ಹೆಣ್ಣು ವಿಚ್ಛೇದನ ಪಡೆದ ನಂತರ ಸಮಾಜ ನೋಡುವ ದೃಷ್ಠಿ ಯಾಕೆ ಬದಲಾಗಿದೆ? ಸಮಂತಾ ಅಷ್ಟಕ್ಕೂ ಮಾಡಿದ ತಪ್ಪೇನು?
ತೆಲುಗು ಮತ್ತು ತಮಿಳು ಚಿತ್ರರಂಗದ ಓನ್ ಆಫ್ ದಿ ಬೆಸ್ಟ್ ಮತ್ತು Sensitive ನಟಿ ಅಂದ್ರೆ ಸಮಂತಾ ಪ್ರಭು. ಅದ್ಭುತ ಕಥೆಗಳನ್ನು ಆಯ್ಕೆ ಮಾಡಿಕೊಂಡು, ಸಿನಿಮಾವನ್ನ ಸೂಪರ್ ಹಿಟ್ ಮಾಡಿ ಆರಂಭದಿಂದಲೂ ಸಿನಿ ಪ್ರೇಕ್ಷಕರನ್ನು ಮನೋರಂಜಿಸುತ್ತಾ ಕಲೆಗೆ ಸಮರ್ಪಿಸಿಕೊಂಡಿರುವ ಸಮಂತಾ ಸಮಾಜದ ದೃಷ್ಟಿಯಲ್ಲಿ ಯಾಕೆ ಕೆಟ್ಟವರಾಗಬೇಕು? ಡಿವೋರ್ಸ್ ಆಗಿದ್ದ ಮಾತ್ರಕ್ಕೆ ಜೀವನದಲ್ಲಿ ಗೆದ್ದಿದ್ದು, ಗಳಿಸಿದ್ದು ಎಲ್ಲವೂ ಎಲ್ಲಿ ಹೋಯ್ತು?
ಸಾಮಾನ್ಯವಾಗಿ ಸೆಲೆಬ್ರಿಟಿಗಳು ಸದಾ ಲೈಮ್ ಲೈಟ್‌ನಲ್ಲಿರುವುದಕ್ಕೆ ಅವರ ಜೀವನದ ಮೇಲೆ ನಮಗೂ ಹಕ್ಕಿದೆ ಎಂದು ಅಭಿಮಾನಿಗಳು ಮತ್ತು ನೆಟ್ಟಿಗರು ಅಂದುಕೊಳ್ಳುವುದು ಸಾಮಾನ್ಯ. ಅವರ ಸಿನಿಮಾ ಕೆಲಸಗಳ ಬಗ್ಗೆ ಮಾತ್ರವಲ್ಲ ಅವರ ಜೀವನದಲ್ಲಿ ಏನು ತಿನ್ನುತ್ತಾರೆ, ಎಲ್ಲಿ ಹೋಗುತ್ತಾರೆ? ಯಾರ ಜೊತೆ ಸಂಬಂಧ ಹೊಂದಿದ್ದಾರೆ? ಯಾರ ಜೊತೆ ಮದುವೆ ಆಗಲಿದ್ದಾರೆ? ಮದುವೆ ಆದ್ಮೇಲೆ ಕೆಲಸ ಮಾಡ್ತಾರಾ? ಮದುವೆ ಆದ ಕೆಲವೇ ತಿಂಗಳಲ್ಲಿ ಗರ್ಭಿಣಿ ಆದ್ರಾ? ಇಷ್ಟು ಪ್ರಶ್ನೆಗಳನ್ನು ನಾವು ಅವರನ್ನು ಕೇಳಿ, ಕೇಳಿ ಹಿಂಸೆ ಮಾಡುವುದು ಸಾಮಾನ್ಯ. ಆದರೆ, ಎಲ್ಲರಂತೆಯೇ ಹೆಣ್ಣಾದ ಅವರಿಗೆ ಇಂಥವು ಅದೆಷ್ಟು ಮುಜುಗರ ತರಬಹುದು. ಒಂದು ಸಾಧನೆ ತೋರಿದ ಹೆಣ್ಣೂ ಎಲ್ಲರಂತೆ ಮುಸುರೆ ತೊಳೆದೇ ಕೊಂಡೇ ಇರಬೇಕು ಅಂದ್ರೆ ಕಷ್ಟವಲ್ಲವೆ?
