ನಿನ್ನೆಯವರೆಗೆ ರಸ್ತೆಗಳ ಮೇಲೆ ವಿವಿಧ ರೀತಿಯ ವೇಷ ತೊಟ್ಟು ಕುಣಿದು ಕುಪ್ಪಳಿಸುತ್ತಿದ್ದ ನಟಿ ರಾಖಿ ಸಾವಂತ್ ಏಕಾಏಕಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ನೆಟ್ಟಿಗರು, ಅಭಿಮಾನಿಗಳು ಹೇಳ್ತಿರೋದೇನು?
ಡ್ರಾಮಾ ಕ್ವೀನ್ ಎಂದೇ ಫೇಮಸ್ ಆಗಿರೋ, ಇತ್ತೀಚಿನ ದಿನಗಳಲ್ಲಿ ನೆಗೆಟಿವ್ ಮೂಲಕವೇ ಸಕತ್ ಸದ್ದು ಮಾಡುತ್ತಿರುವ, ದಿನವೊಂದಕ್ಕೆ ಹೊಸ ಹೊಸ ವೇಷ ತೊಟ್ಟು ಜನರ ಮುಂದೆ ಬರುತ್ತಿರುವ ಬಾಲಿವುಡ್ ನಟಿ, ದಿಢೀರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಹಸ್ರಾರು ಪಡ್ಡೆ ಹುಡುಗರ ನಿದ್ದೆ ಕದಿಯುತ್ತಿರುವ ಹಾಟ್ ಬೆಡಗಿ ರಾಖಿಗೆ ಹೃದಯ ಸಂಬಂಧಿ ಸಮಸ್ಯೆ ಇರುವುದಾಗಿ ಹೇಳಲಾಗುತ್ತಿದೆ. ರಾಖಿಗೆ ನಿಖರವಾಗಿ ಏನಾಯಿತು ಎಂಬುದು ಇನ್ನೂ ತಿಳಿದಿಲ್ಲ, ಆದರೆ ವರದಿಯ ಪ್ರಕಾರ , ಅವರು ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಪತ್ರಕರ್ತರು ರಾಖಿಯನ್ನು ಸಂಪರ್ಕಿಸಿದಾಗ, ಸದ್ಯ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ. ವೈದ್ಯರು ಕೆಲ ದಿನಗಳ ರೆಸ್ಟ್ ಹೇಳಿರುವುದಾಗಿ ತಿಳಿದುಬಂದಿದೆ.
ರಾಖಿಗೆ ನಿಜವಾಗಿ ಏನಾಗಿದೆ ಎಂದು ತಿಳಿದಿಲ್ಲ. ಆದರೆ ಸದಾ ಡ್ರಾಮಾ ಮೂಲಕವೇ ಫೇಮಸ್ ಆಗಿರೋ ನಟಿ, ಅದರಲ್ಲಿಯೂ ಕಳೆದ ಒಂದೆರಡು ವಾರಗಳಿಂದ ಹುಚ್ಚುಚ್ಚಾಗಿ ವರ್ತಿಸುತ್ತಿದ್ದ ನಟಿಯ ಫೋಟೋ ನೋಡಿದ ಹಲವು ನೆಟ್ಟಿಗರು ಇದು ಕೂಡ ಡ್ರಾಮಾ ಎನ್ನುತ್ತಿದ್ದಾರೆ. ಅಷ್ಟಕ್ಕೂ, ನಟಿ ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಬಂಧನದ ಭೀತಿಯನ್ನೂ ಎದುರಿಸುತ್ತಿದ್ದಾರೆ. ಮಾಜಿ ಪತಿ ಆದಿಲ್ ಖಾನ್ರ ಖಾಸಗಿ ವಿಡಿಯೋಗಳನ್ನು ಲೀಕ್ ಮಾಡಿದ ಆರೋಪ ಇವರ ಮೇಲಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ನಿಂದ ಬಂಧನದ ಭೀತಿ ಇವರಿಗಿದೆ. ಈ ಪ್ರಕರಣದಲ್ಲಿ ತನ್ನದೇನೂ ತಪ್ಪಿಲ್ಲ ಎಂದುಕೊಂಡು ಬುರ್ಖಾದಲ್ಲಿ ಕಾಣಿಸಿಕೊಂಡಿದ್ದ ರಾಖಿ ಈಚೆಗೆ, ಮೊದಲ ಪತಿ ರೀತೇಶ್ ಬಳಿ ಓಡಿ ಹೋಗಿದ್ದರು. ತಮ್ಮ ವಿರುದ್ಧ ಆದಿಲ್ ಖಾನ್ ದೂರು ದಾಖಲು ಮಾಡುತ್ತಿದ್ದಂತೆಯೇ ತಮ್ಮನ್ನು ಬಂಧಿಸುವ ಸಾಧ್ಯತೆ ಇದೆ ಎಂದುಕೊಂಡಿದ್ದ ರಾಖಿ, ತಮ್ಮನ್ನು ಬಂಧಿಸದಂತೆ ಕೋರಿ ನಿರೀಕ್ಷಣಾ ಜಾಮೀನು ಕೋರಿದ್ದರು. ಆದರೆ ಇವರ ಅರ್ಜಿ ತಿರಸ್ಕರಿಸಿರುವ ಸುಪ್ರೀಂಕೋರ್ಟ್ ನಾಲ್ಕು ವಾರಗಳಲ್ಲಿ ಸರೆಂಡರ್ ಆಗುವಂತೆ ಆದೇಶಿಸಿತ್ತು.
