
ರಷ್ಯಾ ಮತ್ತು ಉಕ್ರೇನ್(Russia and Ukraine war) ನಡುವಿನ ಯುದ್ಧ ಇನ್ನೂ ನಿಂತಿಲ್ಲ. ಉಕ್ರೇನ್ ಸರ್ವನಾಶದ ಕಡೆ ಸಾಗುತ್ತಿದ್ದರೂ, ರಷ್ಯಾ ವಿರುದ್ಧ ಸೋಲು ಒಪ್ಪಿಕೊಂಡಿಲ್ಲ. ರಷ್ಯಾ ಪಡೆಗೆ ತಕ್ಕ ಉತ್ತರ ಕೊಡುತ್ತಾ ರಷ್ಯಾ ವಿರುದ್ಧ ಹೋರಾಟ ಮುಂದುವರೆಸಿದೆ. ಉಕ್ರೇನ್ ಪರಿಸ್ಥಿತಿ ಕಂಡು ಇಡೀ ವಿಶ್ವೇ ಮರುಗಿದೆ. ಸಾವು ನೋವಿನ ನಡುವೆಯೂ ಉಕ್ರೇನ್, ಮಿಲಿಟರಿ ಆಸ್ಕರ್ ಪ್ರಶಸ್ತಿ(The Ukrainian military Oscars) ಘೋಷಣೆ ಮಾಡಿ ಅಚ್ಚರಿ ಮೂಡಿಸಿದೆ. ಇದುವರೆಗಿನ ಯುದ್ಧದಲ್ಲಿ ಏಳು ಅತ್ಯುತ್ತಮ ಕ್ಷಣಗಳನ್ನು ಆಯ್ಕೆ ಮಾಡಿ ಏಳು ವಿಭಾಗಗಳಲ್ಲಿ ಪ್ರಶಸ್ತಿ ಅನೌನ್ಸ್ ಮಾಡಿದೆ.
ಕಪ್ಪು ಸಮುದ್ರದಲ್ಲಿ ಉಕ್ರೇನ್ ಸೇನೆ ಬ್ಯಾಲಿಸ್ಟಿಕ್ ಕ್ಷಿಪಣಿಯಿಂದ ರಷ್ಯಾ ಯುದ್ಧನೌಕೆ ಒಡೆದುರುಳಿಸಿತ್ತು. ಉರಿಯುತ್ತಿರುವ ಯುದ್ಧನೌಕೆಗೆ ಅತ್ಯುತ್ತಮ ಚಿತ್ರ ಪ್ರಶಸ್ತಿ ನೀಡಲಾಗಿದೆ. ಹೆಲಿಕಾಪ್ಟರ್ ಅನ್ನು ಸೆರೆ ಹಿಡಿದಿದ್ದಕ್ಕಾಗಿ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ ನೀಡಲಾಗಿದೆ. ರಷ್ಯಾದ ಯುದ್ಧ ಟ್ಯಾಂಕರ್ ಗಳನ್ನು ಎಳೆದೊಯ್ದ ಉಕ್ರೇನ್ ಟ್ರ್ಯಾಕ್ಟರ್ ಗಳಿಗೆ ಪೋಷಕ ನಟ ಪ್ರಶಸ್ತಿಯನ್ನು ನೀಡಲಾಗಿದೆ.
Russia Ukraine War ತಕ್ಷಣವೇ ಉಕ್ರೇನ್ ಮೇಲಿನ ಆಕ್ರಮಣ ನಿಲ್ಲಿಸಿ, ರಷ್ಯಾಗೆ ಆದೇಶ ನೀಡಿದ ಅಂತಾರಾಷ್ಟ್ರೀಯ ಕೋರ್ಟ್ !