Samantha About Pregnancy: ಕ್ಯೂಟ್, ಎಕ್ಸೈಟೆಡ್ ಎಂದ ಸಮಂತಾundefined
ನಟಿಯರ ಜೀವನದಲ್ಲಿ ಮಾತ್ರ ಇಷ್ಟೊಂದು ಪ್ರಶ್ನೆಗಳು ಏಳುವುದು. ನಟರು ಮಾತ್ರ ಚಿಕ್ಕ ವಯಸ್ಸಿನ ಹುಡುಗಿಯರಿಗೆ ಜೋಡಿಯಾಗಿ ಸಿನಿಮಾ ಮಾಡುತ್ತಾರೆ, ಮದುವೆ ಆಗುತ್ತಾರೆ, ಅಷ್ಟೇ ಅಲ್ಲ ಮದುವೆ ಆದ್ಮೇಲೂ ಆನ್‌ಸ್ಕ್ರಿನ್‌ನಲ್ಲಿ ರೊಮ್ಯಾನ್ಸ್ ಮಾಡುತ್ತಾರೆ. ಒಂದು ವೇಳೆ ಇವರು ಮದುವೆ ಮುರಿದು ಬಿದ್ದರೆ, ಆನ್‌ಸ್ಕ್ರೀನ್ ರೊಮ್ಯಾನ್ಸ್ ಇನ್ನೂ ಹಾಟ್ ಆಗಿರುತ್ತದೆ.
ಸಮಂತಾ ವಿಚ್ಛೇದನ ಪಡೆದುಕೊಳ್ಳುತ್ತಾರೆ ಎನ್ನುವ ಗಾಸಿಪ್ ಶುರುವಾದ ದಿನದಿಂದಲೂ ದಿನಕ್ಕೊಂದು ನ್ಯೂಸ್ ವೈರಲ್ ಆಗುತ್ತಿತ್ತು. ನಾಗ ಚೈತನ್ಯ ಬಳಿ ಇಷ್ಟು ಹಣ ಪಡೆದುಕೊಳ್ಳುತ್ತಾರೆ, ಅವರ ಯಾವ ಮನೆ ಸಮಂತಾ ಪಾಲಾಗುತ್ತದೆ...ಅದೂ, ಇದು. ಒಂದಾ, ಎರಡು? ಎಲುಬಿಲ್ಲದ ನಾಲಿಗೆ ಮಾತನಾಡಿದ್ದು ಒಂದೆರಡು ರೀತಿಯಲ್ಲಿ ಅಲ್ಲ. ಯಾವ ಅರ್ಥದಲ್ಲಿ ಅಂದ್ರೆ ಸಮಂತಾಗೆ ದುಡಿಮೆಯೇ ಇಲ್ಲ, ಸಮಂತಾ ಯಾವ ಸಿನಿಮಾವನ್ನೂ ಮಾಡಿಲ್ಲ, ಒಪ್ಪಿಕೊಂಡಿಲ್ಲ ಎನ್ನುವ ಹಾಗೆ ಸುದ್ದಿಗಳು ಹರಿದಾಡಿದವು. ಕರೆಕ್ಟ್ ಆ್ಯಂಗಲ್‌ನಲ್ಲಿ ನೋಡಿದರೆ ನಾಗ ಚೈತನ್ಯಾರಿಂದ ಸಮಂತಾ ತುಂಬಾನೇ indipendent. ಆರಂಭದಿಂದಲ್ಲೂ ಸಿನಿಮಾ ಕ್ಷೇತ್ರದಲ್ಲಿ ಸೂಪರ್ ಹಿಟ್, ಜಾಹೀರಾತು ಕ್ಷೇತ್ರದ ಕ್ವೀನ್ ಆಗಿ ಬೆಳೆದವರು. ಬ್ಯಾಕ್ ಟು ಬ್ಯಾಕ್ ಪ್ರಾಜೆಕ್ಟ್‌ಗಳನ್ನು ಒಪ್ಪಿಕೊಂಡು, ತಮ್ಮದೇ ಆದ ಬಟ್ಟೆ ಬ್ರ್ಯಾಂಡ್ ಕೂಡ ಶುರು ಮಾಡಿದವರು. ಅದೆಷ್ಟೋ NGOಗಳ ಜೊತೆ ಕೈ ಜೋಡಿಸಿ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುತ್ತಿದ್ದಾರೆ. ಹಾಗೆ ನೋಡಿದರೆ ನಾಗ ಚೈತನ್ಯಾಗಿಂತ ಸಮಂತಾ ದುಪ್ಪಟ್ಟು ಸಂಪಾದನೆ ಮಾಡಿದ್ದಾರೆ. ಹಾಗೂ ಸ್ವವಲಂಬಿಯಾಗಿ ಜೀವನ ನಡೆಸುತ್ತಿದ್ದರು.
