ಆತ್ಮಹತ್ಯೆಗೆ ಮುಂದಾಗಿದ್ರಂತೆ ಮನೋಜ್‌ ಬಾಜಪೇಯಿ! ಯಾಕೆ ಗೊತ್ತಾ?

By Suvarna NewsFirst Published Jul 10, 2020, 5:31 PM IST
Highlights

ಮನೋಜ್‌ ಬಾಜಪೇಯಿ ಬಾಲಿವುಡ್‌ನಲ್ಲಿ ಬಹು ಬೇಡಿಕೆಯ ನಟ. ಬಲು ಕಷ್ಟದ ಬಾಲ್ಯ ಹಾಗೂ ಯವ್ವನದ ದಿನಗಳನ್ನು ದಾಟಿ ಬಂದಿರುವ ಇವರೊಮ್ಮೆ ಆತ್ಮಹತ್ಯೆಗೂ ಮುಂದಾಗಿದ್ರಂತೆ. ಆ ಕತೆಯನ್ನು ಅವರ ಬಾಯಿಯಿಂದಲೇ ಕೇಳಿ.

ನಾನು ರೈತನ ಮಗ. ಬಿಹಾರದ ಸಣ್ಣದೊಂದು ಹಳ್ಳಯಲ್ಲಿ ಹುಟ್ಟಿದವನು. ನನ್ನ ಒಡಹುಟ್ಟಿದವರು ಐದು ಮಂದಿ. ಗ್ರಾಮದಲ್ಲಿದ್ದ ಒಂದು ಗುಡಿಸಲಲ್ಲಿ ನಡೆಯುತ್ತಿದ್ದ ಶಾಲೆಗೆ ಹೋದವನು ನಾನು. ಅತ್ಯಂತ ಸರಳವಾದ ಬದುಕಾಗಿತ್ತು ನಮ್ಮದು. ಆದರೆ ಪಟ್ಟಣಕ್ಕೆ ಹೋದಾಗಲೆಲ್ಲ ನಾವು ತಪ್ಪದೇ ಸಿನಿಮಾ ಥಿಯೇಟರಿಗೆ ಹೋಗುತ್ತಿದ್ದೆವು. ನಾಣು ಅಮಿತಾಭ್‌ ಬಚ್ಚನ್‌ ಅವರ ದೊಡ್ಡ ಫ್ಯಾನ್‌. ಅವರ ಹಾಗೆ ಆಗಲು ಬಯಸಿದ್ದೆ. ನನಗಾಗ ಒಂಬತ್ತು ವರ್ಷ. ಆದರೆ ನಟನೆಯೇ ನನ್ನ ಗುರಿ ಅಂತ ನಿರ್ಧರಿಸಿ ಬಿಟ್ಟಿದ್ದೆ. 

ಆದರೆ ಆ ಕನಸನ್ನು ನನಸು ಮಾಡುವುದು ಹೇಗೆ ಅತ ಗೊತ್ತಿರಲಿಲ್ಲ. ಹೀಗಾಗಿ ಶಾಲೆ ಶಿಕ್ಷಣ ಮುಂದುವರಿಸಿದೆ. ಆದರೆ ಅಭೀನಯಕ್ಕಿಂತ ಆಚೆಗೆ ಏನನ್ನೂ ಮಾಡಲು ಮನಸಿರಲಿಲ್ಲ. ಹೀಗಾಗಿ ಹದಿನೇಳನೇ ವಯಸ್ಸನಲ್ಲಿ ಊರು ಬಿಟ್ಟು ದಿಲ್ಲಿ ಯೂನಿವರ್ಸಿಯತ್ತ ಹೊರಟುಬಿಟ್ಟೆ.

