Yesudas Birthday: ಬರ್ತ್‌ಡೇ ಬಾಯ್ ಕೆ.ಜೆ.ಯೇಸುದಾಸ್‌ ಅವರ ಕ್ಯೂಟ್ ಲವ್ ಸ್ಟೋರಿ

By Suvarna NewsFirst Published Jan 10, 2022, 12:54 PM IST
Highlights

ಇಂದು ಬಹುಭಾಷಾ ಗಾಯಕ ಕೆ.ಜೆ.ಯೇಸುದಾಸ್ ಅವರ ಜನ್ಮದಿನ. ಅವರ ಕ್ಯೂಟ್ ಲವ್ ಸ್ಟೋರಿ ಬಗ್ಗೆ ನೀವು ಕೇಳಿರಲಿಕ್ಕಿಲ್ಲ. ಇಲ್ಲಿದೆ ಓದಿ.

ಸಾಮಾನ್ಯವಾಗಿ ಗಾಯಕ, ಸಂಗೀತಗಾರ ಕೆ.ಜೆ.ಯೇಸುದಾಸ್ (K.J.Yesudas) ಅವರು ಕರ್ನಾಟಕದ ಕೊಲ್ಲೂರಿನಲ್ಲಿ (Kollur) ತಮ್ಮ ಜನ್ಮದಿನ ಆಚರಿಸಿಕೊಳ್ಳುತ್ತಾರೆ. ಆ ದಿನ ಕೊಲ್ಲೂರು ಶ್ರೀ ದುರ್ಗಾಪರಮೇಶ್ವರಿ ದೇವಿಗೆ ತಮ್ಮ ಅರ್ಚನೆ ಸಲ್ಲಿಸುವುದು ಎಂದರೆ ಅವರಿಗೆ ಭಾರೀ ಇಷ್ಟ. ಆದರೆ ಈ ಬಾರಿ ಕೊರೊನಾ ನಿರ್ಬಂಧದ ಪರಿಣಾಮ ಏನು ಮಾಡುತ್ತಾರೋ ಗೊತ್ತಿಲ್ಲ. ಕೊಲ್ಲೂರಿನ ಹಾಗೆಯೇ ಅವರು ಶಬರಿಮಲೆಯ (Shabarimai) ಭಕ್ತ ಕೂಡ. ಅಲ್ಲಿಗೂ ಬಹಳ ಬಾರಿ ಹೋಗಿಬಂದಿದ್ದಾರೆ. ಸ್ವಾಮಿ ಅಯ್ಯಪ್ಪನ ಬಗ್ಗೆ ಅವರ ಭಕ್ತಿಗೀತೆಗಳು ತುಂಬಾ ಜನಪ್ರಿಯವಾಗಿವೆ. ಇವರು ತರುಣರಾಗಿದ್ದಾಗ ಗುರುವಾಯೂರು (Guruvayur) ಕ್ಷೇತ್ರದಲ್ಲಿ ಪ್ರವೇಶ ಸಿಗದೆ ಇದ್ದದ್ದು, ನಂತರ ಎಂದೋ ಅಲ್ಲಿನ ದೇವಸ್ಥಾನದವರೇ ಅವರನ್ನು ಗೌರವದಿಂದ ಕರೆಸಿ ಅವರ ಕಛೇರಿ (Concert) ಏರ್ಪಡಿಸಿದ್ದು ಇದೆಲ್ಲ ನಿಮಗೆ ಗೊತ್ತಿರಬಹುದು.

