Happy Birthday Hrithik Roshan: ವಿಕ್ರಮ್ ವೇದಾ ಫಸ್ಟ್‌ ಲುಕ್ ರಿಲೀಸ್!

Suvarna News   | Asianet News
Published : Jan 10, 2022, 02:25 PM IST
Happy Birthday Hrithik Roshan: ವಿಕ್ರಮ್ ವೇದಾ ಫಸ್ಟ್‌ ಲುಕ್ ರಿಲೀಸ್!

ಸಾರಾಂಶ

ಹುಟ್ಟು ಹಬ್ಬಕ್ಕೆ ಅಭಿಮಾನಿಗಳಿಗೆ ಸ್ಪೆಷಲ್ ಗಿಫ್ಟ್‌ ಕೊಟ್ಟ ನಟ ಹೃತಿಕ್. ವಿಕ್ರಮ್ ವೇದಾ ಬಗ್ಗೆ ಅಪ್ಡೇಟ್‌.....

ನಮ್ಮ ಭಾರತೀಯ ಚಿತ್ರರಂಗದಲ್ಲೂ ಬಾಲಿವುಡ್‌ (Bollywood) ರೇಂಜ್‌ಗೆ ನಟರಿದ್ದಾರೆ ಎಂದು  90ರ ದಶಕದ ಮಕ್ಕಳಿಗೆ ಗೊತ್ತಾಗಿದ್ದೇ ನಟ ಹೃತಿಕ್ ರೋಷನ್‌ ಅವರಿಂದ (Hithik Roshan). ಅವರ ಕಣ್ಣು, ಫಿಸಿಕ್ ಮತ್ತು ಡ್ರೆಸಿಂಗ್ ಸ್ಟೈಲ್ ಎಲ್ಲವೂ ಸೂಪರ್. ಇಂದು ಹೃತಿಕ್ ರೋಷನ್ 48ರ ವಸಂತಕ್ಕೆ ಕಾಲಿಟ್ಟಿದ್ದಾರೆ, ಹುಟ್ಟು ಹಬ್ಬದ (Birthday) ಪ್ರಯುಕ್ತ ಅಭಿಮಾನಿಗಳಿಗೆ ತಮ್ಮ ಮುಂದಿನ ಚಿತ್ರದ ಬಗ್ಗೆ ಅಪ್ಡೇಟ್ ನೀಡಿದ್ದಾರೆ. ಹೃತಿಕ್ ಹೊಸ ಲುಕ್‌ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. 

ಕಪ್ಪು ಬಣ್ಣದ ಜುಬ್ಬಾ, ಕಪ್ಪು ಕನ್ನಡಕ, ಮೈ ಎಲ್ಲಾ ರಕ್ತ (Blood) ಇದು 'ವೇದ' (Veda) ಎಂದು ಹೃತಿಕ್ ಬರೆದುಕೊಂಡಿದ್ದಾರೆ. ಲವರ್ ಬಾಯ್ (Lover Boy), ಸ್ಟಂಟ್ ಮತ್ತು ಡ್ಯಾನ್ಸರ್ (Dancer) ಆಗಿ ಹೃತಿಕ್ ನೋಡಿರುವವರಿಗೆ ಈ ಗ್ಯಾಂಗ್‌ಸ್ಟರ್ ಲುಕ್ (Gangster Look) ಶಾಕ್ ನೀಡಿದೆ. ಇದೇ ಮೊದಲ ಭಾರಿ ಹೃತಿಕ್ ಈ ರೀತಿಯ ಪ್ರಾಜೆಕ್ಟ್‌ ಆಯ್ಕೆ ಮಾಡಿಕೊಂಡಿರುವುದು. 'ನಿಮ್ಮ ಈ ಲುಕ್ ಇಂಟರ್‌ನೆಟ್‌ನಲ್ಲಿ ಕಿಡಿ ಹತ್ತಿಸಿದೆ,','ಈ ವರ್ಷ ನಿಮ್ಮ ಸಿನಿಮಾ ನೋಡವ ಭಾಗ್ಯ ನನ್ನದು ಅದು ಈ ಲುಕ್‌ನಲ್ಲಿಯೇ,' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. 

