Aishwarya Sarja Engagement: ಅದ್ಧೂರಿಯಾಗಿ ನೆರವೇರಿದ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ನಿಶ್ಚಿತಾರ್ಥ!

Published : Oct 30, 2023, 10:59 AM IST
Aishwarya Sarja Engagement: ಅದ್ಧೂರಿಯಾಗಿ ನೆರವೇರಿದ ಅರ್ಜುನ್ ಸರ್ಜಾ ಪುತ್ರಿ  ಐಶ್ವರ್ಯಾ ನಿಶ್ಚಿತಾರ್ಥ!

ಸಾರಾಂಶ

ಕರ್ನಾಟಕ ಮೂಲದ ದಕ್ಷಿಣ ಭಾರತದ ಖ್ಯಾತ ನಟ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಸರ್ಜಾ ಅವರ ನಿಶ್ಚಿತಾರ್ಥ ಶುಕ್ರವಾರ (ಅಕ್ಟೋಬರ್ 27) ಚೆನ್ನೈನಲ್ಲಿ ಅದ್ಧೂರಿಯಾಗಿ ನೆರವೇರಿದೆ. 

ಕರ್ನಾಟಕ ಮೂಲದ ದಕ್ಷಿಣ ಭಾರತದ ಖ್ಯಾತ ನಟ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಸರ್ಜಾ ಅವರ ನಿಶ್ಚಿತಾರ್ಥ ಶುಕ್ರವಾರ (ಅಕ್ಟೋಬರ್ 27) ಚೆನ್ನೈನಲ್ಲಿ ಅದ್ಧೂರಿಯಾಗಿ ನೆರವೇರಿದೆ. ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಧ್ರುವ ಸರ್ಜಾ ಸೇರಿದಂತೆ ಸರ್ಜಾ ಕುಟುಂಬದ ಸದಸ್ಯರು ಭಾಗಿಯಾಗಿದ್ದರು. ಐಶ್ವರ್ಯಾ ಸರ್ಜಾ ಅವರು ತಮ್ಮ ಬಹು ಸಮಯದ ಗೆಳೆಯನನ್ನೇ ವರಿಸಲಿದ್ದು, ಅವರೊಟ್ಟಿಗೆ ವಿವಾಹ ನಿಶ್ಚಯ ಮಾಡಿಕೊಂಡಿದ್ದಾರೆ. ಸದ್ಯ ಐಶ್ವರ್ಯಾ ಅವರ ನಿಶ್ಚಿತಾರ್ಥವು ತಮಿಳಿನ ಜನಪ್ರಿಯ ನಟ ತಂಬಿ ರಾಮಯ್ಯ ಅವರ ಪುತ್ರ ಉಮಾಪತಿ ರಾಮಯ್ಯ ಅವರೊಡನೆ ನಡೆದಿದೆ. 

ತಂಬಿ ರಾಮಯ್ಯ ತಮಿಳು ಚಿತ್ರರಂಗದ ಜನಪ್ರಿಯ ಹಾಸ್ಯ ನಟ ಮತ್ತು ಪೋಷಕ ನಟ. ಹಲವು ವರ್ಷಗಳಿಂದಲೂ ತಂಬಿ ರಾಮಯ್ಯ ತಮಿಳು ಸಿನಿಮಾಗಳಲ್ಲಿ ನಟಿಸುತ್ತಾ ಬಂದಿದ್ದಾರೆ. ಉಮಾಪತಿ ರಾಮಯ್ಯ ಹಾಗೂ ಐಶ್ವರ್ಯಾ ಸರ್ಜಾ ಹಲವು ವರ್ಷಗಳಿಂದಲೂ ಪ್ರೀತಿಯಲ್ಲಿದ್ದರು ಎನ್ನಲಾಗಿದೆ. ಇದೀಗ ಹಿರಿಯರ ಒಪ್ಪಿಗೆ ಪಡೆದು ವಿವಾಹ ಮಾಡಿಕೊಳ್ಳಲು ಸಜ್ಜಾಗಿದ್ದು ಇಂದು ಕುಟುಂಬದ ಹಿರಿಯರ ಸಮ್ಮುಖದಲ್ಲಿ ಉಂಗುರ ಬದಲಾಯಿಸಿಕೊಂಡಿದ್ದಾರೆ. 

