ಭಗತ್‌ಸಿಂಗ್‌ ಸ್ಮರಣೆ ಮಾಡಿದ ಕಂಗನಾ ಹಂಚಿಕೊಂಡ ಗೀತೆ

Published : Sep 28, 2020, 02:53 PM IST
ಭಗತ್‌ಸಿಂಗ್‌ ಸ್ಮರಣೆ ಮಾಡಿದ ಕಂಗನಾ ಹಂಚಿಕೊಂಡ ಗೀತೆ

ಸಾರಾಂಶ

ಸ್ವಾತಂತ್ರ್ಯ ಸೇನಾನಿಯನ್ನು ನೆನೆದ ಕಂಗನಾ ರಣಾವತ್/ ಸ್ವಾತಂತ್ರ್ಯ ಸೇನಾನಿ ಭಗತ್ ಸಿಂಗ್  113 ನೇ ಜನ್ಮ ದಿನಾಚರಣೆ/ ಗೀತೆಯ ಸಾಲುಗಳನ್ನು ಶೇರ್ ಮಾಡಿಕೊಂಡ ನಟಿ/ ಲತಾ ಮಂಗೇಶ್ಕರ್  ಅವರಿಗೂ ಶುಭಾಶಯ

ಮುಂಬೈ(ಸೆ. 28)  ಸ್ವಾತಂತ್ರ್ಯ ಸೇನಾನಿ ಭಗತ್ ಸಿಂಗ್  113 ನೇ ಜನ್ಮ ದಿನಾಚರಣೆಯ ಸಂದರ್ಭ ನಟಿ ಕಂಗನಾ ರಣಾವತ್ ಗೌರವ ಸಲ್ಲಿಕೆ ಮಾಡಿದ್ದಾರೆ.

'ಮೇರಾ ರಂಗ್ ದೇ ಬಸಂತಿ ಚೋಲಾ ಓ ಮೇರಾ ರಂಗ್ ದೇ ಬಸಂತಿ'  ಎಂಬ ಗೀತೆಯ ಸಾಲುಗಳನ್ನು ಹಂಚಿಕೊಂಡು ನಮನ ಸಲ್ಲಿಸಿದ್ದಾರೆ. ಭಗತ್ ಸಿಂಗ್  ಅವರಿಗೆ ಗೌರವ ಸಲ್ಲಿಸಿ ಹಿರಿಯ ಗಾಯಕಿ ಲತಾ ಮಂಗೇಶ್ಕರ್ ಅವರಿಗೂ ಜನ್ಮದಿನದ ಶುಭಾಶಯ ಕೋರಿದ್ದಾರೆ. 

ರೈತರ ಬಗ್ಗೆ ಹೇಳಿಕೆ ನೀಡಿದ ಕಂಗನಾ ವಿರುದ್ಧ ಕ್ರಿಮಿನಲ್ ಕೇಸ್

ಲತಾ ಅವರಿಗೆ ಜನ್ಮದಿನದ ಶುಭಾಶಯ. ಕೆಲವರು ತಮ್ಮ ಕೆಲಸದಿಂದ ಮಾತ್ರ ಜನಮನ್ನಣೆ ಗಳಿಸುವುದಿಲ್ಲ. ಆ ಕೆಲಸದ ಮೇಲಿನ ಶ್ರದ್ಧೆ ಮತ್ತು ಪರಿಶ್ರಮ ಅವರನ್ನು ಅಲ್ಲಿಗೆ ಕೊಂಡೊಯ್ಯುತ್ತದೆ ಎಂದು ಹೇಳಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿರುವ ಕಂಗನಾ ಸುಶಾಂತ್ ಸಿಂಗ್ ರಜಪೂತ್ ಮತ್ತು ಬಾಲಿವುಡ್ ಡ್ರಗ್ಸ್ ಪ್ರಕರಣದಲ್ಲಿ ಮಹಾರಾಷ್ಟ್ರ ಸರ್ಕಾರವನ್ನೇ  ಎದುರು ಹಾಕಿಕೊಂಡಿದ್ದರು.

 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನನ್ನ ಅರ್ಧ ವಯಸ್ಸಿನ ಹುಡುಗರು ಡೇಟಿಂಗ್‌ಗೆ ಕರೀತಿದ್ದಾರೆ.. 50 ಆದ್ರೂ ಮದುವೆಗೆ ರೆಡಿ: ನಟಿ ಅಮೀಶಾ ಪಟೇಲ್
ಬಾಲಯ್ಯರಿಂದ ಅನಿರೀಕ್ಷಿತ ಸರ್ಪ್ರೈಸ್.. ಅಖಂಡ 2 ಹೊಸ ರಿಲೀಸ್ ಡೇಟ್ ಫಿಕ್ಸ್: ಈ ಚಿತ್ರಗಳಿಗೆ ದೊಡ್ಡ ಹೊಡೆತ