ಕ್ಯಾಮೆರಾ ಎದುರು ಪತಿಗೆ ಒತ್ತಾಯ ಮಾಡಿ ಮುತ್ತಿಟ್ಟ ನಟಿ Rakhi Sawant!

By Suvarna News  |  First Published Jan 30, 2022, 1:21 PM IST

ಬಿಗ್ ಬಾಸ್ ಫಿನಾಲೆಯಲ್ಲಿ ಕಾಣಿಸಿಕೊಂಡ ರಾಖಿ ಸಾವಂತ್ , ಪತಿ ಎಂದು ಪ್ರಶ್ನೆ ಮಾಡುತ್ತಿದ್ದವರಿಗೆ ಉತ್ತರ ಕೊಟ್ಟ ನಟಿ


ಬಿಗ್ ಬಾಸ್‌ 15ರಲ್ಲಿ ವೈಲ್ಡ್‌ ಕಾರ್ಡ್‌ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ರಾಖಿ ಸಾವಂತ್ ಮತ್ತು ಪತಿ ರಿತೇಶ್ ಇದೀಗ ಫಿನಾಲೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರು ಹಳದಿ ಬಣ್ಣದ ಡ್ಯಾನ್ಸ್ ಉಡುಪಿನಲ್ಲಿ ಕಾಣಿಸಿಕೊಂಡು ಕ್ಯಾಮೆರಾ ಮುಂದೆ ವರ್ತಿಸಿರುವ ರೀತಿಗೆ ನೆಟ್ಟಿಗರು ಶಾಕ್ ಆಗಿದ್ದಾರೆ. ಆತ ನನಗೆ ಲೀಗಲ್ ಪೇಪರ್ ಕೊಟ್ಟರೆ ಮಾತ್ರ ಪತಿ ಎಂದು ಹೇಳುತ್ತಿದ್ದ ನಟಿ ಇದ್ದಕ್ಕಿದ್ದಂತೆ ಮುತ್ತು ಕೊಟ್ಟಿದ್ದಾರೆ.

ಬಿಗ್ ಬಾಸ್‌ 15ರ  ಗ್ರ್ಯಾಂಡ್ ಫಿನಾಲೆ ಇಂದು ನಡೆಯುತ್ತಿದೆ. ಸಲ್ಮಾನ್ ಖಾನ್ ಜೊತೆ ದೀಪಿಕಾ ಪಡುಕೋಣೆ, ಅನನ್ಯಾ ಪಾಂಡೆ, ಸಿದ್ಧಾರ್ಥ್, ಶೆಹನಾಜ್ ಗಿಲ್, ಶ್ವೇತಾ, ಗೌತಮಿ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಇಡೀ ಬಿ-ಟೌನ್ ಕಣ್ಣು ಬಿಬಿ ಮೇಲಿರುತ್ತದೆ. ಪ್ರತಿ ಸೀಸನ್‌ನಲ್ಲೂ ಫನ್ ಎಲಿಮೆಂಟ್ ಸೇರಿಸಲು ರಾಖಿ ಸಾವಂತ್‌ನ ಕರೆಯಲಾಗುತ್ತದೆ. ಆದರೆ ಕೊಂಚ ಬದಲಾವಣೆ ಇರಲಿ ಎಂದು ಆಕೆ ತಮ್ಮ ಪತಿಯನ್ನು ಕೂಡ ಕರೆದುಕೊಂಡು ಬಂದಿದ್ದಾರೆ. 

