ಮದುವೆ ಬಳಿಕ ಸೀಸನ್ ಸಂಬಂಧ ಕುರಿತು ಮಾತನಾಡಿದ ವಿದ್ಯಾ ಬಾಲನ್; ಏನಿದರ ಒಳಗುಟ್ಟು?

By Shriram Bhat  |  First Published May 15, 2024, 11:45 AM IST

ಮಲಯಾಳಂ ಮೂಲದ ನಟಿ ವಿದ್ಯಾ ಬಾಲನ್ ಅವರು ತಮ್ಮ ವೃತ್ತಿ ಜೀವನದ ಶುರುವಿನಲ್ಲಿ ಮಾತೃಭಾಷೆ ಮಲಯಾಳಂ ಸಿನಿಮಾಗಳಲ್ಲಿ ಮಾತ್ರ ನಟಿಸುತ್ತಿದ್ದರು. ಆದರೆ, ಬಳಿಕ ಅವರು 'ದಿ ಡರ್ಟಿ ಪಿಕ್ಚರ್' ಸಿನಿಮಾ ಮೂಲಕ ಬಾಲಿವುಡ್‌ನಲ್ಲಿ ಸಖತ್ ಮಿಂಚಿದ್ದರು.


ಬಾಲಿವುಡ್‌ನಲ್ಲಿ ಹೆಸರು ಮಾಡಿರುವ ಮಲಯಾಳಂ ಮೂಲದ ನಟಿ ವಿದ್ಯಾ ಬಾಲನ್ (Vidya Balan) ಅವರು ಲೈಫ್‌ ಸೀಕ್ರೆಟ್‌ ಕುರಿತು ಮಾತನಾಡಿದ್ದಾರೆ. ನಟಿ ವಿದ್ಯಾ ಬಾಲನ್ ಸದ್ಯ ಮದುವೆಯಾಗಿ ಪತಿಯೊಂದಿಗೆ ಸುಖ ಸಂಸಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಈಗ ವಿದ್ಯಾ ಬಾಲನ್ ಸಕ್ರಿಯರಾಗಿಲ್ಲ. ಆದರೆ, ಆಗಾಗಾ ಕೇಳಿಕೊಂಡು ಬಂದವರಿಗೆ ಸಂದರ್ಶನ ಕೊಡುತ್ತ ಕೇಳಿದ ಪ್ರಶ್ನೆಗೆ ತಮ್ಮದೇ ಆದ ರೀತಿಯಲ್ಲಿ ಮಾರ್ಮಿಕವಾಗಿ ಉತ್ತರ ಕೊಡುತ್ತ ಇರುತ್ತಾರೆ. ಇಲ್ಲಿ ನಟಿ ವಿದ್ಯಾ ಬಾಲನ್ ಕೇಳಿರುವ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದ್ದಾರೆ. 

'ಕೆಲವರು ನಿಮ್ಮ ಜೀವನದಲ್ಲಿ ಕೆಲವೊಂದು ಕಾರಣಕ್ಕಾಗಿ ಬರುತ್ತಾರೆ. ಕೆಲವರು ಸೀಸನ್‌ನಂತೆ ಆಗಾಗ ಬಂದು ಹೋಗುತ್ತಾರೆ, ಇನ್ನೂ ಕೆಲವರು ಲೈಫ್ ಟೈಮ್‌ ನಿಮ್ಮ ಜತೆ ಉಳಿಯುತ್ತಾರೆ. ಸೀಸನ್‌, ರೀಸನ್ ಹಾಗು ಲೈಫ್ ಟೈಮ್ ಹೀಗೆ ವಿವಿಧ ರೀತಿಯಲ್ಲಿ ಜನರು ನಿಮ್ಮ ಜೀವನದಲ್ಲಿ ಎಂಟ್ರಿ ಕೋಡುತ್ತಾರೆ. ಕೆಲವೊಮ್ಮೆ ನಿಮ್ಮೊಂದಿಗೆ ಕೆಟ್ಟ ರೀತಿಯಲ್ಲಿ ನಡೆದುಕೊಂಡು ನಿಮ್ಮ ಬೇಸರಕ್ಕೆ ಕೆಲವರು ಕಾರಣರಾಗಿರುತ್ತಾರೆ. ಆದರೆ, ಆ ಬ್ರೋಕನ್ ಹಾರ್ಟ್‌ನೊಂದಿಗೆ ನೀವು ಅವರ ಜತೆ ಸಂಬಂಧ ಮುಂದುವರೆಸುತ್ತೀರೋ ಅಥವಾ ಇಲ್ಲವೋ ಎಂಬುದು ನಿಮಗೆ ಬಿಟ್ಟಿದ್ದು' ಎಂದಿದ್ದಾರೆ ವಿದ್ಯಾ ಬಾಲನ್. 

