ಬೆತ್ತಲಾಗಿ ಶೂಟ್, 2 ತಿಂಗಳು ಜೊತೆಗಿರಲು ನಿರ್ದೇಶಕನ ಷರತ್ತು; ಕರಾಳ ಘಟನೆ ವಿವರಿಸಿದ ನಟಿ ಮಿತಾ!

By Chethan Kumar  |  First Published Jun 9, 2024, 6:52 PM IST

2 ಚಿತ್ರದಲ್ಲಿ ಬೆತ್ತಲಾಗುವಂತೆ ಹೇಳಿ ಶೂಟ್ ಮಾಡಿಸಿದ್ದಾರೆ. ಬಳಿಕ ನಾಯಕಿಯಾಗಿ ಆಫರ್ ನೀಡಿದರು. ಆದರೆ 2 ತಿಂಗಳು ಜೊತೆಗಿರುವಂತೆ ದಕ್ಷಿಣ ಭಾರತದ ನಿರ್ದೇಶಕ ಹೇಳಿದ್ದ ಎಂದು ನಟಿ ಮಿತಾ ವಸಿಷ್ಠ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ.
 


ಮುಂಬೈ(ಜೂ.09) ಆಮೀರ್ ಖಾನ್ ಅಭಿನಯದ ಗುಲಾಮ್ ಚಿತ್ರದಲ್ಲಿ ಭಾರಿ ಜನಪ್ರಿಯವಾಗಿದ್ದ ಮಿತಾ ವಸಿಷ್ಠ ಇದೀಗ ಕೆಲ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. ತಾಲ್, ಶೇಮ್‌ಲೆಸ್ ಸೇರಿದಂತೆ ಸೂಪರ್ ಹಿಟ್ ಚಿತ್ರ ನೀಡಿದ ಖ್ಯಾತಿಯ ಮಿತಾ ವಸಿಷ್ಠ ಇದೀಗ ದಕ್ಷಿಣ ಭಾರತದ ಖ್ಯಾತ ನಿರ್ದೇಶಕರೊಬ್ಬರ ಕರಾಳ ಮುಖ ಬಹಿರಂಗಪಡಿಸಿದ್ದಾರೆ. ಆರಂಭಿಕ 2 ಚಿತ್ರದಲ್ಲಿ ನಾನು ಬೆತ್ತಲಾಗಿದ್ದೆ. ಬೆತ್ತಲೆ ಸೀನ್ ಹಲವು ಬಾರಿ ಶೂಟಿಂಗ್ ಮಾಡಿದ್ದರು. ಬಳಿಕ ನಾಯಕಿಯಾಗಿ ಬೇರೊಂದು ಚಿತ್ರದಲ್ಲಿ ಆಫರ್ ನೀಡಿದ ದಕ್ಷಿಣ ಭಾರತದ ನಿರ್ದೇಶಕ 2 ತಿಂಗಳು ಆತನ ಜೊತೆಗಿರುವಂತೆ ಸೂಚಿಸಿದ್ದರು ಎಂದು ಬಾಲಿವುಡ್ ನಟಿ ಮಿತಾ ವಸಿಷ್ಠ ಹೇಳಿದ್ದಾರೆ. 

90ರ ದಶಕದ ನಟಿ ಮಿತಾ ವಸಿಷ್ಠ ಬಾಲಿವುಡ್ ಹಾಗೂ ದಕ್ಷಿಣ ಭಾರತದ ಚಿತ್ರಗಳಲ್ಲಿ ಬಹುದೊಡ್ಡ ಹೆಸರು. ಬೋಲ್ಡ್ ಪಾತ್ರಕ್ಕೂ, ಸಂಪ್ರದಾಯಿಕ ಪಾತ್ರಕ್ಕೂ ಮಿತಾ ಸೈ ಎನಿಸಿಕೊಂಡಿದ್ದರು. ಕೆಲ ಪ್ರಶಸ್ತಿಗಳು ಅರಸಿ ಬಂದಿತ್ತು. 56 ವರ್ಷದ ಮಿತಾ ವಸಿಷ್ಠ ಇದೀಗ ತಾನು ಕರಿಯರ್ ಉತ್ತುಂಗದಲ್ಲಿರುವಾಗ, ಕರಿಯರ್ ಆರಂಭಿಸಿದಾಗ ನಡೆದ ಹಲವು ಕಹಿ ಘಟನೆಗಳನ್ನು ಬಹಿರಂಗಪಡಿಸಿದ್ದಾರೆ. ಬಾಲಿವುಡ್‌ನ ಹಂಗಾಮ ಸಂದರ್ಶನದಲ್ಲಿ ಈ ಮಾಹಿತಿ ಬಹಿರಂಗಪಡಿಸಿದ್ದಾರೆ.

Tap to resize

Latest Videos

ಕರಾಳ ಸತ್ಯ ಹೇಳುತ್ತೇನೆ, ಹಲವರು ಸ್ವಇಚ್ಛೆಯಿಂದ್ಲೇ ಹಾಸಿಗೆ ಹಂಚಿಕೊಳ್ತಾರೆ; ಗಾಯತ್ರಿ ಗುಪ್ತಾ!

