ಗಂಡಸರ ಟಾಯ್ಲೆಟ್‌ಗೆ ನುಗ್ಗಿದ Deepika Padukone ಮತ್ತು ಆಲಿಯಾ ಭಟ್; ಶಾಕಿಂಗ್ ಘಟನೆ!

By Suvarna News  |  First Published Jan 31, 2022, 12:56 PM IST

ಗೆಹರಿಯಾ ಸಿನಿಮಾ ಪ್ರಚಾರದ ವೇಳೆ ಯಾರಿಗೂ ತಿಳಿಯದ ಸಂಗತಿ ಹಂಚಿಕೊಂಡ ದೀಪಿಕಾ ಪಡುಕೋಣೆ. ಇದಕ್ಕೆ ಆಲಿಯಾನೇ ಸಾಕ್ಷಿ.... 
 


ಫೆಬ್ರವರಿ 2ರಂದು ಅಮೇಜಾನ್ ಪ್ರೈಮ್‌ನಲ್ಲಿ (Amazon Prime) ಬಿಡುಗಡೆ ಆಗುತ್ತಿರುವ ಗೆಹರಿಯಾ (Gehraiyaan) ಸಿನಿಮಾ ಪ್ರಚಾರದಲ್ಲಿ ದೀಪಿಕಾ ಪಡುಕೋಣೆ (Deepika Padukone), ಅನನ್ಯಾ ಭಟ್, ಸಿದ್ಧಾಂತ್ ಮತ್ತು ಶಕುನ್‌ (Shukan) ಬ್ಯುಸಿಯಾಗಿದ್ದಾರೆ. ಸಿನಿಮಾದಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿರುವ ದೀಪಿಕಾ ರಿಯಲ್ ಲೈಫ್‌ನಲ್ಲಿ ಎಷ್ಟು ಬೋಲ್ಡ್‌ ಆ್ಯಂಡ್ Daring ಎಂದು ಪ್ರಶ್ನಿಸಿದ್ದಾಗ ಕೊಟ್ಟ ಉತ್ತರ ಅಭಿಮಾನಿಗಳಿಗೆ ಬಿಗ್ ಶಾಕಿಂಗ್...

ಹೌದು, ಮಿಸ್ ಮಾಲಿನಿ (Miss Malini) ಜೊತೆ ನಡೆದ ಸಂದರ್ಶನದಲ್ಲಿ ದೀಪಿಕಾ ತಾವು ಗಂಡಸರ ಶೌಚಾಲಯ (Men's Toilet) ಬಳಸಿರುವುದಾಗಿ ಹೇಳಿ ಕೊಂಡಿದ್ದಾರೆ.  ಸೆಟ್‌ನಲ್ಲಿದ್ದವರಿಗೆ ಇದು ಶಾಕಿಂಗ್ ವಿಚಾರ ಹೀಗಾಗಿ ನಿರೂಪಕಿ ಮೊದಲು ಅಲ್ಲಿದ್ದ ಕೋ-ಸ್ಟಾರ್‌ಗಳಿಗೆ ದೀಪಿಕಾ ಹೀಗೆ ಮಾಡಲು ಸಾಧ್ಯವೇ, ಎಂದು ಪ್ರಶ್ನೆ ಮಾಡುತ್ತಾರೆ. '100% ದೀಪಿಕಾ ಹೀಗೆ ಮಾಡುತ್ತಾಳೆ' ಎಂದು ಶಕುಲ್ ಹೇಳಿದ್ದಾರೆ, 'ದೀಪಿಕಾ ಮಾಡುತ್ತಾಳೆ. ಆದರೆ ತುಂಬಾನೇ ಕ್ಲೀನ್ ಇರಬೇಕು,' ಎಂದು ಅನನ್ಯಾ (Ananya Pandy) ಹೇಳಿದ್ದಾರೆ. ಆದರೆ ಸಿದ್ಧಾಂತ್‌ಗೆ ಮಾತ್ರ ಇದು ನಂಬಲಾಗದ ವಿಚಾರ. ದೀಪಿಕಾ ಹೀಗೆ ಮಾಡೋದೇ ಇಲ್ಲ, ಎಂದು ವಾದ ಮಾಡಿದ್ದಾರೆ. ತಕ್ಷಣವೇ ನಕ್ಕಿದ ಡಿಂಪಲ್ ಹುಡುಗಿ ಉತ್ತರ ನೀಡುತ್ತಾರೆ. 