Tap to resize

Latest Videos

ಲೈಫ್‌ನಲ್ಲಿ ಯಾವುದು ತುಂಬಾ ಮುಖ್ಯ ಎಂಬ ಸೀಕ್ರೆಟ್ ಹೇಳಿದ ಅಲ್ಲು ಅರ್ಜುನ್!

ಮಲಯಾಳಂ ಮೂಲದ ನಟಿ ವಿದ್ಯಾ ಬಾಲನ್ ಅವರು ತಮ್ಮ ವೃತ್ತಿ ಜೀವನದ ಶುರುವಿನಲ್ಲಿ ಮಾತೃಭಾಷೆ ಮಲಯಾಳಂ ಸಿನಿಮಾಗಳಲ್ಲಿ ಮಾತ್ರ ನಟಿಸುತ್ತಿದ್ದರು. ಆದರೆ, ಬಳಿಕ ಅವರು 'ದಿ ಡರ್ಟಿ ಪಿಕ್ಚರ್' (The dirty Picture) ಸಿನಿಮಾ ಮೂಲಕ ಬಾಲಿವುಡ್‌ನಲ್ಲಿ ಸಖತ್ ಮಿಂಚಿದ್ದರು. ಭೂಲ್‌ ಬೂಲಯ್ಯ, ಕಹಾನಿ, ಬೇಗಂ ಜಾನ್, ಶಕುಂತಲಾ ದೇವಿ, ಪರಿಣೀತಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿ ಇಡೀ ಭಾರತದಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. ನಟಿ ವಿದ್ಯಾ ಬಾಲನ್ ಅವರು ಹೀರೋಯಿನ್ ಓರಿಯಂಟೆಡ್ ಸಿನಿಮಾ 'ಕಹಾನಿ'ಯಲ್ಲಿ ನಟಿಸಿ, ಸಿನಿಮಾ ಸೂಪರ್ ಹಿಟ್ ದಾಖಲಿಸಲು ಕಾರಣರಾಗಿದ್ದಾರೆ. 

ಸಾನ್ಯಾ ಅಯ್ಯರ್ ಜೊತೆ ಬಿಎಂಎಸ್ ಕಾಲೇಜಿನಲ್ಲಿ ಲುಕ್ ಕೊಟ್ಟಿದ್ದೇಕೆ ಸಮರ್ಜಿತ್ ಲಂಕೇಶ್!

ಅಂದಹಾಗೆ, ನಟಿ ವಿದ್ಯಾ ಬಾಲನ್  2012ರಲ್ಲಿ ಸಿದ್ಧಾರ್ಥ್ ರಾಯ್ ಕಪೂರ್ ಅವರನ್ನು ಮದುವೆಯಾಗಿ ಸದ್ಯ ಸಂಸಾರ ಸಾಗರದಲ್ಲಿ ಬ್ಯುಸಿಯಾಗಿದ್ದಾರೆ. ಕೆಲವು ಈವೆಂಟ್, ಇಂಟರ್‌ವ್ಯೂಗಳು ಹಾಗೂ ವೇದಿಕೆಗಳಲ್ಲಿ ತಮ್ಮ ವೃತ್ತಿಜೀವನ ಹಾಗೂ ವೈಯಕ್ತಿಕ ಜೀವನದ ಅನುಭವಗಳನ್ನು ಹೇಳುತ್ತ ಹಲವರ ಪಾಲಿಗೆ ಸ್ಪೂರ್ತಿಯ ಸೆಲೆಯಾಗಿದ್ದಾರೆ ನಟಿ ವಿದ್ಯಾ ಬಾಲನ್. 

ವಿಜಯ್ ದೇವರಕೊಂಡ ಕೂಲ್ ಮ್ಯಾನ್, ರೌಡಿ ಅಲ್ಲ; ವೈರಲ್ ಆಯ್ತು ಮೃಣಾಲ್ ಠಾಕೂರ್ ಮಾತು!

click me!