ಸನ್ನಿ ಲಿಯೋನ್ ಹ್ಯಾಂಡ್ ಬ್ಯಾಗ್‌ನಲ್ಲಿ ಏನಿದೆ? ವಿಡಿಯೋ ಮಾಡುತ್ತಿದ್ದಂತೆ ಕಕ್ಕಾಬಿಕ್ಕಿಯಾದ ನಟಿ!

Published : Dec 24, 2024, 07:53 PM IST
ಸನ್ನಿ ಲಿಯೋನ್ ಹ್ಯಾಂಡ್ ಬ್ಯಾಗ್‌ನಲ್ಲಿ ಏನಿದೆ? ವಿಡಿಯೋ ಮಾಡುತ್ತಿದ್ದಂತೆ ಕಕ್ಕಾಬಿಕ್ಕಿಯಾದ ನಟಿ!

ಸಾರಾಂಶ

ಬಾಲಿವುಡ್ ನಟಿ ಸನ್ನಿ ಲಿಯೋನ್ ತಮ್ಮ ಹ್ಯಾಂಡ್ ಬ್ಯಾಗ್‌ನಲ್ಲಿ ಏನೆಲ್ಲಾ ಇರುತ್ತೆ ಅನ್ನೋದು ವಿಡಿಯೋ ಮಾಡಿದ್ದಾರೆ. ಆದರೆ ಅಚಾನಕ್ಕಾಗಿ ಸಿಕ್ಕ ವಸ್ತುವಿನಿಂದ ಸನ್ನಿ ಕಂಕಾಲಾಗಿದ್ದಾರೆ. ಇತ್ತ ಪತಿ ಕೂಡ ಪ್ರಶ್ನಿಸಿದ್ದಾರೆ. ಅಷ್ಟಕ್ಕೂ ಸನ್ನಿ ಲಿಯೋನ್ ಹ್ಯಾಂಡ್ ಬ್ಯಾಗ್‌ನಲ್ಲಿ ಏನಿತ್ತು?  

ಮುಂಬೈ(ಡಿ.24) ಮಾದಕ ನಟಿ ಸನ್ನಿ ಲಿಯೋನ್ ಇದೀಗ ಬಾಲಿವುಡ್ ಸೇರಿದಂತೆ ಭಾರತೀಯ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿ. ಸ್ಯಾಂಡಲ್‌ವುಡ್‌ಗೂ ಕಾಲಿಟ್ಟಿದ್ದ ಸನ್ನಿ ಲಿಯೋನ್ ಸದ್ಯ ದೇಶ ವಿದೇಶಗಳಲ್ಲಿ ಹಲವು ಕಾರ್ಯಕ್ರಮಗಳ ಮೂಲಕ ಬ್ಯೂಸಿಯಾಗಿದ್ದಾರೆ. ಹೊಸ ವರ್ಷ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಸನ್ನಿ ಲಿಯೋನ್ ಇರಲೇಬೇಕು ಅನ್ನುವಷ್ಟರ ಮಟ್ಟಿಗೆ ಬೇಡಿಕೆ ಪಡೆದುಕೊಂಡಿದ್ದಾರೆ. ಬಾಲಿವುಡ್ ನಟಿಯರ ಕುರಿತು ಕುತೂಹಲ ಅಭಿಮಾನಿಗಳಲ್ಲಿ ಇದ್ದೇ ಇರುತ್ತೆ. ಈ ಪೈಕಿ ನಟಿಯರ ಹ್ಯಾಂಡ್ ಬ್ಯಾಗ್‌ನಲ್ಲಿ ಏನೇನಿರುತ್ತೆ ಅನ್ನೋ ಕುತೂಹಲ ಸದಾ ಹಾಗೇ ಇರುತ್ತೆ. ಹಲವು ನಟಿಯರು ತಮ್ಮ ಹ್ಯಾಂಡ್ ಬ್ಯಾಗ್ ಸೀಕ್ರೆಟ್ ಬಹಿರಂಗಪಡಿಸಿದ್ದಾರೆ. ಇದೀಗ ಸನ್ನಿ ಲಿಯೋನ್ ಕೂಡ ತಮ್ಮ ಹ್ಯಾಂಡ್ ಬ್ಯಾಗ್‌ನಲ್ಲಿ ಏನೆಲ್ಲಾ ಇದೆ ಅನ್ನೋದು ವಿಡಿಯೋ ಮಾಡಿದ್ದಾರೆ. ಆದರೆ ಒಂದೊಂದ ವಸ್ತು ಹೊರಗೆ ತೆಗೆಯುತ್ತಿದ್ದಂತೆ ನಟಿ ಕಕ್ಕಾಬಿಕ್ಕಿಯಾದ ಘಟನೆ ನಡೆದಿದೆ.