ಬುರ್ಖಾ ಮೊರೆ ಹೋಗಿದ್ದ ರಾಖಿಯಿಂದ ಟವಲ್ ಡ್ಯಾನ್ಸ್: ಎರಡು ಕಣ್ಣು ಸಾಲ್ತಿಲ್ಲ ಅಂತಿದ್ದಾರೆ ಅಭಿಮಾನಿಗಳು!
ಸಾಮಾನ್ಯವಾಗಿ ರಾಜಕಾರಣಿಗಳು, ಸೆಲೆಬ್ರಿಟಿಗಳು ಬಂಧನದ ಆದೇಶ ಹೊರಡುತ್ತಿದ್ದಂತೆಯೇ ಆಸ್ಪತ್ರೆಗೆ ದಾಖಲಾಗುವುದು ಮಾಮೂಲಾಗಿ ಬಿಟ್ಟಿದೆ. ಇದೇ ರೀತಿ ರಾಖಿ ಸಾವಂತ್ ಕೂಡ ಮಾಡಿದ್ದಾರೆ. ಸರೆಂಡರ್ ಆಗಬೇಕು ಎನ್ನುವ ಕಾರಣಕ್ಕೆ ಈ ರೀತಿ ಡ್ರಾಮಾ ಮಾಡುತ್ತಿದ್ದಾರೆ ಎಂದೇ ಹಲವರು ಹೇಳುತ್ತಿದ್ದಾರೆ. ಇದರ ಸತ್ಯಾಸತ್ಯತೆ ಇನ್ನಷ್ಟೇ ತಿಳಿಯಬೇಕಿದೆ. ನಿನ್ನೆಯಷ್ಟೇ ನಟಿ, ಆಟೋ ಒಂದರಲ್ಲಿ ಇಳಿದುಬಂದು ಟವಲ್ ಡ್ಯಾನ್ಸ್ ಮಾಡಿದ್ದರು. ಆಟೋದಲ್ಲಿ ಸಿಲುಕಿ ಹಾಕಿಕೊಂಡವರಂತೆ ಡ್ರಾಮಾ ಮಾಡಿದ್ದ ಅವರು, ಕೆಳಕ್ಕೆ ಇಳಿದು, ಟವಲ್ ಡ್ಯಾನ್ಸ್ ಮಾಡಿದ್ದರು. ಲುಂಗಿ ಡ್ಯಾನ್ಸ್ ಹಾಡಿನ ಬದಲು ಟವಲ್ ಡ್ಯಾನ್ಸ್ ಟವಲ್ ಡ್ಯಾನ್ಸ್ ಎನ್ನುತ್ತಾ ಕುಣಿದಾಡಿದ್ದರು. ಇವರಿಗೆ ಮೆಂಟಲ್ ಆಸ್ಪತ್ರೆಗೆ ಯಾಕೆ ಕಳಿಸ್ತಿಲ್ಲಾ ಎಂದು ಹಲವರು ಕೇಳುತ್ತಿದ್ದರು. ಆದರೆ ಇದೀಗ ದಿಢೀರ್ ಎಂದು ಹೃದಯ ಸಂಬಂಧಿ ಸಮಸ್ಯೆ ಎನ್ನಲಾಗಿದೆ. ಸುಪ್ರೀಂ ಕೋರ್ಟ್ ಆರ್ಡರ್ ಆದ್ರೂ ಇನ್ನೂ ಅರೆಸ್ಟ್ ಮಾಡಿಲ್ವಾ ಎಂದು ಇನ್ನು ಹಲವರು ಪ್ರಶ್ನಿಸಿದ್ದರು.
