ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ/ ಪ್ರಕರಣದ ತನಿಖೆ ಸಿಬಿಐಗೆ ನೀಡಬೇಕೆ? ಬೇಡವೇ?/ ಅಖಾಡಕ್ಕೆ ಇಳಿದ ಸುಬ್ರಮಣಿಯನ್ ಸ್ವಾಮಿ/ ಸಿಬಿಐ ತನಿಖೆ ಅಗತ್ಯಗಳ ಪರಿಶೀಲನೆ ಜವಾಬ್ದಾರಿ ಸ್ವಾಮಿಗೆ
ಮುಂಬೈ(ಜೂ. 10) ಬಾಲಿವುಡ್ ನಟ ಸುಶಾಂತ್ ಸಿಂಗ್ ಚಿತ್ರರಂಗ ಅಗಲಿ ಸುಮಾರು 25 ದಿನಗಳೆ ಕಳೆದಿವೆ. ಸುಶಾಂತ್ ಸಿಂಗ್ ಸಾವು ಆತ್ಮಹತ್ಯೆ ಅಲ್ಲ, ಇದೊಂದು ಕೊಲೆ ಎಂದು ಅಭಿಮಾನಿಗಳು ಮತ್ತು ಸುಶಾಂತ್ ಕುಟುಂಬದವರು ಹೇಳಿಕೊಂಡೆ ಬಂದಿದ್ದರು. ಸುಶಾಂತ್ ಸಾವಿನ ತನಿಖೆ ಸಿಬಿಐನಿಂದ ಆಗಬೇಕು ಎಂಬ ಒತ್ತಾಯ ಕೇಳಿಬಂದಿತ್ತು.
ಇದೀಗ ಹಿರಿಯ ವಕೀಲ ಸುಬ್ರಮಣಿಯನ್ ಸ್ವಾಮಿ ಅಖಾಡಕ್ಕೆ ಇಳಿದಿದ್ದಾರೆ. ಸಾರ್ವಜನಿಕರು ಮತ್ತು ಅಭಿಮಾನಿಗಳ ಒತ್ತಾಯಕ್ಕೆ ಮಣಿದ ಸರ್ಕಾರ ಸ್ವಾಮಿ ಅವರಿಗೆ ದೊಡ್ಡ ಜವಾಬ್ದಾರಿ ಒಂದನ್ನು ವಹಿಸಿದೆ.
undefined
ಸುಶಾಂತ್ ಸಾವಿಗೆ ಸಿಬಿಐ ತನಿಖೆ ಅಗತ್ಯವಿದೆಯೇ ಎಂಬ ವಿಚಾರಕ್ಕೆ ಸಂಬಂಧಿಸಿ ತನಿಖೆ ಮುಂದುವರಿಸಲು ಸುಬ್ರಮಣಿಯನ್ ಸ್ವಾಮಿ ಅವರನ್ನು ಸರ್ಕಾರ ನೇಮಕ ಮಾಡಿದೆ.
ಸುಶಾಂತ್ ಸಾವು; ಸಲ್ಮಾನ್, ಕರಣ್ ವಿರುದ್ಧ ಸಲ್ಲಿಸಿದ್ದ ಅರ್ಜಿ ವಜಾ
ಸುಬ್ರಮಣಿಯನ್ ಸ್ವಾಮಿ ಅವರೇ ಈ ವಿಚಾರವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆ ಮೂಲಕ ಹಂಚಿಕೊಂಡಿದ್ದಾರೆ. ಈ ಪ್ರಕರಣ ಸಿಬಿಐಗೆ ನೀಡಬೇಕೆ? ಅಥವಾ ಬೇಡವೇ? ಎಂಬುದರ ಕುರಿತು ಮಾಹಿತಿ ಕಲೆಹಾಕಲು ವಕೀಲ ಇಶ್ಕರಣ್ ಭಂಡಾರಿ ಅವರಿಗೆ ತಿಳಿಸಿದ್ದೇನೆ ಎಂದು ಸ್ವಾಮಿ ವಿವರ ಹಂಚಿಕೊಂಡಿದ್ದಾರೆ.
ಅಭಿಮಾನಿಗಳು ಸರ್ಕಾರದ ಈ ಕ್ರಮ ಸ್ವಾಗತ ಮಾಡಿದ್ದು ಸುಶಾಂತ್ ಸಾವಿಗೆ ನ್ಯಾಯ ಸಿಗಬೇಕು ಎಂದು ಹೇಳಿದ್ದಾರೆ.
I have asked Ishkaran to look into facts of Sushant Singh Rajput death case & see whether it's a fit Case for CBI investigation. Then accordingly to see justice is done. For Updates follow
— Subramanian Swamy (@Swamy39)