
ನಟ ವಿಷ್ಣು ಮಂಚು ನ್ಯೂಜಿಲ್ಯಾಂಡ್‌ನಲ್ಲಿ ಶೂಟಿಂಗ್ ವೇಳೆ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಭಕ್ತ ಕಣ್ಣಪ್ಪ ಚಿತ್ರದ ಶೂಟಿಂಗ್ ವೇಳೆ ಈ ಅವಘಡ ನಡೆದಿದ್ದು, ಡ್ರೋನ್ ಬಂದು ನಟ ವಿಷ್ಣು ಕೈಗೆ ಢಿಕ್ಕಿ ಹೊಡೆದು ಗಂಭೀರ ಗಾಯವಾಗಿದೆ ಎನ್ನಲಾಗಿದೆ. ತಕ್ಷಣವೇ ಶೂಟಿಂಗ್ ನಿಲ್ಲಿಸಿ ವಿಷ್ಣು ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಇತ್ತೀಚೆಗೆ ಕಾಳಹಸ್ತಿ ಪುಣ್ಯಕ್ಷೇತ್ರದಲ್ಲಿ ಪೂಜೆ ನೆರವೇರಿಸಿ ಶೂಟಿಂಗ್ ಶುರು ಮಾಡಲಾಗಿತ್ತು. ಭಕ್ತ ಕಣ್ಣಪ್ಪ ಚಿತ್ರವು ನಟ ವಿಷ್ಣು ಮಂಚು ಅವರ ಕನಸಿನ ಪ್ರಾಜೆಕ್ಟ್ ಎನ್ನಲಾಗಿದೆ.
ನ್ಯೂಜಿಲ್ಯಾಂಡ್‌ನಲ್ಲಿ ಆಕ್ಷನ್ ಸನ್ನಿವೇಶದ ವೇಳೆ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದ ನಟ ವಿಷ್ಣು ಮಂಚುಗೆ ಡ್ರೋನ್ ಬಂದು ಕೈಗೆ ಢಿಕ್ಕಿ ಹೊಡೆದಿದ್ದು, ಗಂಭೀರ ಗಾಯವಾಗಿದೆ ಎನ್ನಲಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇನ್ನಷ್ಟೇ ಸಿಗಬೇಕಿದೆ. ಈ ಚಿತ್ರದಲ್ಲಿ ನಟ ಪ್ರಭಾಸ್ ಹಾಗೂ ನಟಿ ನಯನತಾರಾ ಗೆಸ್ಟ್ ರೋಲ್‌ನಲ್ಲಿ ಕಾಣಿಸಿಕೊಳ್ಳಿದ್ದಾರೆ. ಈ ಮೊದಲು ನಯನತಾರಾ-ಪ್ರಭಾಸ್ ಜೋಡಿ 'ಯೋಗಿ' ಚಿತ್ರದಲ್ಲಿ ಒಟ್ಟಿಗೇ ಕಾಣಿಸಿಕೊಂಡಿತ್ತು.
ಫೈನಲಿಸ್ಟ್ ಹೆಸರು ಹೇಳಿಬಿಟ್ರಾ ಕಿಚ್ಚ ಸುದೀಪ್, ಸ್ಪರ್ಧಿಗಳಲ್ಲಿ ಆತಂಕ; ಮನೆಮನೆಯಲ್ಲಿ ಅದೇ ಸುದ್ದಿ!
ಪ್ರಭಾಸ್ ಮಾತ್ರವಲ್ಲ, ಮಲಯಾಳಂ ನಟ ಮೋಹನ್‌ಲಾಲ್, ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಹಾಗೂ ಬಾಲಿವುಡ್ ಹೀರೋ ಅಕ್ಷಯ್ ಕುಮಾರ್ ಸೇರಿದಂತೆ ಹಲವು ಖ್ಯಾತನಾಮರು ವಿಷ್ಣು ಮಂಚುರ ಮುಂಬರುವ ಭಕ್ತ ಕಣ್ಣಪ್ಪ ಚಿತ್ರದಲ್ಲಿ ನಟಿಸಲಿದ್ದಾರೆ. ಒಟ್ಟಿನಲ್ಲಿ, ನಾಯಕ ನಟ ವಿಷ್ಣು ಮಂಚು ಗಾಯಗೊಂಡಿರುವ ಕಾರಣಕ್ಕೆ ಸದ್ಯ ಭಕ್ತ ಕಣ್ಣಪ್ಪ ಚಿತ್ರದ ಶೂಟಿಂಗ್ ಸ್ಥಗಿತಗೊಂಡಿದ್ದು, ಮುಂದೆ ಯಾವಾಗ ಮತ್ತೆ ಪ್ರಾರಂಭವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ವಿಜಯ್ ಜೊತೆಗಿದ್ದ ರಶ್ಮಿಕಾಗೆ ಗೇಟ್ ಪಾಸ್, ದೇವರಕೊಂಡಗೆ ಸಾಕ್ಷಿ ವೈದ್ಯ ಹೊಸ ಜೋಡಿ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.