ತಪ್ಪು ಮಾಡಿದವರು ಯಾರೆಂದು ಗೊತ್ತು; ದೇವಸ್ಥಾನಕ್ಕೆ ಬಂದು ಸಲ್ಮಾನ್ ಖಾನ್ ಕ್ಷಮೆ ಕೋರಿದ್ರೆ ಮಾತ್ರ ಬಿಡೋದು ಎಂದು ನಟನಿಗೆ ಎಚ್ಚರಿಕೆ ನೀಡಲಾಗಿದೆ. ಏನಿದು ವಿಷಯ?
ನಟ ಸಲ್ಮಾನ್ ಖಾನ್ (Salman Khan) ಅವರ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನ ಹೊರಗಡೆ ಗುಂಡಿನ ದಾಳಿ ನಡೆದಿದ್ದು, ಇಂದಿಗೆ ಒಂದು ತಿಂಗಳಾಗಿದೆ. ಕಳೆದ ಏಪ್ರಿಲ್ 14ರಂದು ಈ ಘಟನೆ ಸಂಭವಿಸಿತ್ತು. ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ದಾಳಿ ಮಾಡಿದ್ದು ತಾವೇ ಎಂದು ಕುಖ್ಯಾತ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿ ಗುಂಪಿನವರು ಒಪ್ಪಿಕೊಂಡಿದ್ದಾರೆ. ಇದಾಗಲೇ ಓರ್ವ ಆರೋಪಿ ಜೈಲಿನಲ್ಲಿಯೇ ಆತ್ಮಹತ್ಯೆಯನ್ನೂ ಮಾಡಿಕೊಂಡಿದ್ದಾರೆ. ಸಲ್ಮಾನ್ ಖಾನ್ ಅವರಿಗೆ ಇದಾಗಲೇ ಲಾರೆನ್ಸ್ ಸಾಕಷ್ಟು ಬಾರಿ ಬೆದರಿಕೆ ಪತ್ರ ಕಳುಹಿಸಿದ್ದ. ಕೆಲವು ಬಾರಿ ನೇರವಾಗಿ ನಾನೂ ಈ ಕೃತ್ಯ ಮಾಡಿರುವುದಾಗಿಯೂ ಹೇಳಿದ್ದ. ಇದಾಗಲೇ ಕೊಲೆ ಬೆದರಿಕೆ ಹಿನ್ನೆಲೆಯಲ್ಲಿ, ನಟನಿಗೆ ಟೈಟ್ ಸೆಕ್ಯುರಿಟಿ ನೀಡಲಾಗಿದ್ದರೂ, ಈ ಘಟನೆಯಿಂದ ಸಲ್ಲು ಅಭಿಮಾನಿಗಳಿಗೆ ಆತಂಕದ ಸ್ಥಿತಿ ನಿರ್ಮಾಣವಾಗಿದೆ.
ಪದೇ ಪದೇ ಈ ರೀತಿ ಕೊಲೆ ಬೆದರಿಕೆ ಹಾಕುವುದನ್ನು ತಪ್ಪಿಸಬೇಕು, ಸಲ್ಮಾನ್ ಖಾನ್ರನ್ನು ಕ್ಷಮಿಸಬೇಕು ಎಂದು ಅವರು ದೇವಸ್ಥಾನಕ್ಕೆ ಬಂದು ಎಲ್ಲರ ಎದುರು ಕ್ಷಮೆ ಕೋರಬೇಕು. ಅದನ್ನು ನಾವು ಮಾನ್ಯ ಮಾಡುತ್ತೇವೆ. ಅವರಿಗೆ ಯಾವುದೇ ತೊಂದರೆ ಕೊಡುವುದಿಲ್ಲ ಎಂದು ಬಿಷ್ಣೋಯಿ ಗುಂಪಿನ ಅಧ್ಯಕ್ಷ ಹೇಳಿಕೆ ನೀಡಿದ್ದಾನೆ.
