
ಬಾಲಿವುಡ್ ಖ್ಯಾತ ನಿರ್ದೇಶಕ, ಸೋಲಿಲ್ಲದ ಸರದಾರ ರಾಜ್ ಕುಮಾರ್ ಹಿರಾನಿ(Rajkumar Hirani) ತೆಲುಗಿನ ಪುಷ್ಪ(Pushpa) ಸಿನಿಮಾ ನೋಡಿ ಫಿದಾ ಆಗಿದ್ದಾರೆ. ಹಿಂದಿಯಲ್ಲಿ ಮುನ್ನಾಬಾಯ್, 3 ಈಡಿಯಟ್ಸ್, ಪಿಕೆ, ಸಂಜು ಅಂತ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ರಾಜ್ ಕುಮಾರ್ ಹಿರಾನಿ ತೆಲುಗು ಸ್ಟಾರ್ ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾ ನೋಡಿ ಹಾಡಿಹೊಗಳಿದ್ದಾರೆ. ಸಿನಿಮಾ ನೋಡಿ ಪುಷ್ಪ ನಿರ್ದೇಶಕ ಸುಕುಮಾರ್(Sukumar ) ಅವರಿಗೆ ಮೆಸೇಜ್ ಮಾಡಿದ್ದಾರೆ. ಬಾಲಿವುಡ್ ಸ್ಟಾರ್ ನಿರ್ದೇಶಕರಿಂದ ಬಂದ ಸಂದೇಶ ನೋಡಿ ಸುಕುಮಾರ್ ಅಚ್ಚರಿ ಪಟ್ಟಿದ್ದಾರೆ.
ನಿರ್ದೇಶಕ ರಾಜ್ ಕುಮಾರ್ ಹಿರಾನಿ ಪುಷ್ಪ ನಿರ್ದೇಶಕ ಸುಕುಮಾರ್ ಅವರಿಗೆ ವೈಯಕ್ತಿಕ ಸಂದೇಶ ಕಳುಹಿಸಿದ್ದಾರೆ. ಸಂದೇಶದಲ್ಲಿ ಹಿರಾನಿ ಪುಷ್ಪ ಸಿನಿಮಾ ಅದ್ಭುತವಾಗಿದೆ ಎಂದು ಹೇಳಿದ್ದಾರೆ. ಪ್ರತಿಯೊಬ್ಬರ ನಟನೆ ಮತ್ತು ಸಂಗೀತ ಎಲ್ಲವೂ ಸೂಪರ್ ಎಂದು ಹೇಳಿದ್ದಾರೆ. 'ಗುಡ್ ಮಾರ್ನಿಂಗ್ ಸುಕುಮಾರ್ ಅವರೇ, ನಾನು ರಾಜು ಹಿರಾನಿ. ಪುಷ್ಪ ಸಿನಿಮಾ ನೋಡಿದೆ. ತುಂಬ ಹಿಂದೆಯೇ ನಾನು ನಿಮಗೆ ಮೆಸುರಿಮರ್ ಮೆಸೇಜ್ ಮಾಡಬೇಕಿತ್ತು. ಆದರೆ ನಿಮ್ಮ ನಂಬರ್ ಇರಲಿಲ್ಲ. ನಿನ್ನೆ ಮಹಾವೀರ್ ಜೈನ್ ಅವರನ್ನು ಭೇಟಿಯಾದಾಗ ನಿಮ್ಮ ಬಗ್ಗೆ ಮಾತನಾಡುತ್ತಿದ್ದೆವು. ಆಗ ನಿಮ್ಮ ನಂಬರ್ ಸಿಕ್ತು ಎಂದು ರಾಜ್ ಹಿರಾನಿ ಅವರು ಮೆಸೇಜ್ ಪ್ರಾರಂಭಿಸಿದ್ದಾರೆ.
'ಎಂಥ ಅದ್ಭುತ ಸಿನಿಮಾ ಮಾಡಿದ್ದೀರಿ. ಇದರ ಬಗ್ಗೆ ನಾನು ತುಂಬ ಜನರ ಜೊತೆ ಮಾತನಾಡಿದ್ದೇನೆ. ಇವನಿಗೆ ಏನಾಗಿದೆಯಪ್ಪಾ ಅಂತ ಅವರೆಲ್ಲ ನನ್ನನ್ನು ನೋಡಿ ಅಚ್ಚರಿಪಟ್ಟಿದ್ದಾರೆ. ಸಿನಿಮಾದ ಬರವಣಿಗೆ ನನಗೆ ಇಷ್ಟ ಆಯ್ತು. ಪ್ರತಿ ದೃಶ್ಯವನ್ನು ಅಸಾಧಾರಣವಾಗಿ ನೀವು ಕಟ್ಟಿಕೊಟ್ಟಿದ್ದೀರಿ. ಕಲಾವಿದರ ನಟನೆ ಉತ್ತಮವಾಗಿದೆ. ಹಾಡುಗಳು ಮತ್ತು ಹಿನ್ನೆಲೆ ಸಂಗೀತ ಅದ್ಭುತವಾಗಿದೆ. ಅತ್ಯುತ್ತಮ ಮನರಂಜನೆ ನೀಡುವ ಈ ಸಿನಿಮಾವನ್ನು ನೋಡಿ ನಾನು ಎಂಜಾಯ್ ಮಾಡಿದ್ದೇನೆ. ಸದಾ ಅದ್ಭುತವಾದ ಸಿನಿಮಾಗಳನ್ನು ಮಾಡುತ್ತಿರಿ' ಎಂದಿದ್ದಾರೆ ರಾಜ್ ಮಾರ್ ಹಿರಾನಿ.