ಸಾರಿ ಉಟ್ಟ ನಾರಿಯ ಜಬರ್‌ದಸ್ತ್‌ ಡಾನ್ಸ್‌.. ಎರ್ರಾಬಿರ್ರಿ ಸ್ಟೆಪ್‌ಗೆ ಸುತ್ತಲಿದ್ದವರು ಗಾಬರಿ

    ನಟ ಮಾದವನ್ (Madhavan) ಮತ್ತು ಶ್ರದ್ಧಾ ಶ್ರೀನಾಥ್ (Shraddha Srinath) ನಟಿಸಿರುವ ತಮಿಳು ಚಿತ್ರದ ವಿಕ್ರಂ ವೇದಾ ಸಿನಿಮಾದ ರಿಮೇಕ್ ಈ ಹಿಂದಿಯ ವಿಕ್ರಮ್ ವೇದಾ. ನಟೋರಿಯಸ್‌ ಗ್ಯಾಂಗಸ್ಟರ್ ಆಗಿ ತಮಿಳಿನಲ್ಲಿ ವಿಜಯ್ ಸೇತುಪತಿ (Vijay Sethupathi) ಕಾಣಿಸಿಕೊಂಡರೆ, ಹಿಂದಿಯಲ್ಲಿ ಹೃತಿಕ್‌ ರೋಷನ್ ಮಿಂಚಲಿದ್ದಾರೆ. ಈ ನಟೋರಿಯಸ್‌ ಲೀಡರ್‌ನನ್ನು ಹಿಡಿಯಲು ಪೊಲೀಸ್ ಪಡುವ ಸಾಹಸ ಅಷ್ಟಿಷ್ಟಲ್ಲ, ಪತ್ನಿ ಲಾಯರ್ (Lawyer) ಆಗಿದ್ದು, ಅವಳೇ ಈ ಗ್ಯಾಂಗ್‌ ಲೀಡರ್ ಪರ ಕೋರ್ಟ್‌ನಲ್ಲಿ ಕೇಸ್ (Court Case) ತೆಗೆದುಕೊಂಡು ವಾದ ಮಾಡುತ್ತಾಳೆ. ಇಷ್ಟೆಲ್ಲಾ ಪ್ಲ್ಯಾನ್‌ ತನ್ನಿಂದ ನಡೆಯುತ್ತಿದ್ದರೂ, ಪೊಲೀಸ್‌ ಕಳ್ಳನನ್ನು ಹಿಡಿಯಲು ಏನೆಲ್ಲಾ ಪ್ಲ್ಯಾನ್ ಮಾಡುತ್ತಾರೆ ಎಂಬುವುದು ಗೊತ್ತಾಗುವುದು ಮಾತ್ರ ಚಿತ್ರದ ಕೊನೆಯಲ್ಲಿಯೇ.

    ತಮಿಳಿನಲ್ಲಿ ಸಿನಿಮಾ ನಿರ್ದೇಶನ ಮಾಡಿದ ಪುಷ್ಕರ್ (Pushkar) ಮತ್ತು ಗಾಯಿತ್ರಿ (Gayathri) ಅವರೇ ಹಿಂದಿಯಲ್ಲೂ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. 'ಈ ಚಿತ್ರದಲ್ಲಿ ನಾವು ಹೃತಿಕ್ ರೋಷನ್ ಮತ್ತು ಸೈಫ್‌ (Saif Ali Khan) ಜೊತೆ ಕೆಲಸ ಮಾಡುವುದಕ್ಕೆ ಸಂತೋಷವಾಗುತ್ತಿದೆ. ಇಬ್ಬರು ಕೂಡ ದೊಡ್ಡ ಸ್ಟಾರ್ ನಟರು. ಇಬ್ಬರು ಸ್ಟಾರ್ ನಟರು ಇರುವ ಕಾರಣ ಸಿನಿಮಾ ಹಿಸ್ಟರಿ ಕ್ರಿಯೇಟ್ ಮಾಡಲಿದೆ. Intense and exciting ಆಗಿರಲಿದೆ,' ಎಂದು ನಿರ್ದೇಶಕ ಹೇಳಿದ್ದಾರೆ. 