1999ರ ಹೊತ್ತಿಗೆ ನಾನು ಕರಿಯರ್ ಉತ್ತುಂಗದಲ್ಲಿದ್ದೆ. ಸೂಪರ್ ಹಿಟ್ ಚಿತ್ರ ತಾಲ್ ಸೇರಿದಂತೆ ಹಲವು ಚಿತ್ರಗಳು ಭಾರಿ ಯಶಸ್ಸು ಕಂಡಿತ್ತು. ಆದರೆ ನನ್ನ ಆರಂಭಿಕ ದಿನಗಳು ಸುಲಭಾಗಿರಲಿಲ್ಲ. ಕಾರಣ 1989ರ ಸಿದ್ದೇಶ್ವರಿ ಚಿತ್ರ ಹಾಗೂ 1990ರ ಕಸ್ಬಾ ಚಿತ್ರದಲ್ಲಿ ನಾನು ಬೆತ್ತಲಾಗಿದ್ದೆ. ನಿರ್ದೇಶಕರು ಕತೆಗೆ ಬೆತ್ತಲಾಗಬೇಕು ಎಂದು ಶೂಟಿಂಗ್ ಮಾಡಿಸಿದ್ದರು. ಬೆತ್ತಲಾಗಿ ಸುದೀರ್ಘ ಶೂಟಿಂಗ್ ನಡೆದಿತ್ತು. ಇದಾದ ಬಳಿಕ ಕೆಲ ನಿರ್ದೇಶಕರು ನನಗೆ ನಾಯಕಿಯಾಗಿ ಪಾತ್ರ ಆಫರ್ ಮಾಡಿದ್ದರು. ಆದರೆ ಹಲವು ನಾಯಕಿ ಪಾತ್ರಗಳನ್ನು ನಾನು ತಿರಸ್ಕರಿಸಿದ್ದೆ ಎಂದು ಮಿತಾ ಹೇಳಿದ್ದಾರೆ.

ಪಾತ್ರಗಳು ಉತ್ತಮವಾಗಿತ್ತು. ಆದರೆ ನಿರ್ದೇಶಕರ ಕಂಡೀಷನ್ ಮಾತ್ರ ನನಗೆ ಸಹಿಸಲು ಸಾಧ್ಯವಾಗಲಿಲ್ಲ. ದಕ್ಷಿಣ ಖ್ಯಾತ ನಿರ್ದೇಶಕರೊಬ್ಬರು ಚೆನ್ನೈಗೆ ಕರೆಯಿಸಿಕೊಂಡಿದ್ದರು.  ಮಾತುಕತೆಯಲ್ಲಿ ನಾಯಕಿಯ ಪಾತ್ರ ವಿವರಿಸಿದ್ದರು. ಪಾತ್ರ ಉತ್ತಮವಾಗಿತ್ತು. ಈ ಪಾತ್ರಕ್ಕೆ ನೀವೆ ನಾಯಕಿ ಎಂದು ಆಫರ್ ನೀಡಿದರು. ನನಗೆ ಖುಷಿಯಾಗಿತ್ತು. ಆದರೆ ಮರು ಕ್ಷಣದಲ್ಲೇ ನಿರ್ದೇಶಕ, ನನ್ನ ಜೊತೆ 2 ತಿಂಗಳು ಕಳೆಯಬೇಕು ಎಂದು ಮತ್ತೊಂದು ಕಂಡೀಷನ್ ಹಾಕಿದ್ದರು. ನಿನ್ನ ಪಾತ್ರ ನೀನೆ ಇಟ್ಟುಕೊ ಒಂದು ನಾಯಕಿ ಪಾತ್ರ ತಿರಸ್ಕರಿಸಿ ಹೊರಬಂದೆ ಎಂದು ಮಿತಾ ವಸಿಷ್ಠ ಹೇಳಿದ್ದಾರೆ.

ನನ್ನ ಸ್ತನದ ಗಾತ್ರ ಎಷ್ಟೆಂದು ಕೇಳಿದ್ದ, ಸ್ಟಾರ್‌ ನಿರ್ದೇಶಕನ ವಿರುದ್ಧ ನಟಿಯ ಕಾಸ್ಟಿಂಗ್ ಕೌಚ್ ಆರೋಪ

ಆ ನಿರ್ದೇಶಕ ತೆಲುಗಿನಲ್ಲೂ ಹಲವು ಚಿತ್ರಗಳನ್ನು ಕೊಟ್ಟಿದ್ದಾರೆ. ಆತನ ನಾಯಕಿಯರು ಕೆಲ ಪ್ರಶಸ್ತಿಗಳನ್ನೂ ಪಡೆದುಕೊಂಡಿದ್ದರು. ಆದರೆ ನಾನು ಆತನ ಕಂಡೀಷನ್ ಕೇಳಿ ಮರು ಮಾತಿಲ್ಲದೆ ತಿರಸ್ಕರಿಸಿದ್ದೆ. ಈ ರೀತಿಯ ಹಲವು ಕಹಿ ಘಟನೆಗಳನ್ನು ಎದುರಿಸಿದ್ದೇನೆ ಎಂದು ಮಿತಾ ಹೇಳಿದ್ದಾರೆ. ನಾನು ಹಲವು ನಿರ್ದೇಶಕರ ಜೊತೆ ಕೆಲಸ ಮಾಡಿದ್ದೇನೆ. ಬಹುತೇಕರು ಉತ್ತಮ ಗೌರವ ನೀಡಿದ್ದಾರೆ. ಇದರ ನಡುವೆ ಕೆಲ ನಿರ್ದೇಶಕರು ಆಫರ್ ಕೊಟ್ಟು ಕೆಲ ಕಂಡೀಷನ್ ಹಾಕಿದ್ದಾರೆ ಎಂದು ಮಿತಾ ಹೇಳಿದ್ದಾರೆ.
 

click me!