ಅಲ್ಲು ಅರ್ಜುನ್ 'ಪುಷ್ಪ-2' ಸಿನಿಮಾದ ಸ್ಕ್ರಿಪ್ಟ್ ಸಂಪೂರ್ಣ ಬದಲಾವಣೆ; ಕಾರಣವೇನು?
ಇದೇ ಸಮಯದಲ್ಲಿ ಸುಕುಮಾರ್ ಅವರನ್ನು ಭೇಟಿಯಾಗುವ ಇಂಗಿತವನ್ನು ಹಿರಾನಿ ವ್ಯಕ್ತಪಡಿಸಿದ್ದಾರೆ. 'ನೀವು ಮಂಬೈನಲ್ಲಿ ಇದ್ದಾಗ ಯಾವಾಗಾದ್ರು ಒಮ್ಮೆ ಭೇಟಿಯಾಗೋಣ' ಎಂದು ರಾಜ್ ಕುಮಾರ್ ಹಿರಾನಿ ಹೇಳಿದ್ದಾರೆ.
ರಾಜ್ ಕುಮಾರ್ ಹಿರಾನಿ ಸಂದೇಶಕ್ಕೆ ಪ್ರತಿಕ್ರಿಯೆ ನೀಡಿರುವ ಸುಕುಮಾರ್, 'ಕಲೆಗಳ ಮಾಸ್ಟರ್ ಎಂದು ಬಣ್ಣಿಸಿದ್ದಾರೆ. ನಿಮ್ಮ ಈ ಸಂದೇಶ ಎಲ್ಲಕ್ಕಿಂತ ದೊಡ್ಡದು. ನಿರ್ದೇಶನ ಮತ್ತು ಬರವಣಿಗೆಯಲ್ಲಿ ನೀವು ನನಗೆ ತುಂಬಾ ಸ್ಫೂರ್ತಿ ಎಂದು ಹೇಳಿದ್ದಾರೆ.
ಅಲ್ಲು ಅರ್ಜುನ್ ಸಿನಿಮಾಗೆ ಭಾರಿ ಬೇಡಿಕೆ; OTT ರೈಟ್ಸ್‌ಗಾಗಿ ಇಬ್ಬರ ನಡುವೆ ಬಿಗ್ ಫೈಟ್
ಪುಷ್ಪ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿದೆ. ಬಾಕ್ಸ್ ಆಫೀಸ್‌ನಲ್ಲೂ ಸಿನಿಮಾ ಕೋಟಿ ಕೋಟಿ ಕಲಕ್ಷನ್ ಮಾಡಿದೆ. ಹಿಂದಿ ಬಾಕ್ಸ್ ಆಫೀಸ್‌ನಲ್ಲೂ ಸಿನಿಮಾ ಅದ್ಭುತ ಕಮಾಯಿ ಮಾಡಿದೆ. ಈ ಸಿನಿಮಾ ಮೂಲಕ ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಅಂದಹಾಗೆ ಅಲ್ಲು ಅರ್ಜುನ್ ಸದ್ಯ ಪುಷ್ಪ-2ಗಾಗಿ ಸಜ್ಜಾಗುತ್ತಿದ್ದಾರೆ. ಅಂದುಕೊಂಡಂತೆ ಆಗಿದ್ದರೆ ಸಿನಿಮಾ ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಬೇಕಿತ್ತು. ಆದರೆ ಮೊದಲ ಭಾಗದ ಸೂಪರ್ ಸಕ್ಸಸ್ ಆದ ಕಾರಣ 2ನೇ ಭಾಗದ ಸ್ಕ್ರಿಪ್ಟ್‌ನಲ್ಲಿ ಕೊಂಚ ಬದಲಾವಣೆ ತರಲಾಗುತ್ತಿದೆ ಹಾಗಾಗಿ ಚಿತ್ರೀಕರಣ ತಡವಾಗುತ್ತಿದೆ ಎನ್ನುವ ಮಾತು ಕೇಳಿಬರತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.