Katrina Kaif Wedding: ಮದುವೆ ಮನೆಗೆ ಹೆಲಿಕಾಪ್ಟರ್‌ನಲ್ಲೇ ಬರ್ತಾರಂತೆ ಕತ್ರಿನಾ-ವಿಕ್ಕಿ!

Suvarna News   | Asianet News
Published : Dec 03, 2021, 07:37 PM IST
Katrina Kaif Wedding: ಮದುವೆ ಮನೆಗೆ ಹೆಲಿಕಾಪ್ಟರ್‌ನಲ್ಲೇ ಬರ್ತಾರಂತೆ ಕತ್ರಿನಾ-ವಿಕ್ಕಿ!

ಸಾರಾಂಶ

ಸೆಲೆಬ್ರಿಟಿಗಳಿಗೆ ಪಾಪರಾಜಿಗಳಿಂದ ಪತ್ರಕರ್ತರಿಂದ ತಪ್ಪಿಸಿಕೊಳ್ಳೋದೇ ದೊಡ್ಡ ಚಾಲೆಂಜ್‌ ಆಗಿದೆ. ಪ್ರೈವೇಟ್‌ ಲೈಫನ್ನು ಗೌಪ್ಯವಾಗಿಡಲು ನಿರ್ಧರಿಸಿರುವ ಕತ್ರಿನಾ ಕೈಫ್‌ ವಿಕ್ಕಿ ಕೌಶಲ್‌ ಮದುವೆ ಹಾಲ್‌ ಹೆಲಿಕಾಪ್ಟರ್‌ನಲ್ಲೇ ಬಂದಿಳೀತಿದ್ದಾರಂತೆ!  

ಲವ್‌ಬರ್ಡ್‌ಗಳಾದ ವಿಕ್ಕಿ ಕೌಶಲ್‌ (Vicky Koushal) ಹಾಗೂ ಕತ್ರಿನಾ ಕೈಫ್‌ (Katrina Kaif) ಸಪ್ತಪದಿಗೆ ಕ್ಷಣಗಣನೆ ಆರಂಭವಾಗಿದೆ. ಸವಾಯಿ ಮಾಧೊಪುರ್ ಜಿಲ್ಲೆಯ ಸಿಕ್ಸ್‌ ಸೆನ್ಸಸ್‌ ಫೋರ್ಟ್‌ ಬಾರ್‌ವಾರ್‌ ರೆಸಾರ್ಟ್ ನಲ್ಲಿ ಡಿಸೆಂಬರ್ ೯ಕ್ಕೆ ಈ ಜೋಡಿ ಹಸೆಮಣೆ ಏರಲಿದ್ದಾರೆ. ತಮ್ಮ ವಿವಾಹ (Marriage) ಸಮಾರಂಭಕ್ಕೋಸ್ಕರ ವಿಕ್ಕಿ ಹಾಗೂ ಕತ್ರಿನಾ ಡಿ.೫ಕ್ಕೇ ಜೈಪುರ್‌ ಸೇರುವ ಸಾಧ್ಯತೆ ಇದೆ. ಆದರೆ ಈ ಜೋಡಿ ತಮ್ಮ ವಿವಾಹವನ್ನು ಆರಂಭದಿಂದಲೇ ಬಹಳ ಗೌಪ್ಯವಾಗಿಡಲು ನಿರ್ಧರಿಸಿದ್ದಾರೆ. ಸೆಲೆಬ್ರಿಟಿಯೊಬ್ಬರು ಬಾಯಿ ಬಿಡುವ ತನಕ ಕತ್ರಿನಾ- ವಿಕ್ಕಿ ಮದುವೆ ಪ್ರೀತಿಸುತ್ತಿದ್ದಾರೆ ಅನ್ನೋ ವಿಚಾರವೂ ಯಾರಿಗೂ ಗೊತ್ತಿರಲಿಲ್ಲ. ಕತ್ರಿನಾ- ವಿಕ್ಕಿ ಕೌಶಲ್‌ ಸಹ ಎಲ್ಲೂ ತಾವಿಬ್ಬರೂ ಪ್ರೀತಿಸೋ ವಿಷಯವನ್ನು ಹೇಳಿಕೊಂಡಿಲ್ಲ. ಇಬ್ಬರೂ ಜೊತೆಯಾಗಿ ಕಾಣಿಸಿಕೊಂಡಿದ್ದೂ ಕಡಿಮೆ. ಇವರ ಮದುವೆ ಸುದ್ದಿಯನ್ನೂ ಈ ಇಬ್ಬರಲ್ಲಿ ಒಬ್ಬರೂ ಎಲ್ಲೂ ತಿಳಿಸಿಲ್ಲ. ಇವರಿಬ್ಬರೂ ಮದುವೆ ಆಗ್ತಿದ್ದಾರೆ ಅನ್ನೋದಕ್ಕೆ ಅಧೀಕೃತ ದಾಖಲೆಗಳು ಇನ್ನೂ ಮಾಧ್ಯಮಕ್ಕೆ ಸಿಕ್ಕಿಲ್ಲ. ಆದರೆ ಇವರ ಮದುವೆಗೆ ಈ ಸೆಲೆಬ್ರಿಟಿಗಳಿಗೆ ಇನ್‌ವೈಟ್‌ ಹೋಗಿದೆ, ಸಲ್ಮಾನ್‌ ಖಾನ್‌ (Salman khan) ಸಹೋದರಿ ಮದುವೆಯಲ್ಲಿ ಭಾಗಿಯಾಗುವ ಸಾಧ್ಯತೆ ಇದೆ, ಶಾರೂಕ್‌ ಖಾನ್‌ ಮದುವೆಯಲ್ಲಿ ಪಾಲ್ಗೊಳ್ಳಬಹುದು ಅನ್ನೋ ಥರದ ಊಹಾಪೋಹಗಳು ಹರಿದಾಡುತ್ತಲೇ ಇವೆ.