Tap to resize

Latest Videos

ರಾಖಿ ಮತ್ತು ರಿತೇಶ್ ಒಟ್ಟಿಗೆ ಡ್ಯಾನ್ಸ್ ಮಾಡಿದ ನಂತರ ಸೆಟ್‌ನಿಂದ ಹೊರ ಬರುವಾಗ ಪ್ಯಾಪರಾಜಿಗಳ ಕಣ್ಣಿಗೆ ಕಾಣಿಸಿಕೊಂಡಿದ್ದಾರೆ. ಇಬ್ಬರು ಒಟ್ಟಿಗೆ ಫೋಟೋಗೆ ಫೋಸ್ ಕೊಟ್ಟು ಶೋ ಬಗ್ಗೆ ಮಾತನಾಡಿದ್ದಾರೆ. ಅದೇ ಫೋಟೋವನ್ನು ರಾಖಿ ಹಂಚಿಕೊಂಡು ಪತಿಯನ್ನು ಬಾಲಿವುಡ್ ರಜನಿಕಾಂತ್ ಎಂದು ಕರೆದಿದ್ದಾರೆ.ಅಲ್ಲದೆ ನಾವು ಕೂಡ ಉಮರ್ ರಿಯಾಜ್ ರೀತಿ  6 ಪ್ಯಾಕ್ ಮಾಡಬೇಕು ಎಂದು ಪತಿಗೆ ಹೇಳಿದ್ದಾರೆ, ಯಸ್ ಯಸ್ ಮಾಡೋಣ ಎಂದಿದ್ದಾರೆ. 

ರಿತೇಶ್ ವೃತ್ತಿಯಲ್ಲಿ ಉದ್ಯಮಿ ಹೀಗಾಗಿ ಕ್ಯಾಮೆರಾದಿಂದ ಸದಾ ದೂರವಿರುತ್ತಾರೆ. ಒಟ್ಟಿಗೆ ರೊಮ್ಯಾಂಟಿಕ್ ಪೋಸ್‌ ಕೊಡಿ ಎಂದು ನೆಟ್ಟಿಗರು ಕೇಳಿದಾಗ ರಾಖಿ ಪತಿಯನ್ನು ಹತ್ತಿರ ಕರೆದು ತುಟಿಗೆ ಮುತ್ತು ಕೊಡುತ್ತಾರೆ. ರಿತೇಶ್ ಬೇಡ ಬೇಡ ಎಂದು ದೂರ ಹೋಗುತ್ತಿದ್ದರೂ ಒತ್ತಾಯ ಮಾಡಿ ಎಳೆದುಕೊಂಡು ಲಿಪ್‌ಲಾಕ್ ಮಾಡಿದ್ದಾರೆ. ಕ್ಯಾಮೆರಾ ಹಿಡಿದವರು ಓ ಎಂದು ಕೂಗಲು ಶುರು ಮಾಡಿದ್ದರು. ಯಾವುದಕ್ಕೂ ಚಿಂತಿಸದೆ ಕೆಲವು ನಿಮಿಷಗಳ ಕಾಲ ಹಾಗೇ ಇದ್ದರು.

 

