ಸುಕೇಶ್‌ ಜೊತೆ ಫೋಟೋ ಲೀಕ್‌ ಬಳಿಕ ಮಾನಸಿಕ ಆಘಾತ: ನಟಿ ಜಾಕ್ವೆಲಿನ್‌

Suvarna News   | Asianet News
Published : Mar 13, 2022, 01:18 PM IST
ಸುಕೇಶ್‌ ಜೊತೆ ಫೋಟೋ ಲೀಕ್‌ ಬಳಿಕ ಮಾನಸಿಕ ಆಘಾತ: ನಟಿ ಜಾಕ್ವೆಲಿನ್‌

ಸಾರಾಂಶ

ಲಾಕ್‌ಡೌನ್‌ ಸಮಯದಲ್ಲಿ ಮನಸ್ಸಿಗೆ ಹಿಂಸೆಯಾಗಿ ಥೆರಪಿ ತೆಗೆದುಕೊಂಡಿರುವೆ ಎಂದು ನಟಿ ಜಾಕ್ವೆಲಿನ್‌ ಶಿಲ್ಪಾ ಶೆಟ್ಟಿಗೆ ಹೇಳಿದ್ದಾರೆ.

ಬಾಲಿವುಡ್‌ ಮಿಲ್ಕ್ ಬ್ಯೂಟಿ ಜಾಕ್ವೆಲಿನ್‌ ಫರ್ನಾಂಡಿಸ್‌ ಮತ್ತು ಸುಕೇಶ್‌ ಚಂದ್ರಶೇಖರ್‌ ಜೊತೆಗಿರುವ ಫೋಟೋಗಳನ್ನು ಅನುಮತಿ ಪಡೆಯದೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದರ ಬಗ್ಗೆ ನಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ಘಟನೆಯಿಂದಾಗಿ ತಾನು ಮಾನಸಿಕ ಆಘಾತಕ್ಕೆ ಒಳಗಾಗಿದ್ದೆ ಎಂದು ಶಿಲ್ಪಾ ಶೆಟ್ಟಿಯ ಚ್ಯಾಟ್‌ ಶೋದಲ್ಲಿ ಮಾತನಾಡಿದ್ದಾರೆ. ಈ ಮೂಲಕ ಪರೋಕ್ಷವಾಗಿ ಸತ್ಯ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ನಾನಲ್ಲ ನಾನಲ್ಲ ಎಂದು ಅನೇಕ ಬಾರಿ ವಾದಿಸಿದ್ದು ವೇಸ್ಟ್‌ ಎಂದಿದ್ದಾರೆ ನೆಟ್ಟಿಗರು.

2021ರಿಂದ ಜಾಕ್ವೆಲಿನ್ ಸಣ್ಣ ಪುಟ್ಟ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಕೆಲವು ದಿನಗಳ ಹಿಂದೆ ಅಕ್ಷಯ್ ಕುಮಾರ್ ಬಚ್ಚನ್ ಪಾಂಡೆ ಸಿನಿಮಾ ಪ್ರಚಾರದಲ್ಲಿ ನಗು ನಗುತ್ತಲೇ ಕಾಣಿಸಿಕೊಂಡ  ಜಾಕ್ವೆಲಿನ್ ಮನಸ್ಸಿನ ನೋವುಗಳನ್ನು ಶಿಲ್ಪಾ ಶೆಟ್ಟಿ ಜೊತೆ ಹಂಚಿಕೊಂಡಿದ್ದಾರೆ.  ‘ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಅನುಮತಿಯಿಲ್ಲದೇ ಸುಕೇಶ್‌ ಜೊತೆಗಿರುವ ಫೋಟೋ ಹಾಕಲಾಗಿತ್ತು. ನನ್ನ ಕುರಿತು ಕೆಟ್ಟದಾಗಿ ಲೇಖನ ಬರೆದು ಪೋಸ್ಟ್‌ ಮಾಡಲಾಗಿತ್ತು. ಇದರಿಂದ ಆಘಾತಕ್ಕೆ ಒಳಗಾಗಿದ್ದೆ’ ಎಂದು ಜಾಕ್ವೆಲಿನ್‌ ಹೇಳಿದ್ದಾರೆ. 

'2020ರ ಪ್ಯಾಂಡಮಿಕ್‌ ನಂತರ ನಾವೆಲ್ಲರೂ ತುಂಬಾನೇ ಕಷ್ಟಗಳನ್ನು ಎದುರಿಸಿದ್ದೀವಿ. ಜನರಿಗೆ ಅರ್ಥವಾಗುತ್ತಿರಲಿಲ್ಲ ಅವರ ಜೀವನದಲ್ಲಿ ಏನಾಗುತ್ತಿದೆ ಎಂದು ತುಂಬಾನೇ ಕನ್ಫ್ಯೂಸ್ ಆಗಿ ಬಿಟ್ಟರು. ಕಾರಣ ಇಲ್ಲದೆ ಕೆಲವರನ್ನು ಕೆಲವೊಂದು ವಿಚಾರಗಳಿಗೆ ಎಳೆದು ತಂದಿದ್ದಾರೆ. ಕೆಲವು ಕೆಲಸ ಕಳೆದುಕೊಂಡರು ಕೆಲವರು ಆಪ್ತರನ್ನು ಕಳೆದುಕೊಂಡರು. ಆ ಸಮಯದಲ್ಲಿ ನನಗೆ ಒಂಟಿತನ ಕಾಡುತ್ತಿತ್ತು ಎಂದು ನನಗೂ ಅನಿಸಿತ್ತು, ಈ ಸಿಟಿಯಲ್ಲಿ ತುಂಬಾ ಮಂದಿ ಒಂಟಿಯಾಗಿ ಜೀವನ ಮಾಡುತ್ತಾರೆ.' ಎಂದು ಜಾಕ್ವೆಲಿನ್ ತಮ್ಮ ಮಾತು ಮುಂದುವರೆಸಿದ್ದಾರೆ.

