
ಬಾಲಿವುಡ್ ನಟಿ ಕಂಗನಾ ರಣಾವತ್ ಬ್ಯಾಡ್ ಟೈಮ್ ಕಂಟಿನ್ಯೂ ಆಗಿದೆ ಎನ್ನಬಹುದು. ಇತ್ತೀಚೆಗೆ ಕಂಗನಾ ನಟಿಸಿರುವ ಸಿನಿಮಾಗಳು ಒಂದಾದ ಬಳಿಕ ಇನ್ನೊಂದು ಎಂಬಂತೆ ನೆಲಕಚ್ಚುತ್ತಿವೆ. ಆಕೆಯ ಸಿನಿಮಾಗಳು ಆಕೆಯ ಕೈಹಿಡಿಯುತ್ತಿಲ್ಲ. ಕಳೆದ ವಾರ ಬಿಡುಗಡೆಯಾದ ತೇಜಸ್ ಸಿನಿಮಾ ಕಲೆಕ್ಷನ್ ಸುಧಾರಣೆ ಕಾಣುತ್ತಿಲ್ಲ. ಬಿಡುಗಡೆಯಾಗಿ ಮೂರು ದಿನವಾದರೂ ತೇಜಸ್ ಕಲೆಕ್ಷನ್ 10 ಕೋಟಿ ದಾಟಿಲ್ಲ, ಒಂದು ವಾರ ಕಳೆದರೂ 25 ಕೊಟಿ ಬಾಚಿಕೊಳ್ಳುವ ಯಾವ ಲಕ್ಷಣವೂ ಕಾಣುತ್ತಿಲ್ಲ.
ಹಾಗಿದ್ದರೆ, ಕಂಗನಾ ಎಡವಿದ್ದೆಲ್ಲಿ? ಇತ್ತೀಚೆಗೆ ನಟಿ ಕಂಗನಾ ಸಿನಿಮಾ ಅಯ್ಕೆಯಲ್ಲಿ ಎಡವುತ್ತಿದ್ದಾರೆಯೇ? ಅಥವಾ, ಆಕೆಗೆ ಬರುತ್ತಿರುವ ಆಫರ್ ಅಂಥವೇ? ಹೀರೋಯನ್ ಓರಿಯೆಂಟೆಡ್ ಸಿನಿಮಾಗಳನ್ನು ಹೆಚ್ಚು ಹೆಚ್ಚುಮಾಡುತ್ತಿರುವ ಕಂಗನಾಗೆ ಅದೇ ಕೈಕೊಡುತ್ತಿದೆಯೇ? ಆದರೆ, ಸಿನಿಮಾರಂಗಕ್ಕೆ ಬಂದಿರುವ ಪ್ರಾರಂಭದಲ್ಲಿ ಹೀರೋಗಳ ಜತೆ ಮರ-ಪಾರ್ಕು ಸುತ್ತಿ ಕುಣಿದಂತೆ ಈಗಲೂ ಕಂಗನಾ ಮಾಡಬೇಕೆ? ಯಾವುದಕ್ಕೂ ಉತ್ತರ ಹೇಳುವುದು ಕಷ್ಟ!
ಫೈನಲಿಸ್ಟ್ ಹೆಸರು ಹೇಳಿಬಿಟ್ರಾ ಕಿಚ್ಚ ಸುದೀಪ್, ಸ್ಪರ್ಧಿಗಳಲ್ಲಿ ಆತಂಕ; ಮನೆಮನೆಯಲ್ಲಿ ಅದೇ ಸುದ್ದಿ!
ತೇಜಸ್ ಚಿತ್ರದ ಮೇಲೆ ಕಂಗನಾ ಭಾರೀ ನಿರೀಕ್ಷೆ ಇಟ್ಟಿದ್ದರು. ಈ ಚಿತ್ರದ ಪ್ರಮೋಶನ್‌ಗಾಗಿ ಕಂಗನಾ ತಮ್ಮ ಸಮಯವನ್ನು ಸಿಕ್ಕಾಪಟ್ಟೆ ಎಂಬಷ್ಟು ಮೀಸಲಿಟ್ಟು, ಅದಕ್ಕಾಗಿ ಹಲವು ಕಡೆ ಓಡಾಡಿದ್ದಾರೆ. ಚಿತ್ರವನ್ನು ಹೈಪ್ ಮಾಡಲು ತಮ್ಮಿಂದಾದ ಎಲ್ಲಾ ಪ್ರಯತ್ನಗಳನ್ನು ಮಾಡಿರುವ ಕಂಗನಾ ಬಗ್ಗೆ ಈ ಬಗ್ಗೆ ಯಾರೂ ಬೆರಳು ತೋರಿಸುವಂತಿಲ್ಲ. ಆದರೆ, ಆಕೆ ಸಿನಿಮಾ ಪ್ರಚಾರವನ್ನು ಚೆನ್ನಾಗಿ ಮಾಡಿದ್ದರೂ, ಅದನ್ನು ತಮ್ಮ ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಿ ಡೆಡಿಕೇಶನ್ ಮೆರೆದಿದ್ದರೂ ಎಲ್ಲವೂ ನೀರಿನಲ್ಲಿ ಮಾಡಿದ ಹೋಮ ಎಂಬಂತಾಂಗಿದೆ.
ಬಿಗ್ ಬಾಸ್ ಮನೆಯಲ್ಲಿ ಭಾರೀ ಹೊಡೆದಾಟ; ಕಾರ್ತಿಕ್ ಮುಂದೆ ಮಂಡಿಯೂರಿ ಬಿದ್ದು ಒದ್ದಾಡುತ್ತಿರುವ ಪ್ರತಾಪ್
ತೇಜಸ್ ಕಲೆಕ್ಷನ್ ನೋಡಿ ಕಂಗಾಲಾಗಿರುವ ಕಂಗನಾ ಈ ಬಗ್ಗೆ ತಮ್ಮಿಂದಾದ ಪ್ರಯತ್ನ ಮಾಡುತ್ತಲೇ ಇದ್ದಾರೆ. ಜನರಿಗೆ ಸಿನಿಮಾ ನೋಡುವಂತೆ ಕರೆ ಕೊಟ್ಟಿದ್ದಾರೆ. ಇದಕ್ಕಾಗಿ ಪ್ರಕಾಶ್ ರೈ ಅವರಿಂದ ಕಾಲೆಳಿಸಿಕೊಂಡಿದ್ದೂ ಆಗಿದೆ. ಆದರೂ ಪಟ್ಟು ಬಿಡದೇ ಸಿನಿಮಾ ಗೆಲ್ಲಿಸಲು ಕಷ್ಟ ಪಡುತ್ತಿರುವ ಕಂಗನಾಗೆ ಪ್ರೇಕ್ಷಕರು ಸಾಥ್ ನೀಡುವರೇ? ಉತ್ತರಕ್ಕೆ ಸ್ವಲ್ಪ ದಿನ ಕಾದು ನೋಡಬೇಕು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.