ರಷ್ಯಾದ ಬೃಹತ್ ಹಡಗು ನಾಶವಾಗುತ್ತಿರುವ ದೃಶ್ಯಾವಳಿಗಳಿಗೆ ಆಸ್ಕರ್ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ನೀಡಲಾಯಿತು. ಉಕ್ರೇನ್ ನೌಕಾಪಡೆ 370 ಅಡಿ ರಷ್ಯಾದ ಅಲಿಗೇಟರ ಕ್ಲಾಸ್ ಟ್ಯಾಂಕ್ ಕ್ಯಾರಿಯರ್ ಓರ್ಸ್ ಮೇಲೆ ನೇರ ದಾಳಿ ಮಾಡಿತ್ತು. ಬಂದರಿನಿಂದ ದಟ್ಟವಾದ ಕಪ್ಪು ಹೊಗೆ ಬರುತ್ತಿರುವ ವಿಡಿಯೋ ವೈರಲ್ ಆಗಿದೆ.
ರಷ್ಯಾ ಸೇನೆ ವಿರುದ್ಧ ಏರ್ ಸ್ಟ್ರೈಕ್ ಮಾಡಲು ಬೈರಕ್ತರ್ ಟಿಬಿ 2 ಡ್ರೋನ್ಗಳನ್ನು ಬಳಸಿಕೊಳ್ಳಲಾಗಿತ್ತು. ಈ ಮಿಸೈಲ್ ಗೆ ಟರ್ಕಿಗೆ ‘ಇಂಟರ್ನ್ಯಾಷನಲ್ ಅವಾರ್ಡ್’ ಕೊಡಲಾಗಿದೆ. ಈ ಡ್ರೋನ್ ಗಳು 7 ಯುದ್ಧ ವಾಹನ, 9 ಹೆಲಿಕಾಪ್ಟರ್, ಉಡಾವಣ ರಾಕೇಟ್ ಮುಂತಾದವನ್ನು ಈ ಟ್ರೋನ್ ಗಳ ಮೂಲಕ ಹೊಡೆದುರುಳಿಸಿತ್ತು.
Russia Ukraine war ಮೆದುಳಿನ ಸಮಸ್ಯೆ ಎದುರಿಸ್ತಿದ್ದಾರಾ ವ್ಲಾಡಿಮಿರ್ ಪುಟಿನ್?
ಇದೆಲ್ಲದರ ನಡುವೆ ಉಕ್ರೇನ್ ಯುದ್ಧದಲ್ಲಿ ನಾಗರೀಕರ ಭಾವನಾತ್ಮಕ ಕ್ಷಣಗಳು ಹೃದಯಸ್ಪರ್ಶಿಯಾಗಿವೆ. ಅನೇಕ ಘಟನೆಗಳು ಪ್ರಪಂಚದಾದ್ಯಂತ ಹೃದಯತಟ್ಟಿದೆ. ಖಾರ್ಕೀವ್ ಬಾಂಬ್ ಆಶ್ರಯದಲ್ಲಿ ಮಕ್ಕಳು ದೇಶದ ರಾಷ್ಟ್ರಗೀತೆಯನ್ನು ಹಾಡಿದ್ದರು. ಇದು ತುಂಬಾ ವೈರಲ್ ಆಗಿತ್ತು. ಇದಕ್ಕೆ ಬೆಸ್ಟ್ ಸಾಂಗ್ ಅವಾರ್ಡ್ ಸಿಕ್ಕಿದೆ. ಇತ್ತೀಚಿಗಷ್ಟೆ ಪ್ರತಿಷ್ಟಿತ 94ನೇ ಆಸ್ಕರ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಮೆರಿಕದ ಲಾಸ್ ಏಂಜಲೀಸ್ ನಲ್ಲಿ ಕಾರ್ಯಕ್ರಮ ನಡೆದಿತ್ತು. ಇದರ ಬೆನ್ನಲ್ಲೇ ಉಕ್ರೇನ್ ಮಿಲಿಟರಿ ಆಸ್ಕರ್ ಘೋಷಣೆ ಮಾಡಿದ್ದು ಅಚ್ಚರಿ ಉಂಟು ಮಾಡಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.