
ಬಾಲಿವುಡ್ (Bollywood) ನಟಿ ಸ್ವರಾ ಭಾಸ್ಕರ್ (Swara Baskar) ಟ್ರೋಲ್ ಆಗುತ್ತಿರುವುದು ಇದೇನು ಮೊದಲಲ್ಲ ಆದರೆ ಪ್ರತಿ ಸಲ ಟ್ರೋಲ್ ಆಗುವುದು ಡಿಫರೆಂಟ್ ವಿಚಾರಗಳಿಗೆ. ಸ್ವರಾ ಸಿಕ್ಕಾಪಟ್ಟೆ ಬೋಲ್ಡ್ ನಟಿ ಸೋಷಿಯಲ್ ಮೀಡಿಯಾದಲ್ಲಿ (Social Media) ಆಗಲಿ ಅಥವಾ ನೇರಾ ನೇರ ಮಾತನಾಡುವ ಕಾರ್ಯಕ್ರಮವಾಗಲಿ ಯಾರನ್ನೂ ಲೆಕ್ಕಿಸದೇ ಟಾಂಗ್ ಕೊಡುತ್ತಾರೆ. ಸದ್ಯಕ್ಕೀಗ ಟ್ರೋಲ್ (Troll) ಆಗಿರುವುದಕ್ಕೆ ಸ್ವರಾ ಮಾಡಿರುವುದೂ ಅದನ್ನೇ.
ಟ್ಟಿಟರ್ (Twitter) ಖಾತೆಯಲ್ಲಿ ಸೀರೆ ಧರಿಸಿರುವ ಸೆಲ್ಫಿ (Selfie) ಫೋಟೋವನ್ನು ಸ್ವರಾ ಹಂಚಿಕೊಂಡಿದ್ದಾರೆ. 'ಸೀರೆ, ಪಾರ್ಕ್ (Park), ವಾಕ್ (walk) ಮತ್ತು ಒಂದು ಬುಕ್ (Book)..ನೆಮ್ಮದಿ ಅಂದ್ರೆ ಹೀಗಿರಬೇಕು' ಎಂದು ಬರೆದುಕೊಂಡಿದ್ದಾರೆ. ಖಾಕಿ ಬಣ್ಣದ ಬ್ಲೌಸ್‌ಗೆ ಪೀಚ್ (Peach) ಬಣ್ಣದ ಸೀರೆ (Saree) ಧರಿಸಿದ್ದಾರೆ. ಕುತ್ತಿಗೆಗೆ ಯಾವ ಸರವೂ ಧರಿಸಿಲ್ಲ ಆದರೆ ಕಿವಿ ತುಂಬಾ ಕೂರುವ ಓಲೆ ಹಾಕಿಕೊಂಡಿದ್ದಾರೆ. ಮೇಕಪ್ ಕೂಡ ಮಾಡಿಕೊಂಡಿಲ್ಲ ಅಬ್ಬಬ್ಬಾ ಅಂದ್ರೂ ಕಾಜಲ್ (Kajol) ಇರಬಹುದು ಅಷ್ಟೇ.
ಸ್ವರಾ ಭಾಸ್ಕರ್ ಈ ಲುಕ್ಕಿನ ಪೋಟೋ ಸಖತ್ ವೈರಲ್ ಆಗುತ್ತಿದೆ. ಟ್ರೂಥ್ ಆಲ್ವೇಸ್ (Truth Always) ಎನ್ನುವ ಖಾತೆ 'ನಮ್ಮನೆ ಕೆಲಸದವಳು (Maid) ಸೀರೆಯಲ್ಲಿ ನಿಮಗಿಂತ ಚಂದ ಕಾಣಿಸುತ್ತಾಳೆ. ನಿಮಗಿಂತ ಸ್ವಲ್ಪ ಹೆಚ್ಚು ಗ್ರೇಸ್‌ಫುಲ್ (Graceful) ಅಂತಾನೇ ಹೇಳಬಹುದು ನೋಡಿ' ಎಂದು ಕಾಮೆಂಟ್ (Comment) ಮಾಡಿದ್ದಾರೆ. ಈ ಟ್ವೀಟ್ ಗಮನಿಸಿದ ಸ್ವರಾ ಆತನಿಗೆ ಸರಿಯಾಗಿ ಉತ್ತರ ನೀಡಿದ್ದಾರೆ. 'ನಿಮ್ಮ ಮನೆಯ ಕೆಲಸದಾಕೆ ಸುಂದರವಾಗಿದ್ದಾರೆ ಎಂದು ಭಾವಿಸುವೆ. ನೀವು ಆಕೆಯ ಶ್ರಮ ಮತ್ತು ಘನತೆಯನ್ನು ಗೌರವಿಸುತ್ತೀರಿ ಎಂಬ ನಿರೀಕ್ಷೆ ನನಗಿದೆ. ಅವಳ ಬಳಿ ಕೇವಲವಾಗಿ ವರ್ತಿಸಬೇಡಿ' ಎಂದು ಉತ್ತರ ನೀಡಿದ್ದಾರೆ.
