Vikrant Rona; ಕಿಚ್ಚನಿಗೆ ಸಾಥ್ ನೀಡಿದ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್

Published : Apr 01, 2022, 02:55 PM IST
Vikrant Rona; ಕಿಚ್ಚನಿಗೆ ಸಾಥ್ ನೀಡಿದ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್

ಸಾರಾಂಶ

ಅಭಿನಯಕ್ರವರ್ತಿ ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾಗೆ ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಸಾಥ್ ನೀಡಿದ್ದಾರೆ. ವಿಕ್ರಾಂತ್ ರೋಣ ಹಿಂದಿ ವರ್ಷನ್ ಅನ್ನು ಸಲ್ಮಾನ್ ಖಾನ್ ಬಿಡುಗಡೆ ಮಾಡುತ್ತಿದ್ದಾರೆ. 

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Sudeep) ಸದ್ಯ ಬಹುನಿರೀಕ್ಷೆಯ ವಿಕ್ರಾಂತ್ ರೋಣ(Vikrant Rona) ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ. ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ಸಂಚಲನ ಮೂಡಿಸಿರುವ ವಿಕ್ರಾಂತ್ ರೋಣ ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲೂ ಬಿಡುಗಡೆಯಾಗುತ್ತಿದೆ. ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣ ಕಡೆಯಿಂದ ಯುಗಾದಿಗೆ ಭರ್ಜರಿ ಗಿಫ್ಟ್ ನೀಡುವುದಾಗಿ ಈಗಾಗಲೇ ಘೋಷಣೆ ಮಾಡಿದ್ದು, ಹಬ್ಬದ ಟ್ರೀಟ್ ಹೇಗಿರಲಿದೆ ಎಂದು ಕಿಚ್ಚನ ಅಭಿಮಾನಿಗಳು ಕಾಯುತ್ತಿದ್ದಾರೆ.

ಬಹುನಿರೀಕ್ಷೆಯ ವಿಕ್ರಾಂತ್ ರೋಣ ಸಿನಿಮಾದ ಟೀಸರ್ ಯುಗಾದಿ ಹಬ್ಬದ ದಿನ ಅಂದರೆ ಏಪ್ರಿಲ್ 2ಕ್ಕೆ ಬಿಡುಗಡೆಯಾಗುತ್ತಿದೆ. ಈಗಾಗಲೇ ಡೆವಿಲ್ ಅನೌನ್ಸ್ ಮೆಂಟ್(Devil announcement) ಎಂದಿರುವ ಕಿಚ್ಚ ಆಂಡ್ ಟೀಂ ಏಪ್ರಿಲ್ 2 ಬೆಳಗ್ಗೆ 9;55ಕ್ಕೆ ಟೀಸರ್ ಬಿಡುಗಡೆ ಮಾಡಲು ಸಿನಿಮಾತಂಡ ಸಜ್ಜಾಗಿದೆ. ಸಿನಿಮಾದ ಟೀಸರ್ ಬೇರೆ ಬೇರೆ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದ್ದು ಆಯಾಯ ಭಾಷೆಯ ಸ್ಟಾರ್ ಕಲಾವಿದರು ರಿಲೀಸ್ ಮಾಡುತ್ತಿದ್ದಾರೆ. ತೆಲುಗಿನಲ್ಲಿ ಚಿರಂಜೀವಿ(Chiranjeevi), ತಮಿಳಿನಲ್ಲಿ ಸಿಂಬು(Simbu), ಮಲಯಾಳಂನಲ್ಲಿ ಮೋಹನ್ ಲಾಲ್(Mohanlal) ಬಿಡುಗಡೆ ಮಾಡುತ್ತಿದ್ದಾರೆ ಎಂದು ಸಿನಿಮಾತಂಡ ಈಗಾಗಲೇ ಅನೌನ್ಸ್ ಮಾಡಿತ್ತು. ಆದರೆ ಹಿಂದಿಯಲ್ಲಿ ಯಾರು ಬಿಡುಗಡೆ ಮಾಡಲಿದ್ದಾರೆ ಎನ್ನುವುದನ್ನು ಕಿಚ್ಚ ಟೀಂ ಬಹಿರಂಗ ಪಡಿಸಿರಲಿಲ್ಲ. ಇವತ್ತು ಸುದೀಪ್ ಬಹಿರಂಗ ಪಡಿಸಿದ್ದಾರೆ.