ಇಂಥ ಜೇಸುದಾಸ್ ಅವರ ಪ್ರೇಮದ (Love story) ದಿನಗಳ ಬಗ್ಗೆ ನಿಮಗೆ ಗೊತ್ತಿರಲಿಕ್ಕಿಲ್ಲ. ಅವರ ಹೆಸರು ಪ್ರಭಾ. ಆಗಲೇ ಜೇಸುದಾಸ್ ತರುಣ ಗಾಯಕ. ಆಗಲೇ ಅವರು ಸಾಕಷ್ಟು ಹೆಸರು ಮಾಡಿದ್ದರು. ಚೆಂಬೈ ವೈದ್ಯನಾಥ ಭಾಗವತರ್ ಅವರ ಶಿಷ್ಯರಾಗಿದ್ದು, ಕಛೇರಿಯನ್ನೂ ನೀಡುತ್ತಿದ್ದುದಲ್ಲದೆ, ಸಿನಿಮಾಗಳಿಗೂ ಹಾಡುತ್ತಿದ್ದರು. ಆಗ ಕಾಲೇಜು ಹುಡುಗಿ ಪ್ರಭಾಗೆ ಜೇಸುದಾಸ್ ಎಂದರೆ ಅದೇನೋ ಸೆಳೆತ. ಆಕೆಯ ಗೆಳತಿಯರಿಗೂ ಅಷ್ಟೆ. ಯಾವುದೇ ಸಿನಿಮಾದಲ್ಲಿ ಯೇಸುದಾಸ್ ಸಂಗೀತ ಇದ್ದರೂ ತಪ್ಪಿಸುತ್ತಿರಲಿಲ್ಲ. 1966ರಲ್ಲಿ ಕಾಯಂಕುಳಂ ಕೊಚ್ಚುಣ್ಣಿ ಎಂದು ಸಿನಿಮಾ ಬಂತು. ಅದರ ಪೋಸ್ಟರ್‌ಗಳಲ್ಲಿ, ''ಯೇಸುದಾಸ್ ಅವರ ಭಾರಿ ಸಂಗೀತ. ಜೊತೆಗೆ ಅವರು ತೆರೆಯ ಮೇಲೆ ಸತ್ಯನ್ ಜೊತೆಗೆ ನಟಿಸಿದ್ದಾರೆ'' ಎಂದು ಬರೆಯಲಾಗಿತ್ತು. ಪ್ರಭಾ ಕುತೂಹಲದಿಂದ ಗೆಳತಿಯರ ಜೊತೆಗೆ ಸಿನಿಮಾಗೆ ಹೋದಳು.

ಜೊತೆ ಜೊತೆಯಲಿ ಧಾರಾವಾಹಿ ಬದುಕು ಬದಲಿಸಿತು: Megha Shetty

ಆದರೆ ಯೇಸುದಾಸ್ ತೆರೆಯ ಮೇಲೆ ಬಂದಾಗ ಆಕೆಗೆ ನಗೆ ತಡೆಯಲಾಗಲಿಲ್ಲ. ತೆಳ್ಳಗಿನ ಶರೀರದ ಯೇಸುದಾಸ್, ಪೆನ್ಸಿಲ್ ಮೀಸೆಯಿಟ್ಟುಕೊಂಡು, ಮುಸಲ್ಮಾನಿ ಟೋಪಿ ಧರಿಸಿ 'ಸುರುಮಾ ನಲ್ಲ ಸುರುಮಾ' ಎಂದು ಹಾಡುತ್ತಿದ್ದುದು ಅವರಿಗೆ ನಗೆ ತಂದಿತ್ತು. ಆದರೆ ಯೇಸುದಾಸ್ ಅವರ ಮನಸ್ಸಿನಲ್ಲಿ ನೆಲೆಸಿದರು.

ನಂತರ ಒಮ್ಮೆ ತಿರುವನಂತಪುರಂನಲ್ಲಿ ಅವರ ಕಛೇರಿಯಿತ್ತು. ಪ್ರಭಾ ಕೂಡ ಅಲ್ಲಿಗೆ ಹೋಗಿದ್ದರು. ಕಛೇರಿ ನಡೆಯುತ್ತಿರುವಾಗ ಕೇಳುಗರು ಚಿಕ್ಕ ಕಾಗದದಲ್ಲಿ ತಮ್ಮಿಚ್ಛೆಯ ಹಾಡಿನ ಅಪೇಕ್ಷೆ ಕಳಿಸಬಹುದಾಗಿತ್ತು. ಪ್ರಭಾ ಐದು ರೂಪಾಯಿ ನೋಟಿನಲ್ಲಿ "ಪಂಚವರ್ಣ ತಟ್ಟು ಪೋಲೆ' ಎಂಬ ಹಾಡಿನ ಅಪೇಕ್ಷೆ ಬರೆದು ಕಳಿಸಿದರು. ಆಗ ಐದು ರೂಪಾಯಿ ದೊಡ್ಡ ಮೊತ್ತ. ಇದನ್ನು ನೋಡಿ ಯೇಸುದಾಸ್ ವಿಸ್ಮಿತರಾಗಿ ನಕ್ಕರಲ್ಲದೆ, ಅದನ್ನು ಹಾಡಿದರು. ಆದರೆ ಹಾಡಿನ ನಡುವೆ "ಐದು ರೂಪಾಯಿ'' ಎಂಬ ಪದಗಳನ್ನು ಸೇರಿಸಿ ನಗುತ್ತ ಹಾಡಿದರು.

