ಬಾಡಿ ಶೇಮಿಂಗ್ ಮಾಡುವವರಿಗೆ ವಿದ್ಯಾ ಬಾಲನ್ ಖಡಕ್ ಉತ್ತರ!

Published : Apr 15, 2019, 04:21 PM IST
ಬಾಡಿ ಶೇಮಿಂಗ್ ಮಾಡುವವರಿಗೆ ವಿದ್ಯಾ ಬಾಲನ್ ಖಡಕ್ ಉತ್ತರ!

ಸಾರಾಂಶ

ಬಾಡಿ ಶೇಮಿಂಗ್ ಮಾಡುವವರಿಗೆ ವಿದ್ಯಾ ಬಾಲನ್ ಖಡಕ್ಕಾಗಿ ಉತ್ತರ ಕೊಟ್ಟಿದ್ದಾರೆ | ದೇಹವನ್ನು ಪ್ರೀತಿಸಬೇಕೆಂದು ಸಲಹೆ ನೀಡಿದ್ದಾರೆ | ಬಾಡಿ ಶೇಮಿಂಗ್‌ಗೆ ಒಳಗಾದವರು ಇವರ ಮಾತನ್ನು ಕೇಳಲೇಬೇಕು!

ಸಿನಿಮಾ ನಟಿಯರು ಬಾಡಿ ಶೇಮಿಂಗ್ ಗೆ ಆಗಾಗ ಒಳಗಾಗುತ್ತಾರೆ. ಅಂತಹ ನಟಿಯರ ಸಾಲಿಗೆ ವಿದ್ಯಾ ಬಾಲನ್ ಸೇರುತ್ತಾರೆ.  ತಮಗಾದ ಬಾಡಿ ಶೇಮಿಂಗ್ ಅವಮಾನದ ಬಗ್ಗೆ ಸಂದರ್ಶನವೊಂದರಲ್ಲಿ ವಿದ್ಯಾ ಬಾಲನ್ ಮಾತನಾಡಿದ್ದಾರೆ.

ಮಲೈಕಾ-ಅರ್ಜುನ್ ಇದೇ ತಿಂಗಳು ಮದುವೆಯಾಗ್ತಾ ಇರೋದು ನಿಜನಾ?

’ಒಂದು ಕಾಲದಲ್ಲಿ ನಾನು ತುಂಬಾ ದಪ್ಪಗಿದ್ದೆ. ಅದಕ್ಕಾಗಿ ನನ್ನ ದೇಹದ ಜೊತೆ ಹೋರಾಟ ಮಾಡಿದೆ.ಆಗೆಲ್ಲಾ ನನ್ನ ದೇಹದ ಮೇಲೆ ಸಿಟ್ಟು ಬರುತ್ತಿತ್ತು. ದ್ವೇಷ ಹುಟ್ಟುತ್ತಿತ್ತು. ನನ್ನ ದೇಹವನ್ನು ಬದಲಾಯಿಸಿಕೊಳ್ಳಬೇಕೆಂದು ನಿರ್ಧರಿಸಿದೆ. ಆಗ ಎಲ್ಲರೂ ನನ್ನನ್ನು ಒಪ್ಪಿಕೊಳ್ಳುತ್ತಾರೆ. ಎಲ್ಲರ ಪ್ರೀತಿಗೆ ಪಾತ್ರಳಾಗುತ್ತೇನೆ ಎನಿಸುತ್ತಿತ್ತು. ಆದರೆ ನಾನು ತೆಳ್ಳಗಾದಾಗ ನನಗೆ ಅನಿಸಿದ್ದು ನಾನು ಎಲ್ಲರಿಂದಲೂ ಸಂಪೂರ್ಣವಾಗಿ ಸ್ವೀಕರಿಸಲ್ಪಟ್ಟಿಲ್ಲ ಎಂದು ತಿಳಿಯಿತು. ಬೇರೆಯವರಿಗೋಸ್ಕರ ನೀವು ಬದಲಾಗಬೇಕಿಲ್ಲ’ ಎಂದು ವಿದ್ಯಾ ಬಾಲನ್ ಹೇಳಿದ್ದಾರೆ. 

ಇನ್‌ಸ್ಟಾಗ್ರಾಂನಲ್ಲಿ ಫೋಟೋ ಕ್ರಾಪ್ ಮಾಡಿದ ರಾಧಿಕಾ, ಏನಿರಬಹುದು?

ನಿಧಾನವಾಗಿ ನನ್ನ ದೇಹವನ್ನು ಪ್ರೀತಿಸಲು ಆರಂಭಿಸಿದೆ. ಗೌರವಿಸಲು ಶುರು ಮಾಡಿದೆ. ನನ್ನಲ್ಲಿ ನಾನು ಸಂತೋಷವನ್ನು ಹುಡುಕಿಕೊಂಡೆ. ನಾನು ಚೆನ್ನಾಗಿದ್ದೇನೆ ಎಂದೆನಿಸು ಶುರುವಾಯಿತು ಎಂದು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. 

ನೀವು ಎಲ್ಲಿಗೆ ಹೋದರೂ ಜನ ನಿಮ್ಮ ದೇಹದ ಬಗ್ಗೆಯೇ ಮಾತನಾಡುತ್ತಾರೆ. ನನಗದು ಇಷ್ಟವಾಗುವುದಿಲ್ಲ. ಬೇರೆಯವರ ದೇಹದ ಬಗ್ಗೆ ಸುಲಭವಾಗಿ ಮಾತನಾಡುತ್ತಾರೆ. ಸುಲಭವಾಗಿ ನಿರ್ಧರಿಸುತ್ತಾರೆ.ಇದು ಸರಿಯಲ್ಲ ಎಂದಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?