ಕಿಚ್ಚನ ವಿಕ್ರಾಂತ್ ರೋಣ ಹಿಂದಿ ಟೀಸರ್ ಅನ್ನು ಸಲ್ಮಾನ್ ಖಾನ್(Salman Khan) ಬಿಡುಗಡೆ ಮಾಡುತ್ತಿದ್ದಾರೆ. ಈ ಬಗ್ಗೆ ಸುದೀಪ್ ಸಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿ ಸಂತಸ ವ್ಯಕ್ತಪಡಿಸಿದ್ದಾರೆ.' ಲೆಜೆಂಡ್ ಸೂಪರ್ ಸ್ಟಾರ್, ಅದ್ಭುತ ವ್ಯಕ್ತಿತ್ವ ಸಲ್ಮಾನ್ ಖಾನ್ ಸರ್ ವಿಕ್ರಾಂತ್ ರೋಣ ಸಿನಿಮಾದ ಹಿಂದಿ ಟೀಸರ್ ಬಿಡುಗಡೆ ಮಾಡುತ್ತಿದ್ದಾರೆ ಎಂದು ಘೋಷಣೆ ಮಾಡಲು ಸಂತೋಷವಾಗುತ್ತಿದೆ. ಏಪ್ರಿಲ್ 2ರಂದು ಬೆಳಗ್ಗೆ 9 55ಕ್ಕೆ ಬಿಡುಗಡೆ ಮಾಡಲಿದ್ದಾರೆ' ಎಂದು ಬರೆದುಕೊಂಡಿದ್ದಾರೆ.

ಸಲ್ಮಾನ್ ಖಾನ್ ಮತ್ತು ಕಿಚ್ಚ ಸುದೀಪ್ ಇಬ್ಬರು ಉತ್ತಮ ಸ್ನೇಹಿತರು. ಸಲ್ಮಾನ್ ಜೊತೆ ದಬಂಗ್-3ನಲ್ಲಿ ನಟನೆ ಮಾಡಿದ ಬಳಿಕ ಇಬ್ಬರ ಸ್ನೇಹ ಸಂಬಂಧ ಮತ್ತಷ್ಟು ಗಟ್ಟಿಯಾಗಿದೆ. ಸಿನಿಮಾ ಬಿಡುಗಡೆ ಬಳಿಕ ಸಲ್ಮಾನ್ ಖಾನ್, ಬೆಂಗಳೂರಿನಲ್ಲಿರುವ ಕಿಚ್ಚನ ಮನೆಗೂ ಭೇಟಿ ನೀಡಿದ್ದರು. ಸಿನಿಮಾದಿಂದ ಪ್ರಾರಂಭವಾದ ಸ್ನೇಹ ಬಾಂಧವ್ಯ ಮತ್ತಷ್ಟು ಗಟ್ಟಿಯಾಗುತ್ತಿದೆ. ಇದೀಗ ಅದೆ ಸ್ನೇಹದಿಂದ ಸಲ್ಮಾನ್ ಖಾನ್, ಸುದೀಪ್ ನಟನೆಯ ವಿಕ್ರಾಂತ್ ರೋಣ ಟೀಸರ್ ಬಿಡುಗಡೆ ಮಾಡುತ್ತಿದ್ದಾರೆ.

ಸಿನಿಮಾದ ಬಗ್ಗೆ ಹೇಳುವುದಾದರೆ ಚಿತ್ರದಲ್ಲಿ ಕಿಚ್ಚ ಸುದೀಪ್ ನಾಯಕನಾಗಿ ಮಿಂಚಿದ್ರೆ, ನಿರೂಪ್ ಭಂಡಾರಿ, ನೀತಾ ಅಶೋಕ್ ಸೇರಿದಂತೆ ಅನೇಕರು ನಟಿಸಿದ್ದಾರೆ. ರಂಗಿತರಂಗ ಖ್ಯಾತಿಯ ನಿರ್ದೇಶಕ ಅನೂಪ್ ಭಂಡಾರಿ ಸಾರಥ್ಯದಲ್ಲಿ ಸಿನಿಮಾ ಮೂಡಿಬಂದಿದೆ.

ಇನ್ನು ಸಿನಿಮಾದ ಮತ್ತೊಂದು ವಿಶೇಷ ಎಂದರೆ ಬಾಲಿವುಡ್ ಸ್ಟಾರ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಐಟಂ ಹಾಡಿಗೆ ಹೆಜ್ಜೆ ಹಾಕಿರುವ ಜಾಕ್ವೆಲಿನ್ ಲುಕ್ ಈಗಾಗಲೇ ವೈರಲ್ ಆಗಿದೆ. ಕಿಚ್ಚ ಮತ್ತು ಜಾಕ್ವೆಲಿನ್ ಕಾಂಬಿನೇಷನ್ ನ ಹಾಡು ನೋಡು ಅಭಿಮಾನಿಗಳು ಕಾತರರಾಗಿದ್ದಾರೆ. ಮೊದಲ ಬಾರಿಗೆ ಜಾಕ್ವೆಲಿನ್ ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ. ಇನ್ನು ಚಿತ್ರಕ್ಕೆ ಜಾಕ್ ಮಂಜು ನಿರ್ಮಾಣ ಮಾಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಸಿನಿಮಾ ಯಾವಾಗ ಬಿಡುಗಡೆಯಾಗಲಿದೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?