ಬಿಬಿ ರಿಯಾಲಿಟಿ ಶೋನಿಂದ ಮೊದಲು ರಿತೇಶ್ ಎಲಿಮಿನೇಟ್ ಆದರು ಆನಂತರ ರಾಖಿ ಹೊರ ಬಂದರು. ಈ ಅವಧಿಯಲ್ಲಿ ಪತಿಯನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ದೊಡ್ಡ ಡ್ರಾಮ ಕ್ರಿಯೇಟ್ ಮಾಡಿದ್ದರು. ಇಬ್ಬರು ಆರ್‌ಜೆಗಳನ್ನು ಒಳಗೆ ಕಳುಹಿಸಿ ಮದುವೆ ಬಗ್ಗೆ ಪ್ರಶ್ನೆ ಮಾಡಲಾಗಿತ್ತು. 'ನಾನು ಬಿಗ್ ಬಾಸ್ 14ರಲ್ಲಿ ಮದುವೆ ಆಗಿದ್ದೀನಿ ಎಂದು ಹೇಳಿದ್ದರೂ, ಯಾರೂ ನನ್ನನ್ನು ನಂಬಲು ರೆಡಿ ಇರಲಿಲ್ಲ. ಆ ಸಮಯದಲ್ಲಿ ನನ್ನ ಗಂಡ, ಅಮ್ಮ ಮತ್ತು ನಾನು ಒಟ್ಟಿಗೇ ಅತ್ತಿದ್ದೀವಿ. ಆನಂತರ ನನ್ನ ಗಂಡ ಭಾರತಕ್ಕೆ ಬರುವುದಾಗಿಯೂ ಹೇಳಿದ್ದರು. ಆಗ ನಾವು ಮುಂಬೈನಲ್ಲಿ ಮದುವೆ ರಿಸೆಪ್ಶನ್‌ ಹಮ್ಮಿಕೊಳ್ಳುವುದಕ್ಕೆ ಪ್ಲ್ಯಾನ್ ಮಾಡಿಕೊಂಡೆವು. ಅದೇ ಸಮಯಕ್ಕೆ ನನಗೆ ಬಿಗ್ ಬಾಸ್ ಆಫರ್ ಸಿಕ್ಕಿತ್ತು. ನನ್ನ ಜೀವನ ನಡೆಸಲು ಇದೇ ನನಗೆ bread and butter. ಹೀಗಾಗಿ ನಾನು ಬಿಗ್ ಬಾಸ್‌ನಲ್ಲಿ ಮದುವೆ ವಿಚಾರ ಮತ್ತು ಗಂಡನನ್ನು ಪರಿಚಯ ಮಾಡಲು ನಿರ್ಧರಿಸಿದೆ. ಇಡೀ ವಿಶ್ವವೇ ನಮ್ಮನ್ನು ನೋಡಬಹುದು ಎಂಬ ಕಾರಣದಿಂದ,' ಎಂದು ರಾಖಿ ಉತ್ತರಿಸಿದ್ದಾರೆ.

BB15: ವೇದಿಕೆ ಮೇಲೆ ಕಣ್ಣೀರಿಟ್ಟ ಸಲ್ಮಾನ್ ಖಾನ್‌, ಶೆಹನಾಜ್ ಗಿಲ್‌ ವಿಡಿಯೋ ವೈರಲ್!

'ಮನೆಯಲ್ಲಿದ್ದ ಸ್ಪರ್ಧಿಗಳೇ ನೀವು ಮದುವೆ ಆಗಿಲ್ಲ ಎಂದು ಹೇಳುತ್ತಿದ್ದಾರೆ. ನೀವು ಫೇಕ್ ಮಾಡುತ್ತಿದ್ದೀರಾ ಎಂದು ಹೇಳುತ್ತಿದ್ದಾರೆ ಯಾಕೆ?' ಎಂದು ಆರ್‌ಜೆ ಪ್ರಶ್ನೆ ಮಾಡಿದ್ದಾರೆ. 

'ಜನರು ಈ ರೀತಿ ತಪ್ಪಾಗಿ ತಿಳಿದುಕೊಳ್ಳುತ್ತಿರುವುದಕ್ಕೆ ಕಾರಣವಿದೆ. ನಾನು ಎಲ್ಲರಂತೆ ಸರಿಯಾಗಿ ಮೆಹಂದಿ, ಭಾರತ್ ಮತ್ತು ಸಂಗೀತ್ ಅಂತ ಮಾಡಿಕೊಂಡಿಲ್ಲ.  ಯಾರೂ ನನಗೆ ಹುಡುಗನನ್ನು ಹುಡುಕಲಿಲ್ಲ. ನಾನು ಆಯ್ಕೆ ಮಾಡಿಕೊಂಡೆ. ಒಂದು ಹೋಟೆಲ್‌ನ ರೂಮ್‌ನಲ್ಲಿ ಬಾಗಿಲು ಹಾಕಿಕೊಂಡು, ಮದುವೆ ಆಗಿದ್ದು. ಆತನ ಬ್ಯಾಂಕ್ ಬ್ಯಾಲೆನ್ಸ್‌ ಮತ್ತು ಪಾಸ್‌ಬುಕ್‌ ನೋಡಿ ನಾನು ಯಸ್‌ ಅಂದಿದ್ದು,' ಎಂದು ರಾಖಿ ಹೇಳಿದ್ದಾರೆ.

 

click me!