ಮಾಡಿದೊಂದು ಡ್ಯಾನ್ಸ್, ತಂದ ಖ್ಯಾತಿ ಅಷ್ಟಿಷ್ಟಲ್ಲ:
ಇತ್ತೀಚಿಗೆ ಬಿಡುಗಡೆಯಾದ ಪುಷ್ಪ ಸಿನಿಮಾ ಎಲ್ಲರಿಗೂ ಚಿನ್ನದ ಮೊಟ್ಟೆ ತಂದು ಕೊಟ್ಟಿದೆ. ಆದರೆ ಸಮಂತಾಗೇ ವಜ್ರವೇ ಸಿಕ್ಕಿದೆ, ಇದು ಹಣದ ಲೆಕ್ಕದ ಮಾತಲ್ಲ. ಸಮಂತಾ ತಮ್ಮ ಕಲೆಗೆ ತಾವೇ ಚಾಲೆಂಜ್ ಹಾಕಿಕೊಂಡು ಒಪ್ಪಿಕೊಳ್ಳುತ್ತಿರುವ ಬೋಲ್ಡ್ ಪಾತ್ರಗಳಿಂದ. ಸದಾ ಲವರ್ ಗರ್ಲ್ ಆಗಿ ಕಾಣಿಸಿಕೊಂಡವರು. ದಿ ಫ್ಯಾಮಿಲಿ ಮ್ಯಾನ್ 2 ಸಿನಿಮಾದಲ್ಲಿ ಯಾರೂ ಕಲ್ಪಿಸಿಕೊಳ್ಳಲಾಗದಂತೆ ಬೋಲ್ಡ್ ಮತ್ತು ವಂಡರ್‌ಫುಟ್ ಪಾತ್ರದಲ್ಲಿ ಮಿಂಚಿದ್ದರು.
ಈ ಹಿಂದೆ ಖಾಸಗಿ ಕಾಲೇಜ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಸಮಂತಾ 'ಹಲವು ವರ್ಷಗಳ ಹಿಂದೆ ನಾನು ನೀವು ಇದ್ದ ಜಾಗದಲ್ಲಿದ್ದೆ (ವೇದಿಕೆ ಎದುರು ಕುಳಿತಿದ್ದೆ). ನೀವೆಲ್ಲರೂ ಇರುವ ಜಾಗದಲ್ಲಿ ನಾನೂ ಇದ್ದೆ. ಈಗ ನಾನು ನಿಂತಿರುವ ಸ್ಥಳಕ್ಕೆ ನೀವು ಬರಬೇಕು,' ಎಂದ ಅಲ್ಲಿದ್ದ ಹೆಣ್ಣು ಮಕ್ಕಳಿಗೆ ಧೈರ್ಯ ತುಂಬಿದ್ದರು. ನಾವು ಪರದೆ ಮೇಲೆ ನೋಡಿ ಮೆಚ್ಚಿಕೊಳ್ಳುವ ಕಲಾವಿದರು, ನಿಜ ಜೀವನದಲ್ಲೂ ಐಕಾನ್ ಆಗಿರುತ್ತಾರಾ ಎಂಬುವುದು ಮುಖ್ಯವಾಗುತ್ತದೆ. ಅದರಲ್ಲಿ ಸಮಂತಾ ಮೊದಲ ಸ್ಥಾನ ಪಡೆದುಕೊಳ್ಳುವುದರಲ್ಲಿ ಅನುಮಾನವೇ ಇಲ್ಲ.