ಸನ್ನಿ ಲಿಯೋನ್ ತಮ್ಮ ಹ್ಯಾಂಡ್ ಬ್ಯಾಗ್‌ನಲ್ಲಿ ಏನಿದೆ ಅನ್ನೋ ವಿಡಿಯೋ ಮಾಡಿದ್ದಾರೆ. ಮೊದಲಿಗೆ ತನ್ನ ಹ್ಯಾಂಡ್ ಬ್ಯಾಗ್‌ನಲ್ಲಿ ಲ್ಯಾಪ್ ಟಾಪ್ ಇರಲಿದೆ ಎಂದು ತೋರಿಸಿದ್ದಾರೆ. ಬ್ಯಾಗ್‌ನಿಂದ ಲ್ಯಾಪ್ ತೆಗೆದು ತೋರಿಸಿ ಬದಿಗಿಟ್ಟ ಸನ್ನಿ ಲಿಯೋನ್ ಬಳಿಕ ಪವರ್ ಬ್ಯಾಂಕ್ ಪರಿಚಯಿಸಿದ್ದಾರೆ. ಇದರ ನಡುವೆ ಸನ್ನಿ ಲಿಯೋನ್ ಸಣ್ಣ ಬಾಕ್ಸ್ ತೆಗೆದು ಅರೆ ಇದೇನು ಎಂದು ನೋಡಿದ್ದಾರೆ. ಅಸಲಿದೆ ಅದು ಗರ್ಭ ನಿರೋಧಕವಾಗಿತ್ತು. ಇದು ಹ್ಯಾಂಡ್ ಬ್ಯಾಗ್‌ನಲ್ಲಿ ಹೇಗೆ ಬಂತು ಅನ್ನೋ ಗೊಂದಲಕ್ಕೆ ಸಿಲುಕಿದ್ದಾರೆ. ಅಷ್ಟರಲ್ಲೇ ಪಕ್ಕದಲ್ಲೇ ಇದ್ದ ಪತಿ ಡೇನಿಯ್ ವೆಬರ್ ಆಗಮಿಸಿದ್ದಾರೆ. ಪರಿಸ್ಥಿತಿ ತಿಳಿಗೊಂಡಿದೆ. ಇದು ನಿಜಕ್ಕೂ ಕಕ್ಕಾಬಿಕ್ಕಿಯಾದ ಘಟನೆಯಲ್ಲ. ಗರ್ಭ ನಿರೋಧಕದ ಜಾಹೀರಾತಿಗಾಗಿ ಮಾಡಿದ ವಿಡಿಯೋ ಆಗಿದೆ.

ಸನ್ನಿ ಲಿಯೋನ್‌ಗೆ ಫನ್ನಿ ಗೇಮ್ ಎಂದು ಮ್ಯಾನೇಜರ್ ಮೋಸ, ರಂಪಾಟ ವಿಡಿಯೋ ಹಂಚಿಕೊಂಡ ನಟಿ!

ಜಾಹೀರಾತು ವಿಡಿಯೋದಲ್ಲಿ ಡೇನಿಯಲ್ ವೆಬರ್ ಕೂಡ ಕಾಣಿಸಿಕೊಂಡಿದ್ದಾರೆ. ಈ ಜಾಹೀರಾತು ವಿಡಿಯೋ ಇದೀಗ ಭಾರಿ ಸಂಚಲನ ಮೂಡಿಸಿದೆ. ಮತ್ತೊಂದೆಡೆ ಈ ಜಾಹೀರಾತಿಗೆ ಪರ ವಿರೋಧಗಳು ವ್ಯಕ್ತವಾಗಿದೆ. ಕಮೆಂಟ್‌ಗಳ ಸುರಿಮಳೆಯಾಗಿದೆ.  

ಸನ್ನಿ ಲಿಯೋನ್ ಹಿಂದಿ ಬಿಗ್ ಬಾಸ್ ಮೂಲಕ ಭಾರತಕ್ಕೆ ಮರಳಿ ಎಂಟ್ರಿಕೊಟ್ಟಿದ್ದರು. ಸನ್ನಿ ಲಿಯೋನ್ ಪೋಷಕರು ಪಂಜಾಬಿ ಮೂಲದವರು. ಆದರೆ ಹುಟ್ಟಿದ್ದು ಕೆನಡಾದಲ್ಲಿ. ಬಾಲ್ಯದಲ್ಲೇ ಹಲವು ಸವಾಲು ಎದುರಿಸಿದ ಸನ್ನಿ ಲಿಯೋನ್ ಮಾದಕ ತಾರೆಯಾಗಿ ಜನಪ್ರಿಯರಾದರು. ಅಮೆರಿಕದಲ್ಲಿ ಸನ್ನಿ ಲಿಯೋನ್ ಮಾದಕ ಲೋಕದಲ್ಲಿ ವಿಹರಿಸಿದ್ದರು. ಆದರೆ 2011ರಲ್ಲಿ ಸನ್ನಿ ಲಿಯೋನ್ ಬಿಗ್ ಬಾಸ್ ಹಿಂದಿ ಆವೃತ್ತಿಯಲ್ಲಿ ಕಾಣಿಸಿಕೊಂಡರು. 5ನೇ ಆವೃತ್ತಿಯ ಹಿಂದಿ ಬಿಗ್ ಬಾಸ್‌ಗೆ ಸನ್ನಿ ಲಿಯೋನ್ ಎಂಟ್ರಿಕೊಡುತ್ತಿದ್ದಂತೆ ರಿಯಾಲಿಟಿ ಶೋ ಟಿಆರ್‌ಪಿ ಹೆಚ್ಚಾಗಿತ್ತು. ಎಲ್ಲೆಡೆ ಸನ್ನಿ ಲಿಯೋನ್ ಚರ್ಚೆಗಳು ಆರಂಭಗೊಂಡಿತ್ತು. ಇಷ್ಟೇ ಅಲ್ಲ ವಿವಾದಗಳು ಹುಟ್ಟಿಕೊಂಡಿತ್ತು. 

