ನಟಿ ಕೀರ್ತಿ ಸುರೇಶ್ ಕನ್ನಡ ಗೊತ್ತಿಲ್ಲವೆಂದರೂ, ಆ ಒಂದು ಮಾತು ಕನ್ನಡಿಗರ ಮನಸ್ಸಿಗೆ...

By Sathish Kumar KH  |  First Published Dec 24, 2024, 3:48 PM IST

ಬಾಲಿವುಡ್‌ಗೆ ಪಾದಾರ್ಪಣೆ ಮಾಡಿರುವ ನಟಿ ಕೀರ್ತಿ ಸುರೇಶ್, 'ಬೇಬಿ ಜಾನ್' ಸಿನಿಮಾ ಪ್ರಮೋಷನ್ ವೇಳೆ ಕನ್ನಡ ಗೊತ್ತಿಲ್ಲ ಎಂದಿದ್ದಾರೆ. ವರುಣ್ ಧವನ್ ಕನ್ನಡದಲ್ಲಿ 'ಐ ಲವ್ ಯೂ' ಹೇಳಲು ಕೇಳಿದಾಗ ಕೀರ್ತಿ ಈ ರೀತಿ ಹೇಳಿದ್ದಾರೆ. ಆದರೆ, ಕನ್ನಡದ ಬಗ್ಗೆ ಹೇಳಿದ ಇನ್ನೊಂದು ಮಾತು...


ಬೆಂಗಳೂರು/ಮುಂಬೈ (ಡಿ.24): ದಕ್ಷಿಣ ಭಾರತದ ಚಿತ್ರರಂಗದಲ್ಲಿ ಬಾಲ ನಟಿಯಾಗಿ ಸಿನಿಮಾ ಜರ್ನಿ ಆರಂಭಿಸಿದ ಕೀರ್ತಿ ಸುರೇಶ್ ಅವರು ಇದೀಗ ತೆಲುಗು, ತಮಿಳು, ಮಲೆಯಾಳಂ, ಕನ್ನಡ ಚಿತ್ರರಂಗವನ್ನು ಮುಗಿಸಿ ಬಾಲಿವುಡ್‌ಗೂ ಕಾಲಿಟ್ಟಿದ್ದಾರೆ. ಬಾಲಿವುಡ್‌ನ ಹಿಂದಿ ಸಿನಿಮಾ ಬೇಬಿ ಜಾನ್ ಸಿನಿಮಾದ ಪ್ರಮೋಷನ್ ಕಾರ್ಯಕ್ರಮಗಳಲ್ಲಿ ಬ್ಯೂಸಿ ಆಗಿದ್ದಾರೆ. ಆದರೆ, ಈ ವೇಳೆ ನಟ ವರುಣ್ ಧವನ್ ಕನ್ನಡದಲ್ಲಿ ಮಾತನಾಡುವಂತೆ ಕೇಳಿದಾಗ ನಟಿ ಕೀರ್ತಿ ಸುರೇಶ್ ಕನ್ನಡ ಮಝೆ ಕನ್ನಡ ಮಾಲೂಂ ನಹಿ ಎಂದು ಉತ್ತರ ಕೊಟ್ಟಿದ್ದಾರೆ. ಆದರೂ, ನಟಿ ಹೇಳಿದ ಆ ಒಂದು ಮಾತು ಮಾತ್ರ ಕನ್ನಡಿಗರ ಮನಸ್ಸಿಗೆ ಮುದ ನೀಡುತ್ತದೆ.