Bigg Boss 15: ದೀಪಿಕಾಳನ್ನು ವಿಚಿತ್ರವಾಗಿ ಕರೆದ ಸಲ್ಮಾನ್ ಖಾನ್

Tap to resize

Latest Videos

'ನಾನು 100% ಈ ರೀತಿ ಮಾಡುವ ಹುಡುಗಿನೇ, ನಾನು ಮಾಡಿದ್ದೀನಿ ಕೂಡ. ನಾನು ಈ ರೀತಿ ಮಾಡಿದ ಸಮಯದಲ್ಲಿ ನನ್ನ ಜೊತೆ ಶಕುನ್‌ ಇದ್ದರು. ನಾವು ಬೆರ್ಲಿನ್‌ನಲ್ಲಿ (Berlin) ಕೋಲ್ಡ್‌ಪ್ಲೇ (Coldplay) ವೀಕ್ಷಿಸುತ್ತಿದ್ದೆವು. ಆಗ ಒಂದು ಸಾಂಗ್ ಬಂದು ಎಲ್ಲರಿಗೂ ತುಂಬಾನೇ ಬೋರ್ ಆಗಲು ಶುರುವಾಯ್ತು. ಆ ಸಮಯದಲ್ಲಿ ನನ್ನ ಜೊತೆ ಆಲಿಯಾ (Alia Bhatt) ಇದ್ದಳು, ನಾವಿಬ್ಬರೂ ಹೆಣ್ಣುಮಕ್ಕಳ ಲೂ (Ladies Loo) ಬಳಸಲು ಹೋದಾಗ ಅಲ್ಲಿ ದೊಡ್ಡ ಕ್ಯೂ ಇತ್ತು. ಆದರೆ ಗಂಡಸರ ಕ್ಯೂ ಇರಲಿಲ್ಲ. ಹೀಗಾಗಿ ಬಳಸಿದೆ. ಸದಾ ಕ್ಲೀನ್ ಆಗಿರಬೇಕು ಎಂದು ಬಯಸುವುದಿಲ್ಲ. ಎಲ್ಲಿ ಬೇಕಾದರೂ ನಾನು ಶೌಚಾಲಯ ಬಳಸುವೆ. ಯಾವುದೇ restrictions ಇಲ್ಲ,' ಎಂದು ದೀಪಿಕಾ ಹೇಳಿದ್ದಾರೆ. 

ಈ ಹಿಂದೆ ಈ ಘಟನೆಯನ್ನು ದೀಪಿಕಾ ಮತ್ತು ಆಲಿಯಾ ಕಾಫಿ ವಿತ್ ಕರಣ್‌ನಲ್ಲಿಯೂ ಹಂಚಿಕೊಂಡಿದ್ದರು. ಆಗ ಆಲಿಯಾ ನನ್ನ 'Partner in crime' ಎಂದು ಡಿಪ್ಪಿ ಕರೆದಿದ್ದರು. 

ದೀಪಿಕಾ ಪಡುಕೋಣೆ ಮಾಜಿ ಲವರ್ ರಣಬೀರ್ (Ranbir Kapoor) ಜೊತೆ ಆಲಿಯಾ ಭಟ್ ಲವಲ್ಲಿ ಬಿದ್ದಿದ್ದಾರೆ. ಇಬ್ಬರೂ ಹಲವು ವರ್ಷಗಳ ಕಾಲ ತಮ್ಮ ಡೇಟಿಂಗ್ (Dating) ವಿಚಾರವನ್ನು ತುಂಬಾನೇ ಸೀಕ್ರೆಟ್ ಆಗಿಟ್ಟಿದ್ದರು. ಆದರೆ ಯಾವಾಗ ದೀಪಿಕಾ ಕೂಡ ಈ ಜೋಡಿ ಜೊತೆ ಕಾಣಿಸಿಕೊಳ್ಳಲು ಶುರು ಮಾಡಿದ್ದರೋ, ಆ ಕ್ಷಣದಿಂದ ಎಲ್ಲವೂ ಕ್ಲಿಸ್ಟರ್ ಕ್ಲಿಯರ್ ಆಗಿತ್ತು. ಕಾಫಿ ವಿತ್ ಕರಣ್‌ (Koffee with Karan) ಸಂದರ್ಶನದಲ್ಲಿ ಇಬ್ಬರೂ ರಣಬೀರ್‌ ಬಗ್ಗೆ ಮಾತನಾಡಿದ್ದಾರೆ. ಹೀಗಾಗಿ ಇಲ್ಲಿ ಮಾಜಿಗಳ ಜೊತೆ ಯಾವ ಜಗಳನೂ ಇರುವುದಿಲ್ಲ. 

Gehraiyaan Promotion: ಸಿನಿಮಾ ಪ್ರಚಾರದಲ್ಲಿ ಸೆಕ್ಸಿ ಲುಕ್‌ನಲ್ಲಿ ದೀಪಿಕಾ, ಅನನ್ಯಾ ಪಾಂಡೆ

ಕೆಲವು ದಿನಗಳ ಹಿಂದೆ ದೀಪಿಕಾ 'ಗೆಹರಿಯಾ' ಪ್ರಚಾರಕ್ಕೆಂದು ಬ್ಲ್ಯಾಕ್ ಆಂಡ್ ವೈಟ್‌ (Black and white) ಸಿಂಗಲ್ ಪೀಸ್‌ ಧರಿಸಿದ್ದರು. ಡಿಂಪಲ್ ಹುಡುಗಿ ತುಂಬಾನೇ ಸ್ಟೈಲಿಷ್‌ ಆಗಿ ಕಂಡರೂ, ನೆಟ್ಟಿಗರು ಟ್ರೋಲ್ ಮಾಡಲು ಶುರು ಮಾಡಿದ್ದರು. ಇದಕ್ಕೆ ಕಾರಣ ರಣವೀರ್ ಸಿಂಗ್ (Ranveer Singh). ಸಾಮಾನ್ಯವಾಗಿ ಈ ರೀತಿ ಉಡುಪುಗಳನ್ನು ರಣವೀರ್ ಸಿಂಗ್ ಧಿರಿಸುತ್ತಾರೆ, ಹೀಗಾಗಿ ನೀವು ರಣವೀರ್ ಬಟ್ಟೆಯನ್ನೇ ಧರಿಸಿ ಬಂದಿದ್ದೀರಾ ಎಂದು ಕಾಲೆಳೆದಿದ್ದರು.

click me!