ದರ್ಶನ್‌, ದುನಿಯಾ ವಿಜಯ್‌ ಜತೆಗೆ ಪಾತ್ರ ಮಾಡುವ ಆಸೆ ಇದೆ: ಸತೀಶ್ ನೀನಾಸಂ

ಐಶ್ವರ್ಯಾ ವಿವಾಹವಾಗಲಿರುವ ಉಮಾಪತಿ ರಾಮಯ್ಯ ಸಹ ಸಿನಿಮಾ ನಟರೇ ಆಗಿದ್ದಾರೆ. 2017ರಲ್ಲಿ ನಾಯಕ ನಟನಾಗಿ ಎಂಟ್ರಿ ಕೊಟ್ಟ ಉಮಾಪತಿ ರಾಮಯ್ಯ, 2021ರ ವರೆಗೆ ನಾಲ್ಕು ಸಿನಿಮಾಗಳಲ್ಲಿ ಮಾತ್ರವೇ ನಟಿಸಿದ್ದಾರೆ. ಸರ್ವೈವರ್ ತಮಿಳ್ ಎಂಬ ರಿಯಾಲಿಟಿ ಶೋನಲ್ಲಿಯೂ ಭಾಗವಹಿಸಿದ್ದರು. ಆದರೆ ಅವರಿಗೆ ದೊಡ್ಡ ಯಶಸ್ಸು ಈವರೆಗೆ ಲಭ್ಯವಾಗಿಲ್ಲ. ಇನ್ನು ನಿಶ್ಚಿತಾರ್ಥದ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ನಿಶ್ಚಿತಾರ್ಥ ಸಮಾರಂಭವನ್ನು ಎರಡು ಕುಟುಂಬ ಸದಸ್ಯರ ಸಮ್ಮುಖದಲ್ಲಿ ಮಾಡಲಾಗಿದೆ.

ನಮ್ಮತನ ಇರುವ ನಮ್ಮ ಸಿನಿಮಾ ಟಗರು ಪಲ್ಯ: ಅಮೃತಾ ಪ್ರೇಮ್

ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಸರ್ಜಾ ನಟಿಯಾಗಿದ್ದು 2013 ರಲ್ಲಿ ತಮಿಳಿನ ‘ಪಟ್ಟತ್ತು ಯಾನೈ’ ಸಿನಿಮಾ ಮೂಲಕ ನಟನೆಗೆ ಎಂಟ್ರಿ ನೀಡಿದರು. 2018 ರಲ್ಲಿ ಕನ್ನಡದ ‘ಪ್ರೇಮ ಬರಹ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಇದೇ ಸಿನಿಮಾ ತಮಿಳಿನಲ್ಲಿ ‘ಸೊಲ್ಲಿವಿಡುವಾ’ ಹೆಸರಿನಲ್ಲಿ ಬಿಡುಗಡೆ ಆಯ್ತು. ಸಿನಿಮಾವನ್ನು ಸ್ವತಃ ಅರ್ಜುನ್ ಸರ್ಜಾ ನಿರ್ದೇಶನ ಮಾಡಿ ನಿರ್ಮಾಣವನ್ನೂ ಮಾಡಿದ್ದರು. ಆದರೆ ಆ ಸಿನಿಮಾದ ಬಳಿಕ ಐಶ್ವರ್ಯಾ ಯಾವುದೇ ಸಿನಿಮಾದಲ್ಲಿಯೂ ನಟಿಸಲಿಲ್ಲ. ಐಶ್ವರ್ಯಾ ಹಾಗೂ ಉಮಾಪತಿ ಅವರುಗಳು ಶೀಘ್ರವೇ ವಿವಾಹವಾಗಲಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Darshan Vs Sudeep War: ಅವ್ರಿಗೆ ಪಾಪ ಏನು ನೋವಿದ್ಯೋ ಗೊತ್ತಿಲ್ಲ- ಸುದೀಪ್​ ರಿಯಾಕ್ಷನ್​ಗೆ ಎಲ್ಲರೂ ಗಪ್​ಚುಪ್​!
ಅಂದು ನಡೆದ ಘಟನೆ ಬಳಸ್ಕೊಂಡು, ದೇಶ-ವಿದೇಶದಲ್ಲಿ ಉದ್ಯಮ ಮಾಡಿ ಗೆದ್ದ Bigg Boss ಸ್ಪರ್ಧಿ! ಯಾರದು?