ದಕ್ಷಿಣ ಭಾರತದ ಹಲವು ನಟಿಯರು ಈಗಾಗಲೇ ಬಾಲಿವುಡ್‌ಗೆ ಕಾಲಿಟ್ಟು ಬಾಲಿವುಡ್ ರಾಣಿಗಳಾಗಿ ಆಳ್ವಿಕೆ ಮಾಡುತ್ತಿದ್ದಾರೆ. ದೀಪಿಕಾ ಪಡುಕೋಣೆ, ಐಶ್ವರ್ಯಾ ರೈ, ರಶ್ಮಿಕಾ ಮಂದಣ್ಣ, ತಾಪ್ಸಿ ಪನ್ನು, ಜೆನಿಲಿಯಾ, ತಮನ್ನಾ ಭಾಟಿಯಾ ಸೇರಿ ಹಲವರು ಈಗಾಗಲೇ ತಮ್ಮ ಛಾಪು ಮೂಡಿಸಿದ್ದಾರೆ. ಇದೀಗ ಮತ್ತೊಬ್ಬ ನಟಿ ಕೀರ್ತಿ ಸುರೇಶ್ ಬಾಲಿವುಡ್‌ಗೆ ಕಾಲಿಟ್ಟಿದ್ದಾರೆ. ನಾಳೆ ಅವರ ಬಾಲಿವುಡ್ ಬೇಬಿ ಜಾನ್ ಸಿನಿಮಾ ಬಿಡುಗಡೆ ಆಗಲಿದ್ದು, ಪ್ರಮೋಷನ್ ಕಾರ್ಯಕ್ರಮಗಳ ನಿಮಿತ್ತ ಮದುವೆಯಾಗಿ ಒಂದೇ ವಾರದಲ್ಲಿ ಸಿನಿಮಾ ಕಡೆಗೆ ಗಮನ ಹರಿಸಿದ್ದಾರೆ.

Tap to resize

Latest Videos

undefined

ಬೇಬಿ ಜಾನ್ ಹಿಂದಿ ಸಿನಿಮಾದ ನಟ ವರುಣ್ ಧವನ್ ಜೊತೆಗೆ ಮಾತನಾಡುತ್ತಿರುವಾಗ ಕೀರ್ತಿ ಸುರೇಶ್‌ಗೆ ಒಂದು ಸವಾಲು ಹಾಕಿದ್ದಾರೆ. ಅದೇನೆಂದರೆ ನೀವು ದಕ್ಷಿಣ ಭಾರತದವರು ಅಲ್ವಾ ಅದಕ್ಕೆ ದಕ್ಷಿಣ ಭಾರತದ ಭಾಷೆಗಳಲ್ಲಿ ಐ ಲವ್ ಯೂ ಎಂದು ಹೇಳುವುದನ್ನು ಕಲಿಸಬೇಕು ಎಂದು ಹೇಳುತ್ತಾರೆ. ಇದಕ್ಕೆ ಒಪ್ಪಿಕೊಂಡ ಕೀರ್ತಿ ಸುರೇಶ್ ತೆಲುಗು, ತಮಿಳು ಹಾಗೂ ಮಲೆಯಾಳಂನಲ್ಲಿ ಐ ಲವ್ ಯೂ ಎಂಬುದನ್ನು ಪ್ರೇಕ್ಷಕರಿಗೆ ಹೇಳುವುದನ್ನು ಕಲಿಸಿಕೊಟ್ಟಿದ್ದಾರೆ. ಇದಾದ ನಂತರ ವರುಣ್ ಅವರು ಕನ್ನಡದಲ್ಲಿ ಹೇಳಿಕೊಡಿ ಎಂದು ಕೇಳಿದ್ದಾರೆ. ಆದರೆ, ಇದಕ್ಕೆ ಉತ್ತರಿಸಿದ ಕೀರ್ತಿ ನನಗೆ ಕನ್ನಡ ಗೊತ್ತಿಲ್ಲ ಎಂದು ಹಿಂದಿಯಲ್ಲಿಯೇ ಉತ್ತರ ನೀಡಿದ್ದಾರೆ.