58ರ ಸಲ್ಮಾನ್ ಜೊತೆ 28ರ ರಶ್ಮಿಕಾ ರೊಮ್ಯಾನ್ಸ್! ಫೋಟೋ ನೋಡಿ ಥೂ ಅಸಹ್ಯ ಅಂತಿದ್ದಾರೆ ಫ್ಯಾನ್ಸ್
ಅಷ್ಟಕ್ಕೂ ಬಿಷ್ಣೋಯಿ ಜನಾಂಗಕ್ಕೆ ಸಲ್ಮಾನ್ ಖಾನ್ ವಿರುದ್ಧ ಯಾಕಿಷ್ಟು ಕೋಪ ಎಂದರೆ ಅದಕ್ಕೆ ಕಾರಣ, ಕೃಷ್ಣಮೃಗ ಬೇಟೆ. ಲಾರೆನ್ಸ್ ಬಿಷ್ಣೋಯ್ ನಟ ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದಾಗಿ ಇದಾಗಲೇ ಹಲವಾರು ಬಾರಿ ಬೆದರಿಕೆ ಹಾಕಿದ್ದಾನೆ. ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ (Blackbuck poaching case) ಸಲ್ಮಾನ್ ಖಾನ್ ತಪ್ಪಿತಸ್ಥ ಎಂದು ಸಾಬೀತಾಗಿದ್ದೇ ಈ ಬೆದರಿಕೆಗೆ ಕಾರಣ. ಈ ಪ್ರಕರಣದಲ್ಲಿ ಸಲ್ಮಾನ್ ಸದ್ಯ ಜಾಮೀನಿನ ಮೇಲೆ ಇದ್ದರೂ, ಬಿಷ್ಣೋಯ್ ಸಮುದಾಯವರು ಮಾತ್ರ ನಟನ ಬೆನ್ನ ಬಿದ್ದಿದ್ದಾನೆ. ಏಕೆಂದರೆ, ಕೃಷ್ಣಮೃಗಗಳನ್ನು ಬಿಷ್ಣೋಯ್ ಸಮುದಾಯವು ಪವಿತ್ರವೆಂದು ಪರಿಗಣಿಸುತ್ತದೆ. ಅದಕ್ಕಾಗಿಯೇ ಲಾರೆನ್ಸ್ ಬಿಷ್ಣೋಯ್ (Lawrence Bishnoi) ಸಲ್ಮಾನ್ ಖಾನ್ ಅವರನ್ನು ಟಾರ್ಗೆಟ್ ಮಾಡಿದ್ದಾನೆ. ಕೃಷ್ಣಮೃಗವನ್ನು ತಾವು ಬೇಟೆಯಾಡಿದ್ದಲ್ಲ ಎಂದು ಸಲ್ಮಾನ್ ಖಾನ್ ಹೇಳಿಕೆ ನೀಡಿದ್ದಾರೆ. ಆದರೆ ತಪ್ಪಿತಸ್ಥರು ಯಾರು ಎನ್ನುವುದು ನಮಗೆ ಗೊತ್ತಿದೆ. ಆದ್ದರಿಂದ ಸಲ್ಮಾನ್ ಬಂದು ಕ್ಷಮೆ ಕೋರಬೇಕು ಎನ್ನುವುದು ಅವರ ಬೇಡಿಕೆ.
ಕೊಲೆ ಬೆದರಿಕೆ ಒಡ್ಡಿರುವ ಆರೋಪ ಹೊತ್ತ ಲಾರೆನ್ಸ್ ಬಿಷ್ಣೋಯ್ ಜೈಲಿನಲ್ಲಿ ಇದ್ದು, ಈಗ ಪದೇ ಪದೇ ಮತ್ತೆ ಬೆದರಿಕೆ ಹಾಕುತ್ತಲೇ ಇದ್ದಾನೆ. ಅಷ್ಟಕ್ಕೂ ಆತನ ಬೇಡಿಕೆ ಎಂದರೆ ಕೃಷ್ಣಮೃಗವನ್ನು ಕೊಂದಿರುವುದಕ್ಕೆ ಸಲ್ಮಾನ್ ಖಾನ್ ಕ್ಷಮೆ ಕೇಳಬೇಕು ಎನ್ನುವುದು. ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್ ಅವರ ಭವಿಷ್ಯವನ್ನು ಯಾವುದೇ ನ್ಯಾಯಾಲಯ ನಿರ್ಧರಿಸುವುದಿಲ್ಲ ಎಂದು ಲಾರೆನ್ಸ್ ಬಿಷ್ಣೋಯ್ ಇದಾಗಲೇ ಹೇಳಿದ್ದಾನೆ. ಪೊಲೀಸರ ಮುಂದೆ ನೀಡಿದ ಹೇಳಿಕೆಯಲ್ಲಿ, ಸಲ್ಮಾನ್ ಖಾನ್ ಮತ್ತು ಅವರ ತಂದೆ ಸಲೀಂ ಖಾನ್ ಈ ವಿಷಯದಲ್ಲಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದರೆ (Apology) ತಮ್ಮ ಮನಸ್ಸು ಕೂಡ ಬದಲಾಗಬಹುದು ಎಂದು ಲಾರೆನ್ಸ್ ಬಿಷ್ಣೋಯ್ ಈ ಹಿಂದೆ ಹೇಳಿದ್ದ. ಇದರ ಹೊರತಾಗಿಯೂ ಸಲ್ಮಾನ್ ಖಾನ್ ಕ್ಷಮೆ ಕೋರಿಲ್ಲ ಎನ್ನುವುದು ಅವರಿಗೆ ಇರುವ ಆಕ್ರೋಶ. ಕ್ಷಮೆ ಕೋರದೇ ಹೋದರೆ ಪರಿಣಾಮ ಎದುರಿಸಲು ಸಿದ್ಧ ಇರಿ ಎಂದು ಗ್ಯಾಂಗ್ ಎಚ್ಚರಿಕೆ ನೀಡುತ್ತಲೇ ಇದೆ. ಕ್ಷಮೆ ಕೋರದ ಸಲ್ಮಾನ್ ಅವರ ಅಹಂಕಾರವನ್ನು ಮುರಿಯುತ್ತೇವೆ ಎಂದಿದ್ದ. ಈಗಲೂ ಅದನ್ನೇ ಈ ಗುಂಪಿನವರು ಕೇಳುತ್ತಿದ್ದಾರೆ. ಆದರೆ ಸಲ್ಲು ಭಾಯಿ ಇದಕ್ಕೆ ಇದುವರೆಗೆ ಒಪ್ಪಲಿಲ್ಲ.
ನಟರಾದ ಧನುಷ್- ಕಾರ್ತಿಕ್ ಕುಮಾರ್ ಒಂದೇ ರೂಮ್ನಲ್ಲಿ ಮಾಡ್ತಿದ್ದೇನು? ಮಾಜಿ ಪತ್ನಿಯಿಂದ ಶಾಕಿಂಗ್ ಹೇಳಿಕೆ!