ಈ ಗಣ್ಯ ಸೆಲೆಬ್ರಿಟಿಗಳು ಕತ್ರಿನಾ-ವಿಕ್ಕಿ ಮದುವೆಯ ಆಮಂತ್ರಣ ಪತ್ರವನ್ನು ಎಲ್ಲೂ ಹಂಚಿಕೊಂಡಿಲ್ಲ. ಈ ನಡುವೆ ಈ ಮದುವೆಗೆ ಮೊಬೈಲ್‌ಅನ್ನು ಯಾರೋ ತೆಗೆದುಕೊಂಡು ಹೋಗುವಂತಿಲ್ಲ ಅನ್ನೋ ಷರತ್ತೂ ಆಮಂತ್ರಣ ಪತ್ರಿಕೆಯಲ್ಲಿದೆ ಎಂಬ ರೂಮರ್‌ ಇದೆ. ಲೇಟೆಸ್ಟ್‌ ಗಾಳಿ ಸುದ್ದಿ ಅಂದರೆ ಮದುವೆಗೆ ಆಮಂತ್ರಿತರಾದವರಿಗೆ ಕೋಡ್‌ವರ್ಡ್ ಕೊಡಲಾಗಿದೆ. ಆ ಕೋಡ್‌ ವರ್ಡ್ ಹಾಕಿದರೆ ಮಾತ್ರ ಅವರಿಗೆ ಮದುವೆ ಹಾಲ್‌ಗೆ ಎಂಟ್ರಿ ಇರುತ್ತೆ ಎಂಬ ವಿಚಾರ. ಇದೆಷ್ಟು ಸರಿ, ಎಷ್ಟು ಸುಳ್ಳು ಅನ್ನೋ ಬಗ್ಗೆ ಗೊಂದಲ ಇದೆ. ಈಗಿನ ಮತ್ತೊಂದು ಸುದ್ದಿ ಅಂದರೆ ಈ ಜೋಡಿ ಪಾಪರಾಜಿಗಳಿಂದ ತಪ್ಪಿಸಿಕೊಳ್ಳಲು ಹೊಸ ಪ್ಲಾನ್ ಮಾಡಿಕೊಂಡಿದ್ದಾರೆ ಅಂತ.