ಅಲ್ಲಿ ನಾನು ರಂಗಭೂಮಿಯತ್ತ ಹೋದೆ. ಆದರೆ ಇದು ನನ್ನ ಕುಟುಂಬಕ್ಕೆ ಗೊತ್ತಾಗಲಿಲ್ಲ. ಕಡೆಗೆ ನಾನು ತಂದೆಗೆ ಒಂದು ಪತ್ರ ಬರೆದೆ- ನಾನು ನಟ ಆಗಬೇಕು ಎಂಬುದನ್ನು ಹೇಳಿಕೊಂಡೆ. ತಂದೆಗೆ ಸಿಟ್ಟು ಬರಲಿಲ್ಲ. ಬದಲಾಗಿ ನನ್ನ ಫೀಸ್‌ ಕಟ್ಟಲೆಂದು ಇನ್ನೂರು ರೂಪಾಯಿ ಕಳಿಸಿಕೊಟ್ಟರು! ಊರಿನ ಇತರ ಜನ ನನ್ನನ್ನು ಕೆಲಸಕ್ಕೆ ಬಾರದವನು, ಮೂರ್ಖ ಎಂದೆಲ್ಲ ಕರೆದರು. ಆದರೆ ನಾನು ಅದಕ್ಕೆ ತಲೆ ಕೆಡಿಸಿಕೊಳ್ಳಲಿಲ್ಲ. ದಿಲ್ಲಿಗೆ ನಾನು ಹೊರಗಿನವನಾಗಿದ್ದೆ. ಬೆರೆಯಲು ಯತ್ನಿಸುತ್ತಿದ್ದೆ. ಗಳಿಕೆಗಾಗಿ ಹಿಂದಿ ಮತ್ತು ಇಂಗ್ಲಿಷ್‌ ಕಲಿಸಲು ಯತ್ನಿಸಿದೆ. ನನ್ನ ಹಿಂದಿಯಲ್ಲಿ ಭೋಜ್‌ಪುರಿ ಸೇರಿಕೊಂಡಿತ್ತು. ನ್ಯಾಷನಲ್‌ ಸ್ಕೂಲ್‌ ಆಫ್‌ ಡ್ರಾಮಾ ಸೇರಲು ಅರ್ಜಿ ಹಾಕಿದೆ. ಆದರೆ ಮೂರು ಬಾರಿ ತಿರಸ್ಕೃತನಾದೆ. ಹತಾಶೆ ಆವರಿಸಿತು, ಆತ್ಮಹತ್ಯೆ ಮಾಡಿಕೊಳ್ಳೋಣ ಅನಿಸಿತು. ನನ್ನ ಗೆಳೆಯರು ನನ್ನ ಬಗ್ಗೆ ಭೀತರಾಗಿದ್ದರು. ಅವರು ನನ್ನನ್ನು ಒಂಟಿಯಾಗಿ ಬಿಟ್ಟು ಇರುತ್ತಿರಲೇ ಇಲ್ಲ. ನಾನು ಆತ್ಮವಿಶ್ವಾಸ ಗಳಿಸಿಕೊಳ್ಳುವವರೆಗೂ ಅವರು ನನ್ನ ಜೊತೆಯಾಗಿಯೇ ಇದ್ದರು.

ಆ ವರ್ಷ ನಾನು ಒಂದು ಮುರಿದ ಚಾಯ್‌ ಅಂಗಡಿಯ ಮುಂದೆ ಕೂತಿದ್ದೆ. ತಿಗ್ಮಾಂಶು ನನ್ನನ್ನು ಹುಡುಕಿಕೊಂಡು ಬಂದ. ಶೇಖರ್‌ ಕಪೂರ್‌ ಅವರು ಬ್ಯಾಂಡಿಟ್‌ ಕ್ವೀನ್‌ ಫಿಲಂನನ್ನು ನನ್ನನ್ನು ಹಾಕಿಕೊಳ್ಳಲು ಬಯಸಿದ್ದಾರೆ ಎಂಬ ಸುದ್ದಿಯನ್ನು ತಿಳಿಸಿದ. ಕಡೆಗೂ ನಾನು ಅಂಗೀಕೃತನಾಗಿದ್ದೆ, ಮುಂಬಯಿಗೆ ಹೊರಟುಬಿಟ್ಟೆ.

'ಬದುಕು ಬದಲಿಸಿದ ಸಿನಿಮಾ': ಸತ್ಯ ಬಗ್ಗೆ ಮನೋಜ್ ಹೇಳಿದ್ದಿಷ್ಟು..! ...

