ಕಣ್ಣುಗಳು ಮಂಜಾಗುತ್ತಿದೆ, ದೃಷ್ಟಿದೋಷ ಬಂದಿದೆ ; ಆತಂಕ ವ್ಯಕ್ತಪಡಿಸಿದ ಅಮಿತಾಬಚ್ಚನ್

Suvarna News   | Asianet News
Published : Apr 12, 2020, 11:18 AM IST
ಕಣ್ಣುಗಳು ಮಂಜಾಗುತ್ತಿದೆ, ದೃಷ್ಟಿದೋಷ ಬಂದಿದೆ ; ಆತಂಕ ವ್ಯಕ್ತಪಡಿಸಿದ ಅಮಿತಾಬಚ್ಚನ್

ಸಾರಾಂಶ

ಬಾಲಿವುಡ್ ಹಿರಿಯ ನಟ ಅಮಿತಾಬಚ್ಚನ್ ವಯೋಸಹಜವಾಗಿ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಬಗ್ಗೆ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ. 

ಬಾಲಿವುಡ್ ಬಿಗ್‌ ಬಿ ಅಮಿತಾಬಚ್ಚನ್ ವಯೋಸಹಜವಾಗಿ ದೃಷ್ಟಿ ದೋಷ ಸಮಸ್ಯೆ ಕಂಡು ಬಂದಿದೆಯಂತೆ. ನನ್ನ ಕಣ್ಣುಗಳು ಎಲ್ಲಿ ಕುರಿಡಾಗಿ ಬಿಡುತ್ತದೋ ಎಂದು ಭಯವಾಗುತ್ತಿದೆ ಎಂದು ಅಮಿತಾಬಚ್ಚನ್ ಆತಂಕ ವ್ಯಕ್ತಪಡಿಸಿದ್ದಾರೆ. 

ನನ್ನ ಕಣ್ಣುಗಳು ಮಂಜಾಗುತ್ತಿದೆ. ಒಂದು ಅಕ್ಷರ ನೋಡಿದ್ರೆ ಎರಡು ಅಕ್ಷರ ನೋಡಿದಂತೆ ಭಾಸವಾಗುತ್ತದೆ. ನನಗೆ ಕಣ್ಣಿನ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ' ಎಂದು ನನಗರ್ಥವಾಗುತ್ತಿದೆ ಎಂದು ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ. 

ಲಾಕ್‌ಡೌನ್ ಮುಗಿಯೋದೇ ತಡ ಸನ್ನಿಗೆ ಈ ಕೆಲಸ ಮಾಡೋದಕ್ಕೆ ಅವಸರ ಆಗಿದೆಯಂತೆ!

ನಾನು ಚಿಕ್ಕವನಿದ್ದಾಗ ಕಣ್ಣಿಗೇನಾದ್ರು ತೊಂದರೆಯಾದ್ರೆ ಅಮ್ಮ ಸೀರೆಯ ಅಂಚಿನಿಂದ ಮೃದುವಾಗಿ ಒರೆಸುತ್ತಿದ್ದಳು. ಒಮ್ಮೆ ಕಣ್ಣಿಗೆ ಜೋರಾಗಿ ಗಾಳಿ ಊದುತ್ತಿದ್ದಳು. ಬಿಸಿ ನೀರಿಗೆ ಟವೆಲ್ ಅದ್ದಿ ಕಣ್ಣಿನ ಸುತ್ತ ಇಡುತ್ತಿದ್ದಳು' ಎಂದು ಬಾಲ್ಯದ ದಿನಗಳನ್ನು ನೆನೆಸಿಕೊಂಡಿದ್ದಾರೆ. 

ನಾನು ವೈದ್ಯರನ್ನು ಸಂಪರ್ಕಿಸಿದೆ. 'ಹೆದರಬೇಡಿ. ನೀವು ಕುರುಡಾಗುವುದಿಲ್ಲ. ಜಾಸ್ತಿ ಸ್ಕ್ರೀನ್ ನೋಡುವುದರಿಂದ ಹೀಗಾಗುತ್ತದೆ ಎಂದಿರುವುದಾಗಿ ಹೇಳಿದ್ದಾರೆ. 

ವೈದ್ಯರು ಕೊಟ್ಟಿರುವ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದೇನೆ. ತಾಸಿಗೊಮ್ಮೆ ಐ ಡ್ರಾಪ್ ಹಾಕಿಕೊಳ್ಳುತ್ತಿದ್ದೇನೆ. ಕಂಪ್ಯೂಟರ್, ಮೊಬೈಲನ್ನು ನೋಡುವುದನ್ನು ಬಿಟ್ಟಿದ್ದೇನೆ' ಎಂದಿದ್ದಾರೆ. 

ರಾಜ್‌ಕುಮಾರ್‌ ಪುಣ್ಯತಿಥಿ; ಮುತ್ತುರಾಜರ ಭಂಡಾರದಿಂದ ಮುತ್ತಿನ ಮಾತುಗಳು!

ಅಮಿತಾಬ್ 77 ರ ಇಳಿ ವಯಸ್ಸಿನಲ್ಲಿಯೂ ಸಿನಿಮಾಗಳಲ್ಲಿ ಸಕ್ರಿಯರಾಗಿದ್ದಾರೆ. ಸದ್ಯ ನಾಲ್ಕು ಸಿನಿಮಾಗಳಲ್ಲಿ ಬ್ಯಸಿಯಾಗಿದ್ದಾರೆ. ಚೆಹ್ರೆ, ಝಂಡ್, ಗುಲಾಬೋ ಸಿತಾಬೋ, ಬ್ರಹ್ಮಾಸ್ತ್ರ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಲಿಯಾ ಭಟ್, ರಣಬೀರ್ ಕಫೂರ್ ನಟನೆಯ ಬ್ರಹ್ಮಾಸ್ತ್ರ ಶೂಟಿಂಗ್ ಬಹುತೇಕ ಮುಕ್ತಾಯಗೊಂಡಿದೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಮಾಧುರಿಗೆ 'ನಿನ್ನನ್ನು ತಾಯಿಯಾಗಿ ನೋಡುತ್ತೇನೆ' ಎಂದಿದ್ದ ಎಂಎಫ್ ಹುಸೇನ್; ಆದ್ರೆ ಮುಂದೆ ಆಗಿದ್ದೇನು?
ಮದುವೆ ಮುರಿದುಬಿದ್ದ ಬಳಿಕ ಸ್ಮೃತಿ ಮಂಧಾನ-ಪಲಾಶ್ ಲೈಫ್‌ ಸ್ಟೈಲ್‌ನಲ್ಲಿ ಏನೆಲ್ಲಾ ಆಗೋಯ್ತು ನೋಡಿ...!