
ರಾಜಮೌಳಿ ನಿರ್ದೇಶನದ ‘ಬಾಹುಬಲಿ’ ಸಿನಿಮಾ ಭಾರತೀಯ ಚಿತ್ರರಂಗದಲ್ಲೇ ದೊಡ್ಡ ಹೆಸರನ್ನು ಮಾಡಿದ ಚಿತ್ರ. ಈ ಚಿತ್ರವನ್ನು ಮೀರಿಸುವಂತಹ ಚಿತ್ರವನ್ನು ಮಾಡಲು ಹೊರಟಿದ್ದಾರೆ ಕಂಗನಾ ರಾಣಾವತ್.
ಟಾಲಿವುಡ್‌ಗೂ ‘ಚಮಕ್’ ಕೊಡಲಿದ್ದಾರೆ ಗಣೇಶ್-ರಶ್ಮಿಕಾ
ಕಂಗಾನಾ ರಾಣಾವತ್ ವಿಭಿನ್ನ ಪಾತ್ರಗಳನ್ನು ಮಾಡುವ ಮೂಲಕ ಬಾಲಿವುಡ್ ನಲ್ಲಿ ಗಮನ ಸೆಳೆಯುತ್ತಿದ್ದಾರೆ. ಹೊಸ ರೀತಿಯ, ಢಿಪರೆಂಟ್ ಎನಿಸುವಂತಹ ಬಿಗ್ ಬಜೆಟ್ ಸಿನಿಮಾವನ್ನು ಕಂಗನಾ ಮಾಡುತ್ತಿದ್ದಾರಂತೆ. ಈಗಾಗಲೇ ಈ ಚಿತ್ರಕ್ಕೆ ಕಥೆ ಅಂತಿಮವಾಗಿದ್ದು ಸದ್ಯದಲ್ಲೇ ಭರ್ಜರಿ ಫೋಟೋಶೂಟ್ ಮಾಡುತ್ತೇನೆ ಎಂದಿದ್ದಾರೆ.
ಅಮೀರ್ ಖಾನ್ ಪುತ್ರಿ ಪ್ರೈವೇಟ್ ಪೋಟೋ ಲೀಕ್..?
ಈ ಬಾರಿ ಮಾಡುತ್ತಿರುವುದು ಬಯೋಪಿಕ್ ಅಥವಾ ಐತಿಹಾಸಿಕ ಸಿನಿಮಾವಲ್ಲ. ಬದಲಾಗಿ ಕಬಡ್ಡಿ ಕಥೆಯನ್ನು ಆಧಾರಿತ ಸಿನಿಮಾವನ್ನು ಮಾಡುತ್ತಿದ್ದಾರೆ. ಹಾಗಾಗಿ ಕಬಡ್ಡಿ ಟ್ರೇನಿಂಗ್ ಪಡೆದುಕೊಳ್ಳುತ್ತಿದ್ದಾರೆ ಕಂಗನಾ.
ಸದ್ಯ ಕಂಗನಾ ಜಯಲಿಲತಾ ಅವರ ಬಯೋಪಿಕ್‌ನಲ್ಲಿ ಬ್ಯುಸಿಯಾಗಿದ್ದಾರೆ. ಎ ಎಲ್ ವಿಜಯ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾದ ಬಳಿಕ ಹೊಸ ಸಿನಿಮಾವನ್ನು ಕೈಗೆತ್ತಿಕೊಳ್ಳಲಿದ್ದಾರೆ ಕಂಗನಾ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.