ಸ್ವರಾ ಕೊಟ್ಟ ಉತ್ತರಕ್ಕೆ ನೆಟ್ಟಿಗರು (Netizens) ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ' ಆತ ಮಾತನಾಡಿರುವ ರೀತಿ ನೋಡಿದರೆ ಅವರ ಸಂಸ್ಕಾರ ಹೇಳುತ್ತದೆ ನೀವು ಮಾತನಾಡಿರುವ ರೀತಿ ನೋಡಿದರೆ ನಿಮ್ಮ ಸಂಸ್ಕಾರ ತಿಳಿಯುತ್ತದೆ. ಒಳ್ಳೆಯ ಕೆಲಸ ಮಾಡಿದ್ದೀರಿ, ನಿಮಗೆ ನಮ್ಮ ಬೆಂಬಲವಿದೆ' ಎಂದು ದಾಸುರ್ ಹೇಳಿದ್ದಾರೆ. 'ಸೂಪರ್ ಸ್ವರಾ, ನಮ್ಮ ತಾಯಿ ನಾಡಿನಲ್ಲಿ (Mother Land) ಬೆಳೆದಿರುವ ಪ್ರತಿಯೊಂದು ಹೆಣ್ಣು ಕೂಡ ಹೀಗೆ ಇರಬೇಕು. ಜನರ ಎಷ್ಟೇ ನೆಗೆಟಿವ್ ಮಾತನಾಡಿದರೂ ನಾವು ಪಾಸಿಟಿವ್ (Positive) ಅಗಿರಬೇಕು. ಬದಲಿಗೆ ಪ್ರೀತಿ ಹಂಚಬೇಕು. ದ್ವೇಷ ಮಾಡುವ ಈ ಪ್ರಪಂಚವನ್ನು ಪ್ರೀತಿಯಾಗಿ ಬದಲಾಯಿಸೋಣ' ಎಂದು ಸಂಗಾನಿ ಕುಮಾರ್ ಕಾಮೆಂಟ್ ಮಾಡಿದ್ದಾರೆ.
ಕೆಲವು ದಿನಗಳ ಹಿಂದೆ ಸ್ವರಾ ಮ್ಯಾಗಜೀನ್ (Magazine) ಒಂದಕ್ಕೆ ಫೋಟೋಶೂಟ್ ಮಾಡಿಸಿದ್ದರು. ಆಗಲೂ ಟ್ರೋಲ್ ಆಗಿದ್ದಾರೆ. 'ಕೊನೆಗೂ ವೋಗ್‌ನಲ್ಲಿ ನಾಲಾ ಸೋಪಾರಾ ಮುಖ ಬಂದಿದೆ' ಎಂದು ನೆಟ್ಟಿಗ ಕಾಮೆಂಟ್ ಮಾಡಿದ. ಹೀಯಾಳಿಸಿದವನನ್ನು ಸುಮ್ಮನೆ ಬಿಡಬಾರದು ಎಂದು 'ಯಾಕಾಗಬಾರದು? ಸಾಲಾ ಸೋಪಾರಾಗೆ ಸಿಕ್ಕಂತೆ ಧಾರಾವಿ (ಮುಂಬೈನಲ್ಲಿರುವ ಏಷ್ಯಾದ ಅತಿ ದೊಡ್ಡ ಸ್ಲಂ), ಶಹದಾರ ಮತ್ತು ಸೀಲಾಂಪುರಕ್ಕೂ ಸಿಗಬೇಕು. ನೀವು ಆಡಂಬರದ ಅರೆಬುದ್ಧಿಯ ಗಣ್ಯರು ಎಂಬಂತೆ ವರ್ತಿಸುತ್ತಿರುವುದಾದರೂ ಏಕೆ? ನೀವು ಕೊಳಕು ರೀತಿಯಲ್ಲಿ ಬಳಸುವ ಪ್ರದೇಶಗಳಲ್ಲಿ ವಾಸಿಸುವವರ ದುಡಿಮೆಯಿಂದ ಬದುಕುತ್ತಿದ್ದೀರಿ ಎಂಬುದು ನೆನಪಿನಲ್ಲಿರಲಿ. ಲೂಸರ್' ಎಂದು ಉತ್ತರ ಕೊಟ್ಟಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.