Pushpa OTT Release: ರಶ್ಮಿಕಾ, ಅಲ್ಲು ಮೀರಿಸಿ ಸಮಂತಾ ಹೈಲೈಟ್ಡಿವೋರ್ಸ್ ಪಡೆದ ನಂತರ ಹಣ ಮಾಡಬೇಕು ಎಂದು ಸಮಂತಾ ಸುಖಾ ಸುಮ್ಮನೆ ಪ್ರಾಜೆಕ್ಟ್ ಒಪ್ಪಿಕೊಳ್ಳುತ್ತಿದ್ದಾರೆ, ಎಂದು ನೆಟ್ಟಿಗರು ಕುಹಕವಾಡುತ್ತಿದ್ದಾರೆ. ಸಮಂತಾ ಜೀವನ ನಡೆಸುವುದು ಹೇಗೆ? ತಿಂಗಳಾದರೆ ಮನೆ ನಡೆಯುವುದು ಹೇಗೆ? ಆಕೆ ನಂಬಿ ಕೆಲಸ ಮಾಡುವವರಿಗೆ ಸಂಬಳ ಕೊಡುವುದು ಹೇಗೆ? ತಿಂಗಳ ಆರಂಭದಲ್ಲಿ ಬರುವ ಬಿಲ್ ಕಥೆ ಏನು? ನೀವು ಕಟ್ಟುತ್ತೀರಾ? ಎಲ್ಲರಂತೆ ಅವರೂ ಹ್ಯೂಮನ್. ಅವರಿಗೂ ಕಮಿಟ್‌ಮೆಂಟ್ಸ್ ಇರುತ್ತವೆ. ಅದರ ಕಡೆ ಗಮನ ಕೊಡುವುದು ಅಗತ್ಯವಲ್ಲವೇ?
ನಟಿ ಶ್ರೀದೇವಿ ಮತ್ತು ರಜನಿಕಾಂತ್ ನಟಿಸಿರುವ 'ಜಾನಿ' ಸಿನಿಮಾದಲ್ಲಿ ಶ್ರೀದೇವಿ ರಜನಿಕಾಂತ್‌ಗೆ ಪ್ರಪೋಸ್ ಮಾಡುತ್ತಾಳೆ, ಒಪ್ಪಿಕೊಳ್ಳದೆ ಕಂಗಾಲಾಗಿ ನಿಂತಿದ್ದ ರಜನಿಕಾಂತ್‌ಗೇ ನಟಿ ಪ್ರಶ್ನೆ ಮಾಡುತ್ತಾಳೆ. 'ನನ್ನ ಮದುವೆ ಪ್ರಪೋಸಲು ಒಪ್ಪಿಕೊಳ್ಳಲು ಚಿಂತಿಸುತ್ತಿರುವೆ ಅಲ್ವಾ? ಬೇರೆ ಗಂಡಸರ ಎದುರು ಹಾಡು ಹಾಡುತ್ತಾಳೆ. ಆಕೆ ಬಳಿ ಹಣ ಮತ್ತು ಸ್ಟೇಟಸ್ ಇರಬಹುದು. ಅದರೆ ಕ್ಯಾರೆಕ್ಟರ್ ಇದ್ಯಾ ಅಂತ ಅಲ್ವಾ?' ಎಂದು ಶ್ರೀದೇವಿ ಪ್ರಶ್ನೆ ಮಾಡಿದಾಗ 'ನೀನು ಹೇಗೆ, ನನ್ನ ಬಗ್ಗೆ ಈ ರೀತಿ ಯೋಚನೆ ಮಾಡುವೆ. ನಿಮ್ಮನ್ನು ನಾನು ಹೆಚ್ಚಿಗೆ ಗೌರವಿಸುವೆ. ಈ ಮಾತುಗಳನ್ನು ಎಂದೂ ಆಡಬೇಡ,' ಎನ್ನುತ್ತಾರೆ ರಜನಿ. ಒಬ್ಬ ಮತ್ತೊಂದು ವ್ಯಕ್ತಿತ್ವಕ್ಕೆ ಗೌರವ ಕೊಡುವುದನ್ನು ಪ್ರತಿಯೊಬ್ಬರೂ ಕಲಿಯಬೇಕಲ್ಲವೇ?
ಪ್ರತಿಯೊಬ್ಬ ಹೆಣ್ಣಿಗೂ Respect ಕೊಡಿ. ನಮ್ಮ ಸಮಾಜದಲ್ಲಿ ಈ ಪದ ಬರೀ ಗಂಡಸರಿಗೆ ಮಾತ್ರ ಸೀಮಿತವಾಗಿರ ಬಾರದು.
(ಇಂಡಿಯನ್ ಎಕ್ಸ್‌ಪ್ರೆಸ್‌ನ ಸಿನಿಮಾ ಎಕ್ಸ್‌ಪ್ರೆಸ್‌ನಲ್ಲಿ ಸುಜಾತಾ ನಾರಾಯಣ್ ಬರೆದ ಲೇಖನದ ಆಯ್ದ ಭಾಗ)