ಕೊಲ್ಲೂರಿನಲ್ಲಿಯೇ ಜನ್ಮದಿನ ಆಚರಿಸೋ ಯೇಸುದಾಸ್

ನಂತರ ಅವರು ಫ್ಯಾಮಿಲಿ ಕಾರ್ಯಕ್ರಮಗಳಲ್ಲಿ ಭೇಟಿಯಾಗತೊಡಗಿದರು. ಯೇಸುದಾಸ್‌ ಆಗಾಗ ಪ್ರಭಾಗೆ ಫೋನ್ ಮಾಡಿ ಮಾತಾಡತೊಡಗಿದರು. ಇಬ್ಬರೂ ಪರಸ್ಪರ ಅಕರ್ಷಿತರಾದುದು ನಿಜವಿತ್ತು. ಒಮ್ಮೆ ಸೆನೆಟ್ ಹಾಲ್‌ನಲ್ಲಿ ನಡೆಯಲಿದ್ದ ಕಛೇರಿಗೆ ಪ್ರಭಾರನ್ನು ಯೇಸುದಾಸ್ ಆಮಂತ್ರಿಸಿದರು. ಮರುದಿನ ಪರೀಕ್ಷೆಯಿತ್ತು. ಆದರೆ ಯೇಸುದಾಸ್ ಆಹ್ವಾನವನ್ನು ನಿರಾಕರಿಸಲು ಪ್ರಭಾಗೆ ಆಗಲಿಲ್ಲ. ಪ್ರಭಾ ಬಂದುದನ್ನು ಕಂಡು ಉಲ್ಲಸಿತರಾದ ಯೇಸುದಾಸ್, "ಪ್ರಾಣಸಖಿ ಞಾನ್ ವೆರುಮೊರು'' ಎಂದು ಹಾಡನ್ನು ಕೈಬಿಟ್ಟು ''ಪ್ರಾಣಸಖಿ ನೀ ಎವಿಡೆ ನೀ ಎವಿಡೆ'' ಎಂಬ ಹೊಚ್ಚಹೊಸ, ಯಾರೂ ಅದುವರೆಗೆ ಕೇಳಿರದ ಹಾಡನ್ನು ಹಾಡತೊಡಗಿದರಂತೆ! ಅದು ತನಗಾಗಿಯೇ ಅವರು ಸೃಷ್ಟಿಸಿ ಹಾಡಿದ ಹಾಡಾಗಿತ್ತು ಎಂಬುದು ಪ್ರಭಾ ಅವರ ಮಾತು.

ಹೀಗೆ ಚಿಗುರುತ್ತ ಬೆಳೆಯುತ್ತ ಹೋದ ಅವರ ಪ್ರೀತಿ ಹೆಮ್ಮರವಾಗಿ, ಎರಡೂ ಫ್ಯಾಮಿಲಿಗಳು ಒಪ್ಪಿ ಅವರಿಗೆ 1969ರಲ್ಲಿ ಮದುವೆಯಾಯಿತು. ಐದು ದಶಕಗಳ ಸುಖೀ ದಾಂಪತ್ಯದಲ್ಲಿ ಮೂವರು ಮಕ್ಕಳು. ಯೇಸುದಾಸ್ ಹೋದಲ್ಲೆಲ್ಲಾ ಜನ ಮುತ್ತಿಕೊಳ್ಳುತ್ತಾರೆ. ಆದರೆ ಪ್ರಭಾ ಸ್ವಲ್ಪ ಅಂತರ್ಮುಖಿ. ಅವರಿಗೆ ಜಂಗುಳಿ ಆಗುವುದಿಲ್ಲ. ಆದರೆ ಯೇಸುದಾಸ್‌ ಸಹವಾಸದಿಂದಾಗಿ ಈಗ ಅವರೂ ಜನರ ಜೊತೆ ಬೆರೆಯುತ್ತಾರೆ. ಅವರು ಹೇಳುತ್ತಾರೆ- ನಾನು ಯೇಸುದಾಸ್ ಅವರಿಗೆ ಎರಡನೇ ಹೆಂಡತಿ! ಮೊದಲ ಹೆಂಡತಿ ಸಂಗೀತ! ನನ್ನ, ಮಕ್ಕಳ ಸ್ಥಾನ ಆಮೇಲಿನದು!

ಅಯ್ಯಪ್ಪ ಸ್ವಾಮಿ ಮಂದಿರಕ್ಕೆ ಮಹಿಳೆಯರ ಎಂಟ್ರಿ, ಗಾಯಕನ ಅಭಿಪ್ರಾಯವಿದು

click me!