ಕೊಟ್ಟಿದ್ದು Love Gift ಜಾಕ್ವೆಲಿನ್‌‌ಗೇಕೆ ಆರೋಪಗಳ ಸುರಿಮಳೆ?

'ಕೆಲವರ ಜೊತೆ ಅವರ ಫ್ಯಾಮಿಲಿಗಳು ಇಲ್ಲ ಇನ್ನೂ ಕೆಲವರ ಜೊತೆ ಮನೆಯಲ್ಲಿದ್ದರೂ ಮಾತನಾಡುವುದಿಲ್ಲ. ನನ್ನ ವಿಚಾರದಲ್ಲಿ, ನಾನು ಸಮಸ್ಯೆಗಳನ್ನು ಹೇಳಿಕೊಂಡು ಕೂರುವ ವ್ಯಕ್ತಿ ಅಲ್ಲ. ನನ್ನ ಸಮಸ್ಯೆಗಳು ಅವರಿಗೆ ಬೇಸರ ಮಾಡಬಾರದು ಇದ್ಯಾಕೆ ನನಗೆ ಹೇಳುತ್ತಿದ್ದಾಳೆ ಅನಿಸಬಾರದು. ಈ ಸಮಯದಲ್ಲಿ ನಾನು ಸಹಾಯ ಹುಡುಕಿದೆ. ಥೆರಪಿ ಪಡೆಯುತ್ತಿದ್ದೆ' ಎಂದಿದ್ದಾರೆ ಜಾಕ್ವೆಲಿನ್.

ನಟಿ ಕುತ್ತಿಗೆ ಮೇಲೆ Love Bite,ರೊಮ್ಯಾನ್ಸ್‌ ಫೋಟೋಗಳು ವೈರಲ್!

200 ಕೋಟಿ ರು ವಂಚನೆ ಮಾಡಿದ ಬೆಂಗಳೂರು ಮೂಲದ ಸುಕೇಶ್‌ ಚಂದ್ರಶೇಖರ್‌ನೊಂದಿಗೆ ಜಾಕ್ವೆಲಿನ್‌ ಸಂಬಂಧ ಹೊಂದಿದ್ದರು ಎನ್ನಲಾಗಿದ್ದು, ಇಬ್ಬರ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದವು. ಈ ವೇಳೆ ಮನನೊಂದು ಜಾಕಿ ಪೋಸ್ಟ್ ಹಾಕಿದ್ದರು. 'ಈ ದೇಶ ಮತ್ತು ಇಲ್ಲಿರುವ ಜನರು ನನಗೆ ತುಂಬಾನೇ ಪ್ರೀತಿ ಕೊಟ್ಟಿದ್ದಾರೆ ಇದರಲ್ಲಿ ನನ್ನ ಆಪ್ತ ಸ್ನೇಹಿತರು ಮತ್ತು ಮಾಧ್ಯಮ ಮಿತ್ರರು ಸೇರಿರುತ್ತಾರೆ, ಅವರಿಗೆ ನಾನು ಜೀವನದಲ್ಲಿ ದೊಡ್ಡ ಪಾಠ ಕಲಿತಿರುವೆ.  ಜೀವನದಲ್ಲಿ ಅತ್ಯಂತ ಕಷ್ಟದ ಸಮಯವನ್ನು ಎದುರಿಸುತ್ತಿರುವೆ ಆದರೂ ನಾನು ಇದನ್ನು ಗೆದ್ದು ಬಂದು ನಿಮ್ಮ ಮುಂದೆ ನಿಲ್ಲುವೆ. ನನ್ನ ಪ್ರೈವಸಿ ಮತ್ತು ಪರ್ಸನಲ್ ವಿಚಾರ ಬಗ್ಗೆ ಸುದ್ದಿ ಹಬ್ಬಿಸಂತೆ ಮಾಧ್ಯಮಗಳಿಗೆ ಮನವಿ ಮಾಡುತ್ತೇನೆ. ನಿಮ್ಮ ಪ್ರೀತಿ ಪಾತ್ರರಿಗೆ ನೀವು ಈ ರೀತಿ ಖಂಡಿತ ಮಾಡುವುದಿಲ್ಲ ಎಂದು ನಂಬಿರುವೆ. ದಯವಿಟ್ಟು ಸತ್ಯಕ್ಕೆ ಮಹತ್ವ ಕೊಡಿ' ಎಂದು ಜಾಕ್ವೆಲಿನ್ ಬರೆದುಕೊಂಡಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?