ದಿವಂಗತ ನಟ ಇರ್ಫಾನ್ ಖಾನ್ ಪುತ್ರ ತಂದೆಯ ಸಿನಿ ಜರ್ನಿ ಬಗ್ಗೆ ಬರೆದ ಸಾಲುಗಳು ವೈರಲ್ ಆಗುತ್ತಿದೆ. ಈ ಮಧ್ಯೆ ಸುಶಾಂತ್ ಸಾವಿನ ನಂತರ ಹೆಚ್ಚು ಹರಿದಾಡುತ್ತಿರುವ ಬಾಲಿವುಡ್‌ನಲ್ಲಿ ನಡೆಯುವ ಸ್ವಜನ ಪಕ್ಷಪಾತ ವಿರುದ್ಧದ ಕೂಗಿಗೆ ಮತ್ತಷ್ಟು ಪುಷ್ಠಿ ಸಿಕ್ಕಂತಾಗಿದೆ.
ಬಾಲಿವುಡ್ ಚಿತ್ರರಂಗದ ಮಾಸ್ಟರ್ ಆ್ಯಕ್ಟರ್ ಇರ್ಫಾನ್ ಖಾನ್ ವಿಭಿನ್ನ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಅದ್ಭುತ ಕಲಾವಿದನಾಗಿ ಗುರುತಿಸಿಕೊಂಡವರು. ಅನೇಕ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದರೂ, ಬೇರೆ ನಟರಿಗೆ ಹೋಲಿಸಿದಲ್ಲಿ ಅವಕಾಶಗಳು ಈ ಪ್ರತಿಭಾನ್ವಿತನನ್ನು ಹುಡುಕಿಕೊಂಡು ಬಂದಿದ್ದು ಕಡಿಮೆ. ಅವರು ಆಯ್ದುಕೊಳ್ಳುತ್ತಿದ್ದ ಚಿತ್ರಗಳು, ಬಿ-ಟೌನ್ ಸಿನಿ ಪ್ರೇಕ್ಷಕರ ಬಗ್ಗೆ ಇರ್ಫಾನ್ ಪುತ್ರ ಬಾಬಿಲ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇರ್ಫಾನ್ ಒಬ್ಬರು ಪ್ರತಿಭಾನ್ವಿತ ನಟ ಎನ್ನೋದರಲ್ಲಿ ಅನುಮಾನವೇ ಇಲ್ಲ. ಅಂಥ ನಟನೂ ಏಕೆ ಅವಕಾಶಗಳಿಂದ ವಂಚಿತರಾದರು ಎನ್ನುವ ಅನುಮಾನಕ್ಕೆ ಬಾಬಿಲ್ ಉತ್ತರಿಸಿದಂತೆ ಕಾಣಿಸುತ್ತಿದೆ. ಅಷ್ಟಕ್ಕೂ ಬಾಬಿಲ್ ಪೋಸ್ಟಲ್ಲಿ ಏನಿದೆ?
ಮೌನದ ಸಮುದ್ರ: ಇರ್ಫಾನ್ ಖಾನ್ ಬಗ್ಗೆ ಜಯಂತ್ ಕಾಯ್ಕಿಣಿ ಮಾತು!
ಬಣ್ಣದ ಲೋಕದ ರಿಯಾಲಿಟಿ:
'ನಾನು ಸಿನಿಮಾ ವಿದ್ಯಾರ್ಥಿಯಾಗುವ ಮೊದಲು, ನನ್ನ ತಂದೆ ನನಗೆ ಹೇಳಿಕೊಟ್ಟ ಮೊದಲ ಪಾಠ ಏನು ಗೊತ್ತಾ? ಚಿತ್ರರಂಗದಲ್ಲಿ ನನ್ನನ್ನು ನಾನು ಪ್ರೂವ್ ಮಾಡಬೇಕೆಂದು. ಕಾರಣ ಸಿನಿಮಾ ಜಗತ್ತು ಅಷ್ಟು ಕಡಿಮೆ ಗೌರವ ಹೊಂದಿದೆ. ಅವರು ನೀಡಿದ ಎಚ್ಚಿರಿಕೆ ಮೇಲೆ ನಾನು ಭಾರತೀಯ ಸಿನಿಮಾದ ಬಗ್ಗೆ, ನಿಮ್ಮೊಂದಿಗೆ ಕೆಲವೊಂದು ವಿಚಾರಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ,' ಎಂದು ಬಣ್ಣದ ಲೋಕದ ರಿಯಾಲ್ ವಿಚಾರಗಳನ್ನು ರಿವೀಲ್ ಮಾಡಿದ್ದಾರೆ.
