ರಾಜ್ಯ ಸರ್ಕಾರಿ ಬಸ್ಸಿನ ಬಗ್ಗೆ ವ್ಯಂಗ್ಯ: ನಟ ಅಲ್ಲು ಅರ್ಜುನ್‌ಗೆ ನೋಟಿಸ್‌ ಕೊಟ್ಟ ಕನ್ನಡಿಗ ಸಜ್ಜನರ್

By Suvarna NewsFirst Published Nov 13, 2021, 3:13 PM IST
Highlights

ಕನ್ನಡದ ಖಡಕ್ ಆಫೀಸರ್‌ ವಿಸಿ ಸಜ್ಜನರ್‌ನಿಂದ ತೆಲುಗು ಸ್ಟಾರ್ ನಟ ಅಲ್ಲುಗೆ ನೊಟೀಸ್.... 
 

ತೆಲುಗು ಚಿತ್ರರಂಗದ ಸ್ಟೈಲಿಷ್ ನಟ ಅಲ್ಲು ಅರ್ಜುನ್ ಸಿನಿಮಾ ಮತ್ತು ಜಾಹೀರಾತುಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಒಂದು ಸಿನಿಮಾ ಮಾಡಲು ಹೇಗೆ ಕೋಟಿಯಲ್ಲಿ ಸಂಭಾವನೆ ಪಡೆಯುತ್ತಾರೋ ಹಾಗೆ ಜಾಹೀರಾತಿಗೂ ಪಡೆಯುತ್ತಾರೆ ಎನ್ನುವ ಸುದ್ದಿ ಇದೆ. ಆದರೆ ಅಲ್ಲು ಸದ್ಯಕ್ಕೆ ಸುದ್ದಿ ಆಗುತ್ತಿರುವುದು ಸಂಭಾವನೆ ವಿಚಾರಕ್ಕಲ್ಲ ಬದಲಿಗೆ ಬಸ್ಸಿನ ವಿಚಾರಕ್ಕೆ.

ಹೌದು! ಅಲ್ಲು ಅರ್ಜುನ್‌ ಜಾಹೀರಾತಿನಲ್ಲಿ ರಾಜ್ಯ ಸರ್ಕಾರದ ಬಸ್‌ಗಳ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಅವರಿಗೆ ಐಸಿಎಸ್ ಅಧಿಕಾರಿ ಸಜ್ಜನರ್‌ ಅವರು ನೋಟಿಸ್ ಜಾರಿ ಮಾಡಿದ್ದಾರೆ. 'ಒಳ್ಳೆಯ ದೋಸೆ ತಿನ್ನಬೇಕೆಂದರೆ ಎರಡೇ ಜಾಗ ಇರುವುದು. ಒಂದು ನನ್ನ ಹೋಟೆಲ್‌ ಇನ್ನೊಂದು ಆ ಬಸ್ಸು (ರಾಜ್ಯ ಸಾರಿಗೆ ಬಸ್ಸು). ಅಲ್ಲಿ ಮಾಮೂಲಿ ದೋಸೆಯಂತೆ ಬಸ್ಸು ಹತ್ತಿದವನನ್ನೂ ಸಹ ಕೂರ್ಮಾ ಹಾಕಿ, ಕೈಮಾ ಮಾಡಿ ಮಸಾಲೆ ದೋಸೆಯಂತೆ ಮಾಡಿಬಿಡುತ್ತಾರೆ. ಯಾಕೆ ಈ ಬೇಡದ ತೊಂದರೆ ಸುಮ್ಮನೆ Rapido ಬುಕ್ ಮಾಡಿಕೊಳ್ಳಿ' ಎಂದು ಅಲ್ಲು ಅರ್ಜುನ್ ಹೇಳಿದ್ದಾರೆ.

