
ಬಾಲಿವುಡ್ ಸ್ಟಾರ್ ಫ್ಯಾಮಿಲಿ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಒಂದು ಕಡೆ ಸೋನಂ ಕಪೂರ್ ಬ್ಯೂಟಿ ಬಗ್ಗೆ ಮಾತು ಶುರುವಾದರೆ, ಮತ್ತೊಂದು ಕಡೆ ರಿಯಾ ಕಪೂರ್ ಫ್ಯಾಷನ್ ಸೆನ್ಸ್ ಎಲ್ಲರ ಗಮನ ಸೆಳೆಯುತ್ತಿದೆ. ಟ್ಯಾಲೆಂಟೆಡ್ ಪುತ್ರಿಯರ ಜೊತೆ ಅನಿಲ್ ಕಪೂರ್ ದಂಪತಿ ಆಫ್ ಸ್ಕ್ರೀನ್ ಇದ್ದರೂ ಲೈಮ್ ಲೈಟ್‌ನಲ್ಲಿ ಇರುತ್ತಾರೆ.
ಕೆಲವು ದಿನಗಳ ಹಿಂದೆ ಕುಟುಂಬಕ್ಕೆ ಪುಟ್ಟ ನಾಯಿ ಮರಿಯನ್ನು ಬರ ಮಾಡಿಕೊಂಡ ರಿಯಾ ಕಪೂರ್ 'Russel crowe' ಎಂದು ನಾಮಕರಣ ಮಾಡಿದ್ದಾರೆ. ತಂದೆ ಅನಿಲ್ ಕಪೂರ್ ಜೊತೆ ರಸೇಲ್ ಇರುವ ಫೋಟೋವನ್ನು ಶೇರ್ ಮಾಡಿಕೊಂಡು 'ನಮ್ಮ ಕುಟುಂಬಕ್ಕೆ ಹೊಸ ಅಥಿತಿ ಬಂದಿದ್ದಾರೆ. ರಸೇಲ್ ಕ್ರೋಯಿ ಎಂದು. ಕೇವಲ 55 ದಿನಗಳ ಈ ತುಂಟ ಈಗಾಗಲೇ ಮನೆಯಲ್ಲಿ ಓಡಾಡಿಕೊಂಡು, ಎಲ್ಲರ ಪ್ರೀತಿ ಗಳಿಸಿದ್ದಾನೆ. ಮೊದಲೆರಡು ದಿನ ಅವನಿಗೆ ಜ್ವರ ಬಂದಿತ್ತು ನಾನು ಪುಟ್ಟ ಹುಡುಗಿಯಂತೆ ದಿನ ಅಳುತ್ತಾ ಅವನ ಆರೈಕೆ ಮಾಡುತ್ತಿದ್ದೆ. ಈಗ ಆರೋಗ್ಯವಾಗಿದ್ದಾನೆ,' ಎಂದು ರಿಯಾ ಕಪೂರ್ ಇನ್‌ಸ್ಟಾಗ್ರಾಂನಲ್ಲಿ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.
ಸೋನಮ್ ಕಪೂರ್ ಪ್ರೆಗ್ನೆಂಟಾ ಕೇಳ್ತಿದ್ದಾರೆ ಫ್ಯಾನ್ಸ್!
Daughter's Day ಪ್ರಯುಕ್ತ ಅನಿಲ್ ಕಪೂರ್ ಇಬ್ಬರು ಹೆಣ್ಣು ಮಕ್ಕಳ ಜೊತೆ ಫೋಟೋ ಶೇರ್ ಮಾಡಿಕೊಂಡಿದ್ದರು. 'ನನ್ನ ಶಕ್ತಿ, ನನ್ನ ಆಧಾರ ಸ್ತಂಭ ನನ್ನ ಹೆಣ್ಣು ಮಕ್ಕಳು. ನನ್ನ ಜೀವನವನ್ನು ಸುಂದರಗೊಳಿಸಿದ್ದಕ್ಕೆ ನಿಮಗೆ ಧನ್ಯವಾದಗಳು. ದೊಡ್ಡ ಮಟ್ಟಕ್ಕೆ ಹಸರು ಮಾಡಿ ಸಾಧನೆ ಮಾಡಿರುವುದನ್ನು ನೋಡಲು ನನಗೆ ಹೆಮ್ಮೆ, ನನ್ನ ಸಂತೋಷ. ಐ ಲವ್ ಯು' ಎಂದು ಬರೆದುಕೊಂಡಿದ್ದರು.
ಎವರ್ ಯಂಗ್ ನಟ 63 ವರ್ಷದ ಅನಿಲ್ ಕಪೂರ್ ಲಕ್ಷುರಿಯಸ್ ಬಂಗಲೆ ಇದು
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.