'ನೀವು ಯಾರಿಗಾದರೂ ಬಾಲಿವುಡ್ ಎಂದು ಹೇಳಿದರೆ ಅವರು ನಗುತ್ತಾರೆ. ಯಾಕೆ ಗೊತ್ತಾ? 60-90ರ ದಶಕದಲ್ಲಿ ಮೂಡುತ್ತಿದ್ದ ಸಿನಿಮಾಗಳಿಗೆ ಮಹತ್ವವಿರುತ್ತಿತ್ತು. ಅದೀಗ ತನ್ನ ಗೌರವ ಕಳೆದುಕೊಂಡಿದೆ. ಮೌಲ್ಯಯುತ ಚಿತ್ರಗಳನ್ನು ಯಾರೂ ಮಾಡುತ್ತಲೇ ಇಲ್ಲ. ವಿಶ್ವ ಸಿನಿಮಾದಲ್ಲಿ ಭಾರತೀಯ ಸಿನಿಮಾ ಅಂದ್ರೆ ಎಲ್ಲರಿಗೂ ಬಾಲಿವುಡ್ ಮಾತ್ರವೇ ಎಂದು ಕೊಳ್ಳುತ್ತಾರೆ. ಚಿತ್ರರಂಗದ ತರಗತಿಯಲ್ಲಿ ಮುಸಿಮುಸಿ ನಗುತ್ತಿರುತ್ತೇವೆ. ಅದರಲ್ಲೂ ಸತ್ಯಜಿತ್ ರೇ ಮತ್ತು ಕೆ ಆಸಿಫ್ ಅವರು ಮಾಡಿದ ನೈಜ ಭಾರತೀಯ ಸಿನಿಮಾಗಳ ಕುರಿತು ಚರ್ಚೆಯಾಗುವುದೂ ತುಂಬಾನೇ ಕಷ್ಟ. ಯಾಕೆ ಗೊತ್ತಾ?' ಎಂದು ಹೇಳುತ್ತಾ ಹೋಗಿದ್ದಾರೆ ಬಾಬಿಲ್..
ಎಂಥವರನ್ನೂ ಭಾವುಕರನ್ನಾಗಿಸುತ್ತದೆ ಇರ್ಫಾನ್ ಖಾನ್ ಪತ್ನಿ ಹೃದಯಸ್ಪರ್ಶಿ ಪತ್ರ!
ಸಿಕ್ಸ್ ಪ್ಯಾಕ್ಸ್ ಲೋಕ:
'ಸಿನಿಮಾ ನೋಡುವ ಪ್ರೇಕ್ಷಕರು, ಚಿತ್ರ ನೋಡ ನೋಡುತ್ತಾ ತಾವು ಮಾನಸಿಕವಾಗಿ ಬೆಳೆಯಲು ನಿರಾಕರಿಸುತ್ತಾರೆ. ಆದರೂ ನನ್ನ ತಂದೆ ಆಯ್ಕೆ ಮಾಡಿಕೊಂಡ ವಿಭಿನ್ನ ಪಾತ್ರಗಳನ್ನು ಭಾರತೀಯರು ಒಪಿಕೊಂಡಿದ್ದಾರೆ. ಸಿಕ್ಸ್ ಪ್ಯಾಕ್ಸ್ ಫ್ಯಾಂಟಸಿಯಿಂದಾನೇ ನನ್ನ ತಂದೆ ಬಾಲಿವುಡ್‌ನಲ್ಲಿ ದೊಡ್ಡ ಹೆಸರು ಮಾಡಲು ಸಾಧ್ಯವಾಗಲಿಲ್ಲ. ಕಲಾವಿದನಿಗೆ ಅಗತ್ಯವಾದ ಅಭಿನಯ ಕರತಲಾಮಲಕವಾಗಿದ್ದರೂ, ನಿರೀಕ್ಷಿತ ಗೆಲವು ಸಾಧಿಸುವಲ್ಲಿ ಅವರು ವಿಫಲರಾದರು. ಫೋಟೋ ಶಾಪ್ ಮಾಡಿದ ಐಟಮ್ ಸಾಂಗ್‌ಗಳಿಂದ ಕೇವಲ ಸೆಕ್ಸಿಸಂ ಬಿಂಬಿಸುವ ಮತ್ತು ದೇಶಪ್ರೇಮದ ಅದೇ ಸಾಂಪ್ರದಾಯಿಕ ಪ್ರಾತಿನಿತ್ಯದಿಂದ ಬಾಲಿವುಡ್ ಸೋತಿದೆ. ನನ್ನ ತಂದೆಗೆ ಎಲ್ಲ ಅರ್ಹತೆ ಇದ್ದರೂ, ಬಾಲಿವುಡ್‌ನಲ್ಲಿ ಯಶಸ್ವಿ ನಾಯಕನಾಗದಿದ್ದಕ್ಕೆ ಸಿಕ್ಸ್ ಪ್ಯಾಕ್ ಕೊರತೆಯೇ ಕಾರಣ ಎಂಬುದನ್ನು ಸಿನಿ ಪ್ರೇಮಿಗಳು ಅರ್ಥ ಮಾಡಿಕೊಳ್ಳಬೇಕು. ಅಲ್ಲಿ ಸಿನಿಮಾ ಹಿಟ್ ಆಗುವುದು ಕೇವಲ ಸಿಕ್ಸ್ ಫ್ಯಾಕ್ ಹಾಟ್ ಬಾಯ್ಸ್‌ನಿಂದ ಮಾತ್ರ,' ಎಂದು ಭಾವುಕರಾಗಿ ತಮ್ಮ ಮನಸಿನಳಾದ ಭಾವನೆಗಳನ್ನು ಹಂಚಿಕೊಂಡಿದ್ದಾರೆ.
ಸುಶಾಂತ್ ಸಾವು:
ನಟ ಸುಶಾಂತ್ ಸಾವು ಎಲ್ಲರಿಗೂ ನೋವು ತಂದಿದೆ. ಅನೇಕರು ಅದಕ್ಕೆ ರಾಜಕೀಯ ಬಣ್ಣ ಬಳಿಯುತ್ತಿದ್ದಾರೆ. ಸುಶಾಂತ್ ಸಾವಿನ ಹಿನ್ನೆಲೆಯಲ್ಲಿಯೇ ನಾನು ನನ್ನ ಅಭಿಪ್ರಾಯ ತಿಳಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಇರ್ಫಾನ್ ಖಾನ್ ಇತ್ತೀಚೆಗೆ ನಿಧನರಾಗಿದ, ಬಾಲಿವುಡ್ ಒಬ್ಬ ಪ್ರತಿಭಾನ್ವಿತನನ್ನು ಕಳೆದುಕೊಂಡ ನೋವಲ್ಲಿತ್ತು. ಇದೇ ಸಂದರ್ಭದಲ್ಲಿಯೇ ಸುಶಾಂತ್ ಸಿಂಗ್ ರಜಪೂತ್‌ನಂಥ ಪ್ರತಿಭಾನ್ವಿತ ಆತ್ಮಹತ್ಯೆಗೆ ಶರಣಾಗಿದ್ದು, ಬಾಲಿವುಡ್‌ನಲ್ಲಿ ಹೊರಗಿನವರನ್ನು ನಡೆಸಿಕೊಳ್ಳುತ್ತಿರುವ ರೀತಿ ಹಾಗೂ ಸ್ವಜನ ಪಕ್ಷಪಾತ, ತಂದೆ ಅಥವಾ ತಾಯಿ ಬಾಲಿವುಡ್‌ನಲ್ಲಿ ಹೆಸರು ಮಾಡಿದ್ದರೆ, ಅವರ ಮಕ್ಕಳಿಗೆ ಪ್ರತಿಭೆ ಇಲ್ಲದಿದ್ದರೂ ಮಣೆ ಹಾಕುವ ವಿಚಾರವಾಗಿ ಸಾಕಷ್ಟು ಪರ, ವಿರೋಧ ಚರ್ಚೆಗಳು ನಡೆಯುತ್ತಲೇ ಇವೆ.
ಸುಶಾಂತ್‌ನಂಥ ಒಬ್ಬ ಸೂಕ್ಷ್ಮ ಮನಸ್ಸಿನ ನಟನೊಬ್ಬ ನೇಣಿಗೆ ಕೊರಳೊಡ್ಡಬೇಕಾದರೆ, ಹಿನ್ನೆಲೆ ಏನಿರಬಹುದು ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಸಂಬಂಧ ನಟನ ಒಡನಾಡಿಗಳನ್ನು ವಿಚಾರಣೆಗೊಳಪಡಿಸಲಾಗುತ್ತಿದೆ.
#NewsIn100Seconds | ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್