 

 

ಇದರ ಬೆನ್ನಲ್ಲೇ ಸನ್ನಿ ಲಿಯೋನ್‌ಗೆ ಬಾಲಿವುಡ್‌ನಿಂದ ಆಫರ್‌ಗಳ ಸುರಿಮಳೆಯಾಗಿತ್ತು. ನಿರ್ದೇಶಕ ಮಹೇಶ್ ಭಟ್ ಆಫರ್ ನೀಡಿದ್ದರು. ಜಿಸ್ಮ್ 2 ಚಿತ್ರದಲ್ಲಿ ದಿನು ಮೋರಿಯಾ ಜೊತೆ ಕಾಣಿಸಿಕೊಂಡು ಬಾಲಿವುಡ್‌ಗೆ ಎಂಟ್ರಿಕೊಟ್ಟಿದ್ದರು. ರಾಗಿಣಿ ಎಂಎಂಎಸ್2 ಸೇರಿದಂತೆ ಒಂದರ ಮೇಲೊಂದರಂತೆ ಬಾಲಿವುಡ್ ಚಿತ್ರಗಳಲ್ಲಿ ಸನ್ನಿ ಲಿಯೋನ್ ಕಾಣಿಸಿಕೊಂಡರು. 

ಶೂಟೌಟ್ ಎಟ್ ವಡಾಲಾ ಚಿತ್ರದಲ್ಲಿ ಐಟಂ ನಂಬರ್‌ನಲ್ಲಿ ಸನ್ನಿ ಲಿಯೋನ್ ಕಾಣಿಸಿಕೊಂಡಿದ್ದರು. 2014ರಿಂದ ಸನ್ನಿ ಲಿಯೋನ್ ಬಾಲಿವುಡ್‌ನಲ್ಲಿ ಬಹುಬೇಡಿಕೆಯ ನಟಿಯಾಗಿ ಹೊರಹೊಮ್ಮಿದರು. ಆರಂಭದಲ್ಲಿ ಹಲವರು ಸನ್ನಿ ಲಿಯೋನ್ ವಿರುದ್ದ ಅಪಸ್ವರ ಎತ್ತಿದ್ದರು. ಆದರೆ ಕೆಲವೇ ವರ್ಷಗಳಲ್ಲಿ ಸನ್ನಿ ಲಿಯೋನ್ ಎಲ್ಲಾ ಕಾರ್ಯಕ್ರಮದಲ್ಲಿ ಇರಲೇಬೇಕು ಎಂದಾಗಿತ್ತು. ರಾಗಿಣಿ ಎಂಎಂಸ್ 2 ಚಿತ್ರ ಭಾರಿ ಹಿಟ್ ಆಗಿತ್ತು. ತಮಿಳು, ತೆಲುಗು ಸೇರಿದಂತೆ ದಕ್ಷಿಣ ಭಾರತದ ಸಿನಿಮಾಗಳಲ್ಲೂ ಸನ್ನಿ ಲಿಯೋನ್ ಕಾಣಿಸಿಕೊಂಡರು. ಇನ್ನು 2015ರಲ್ಲಿ ಡಿಕೆ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನಲ್ಲೂ ಕಾಣಿಸಿಕೊಂಡರು. ಸೇಸಮ್ಮ ಬಾಗಿಲು ತೆಗಿಯಮ್ಮ ಐಟಂ ಹಾಡಿನಲ್ಲಿ ಸನ್ನಿ ಕಾಣಿಸಿಕೊಂಡಿದ್ದರು.

ಕರ್ನಾಟಕದಲ್ಲಿ ಉಳಿದುಕೊಂಡ ಸನ್ನಿ ಲಿಯೋನ್, ಈ ಗ್ರಾಮದಲ್ಲಿ ನಟಿಯ ಶೂಟಿಂಗ್!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಜಗಳದ ಕಾರಣದಿಂದ ನಾವು ದೂರವಾಗಲು ಬಯಸಲಿಲ್ಲ, ಜಗಳವನ್ನೇ ದೂರಮಾಡಲು ಬಯಸಿದ್ದೇವೆ; ಸೋನಾಕ್ಷಿ ಸಿನ್ಹಾ!
ಬಾಲಿವುಡ್‌ ಈ ಸ್ಟಾರ್ ನಟಿಯರು ರಿಜೆಕ್ಟ್ ಮಾಡಿದ್ರು ಆ ಸಿನಿಮಾ; ಆದ್ರೆ ಮುಂದೆ ಅವರೆಲ್ಲರ ಲೈಫ್‌ನಲ್ಲಿ ಏನಾಯ್ತು?