ಮೊದಲ ನಾಲ್ಕು ವರ್ಷಗಳು ಕಠಿಣವಾಗಿದ್ದವು. ಐವರು ಗೆಳೆಯರ ಜೊತೆಗೆ ಒಂದು ಸಣ್ಣ ಚಾಳ್‌ ಹಂಚಿಕೊಂಡಿದ್ದೆ. ಕೆಲಸಕ್ಕಾಗಿ ಒಂದು ಸ್ಟುಡಿಯೋದಿಂದ ಇನ್ನೊಂದಕ್ಕೆ ಅಲೆಯುತ್ತಿದ್ದೆ. ಯಾವುದೇ ಪಾತ್ರ ಸಿಗುತ್ತಿರಲಿಲ್ಲ. ಒಮ್ಮೆ ಜಾಹೀರಾತು ಕಂಪನಿಯವನೊಬ್ಬ ನನ್ನ ಫೋಟೋ ಹರಿದು ಮುಖಕ್ಕೆಸೆದಿದ್ದ. ಮತ್ತೊಮ್ಮೆ ಮೂರು ಪ್ರಾಜೆಕ್ಟ್‌ಗಳನ್ನು ಒಂದೇ ದಿನ ಕಳೆದುಕೊಂಡಿದ್ದೆ. ಮೊದಲ ಶೂಟಿಂಗ್‌ನ ಬಳಿಕ ನನ್ನ ಕಾಸ್ಟ್ಯೂಮ್‌ ಕಳಚಿಟ್ಟು ನಡೆ ಎಂದವರೂ ಇದ್ದರು. ನಾನು ಹೀರೋ ಪಾತ್ರಕ್ಕೆ ತಕ್ಕ ಮೆಟೀರಿಯಲ್ ಅಲ್ಲವೆಂದೂ, ನಾನು ಬಾಲಿವುಡ್‌ ಸೂಟ್‌ ಆಗೋಲ್ಲವೆಂದೂ ಅವರ ನಂಬಿಕೆಯಾಗಿತ್ತು. ಆಗೆಲ್ಲ ನನ್ನ ಕೈಯಲ್ಲಿ ಹಣವೇ ಇರಲಿಲ್ಲ. ಬಾಡಿಗೆ ಕೊಡಲೂ ಸಾಧ್ಯವಾಗುತ್ತಿರಲಿಲ್ಲ. ಒಂದು ವಡಾ ಪಾವ್‌ ಸಹ ದುಬಾರಿಯಾಗುತ್ತಿತ್ತು.

ಬಂಡೆಯೇರಿದ ಜೋಶ್‌ನಲ್ಲಿ ಸ್ಟಾರ್ ದಂಪತಿ 
ಆದರೆ ನನ್ನ ಹೊಟ್ಟೆಯ ಹಸಿವು, ನನ್ನ ಅಭಿನಯದ ಹಸಿವನ್ನು ಕಸಿಯಲಿಲ್ಲ. ನಾಲ್ಕು ವರ್ಷಗಳ ಒದ್ದಾಟದ ಬಳಿಕ ಮಹೇಶ್‌ ಭಟ್‌ ಅವರ ಟಿವಿ ಸೀರೀಸ್‌ನಲ್ಲಿ ಸಣ್ಣದೊಂದು ಪಾತ್ರ ಸಿಕ್ಕಿತು. ಒಂದು ಸರಣಿಗೆ ಸಾವಿರದ ಐನೂರು ರೂಪಾಯಿ ಸಂಬಳ. ಅದು ನನ್ನ ಆಗಿನ ಆದಾಯ. ಅದರಲ್ಲಿ ನನ್ನ ಅಭಿನಯ ಗುರುತಿಸಿದ ರಾಮ್‌ಗೋಪಾಲ್‌ ವರ್ಮಾ, ಸತ್ಯ ಫಿಲಂನಲ್ಲಿ ನನಗೆ ಪಾತ್ರ ಕೊಟ್ಟರು. ನಂತರ ನನ್ನ ಪಾತ್ರಗಳಿಗೆ ಪ್ರಶಸ್ತಿ ಎಲ್ಲ ಬಂತು. ನಂತರ ನಾನೊಂದು ಮನೆ ಕಟ್ಟಿದೆ. ಅರುವತ್ತೇಳು ಫಿಲಂಗಳಲ್ಲಿ ನಟಿಸಿದ ಬಳಿಕ, ನಾನು ಇಲ್ಲಿಗೆ ಸೇರಿದವನು ಎಂಬುದು ನನಗೆ ಖಚಿತವಾಗಿದೆ. ಇದು ನನ್ನ ಕನಸುಗಳ ನಡಿಗೆ. ಅವುಗಳನ್ನು ನಿಜವಾಗಿಸಲು ಹೊರಟಾಗ ಹೋರಾಟ ಹಸಿವು ಇವೆಲ್ಲಾ ಲೆಕ್ಕದಲ್ಲೇ ಇರೊಲ್ಲ. ಮುಖ್ಯವಾಗುವುದೆಂದರೆ ಆ ಒಂಬತ್ತು ವರ್ಷಗಳ ಹುಡುಗನ ಕನಸು ಮಾತ್ರ. 

ಮಾಜಿ ಪೋರ್ನ್ ನಟಿ ಸನ್ನಿ‌ ಲಿಯೋನ್‌ಗಿದ್ದಾಳೆ ಒಬ್ಳು ಗರ್ಲ್ ಫ್ರೆಂಡ್! 

click me!