
ಬಾಲಿವುಡ್ ಬೇಬೋ ಕರೀನಾ ಕಪೂರ್ ಏನೇ ಮಾಡಿದರೂ ಟ್ರೋಲಿಗರಿಗೆ ಆಹಾರವಾಗುತ್ತಿದ್ದಾರೆ. ಇತ್ತೀಚಿಗೆ ಬಾಲಿವುಡ್ ಖ್ಯಾತ ಫ್ಯಾಶನ್ ಡಿಸೈನರ್ ಮನೀಶ್ ಮಲ್ಹೋತ್ರ ತಂದೆ 90 ವಯಸ್ಸಿನವರಾಗಿದ್ದು ಅನಾರೋಗ್ಯದಿಂದ ಕೊನೆ ಉಸಿರು ಎಳೆದಿದ್ದಾರೆ.
ಆಂಟಿ ಕರೀನಾ ಕಪೂರ್ ಎಂದವರಿಗೆ ಅಭಿಮಾನಿಗಳ ಚಾಟಿ
ಈ ಸಮಯದಲ್ಲಿ ಬಾಲಿವುಡ್ ಗಣ್ಯರು ಸಂತಾಪ ಸೂಚಿಸಲು ಹೋದಾಗ ನಟಿ ಕರೀನಾ ಕಪೂರ್ ಜಯಾ ಬಚ್ಚನ್ ಎದುರಾದಾಗ ನಗು ಮುಖದಿಂದ ಮಾತನಾಡಿಸಿದ್ದಾರೆ. ಮನೀಶ್ ಮನೆ ಹೊರಭಾಗದಿಂದ ಮಾಧ್ಯಮಗಳು ಕ್ಯಾಮೆರಾದಲ್ಲಿ ಚಿತ್ರಿಸುತ್ತಿದ್ದಾಗ ಇದು ಗಮನಕ್ಕೆ ಬಂದಿದೆ.
ಕಲ್ಕಿ ಕೊಚ್ಚಿನ್ 6 ತಿಂಗಳ ಹೊಟ್ಟೆ ನೋಡಿ ಕರೀನಾ ಹಿಂಗಾ ಕಮೆಂಟ್ ಮಾಡೋದು!
ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದು ನೆಟ್ಟಿಗರು ಕರೀನಾಳನ್ನುತರಾಟೆಗೆ ತೆಗೆದುಕೊಂಡಿದ್ದಾರೆ. 'ಬೆಸ್ಟ್ ಫ್ರೆಂಡ್ ತಂದೆ ತೀರಿ ಹೋಗಿದ್ರೂ ಕ್ಯಾಮೆರಾ ಎದುರು ನಗುತ್ತಾ ಹೊರ ಬಂದಿದ್ದಾರೆ' ಹಾಗೂ 'ಇಲ್ಲಿಗೂ ಮೇಕಪ್ ಹಾಕಿಕೊಂಡು ಬರುವ ಅವಶ್ಯಕತೆ ಇದ್ಯಾ?' ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.