ಈ ವಿಡಿಯೋದಲ್ಲಿ ತೆಲಂಗಾಣ ರಾಜ್ಯ ಸಾರಿಗೆ ಬಸ್ಸನ್ನು ತೋರಿಸಿದ್ದಾರೆ. ಬಸ್‌ನಲ್ಲಿ ಜನರು ತುಂಬಿರುವ ಹಾಗೆ ತೋರಿಸಿದ್ದಾರೆ. ಬಸ್ಸಿನ ಪ್ರಯಾಣಕ್ಕಿಂತಲೂ Rapido ಪ್ರಯಾಣ ಕಡಿಮೆ ವೆಚ್ಚ ಹಾಗೂ ಆರಾಮದಾಯಕ ಎಂದು ಬಿಂಬಿಸಲಾಗಿದೆ. ಹೀಗಾಗಿ ಸಜ್ಜನರ್ ವಿಡಿಯೋ ನೋಡಿ ಪ್ರತಿಕ್ರಿಯೆ ನೀಡಿದ್ದಾರೆ. 'ಟಿಎಸ್‌ಆರ್‌ಟಿಸಿಯನ್ನು ಕೆಟ್ಟದಾಗಿ ಬಿಂಬಿಸುವ ಜಾಹೀರಾತೊಂದನ್ನು ಖಾಸಗಿ ಸಂಸ್ಥೆ ಬಿಡುಗಡೆ ಮಾಡಿದೆ. ನಿಮ್ಮ ಉತ್ಪನ್ನ ಚೆನ್ನಾಗಿದ್ದರೆ ಅದರ ಬಗ್ಗೆ ಮಾತನಾಡಿ ಆದರೆ ಎದುರಾಳಿ ಸಂಸ್ಥೆಯನ್ನು ಕೆಟ್ಟದಾಗಿ ಬಿಂಬಿಸುವುದು ವ್ಯವಹಾರ ನೀತಿ ಅಲ್ಲ. ಜಾಹೀರಾತಿನಲ್ಲಿ ನಟಿಸಿರುವ ನಟ ಸಹ ಗಮನಿಸಬೇಕಾಗಿತ್ತು' ಎಂದು ಸಜ್ಜನರ್ ಹೇಳಿದ್ದಾರೆ.

ಯಾವ ಹೀರೋಯಿನ್, ಮಾಡೆಲ್‌ಗೂ ಕಮ್ಮಿಯಿಲ್ಲ ಅಲ್ಲು ಪತ್ನಿ; ಫೋಟೋಸ್ ವೈರಲ್!

'ದಶಕಗಳಿಂದಲೂ ಟಿಎಸ್‌ಆರ್‌ಟಿಸಿಯು ಪ್ರಜೆಗಳಿಗೆ ಸೇವೆ ಸಲ್ಲಿಸುತ್ತಿದೆ. ರಾಜ್ಯದ ಮೂಲೆ ಮೂಲೆಗಳಿಲ್ಲಿಯೂ ನಮ್ಮ ಸೇವೆ ಇದೆ. ಬಡವರಿಗಾಗಿ, ಮಧ್ಯಮವರ್ಗದ ಜನರಿಗಾಗಿಯೆಂದು ನಾವು ಸೇವೆ ನೀಡುತ್ತಿದ್ದೇವೆ. ಇಂಥಹ ಸಂಸ್ಥೆಯ ಬಗ್ಗೆ ಕೆಟ್ಟದಾಗಿ ಬಿಂಬಿಸಿರುವುದು ಸರಿಯಲ್ಲ. ಆ ಜಾಹೀರಾತನ್ನು ಕೂಡಲೇ ಹಿಂಪಡೆಯಬೇಕು ಎಂದು ನಾವು ನೋಟಿಸ್ ನೀಡಿದ್ದೇವೆ' ಎಂದು ಹೇಳಿದ್ದಾರೆ.

'ನಟರ ಸಹ ಈ ರೀತಿಯ ಜಾಹೀರಾತುಗಳು, ಸಿನಿಮಾಗಳಲ್ಲಿ ನಟಿಸುವಾಗ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ನಟರು ಕ್ರೀಡಾ ಸೆಲೆಬ್ರಿಟಿಗಳು ಜನರ ಆಲೋಚನೆಗಳ ಮೇಲೆ ಪ್ರಭಾವ ಬೀರುವ ಶಕ್ತಿಯುಳ್ಳವರಾಗಿರುತ್ತಾರೆ. ಜನರು ದಿಕ್ಕು ತಪ್ಪುವಂತೆ ಮಾಡಬಾರದು, ನಮಗೆ ಯಾರ ಮೇಲೂ ವೈಯುಕ್ತಿಕ ದ್ವೇಷವಿಲ್ಲ ಆದರೆ ನಮ್ಮ ಸಂಸ್ಥೆಯನ್ನು ಹೀಗೆ ಕೀಳಾಗಿ ತೋರಿಸಿದ್ದರಿಂದ ನೋಟೀಸ್ ನೀಡಿದ್ದೇವೆ'ಎಂದಿದ್ದಾರೆ.

click me!