     

    ಅಬು ದಾಬಿಯಲ್ಲಿ (Abu Dabi) ಹೃತಿಕ್ ಮೊದಲ ಹಂತದ ಚಿತ್ರೀಕರಣ ಮುಗಿಸಿದರೆ, ಲಕ್ನೋದಲ್ಲಿ (Lucknow) ಸೈಫ್‌ ಚಿತ್ರೀಕರಣ ಮಾಡುತ್ತಿದ್ದಾರೆ. 

    ಹೃತಿಕ್ ಗ್ಯಾಂಗಸ್ಟರ್‌ ಲುಕ್ ಫೋಟೋ ಹಂಚಿಕೊಂಡು ಸಿನಿ ಸ್ನೇಹಿತರು ಶುಭಾಶಯಗಳನ್ನು ಕೋರುತ್ತಿದ್ದಾರೆ. 'ಹ್ಯಾಪಿ ಬರ್ತಡೇ ಸರ್. ಈ ವರ್ಷ ಅದ್ಭುತವಾಗಿರಲಿ,' ಎಂದು ವಿಕ್ಕಿ ಕೌಶಲ್ (Vicky Kaushal), 'ಹ್ಯಾಪಿ ಬರ್ತಡೇ ದಗ್ಗು. ನಿಮಗೆ ದೊಡ್ಡ ಸಂತೋಷದ ಪ್ಯಾಕ್ ಕಳುಹಿಸಿಕೊಡುತ್ತಿರುವೆ,' ಎಂದು ಪ್ರಿಯಾಂಕಾ ಚೋಪ್ರಾ (Priyanka Chopra) ಬರೆದುಕೊಂಡಿದ್ದಾರೆ. 'ಹೃತಿಕ್ ನೀನು ಅಪರೂಪದ ನಟರ ವರ್ಗಕ್ಕೆ ಸೇರುವ ಸ್ಪೆಷಲ್ ನಟ. ಟ್ಯಾಲೆಂಟೆಡ್, ನೋಡಲು ಸೂಪರ್ ಆಗಿರುವೆ, ತುಂಬಾನೇ ಸೆಲೆಕ್ಟಿವ್, madly passionate about your craft. ನಿನ್ನ ಬಾಡಿ ಮತ್ತು ಫೇಸ್‌ ಮೇನ್ಟೈನ್‌ ಮಾಡಲು ಎಷ್ಟೆಲ್ಲಾ ಶ್ರಮ ವಹಿಸುತ್ತಿರುವೆ, ಏನೆಲ್ಲಾ ಮಾಡುವೆ, ಎಂದು ನನಗೆ ಗೊತ್ತಿದೆ. ಪ್ರತಿಯೊಬ್ಬ ಕಲಾವಿದನಿಗೂ ಈ ಕಾಳಜಿ ಇರಬೇಕು. ಫೈಟರ್ ಸಿನಿಮಾದಲ್ಲಿ ನಿನ್ನ ಜೊತೆ ಕೆಲಸ ಮಾಡುತ್ತಿರುವುದಕ್ಕೆ ಸಂತೋಷವಿದೆ,' ಎಂದು ಅನಿಲ್ ಕಪೂರ್ (Anil Kapoor) ಬರೆದು ಕೊಂಡಿದ್ದಾರೆ. ಇವರ ಜೊತೆ ಅನುಷ್ಕಾ ಶರ್ಮಾ (Anushka Sharma), ಶಾಹಿದ್ ಕಪೂರ್ (Sahid Kapoor), ಸನ್ನಿ ಲಿಯೋನ್ (Sunny leone) ಕೂಡ ನಟನಿಗೆ ಶುಭ ಹಾರೈಸಿದ್ದಾರೆ.

    PREV

    ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

    Read more Articles on
    click me!

    Recommended Stories

    ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
    ದೇಶಮುದುರು ಹೊಡೆತಕ್ಕೆ ಅಡ್ರೆಸ್ ಇಲ್ಲದಂತಾದ ಪ್ರಭಾಸ್ ಸಿನಿಮಾ.. ಒಂದೇ ವರ್ಷ ಬ್ಯಾಕ್ ಟು ಬ್ಯಾಕ್ ಫ್ಲಾಪ್