25 ಕೋಟಿ ರೂ ನೆರವಿನ ಬಳಿಕ ಮತ್ತೆ 3 ಕೋಟಿ ; ಅಕ್ಷಯ್ ಕುಮಾರ್‌ಗೆ ಯಾರೂ ಇಲ್ಲ ಸರಿಸಾಟಿ!

By Suvarna News  |  First Published Apr 11, 2020, 6:00 PM IST

ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಸರ್ಕಾರದ ಜೊತೆ ಕೈಜೋಡಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ ಬೆನ್ನಲ್ಲೇ ಬಾಲಿವುಡ್ ನಟ ಅಕ್ಷಯ್ ಕುಮಾರ್  ಬರೋಬ್ಬರಿ 25 ಕೋಟಿ ರೂಪಾಯಿ ನೀಡಿದ್ದರು.  ಇದರ ಬೆನ್ನಲ್ಲೇ  ಮುಂಬೈ ಮಹಾನಗರ ಪಾಲಿಕೆಗೆ ಕೋಟಿ ರೂಪಾಯಿ ನೀಡಿದ್ದಾರೆ. 


ಮುಂಬೈ(ಏ.11): ಬಾಲಿವುಡ್ ಹಿರಿಯ ನಟ ಅಕ್ಷಯ್ ಕುಮಾರ್ ದೇಶದ ವಿಚಾರ ಬಂದಾಗ ಹಿಂದೂ ಮುಂದೂ ನೋಡದೆ ಅಖಾಡಕ್ಕೆ ಧುಮುಕತ್ತಾರೆ. ಭಯೋತ್ಪಾದಕರ ದಾಳಿಯಲ್ಲಿ ಮಡಿದ ವೀರ ಯೋಧರ ಕುಟುಂಬಕ್ಕೆ ನೆರವು, ನಿರ್ಗತಿಕರಿಗೆ ನೆರವು ಸೇರಿದಂತೆ ಹಲವು ಸಮಾಜಮುಖಿ ಕಾರ್ಯಗಳಿಂದಲೇ ಅಕ್ಷಯ್ ಕುಮಾರ್ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಇದೀಗ ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲೂ ಬಾಲಿವುಡ್ ನಟ ಇತರ ಎಲ್ಲರಿಗಿಂತಲೂ ಮುಂದಿದ್ದಾರೆ.

ಕೊರೋನಾ ಯುದ್ಧಕ್ಕೆ ಅಕ್ಷಯ್ 25 ಕೋಟಿ ರೂ, ಮನ ಗೆದ್ದಿತು ಪತ್ನಿಗೆ ನೀಡಿದ ಉತ್ತರ..

Latest Videos

undefined

ಕೊರೋನಾ ವೈರಸ್ ವಿರುದ್ಧ ಹೋರಾಟದಲ್ಲಿ ಸರ್ಕಾರದ ಜೊತೆ ಕೈಜೋಡಿಸಿರುವ ಅಕ್ಷಯ್ ಕುಮಾರ್ ಈಗಾಗಲೇ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಬರೋಬ್ಬರಿ 25 ಕೋಟಿ ರೂಪಾಯಿ ನೀಡಿದ್ದಾರೆ. ಇಷ್ಟೇ ಅಲ್ಲ, ಸರ್ಕಾರಕ್ಕೆ ಎಲ್ಲಾ ರೀತಿಯಲ್ಲೂ ಸಹಕಾರ ನೀಡಲು ಬದ್ಧ ಎಂದಿದ್ದಾರೆ. ಇದರ ಬೆನ್ನಲ್ಲೇ ಅಕ್ಷಯ್ ಕುಮಾರ್ ಮುಂಬೈ ಮಹಾನಗರ ಪಾಲಿಕೆಗೆ 3 ಕೋಟಿ ರೂಪಾಯಿ ನೀಡಿದ್ದಾರೆ.

ಉದ್ಯಮಿ ಆನಂದ್ ಮಹೀಂದ್ರ ಗಮನಸೆಳೆದ ಕಿಲಾಡಿ ಅಕ್ಷಯ್ ಕುಮಾರ್ ನಡೆ!

ಕೊರೋನಾ ವಿರುದ್ಧ ಹೋರಾಡುತ್ತಿರುವ ವೈದ್ಯರು, ನರ್ಸ್ ಸೇರಿದಂತೆ ಆಸ್ಪತ್ರೆ ಸಿಬ್ಬಂದಿಗಳ ಪಿಪಿಇ ಕಿಟ್, ಮಾಸ್ಕ್ ಹಾಗೂ ರ್ಯಾಪಿಡ್ ಟೆಸ್ಟ್ ಕಿಟ್ ಖರೀದಿಗೆ ಅಕ್ಷಯ್ ಕುಮಾರ್ 3 ಕೋಟಿ ರೂಪಾಯಿ ನೀಡಿದ್ದಾರೆ. ಮುಂಬೈ ಹಾಗೂ ಮಹಾರಾಷ್ಟ್ರದಲ್ಲಿ ಕೊರೋನಾ ಪರಿಸ್ಥಿತಿ ಗಂಭೀರವಾಗಿದೆ. ದೇಶದಲ್ಲಿ ಅತೀ ಹೆಚ್ಚು ಪ್ರಕರಣಗಳು ಮಹಾರಾಷ್ಟ್ರದಲ್ಲಿ ದಾಖಲಾಗಿದೆ. ಇಷ್ಟೇ ಅಲ್ಲ ಕಿಟ್, ಮಾಸ್ಕ್, ಸ್ಯಾನಿಟೈಸರ್ ಇಲ್ಲದೆ ವೈದ್ಯರು, ಆಸ್ಪತ್ರೆ ಸಿಬ್ಬಂದಿಗಳಿಗೂ ಕೊರೋನಾ ವೈರಸ್ ತಗುಲಿದ ಊದಾಹರಣೆ ಮುಂಬೈನಲ್ಲಿದೆ.

ಇದನ್ನು ಅರಿತ ಅಕ್ಷಯ್ ಕುಮಾರ್ ತಕ್ಷಣವೇ 3 ಕೋಟಿ ರೂಪಾಯಿ ನೀಡಿದ್ದಾರೆ. ಈ ಮೂಲಕ ಬಾಲಿವುಡ್ ನಟ ಅಕ್ಕಿಗೆ ಸರಿಸಾಟಿ ಯಾರೂ ಇಲ್ಲ ಅನ್ನೋದನ್ನು ಮತ್ತೆ ಸಾಬೀತು ಮಾಡಿದ್ದಾರೆ. ಹಣ ಮಾತ್ರವಲ್ಲ ಲಾಕ್‌ಡೌನ್ ಸಮಯದಲ್ಲಿ ಒಂದು ಹೊತ್ತಿನ ಊಟಕ್ಕೆ ಪರದಾಡುತ್ತಿರುವ ನಿರ್ಗತಿಕರಿಗೆ  ಅಕ್ಷಯ್ ಕುಮಾರ್ ನೆರವಾಗುತ್ತಿದ್ದಾರೆ.

click me!