ಇದಾದ ನಂತರ ವರುಣ್ ಧವನ್ ಅವರಿಗೆ ಕನ್ನಡ ಗೊತ್ತಿಲ್ಲ ಎಂದ ಕೀರ್ತಿ ಸುರೇಶ್ ಮುಂದಿನ ದಿನಗಳಲ್ಲಿ ಖಂಡಿತವಾಗಿ ಕನ್ನಡ ಭಾಷೆಯನ್ನೂ ಕಲಿತು ನಿಮಗೆ ಹೇಳಿಕೊಡುತ್ತೇನೆ ಎಂದರು. ಇನ್ನು ವರುಣ್ ಧವನ್ ಅವರ ಈ ವಿಡಿಯೋ ಭಾರೀ ವೈರಲ್ ಆಗುತ್ತಿದೆ. 6.4 ಲಕ್ಷಕ್ಕೂ ಅಧಿಕ ಜನರು ಈ ವಿಡಿಯೋಗೆ ಲೈಕ್ ಕೊಟ್ಟಿದ್ದಾರೆ. ದಕ್ಷಿಣ ಭಾರತದ ಭಾಷೆಗಳು ಎಂದು ಹೇಳಿದಾಗ ತೆಲುಗು, ತಮಿಳು, ಮಲೆಯಾಳಂ ಆದ ನಂತರ ಕನ್ನಡವನ್ನು ಮರೆಯದ ಬಾಲಿವುಡ್‌ನ ವರುಣ್ ಧವನ್ ಮತ್ತು ಕನ್ನಡ ಕಲಿತು ಮಾತನಾಡುತ್ತೇನೆ ಎಂದು ಪಾಸಿಟಿವ್ ಆಗಿಯೇ ಹೇಳಿದ ನಟಿ ಕೀರ್ತಿ ಸುರೇಶ್ ಅವರು ಕನ್ನಡಿಗರ  ಮನಸ್ಸನ್ನು ಗೆದ್ದಿದ್ದಾರೆ.

ಇದನ್ನೂ ಓದಿ: ನಟಿ ಕೀರ್ತಿ ಸುರೇಶ್ ಸಿನಿಮಾಗೆ ಗುಡ್ ಬೈ ಹೇಳಲಿದ್ದಾರೆ ಎಂಬುದಕ್ಕೆ ಇಲ್ಲಿದೆ ನೋಡಿ ಸಾಕ್ಷಿ!

ಇದಾದ ನಂತರ ಕನ್ನಡಿಗರು ಈ ವಿಡಿಯೋಗೆ ಕನ್ನಡದಲ್ಲಿ ಏನೆಂದು ಹೇಳಬೇಕು ಎಂದು ರಿಪ್ಲೈ ಮಾಡಿದ್ದಾರೆ. ನಾನು ನಿಮ್ಮನ್ನು ಪ್ರೀತಿಸುತ್ತೇನೆ. ನಾನು ನಿಮ್ಮನ್ನು ತುಂಬಾ ಇಷ್ಟಪಡುತ್ತೇನೆ ಎಂದು ಹೇಳಿ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಕೆಲವರು ಕನ್ನಡದಲ್ಲಿ ಇದನ್ನು ಬರೆದುಕೊಂಡರೆ ಇನ್ನು ಕೆಲವರು ಇಂಗ್ಲೀಷನ್‌ನಲ್ಲಿ 'Nanu nimmannu Preethisuttene' ಎಂದು ಬರೆದು ಕಾಮೆಂಟ್ ಮಾಡಿದ್ದಾರೆ. ಒಟ್ಟಾರೆ ದಕ್ಷಿಣ ಭಾರತ ಎಂದಾಕ್ಷಣ ಕನ್ನಡವನ್ನು ಬಾಲಿವುಡ್ ಜನರು ಗುರುತಿಸುತ್ತಿರುವುದೇ ಕನ್ನಡಿಗರ ಹೆಮ್ಮೆಯ ವಿಚಾರವಾಗಿದೆ.

ಇದನ್ನೂ ಓದಿ: ರಶ್ಮಿಕಾ ಮಂದಣ್ಣ – ವಿಜಯ್ ದೇವರಕೊಂಡ ಎಂಗೇಜ್ಮೆಂಟ್ ಆಯ್ತಾ? ವೈರಲ್ ಆಗಿದೆ ಫೋಟೋ

click me!