Boman Irani: ಅಂದು ಹೋಟಲ್‌ ಮಾಣಿ ಇಂದು ಫೇಮಸ್‌ ನಟ

ಆದರೆ ವಿಕ್ಕಿ ಮತ್ತು ಕತ್ರಿನಾ ಯಾಕೆ ಮದುವೆಯನ್ನು ಈ ಲೆವೆಲ್‌ಗೆ ಸೀಕ್ರೆಟ್‌ ಆಗಿಡ್ತಿದ್ದಾರೆ, ಮದುವೆ ಅಂದರೆ ಸಾರ್ವಜನಿಕವಾಗಿ ಎಲ್ಲರ ನಡುವೆ ಆದರೆ ಚೆಂದ ಅಲ್ವಾ, ಅದರಲ್ಲೂ ಈ ಲೆವೆಲ್‌ಗೆ ಗೌಪ್ಯತೆ ಮೈಂಟೇನ್ ಮಾಡಬೇಕಾ, ಇದೆಲ್ಲಾ ಯಾಕೋ ಅತಿ ಅನಿಸ್ತಿದೆ ಅಂತ ಒಂದಿಷ್ಟು ಮಂದಿ ಮೂಗು ಮುರೀತಿದ್ದಾರೆ. ಸೆಲೆಬ್ರಿಟಿಗಳ ಖಾಸಗಿ ಕಾರ್ಯಕ್ರಮವನ್ನು ಗೌಪ್ಯವಾಗಿಡೋದು ಇತ್ತೀಚೆಗೆ ಟ್ರೆಂಡ್‌ ಆಗ್ತಿದೆ. ದೀಪಿಕಾ ಪಡುಕೋಣೆ ತಮ್ಮ ಮದುವೆಯನ್ನು ಗೌಪ್ಯವಾಗಿಟ್ಟಿದ್ದರು. ಆಮೇಲೆ ಸೋಷಿಯಲ್‌ ಮೀಡಿಯಾದಲ್ಲಿ ಮದುವೆ ಫೋಟೋ ರಿವೀಲ್‌ ಮಾಡಿದ್ದರು. ಅನುಷ್ಕಾ ಶರ್ಮಾ- ಕೊಹ್ಲಿ ಜೋಡಿಯೂ ಇದೇ ತಂತ್ರ ಅನುಸರಿಸಿತ್ತು. ಈ ಜೋಡಿ ಈವರೆಗೆ ತಮ್ಮ ಮಗುವಿನ ಫೋಟೋ ಎಲ್ಲೂ ರಿವೀಲ್ ಮಾಡಿಲ್ಲ.

ಈಗ ಕತ್ರಿನಾ ವಿಕ್ಕಿ ಜೋಡಿಯೂ ವಿವಾಹ ನಡೆಯೋ ರೆಸಾರ್ಟ್ ಗೆ ಹೆಲಿಕಾಫ್ಟರ್‌ನಲ್ಲಿ ಬರೋದು ಅನ್ನೋ ಸುದ್ದಿ ಇದೆ. ಇದು ಯಾಕೆ ಅಂದರೆ ತಾವಿಬ್ಬರೂ ಜೊತೆಯಾಗಿ ಮದುವೆಗೆ ಹೋಗ್ತಿರೋದು ಪಾಪರಾಜಿಗಳ ಕಣ್ಣಿಗೆ ಬೀಳಬಾರದು, ಮಾಧ್ಯಮಗಳ ಕಾಕಕೃಷ್ಟಿಯಿಂದ ತಪ್ಪಿಸಿಕೊಳ್ಳಬೇಕು ಅನ್ನೋ ಉದ್ದೇಶದಿಂದ ಅನ್ನೋ ಮಾತಿದೆ. ಈ ಸುದ್ದಿಯ ಪ್ರಕಾರ ಈ ಜೋಡಿ ಡಿ.೫ಕ್ಕೆ ಮದುವೆಯ ರೆಸಾರ್ಟ್ ಇರುವ ಜಾಗಕ್ಕೆ ಹೆಲಿಕಾಪ್ಟರ್‌ನಲ್ಲಿ ಹೋಗುತ್ತಾರೆ. ಆ ರೆಸಾರ್ಟ್‌ನೊಳಗೆ ಮದುವೆಯ ವಿವಿಧ ಆಚರಣೆಗಳಲ್ಲಿ ಭಾಗಿ ಆಗುತ್ತಾರೆ. ಇವರಿಬ್ಬರ ಮದುವೆ ಕತ್ರಿನಾ ಕೈಫ್‌ ಅವರ ಮುಸ್ಲಿಮ್‌ ಧರ್ಮದನ್ವಯ ಹಾಗೂ ವಿಕ್ಕಿ ಕೌಶಲ್‌ ಅವರ ಹಿಂದೂ ಧರ್ಮದ ಪ್ರಕಾರ ನಡೆಯಲಿದೆ. ಮದುವೆಯಲ್ಲಿ ಕೆಲವೇ ಮಂದಿ ಸೆಲೆಬ್ರಿಟಿಗಳು ಮಾತ್ರ ಭಾಗಿಯಾಗುತ್ತಾರೆ. ಮುಂದೆ ಮುಂಬೈಯಲ್ಲಿ ನಡೆಯುವ ರಿಸೆಪ್ಶನ್ ನಲ್ಲಿ ಬಾಲಿವುಡ್‌ ಮಂದಿ, ಬೇರೆ ಕ್ಷೇತ್ರಗಳ ಸೆಲೆಬ್ರಿಟಿಗಳು ಭಾಗವಹಿಸುತ್ತಾರೆ ಎಂದು ಮೂಲಗಳು ತಿಳಿಸಿವೆ.

Celebrities spotted: ತಡರಾತ್ರಿಯಲ್ಲಿ ಮಗನ ಜೊತೆ ಮನೆ ಹೊರಗೆ ಕರೀನಾ!

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?