದು ಸಮೀರಾ ಹೇಳಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಡಿವೋರ್ಸ್ ಆಗಿರುವ ಸ್ಟಾರ್ ನಟಿಯರು; ಯಾರು 2ನೇ ಮದುವೆ ಆಗಿದ್ದಾರೆ?
ಸಮೀರಾ ರೆಡ್ಡಿ ತಮ್ಮ ವಯಸ್ಸನ್ನು ಮುಚ್ಚಿಡುವ ಪ್ರಯತ್ನ ನಡೆಸೋದಿಲ್ಲ. ಹಾಗಾಗಿಯೇ ಅಭಿಮಾನಿಗಳಿಗೆ ಸಮೀರಾ ಇಷ್ಟವಾಗ್ತಾರೆ. ವಯಸ್ಸಿನ ಬಗ್ಗೆಯೂ ಸಂದರ್ಶನದಲ್ಲಿ ಸಮೀರಾ ರೆಡ್ಡಿ ಮಾತನಾಡಿದ್ದಾರೆ. ಈಗ ನಾನು ಹೆಚ್ಚು ಖುಷಿಯಾಗಿ ಮತ್ತು ಸರಳವಾಗಿ ಕಾಣ್ತೇನೆಂದು ಜನರು ಹೇಳ್ತಾರೆ. ನನ್ನ 28ನೇ ವಯಸ್ಸಿನಲ್ಲಿ ನಾನು ಸ್ಟ್ರಾಂಗ್ ಹಾಗೂ ಫಿಟ್ ಆಗಿದ್ದೆ. ನನ್ನ 45ನೇ ವಯಸ್ಸಿನಲ್ಲಿ ಹಾಟ್ ಹಾಗೂ ರಿಲಾಕ್ಸ್ ಆಗಿ ಕಾಣ್ತಿದ್ದೇನೆ. ನಾನು 40ನೇ ವಯಸ್ಸಿನಲ್ಲಿರುವಾಗ ಇಂಟರ್ನೆಟ್ ನಲ್ಲಿ ನನ್ನ ವಯಸ್ಸನ್ನು 38 ವರ್ಷ ಎನ್ನಲಾಗಿತ್ತು. ನಾನು ತಕ್ಷಣ ನನ್ನ ವಯಸ್ಸನ್ನು ಬದಲಿಸಿದೆ. ನನಗೆ 40 ವರ್ಷ ಹೇಳಿಕೊಳ್ಳಲು ಹೆಮ್ಮೆಯಿತ್ತು ಎಂದು ಸಮೀರಾ ರೆಡ್ಡಿ ಹೇಳಿದ್ದಾರೆ.
ಬೆತ್ತಲಾಗಿ ಶೂಟ್, 2 ತಿಂಗಳು ಜೊತೆಗಿರಲು ನಿರ್ದೇಶಕನ ಷರತ್ತು; ಕರಾಳ ಘಟನೆ ವಿವರಿಸಿದ ನಟಿ ಮಿತಾ!
ಸಮೀರಾ ಮೊದಲ ಬಾರಿ ಸಾಮಾಜಿಕ ಜಾಲತಾಣ ಬಳಸುವ ಸಂದರ್ಭದಲ್ಲಿ ನಡೆದ ಘಟನೆ ಬಗ್ಗೆಯೂ ಹೇಳಿದ್ದಾರೆ. ಮೊದಲ ಬಾರಿ ಸಾಮಾಜಿಕ ಜಾಲತಾಣದಲ್ಲಿ ಫೋಟೋ, ವಿಡಿಯೋ ಹಾಕುವ ಸಮಯದಲ್ಲಿ ಫಿಲ್ಟರ್ ಹಾಕುವಂತೆ ನನಗೆ ಒತ್ತಡ ಹೇರಿದ್ದರು ಎಂದಿದ್ದಾರೆ. ಸಮೀರಾ ರೆಡ್ಡಿ ಒಂದ್ಕಾಲದಲ್ಲಿ ಬಾಲಿವುಡ್ ನ ಟಾಪ್ ನಟಿಯಾಗಿದ್ರು. ಅಕ್ಷಯ್ ವರ್ದೆ ಮದುವೆ ಆದ್ಮೇಲೆ ಸಮೀರಾ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿಲ್ಲ. ಸುಮಾರು 11 ವರ್ಷಗಳಿಂದ ಸಮೀರಾ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ಅವರು ಈಗ ಇಬ್ಬರು ಮುದ್ದಾದ ಮಕ್ಕಳನ್ನು ಹೊಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಮೀರಾ ರೆಡ್ಡಿ ಆಕ್ಟಿವ್ ಆಗಿದ್ದಾರೆ.