ಇಬ್ಬರು ಸೈಬರ್ ಖದೀಮರ ತಂಡವೊಂದನ್ನು ಫರೀದಾಬಾದ್ ಪೊಲೀಸರು ಬಂಧಿಸಿದ್ದಾರೆ. ಸೋನಂ ಕಪೂರ್ ಮಾವನಿಗೆ ಯಾವ ರೀತಿ ವಂಚನೆ ಆಗಿದೆ?
ಬಾಲಿವುಡ್ ಸ್ಟೈಲ್ ಐಕಾನ್, ಡೀವಾ ಸೋನಂ ಕಪೂರ್ ಸಿನಿಮಾದಿಂದ ಸುದ್ದಿ ಆಗದ್ದಿದ್ದರೂ ಗಂಡ ಮತ್ತು ಮಾವ ಮಾಡಿಕೊಳ್ಳುತ್ತಿರುವ ಅವಾಂತರಗಳಿಂದ ಹೆಡ್ಲೈನ್ಸ್ ಆಗುತ್ತಿದ್ದಾರೆ. ಕಳೆದ ತಿಂಗಳು ಪತಿ ಏನೋ ಮೋಸ ಮಾಡಿ ನಕಲಿ ಪೇಪರ್ ಸೃಷ್ಟಿ ಮಾಡಿದ್ದರು ಎನ್ನಲಾಗಿತ್ತು ಆದರೆ ಈ ತಿಂಗಳು ಮಾವನಿಗೆ ಇಬ್ಬರು ಸೈಬರ್ ಕ್ರೈಂ ಖದೀಮರು ವಂಚಿಸಿದ್ದಾರೆ.
ಹೌದು! ನಟಿ ಸೋನಂ ಕಪೂರ್ ಅವರ ಮಾವನ ಕಂಪನಿಗೆ 27 ಕೋಟಿ ವಂಚಿಸಿದ್ದ ಕರ್ನಾಟಕದ ರಾಯಚೂರು ಮೂಲದ ಗಣೇಶ್ ಪರಶುರಾಮ್ ಸೇರಿದಂತೆ ಸೈಬರ್ ಖದೀಮರ ತಂಡವೊಂದನ್ನು ಫರೀದಾಬಾದ್ ಪೊಲೀಸರು ಬಂಧಿಸಿದ್ದಾರೆ. ಸೋನಂ ಅವರ ಮಾವ ಹರೀಶ್ ಆಹುಜಾ ಅವರು ಶಾಹಿ ಎಕ್ಸ್‌ಪೋರ್ಟ್ ಎಂಬ ಸಂಸ್ಥೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರವು, ರಫ್ತು ಕಂಪನಿಗಳಿಗೆ ತೆರಿಗೆ ರಿಯಾಯ್ತಿ ಪಡೆಯಲು ಕೆಲವೊಂದು ಡಿಜಿಟಲ್ ಕೂಪನ್‌ಗಳನ್ನು ನೀಡುತ್ತದೆ. ಸೈಬರ್ ವಂಚಕರ ತಂಡವು ಶಾಹಿ ಎಕ್ಸ್‌ಪೋರ್ಟ್ ಕಂಪನಿಯ ಡಿಜಿಟಲ್ ಸಹಿ ದುರ್ಬಳಕೆ ಮಾಡುವ ಮೂಲಕ ರಫ್ತು ಮಾಡಿದ್ದಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಡಿಜಿಟಲ್ ಕೂಪನ್‌ಗಳನ್ನು ಪಡೆದುಕೊಳ್ಳುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಕಳೆದ ವರ್ಷ ಜುಲೈನಲ್ಲಿ ಹರೀಶ್ ಅಹುಜಾ ದೂರು ನೀಡಿದ್ದರು. ಅದನ್ನು ಆಧರಿಸಿದ ಸಮಯದಿಂದಲೇ ಗುಪ್ತವಾಗಿ ಪೊಲೀಸರು ತನಿಖೆ ಶುರು ಮಾಡಿದ್ದರು. ತನಿಖೆ ಶುರು ಮಾಡಿದ ದಿನದಿಂದ ಒಟ್ಟು 9 ಮಂದಿಯನ್ನು ಪೊಲೀಸರು ಬಂದಿಸಿದ್ದಾರೆ ಆದರಲ್ಲಿ ಇಬ್ಬರು ಕರ್ನಾಟಕದವರು ಇನ್ನುಳಿದವರು ದೆಹಲಿ, ಚೆನ್ನೈನವರು ಎಂದು ನಿತೀಶ್ ಅಗರ್ವಾಲ್ ತಿಳಿಸಿದ್ದಾರೆ. ಬಹುತೇಕ ಆರೋಪಿಗಳನ್ನು 2021ರ ಡಿಸೆಂಬರ್ 23ರಂದು ಬಂಧಿಸಲಾಗಿತ್ತು. ಈ ಆರೋಪಿಗಳಲ್ಲಿ ನಿವೃತ್ತ ಗುಮಾಸ್ತರು, ವಿದೇಶಿ ವ್ಯಾಪಾರದ ಮಾಹಾನಿರ್ದೇಶನಾಲಯದ ಉದ್ಯೋಗಿಗಳು ಸೇರಿದ್ದಾರೆ ಎಂಬ ಮಾಹಿತಿ ರಿವೀಲ್ ಆಗಿದೆ.
ನಟ Anil Kapoor ಅಳಿಯ ವಿರುದ್ಧ ತೆರಿಗೆ ವಂಚನೆ ಆರೋಪ; ಫ್ರಾಡ್ ಮಾಡಿದ್ದು ನಿಜವೇ?ಫರೀದಾಬಾದ್ ಡಿಸಿಪಿ ಅರೋಪಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ದೆಹಲಿಯ ಮನೋಜ್ ರಾಣಾ, ಮನೀಶ್ ಕುಮಾರ್, ಪ್ರವೀಣ್ ಕುಮಾರ್, ಲಲಿತ್ ಕುಮಾರ್ ಚೈನ್, ಮನೀಶ್ ಕುಮಾರ್ ಮೋಗಾ ಎಂದು ಗುರುತಿಸಲಾಗಿದ್ದು ಮುಂಬೈನ ಭೋಷಣ್ ಕಿಶನ್ ಥಾಕೂರ್, ಚೆನ್ನೈನ ಸುರೇಶ್ ಕುಮಾರ್, ಯಾಯಗಡದ ರಾಹುಲ್ ರಘನಾಥ್, ಪುಣೆಯ ಸಂತೋಷ್ ಸೀತಾರಾಮ್ ಎಂದು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಸಿಲುಕಿರುವ ಮತ್ತೊವರ್ ಆರೋಪಿ ಕರ್ನಾಟಕದ ರಾಯಚೂರಿನ ಗಣೇಶ್ ಪರಶುರಾಮ್ ಎಂದು ಹೇಳಲಾಗಿದೆ.
ಸೋನಮ್ ಅವರನ್ನು 'ಶೇಮ್‌ಲೆಸ್' ಎಂದಾಗ; ಡ್ಯಾಡಿ ಅನಿಲ್ ಕಪೂರ್ ರಿಯಾಕ್ಷನ್ ಹೇಗಿತ್ತು!