ಅಷ್ಟಕ್ಕೂ ವಿವಾದಗಳ ರಾಣಿ ರಾಖಿ ಸಾವಂತ್ ರಾಖಿ ಸಾವಂತ್ ಮೈಸೂರಿನ ಯುವಕ ಆದಿಲ್ ಖಾನ್ ಅವರನ್ನು ಮದುವೆಯಾಗಿ ಧರ್ಮ ಬದಲಿಸಿ ಫಾತಿಮಾ ಆಗಿದ್ದರು. ನಿಜವಾಗಿ ರಾಖಿ ತಾನು ಆದಿಲ್ ನನ್ನು ಮದುವೆಯಾಗಲು ಇಸ್ಲಾಂಗೆ ಮತಾಂತರಗೊಂಡಿರುವುದಾಗಿ ಹೇಳಿಕೊಂಡಿದ್ದರು. ಇಷ್ಟಾದರೂ ಗಂಡನ ವಿರುದ್ಧ ಇಲ್ಲಸಲ್ಲದ ಆರೋಪ ಹೊರಿಸಿ ಅವರನ್ನು ಜೈಲಿಗೆ ಕಳುಹಿಸಿದ್ದ ರಾಖಿ ಸಾವಂತ್, ಮೆಕ್ಕಾಕ್ಕೆ ಹೋಗಿ ಉಮ್ರಾ ನೆರವೇರಿಸಿದ್ದರು. ತಾವೀಗ ರಾಖಿ ಅಲ್ಲ, ಫಾತೀಮಾ (Phatima) ಎಂದು ಕರೆಯಿರಿ ಎಂದೂ ಈ ಸಂದರ್ಭದಲ್ಲಿ ಅವರು ಹೇಳಿದ್ದರು. ತಮ್ಮ ಹೆಸರನ್ನು ಫಾತೀಮಾ ಎಂದು ಬದಲಾಯಿಸಿಕೊಂಡಿರುವುದಾಗಿ ಹೇಳಿದ್ದರು. ಕೆಲ ದಿನಗಳ ಹಿಂದೆ ಈ ಡ್ರಾಮಾ ಕ್ವೀನ್ ಬಂದೂಕು ಹಿಡಿದು ದೇಶಕ್ಕಾಗಿ ಪ್ರಾಣ ಕೊಡಲೂ ಸಿದ್ಧ ಎನ್ನುವ ದಿಲ್ ದಿಯಾ ಹೈ ಜಾನ್ ಭೀ ದೇಂಗೆ ಹಾಡನ್ನು ಗುನುಗಿದ್ದರು. ಭಾರತೀಯ ಸೈನಿಕರ ಸಮವಸ್ತ್ರ ತೊಟ್ಟ ನಟಿಯನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ ನೆಟ್ಟಿಗರು. ಬಂದೂಕು ಹಿಡಿದು ಪ್ಯಾಲೆಸ್ತೀನ್ಗೆ ಹೋಗು. ಅಲ್ಲಿ ನಿನ್ನ ಜೀವ ಕೊಡು, ಹೇಗಿದ್ದರೂ ಮತಾಂತರಗೊಂಡಿರುವೆಯಲ್ಲ, ನಿನ್ನವರು ಅಲ್ಲಿ ಕಾಯುತ್ತಿದ್ದಾರೆ ಹೋಗು ಎಂದು ಹೇಳಿದ್ದರು. ಸೈನಿಕರ ಸಮವಸ್ತ್ರ ತೊಟ್ಟು ಅವರನ್ನು ಅವಮಾನ ಮಾಡಬೇಡ ಎಂದು ಹಲವರು ನಟಿಯ ವಿರುದ್ಧ ಕಿಡಿ ಕಾರಿದ್ದರು.
ಗಂಡನನ್ನೇ ಸಲಿಂಗ ಕಾಮಿ ಎಂದ ಗಾಯಕಿ, ನಾನು ಆಗಿದ್ರೆ.. ಎಂದ ನಟ ಕಾರ್ತಿಕ್