ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಫೋಟೋ ನೋಡಿದ ಜನರು ಅಚ್ಚರಿಗೊಳಗಾಗಿದ್ದಾರೆ. ಇವರು ಯಾವಾಗ ಎಂಗೇಜ್ಮೆಂಟ್ ಮಾಡ್ಕೊಂಡ್ರು ಕೇಳ್ತಿದ್ದಾರೆ.
ಪುಷ್ಪಾದ ಶ್ರೀವಲ್ಲಿ ಅಂದ್ರೆ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Pushpa Srivalli National Crush Rashmika Mandanna) ಹಾಗೂ ನಟ ವಿಜಯ್ ದೇವರಕೊಂಡ (Actor Vijay Devarakonda) ಪ್ರೀತಿ ಮಾಡ್ತಿದ್ದಾರೆ ಎಂಬ ವಿಷ್ಯ ಕೆಲ ದಿನಗಳಿಂದ ಚರ್ಚೆಯಲ್ಲಿದೆ. ಇಬ್ಬರೂ ಶೀಘ್ರವೇ ಮದುವೆ ಆಗಲಿದ್ದಾರೆ ಎನ್ನಲಾಗ್ತಿದೆ. ಆದ್ರೆ ಈಗ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ, ಸದ್ದಿಲ್ಲದೆ ಎಂಗೇಜ್ಮೆಂಟ್ ಮಾಡ್ಕೊಂಡಿದ್ದಾರಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಇದಕ್ಕೆ ಕಾರಣ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಒಟ್ಟಿಗಿರುವ ಮೂರು ಫೋಟೋ.
ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಕೆಲ ದಿನಗಳ ಹಿಂದೆ ಒಟ್ಟಿಗೆ ಕೆಫೆಯಲ್ಲಿ ಕಾಣಿಸಿಕೊಂಡಿದ್ದರು. ಅದಕ್ಕೂ ಮುನ್ನ ದೀಪಾವಳಿ ಹಬ್ಬವನ್ನು ರಶ್ಮಿಕಾ ಮಂದಣ್ಣ, ವಿಜಯ್ ಮನೆಯಲ್ಲಿ ಆಚರಿಸಿಕೊಂಡಿದ್ದರು. ಪುಷ್ಪಾ 2 (Pushpa 2) ಪ್ರಮೋಷನ್ ವೇಳೆ ರಶ್ಮಿಕಾ ಮಂದಣ್ಣಗೆ, ಪ್ರೀತಿ ಬಗ್ಗೆ ಕೇಳಲಾಗಿತ್ತು. ಆಗ ಹೆಸರು ಹೇಳದೆ, ಎಲ್ಲರಿಗೂ ಈ ವಿಷ್ಯ ಗೊತ್ತಿದೆ ಎಂದಿದ್ದರು ರಶ್ಮಿಕಾ. ಪುಷ್ಪಾ 2 ಸಿನಿಮಾವನ್ನು ವಿಜಯ್ ದೇವರಕೊಂಡ ಫ್ಯಾಮಿಲಿ ಜೊತೆ ರಶ್ಮಿಕಾ ವೀಕ್ಷಣೆ ಮಾಡಿದ್ದರು. ಈ ಎಲ್ಲ ಘಟನೆ ರಶ್ಮಿಕಾ ಹಾಗೂ ವಿಜಯ್ ಲವ್ ಮಾಡ್ತಿದ್ದಾರೆ ಎಂಬುದಕ್ಕೆ ಸ್ಪಷ್ಟನೆ ಸಿಕ್ಕಿತ್ತು. ಆದ್ರೆ ಈಗ ರಶ್ಮಿಕಾ ಹಾಗೂ ವಿಜಯ್ ಫೋಟೋ, ಇಬ್ಬರು ಎಂಗೇಜ್ಮೆಂಟ್ (Engagement) ಮಾಡ್ಕೊಂಡಿದ್ದಾರಾ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದ.
undefined
ಬಿಕನಿ ಧರಿಸಿ ಲಿಪ್ ಲಾಕ್ ಮಾಡಿದ ಕಪೂರ್ ಕಾಂದಾನ್ ಭಾವಿ ಸೊಸೆ
ಸಾಮಾಜಿಕ ಜಾಲತಾಣದಲ್ಲಿ ಇವರಿಬ್ಬರು ಒಟ್ಟಿಗೆ ಇರುವ ಫೋಟೋ ಪೋಸ್ಟ್ ಮಾಡಲಾಗಿದೆ. ರಶ್ಮಿಕಾ ಮತ್ತು ವಿಜಯ್ ಇಬ್ಬರೂ ಸಿಲ್ವರ್ ಬಣ್ಣದ ಬಟ್ಟೆಯಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲ ಚಿತ್ರದಲ್ಲಿ ರಶ್ಮಿಕಾ ಮತ್ತು ವಿಜಯ್ ಫೋಟೋಕ್ಕೆ ಪೋಸ್ ನೀಡಿದ್ದಾರೆ. ಎರಡನೇ ಫೋಟೋದಲ್ಲಿ ವಿಜಯ್ ಕುರ್ತಾದಲ್ಲಿದ್ರೆ ವಧುವಿನಂತೆ ಕೆಂಪು ಸೀರೆಯಲ್ಲಿ ರಶ್ಮಿಕಾ ಮಿಂಚಿದ್ದಾರೆ. ಮೂರನೇ ಫೋಟೋದಲ್ಲಿ ರಶ್ಮಿಕಾ ಮತ್ತು ವಿಜಯ್ ಒಬ್ಬರನ್ನೊಬ್ಬರು ನೋಡುತ್ತಿದ್ದು, ಇದು ಫ್ಯಾನ್ಸ್ ಮನಸ್ಸು ಗೆದ್ದಿದೆ.
ಫೋಟೋಗಳನ್ನು ಸರಿಯಾಗಿ ನೋಡಿದ್ರೆ ಇದು ರಶ್ಮಿಕಾ ಹಾಗೂ ವಿಜಯ್ ಫೋಟೋ ಅಲ್ಲ ಎಂಬುದು ಸ್ಪಷ್ಟವಾಗುತ್ತದೆ. ಎಐ ಸಹಾಯದಿಂದ ಫೋಟೋ ಸಿದ್ಧಪಡಿಸಲಾಗಿದೆ. ಅಭಿಮಾನಿಗಳು ಇವರಿಬ್ಬರ ಮದುವೆ ನೋಡಲು ಕಾತುರರಾಗಿದ್ದಾರೆ. ಹಾಗಾಗಿ ತಮ್ಮದೇ ಕಲ್ಪನೆಯಲ್ಲಿ ವಿಜಯ್ ಹಾಗೂ ರಶ್ಮಿಕಾರನ್ನು ಸಿದ್ಧಪಡಿಸಿದ್ದಾರೆ. rashmika_mandamna ಇನ್ಸ್ಟಾ ಖಾತೆಯಲ್ಲಿ ಫೋಟೋ ಪೋಸ್ಟ್ ಮಾಡಲಾಗಿದೆ. ಕನಸು ನನಸಾಯಿತು, ನಾನು ಈ ಶೀರ್ಷಿಕೆಯನ್ನು ಯಾವಾಗ ಬಳಸಬಹುದು ಎಂಬ ಶೀರ್ಷಿಕೆ ಹಾಕಲಾಗಿದೆ. ಇದನ್ನು ನೋಡಿದ ಅಭಿಮಾನಿಗಳು ದಂಗಾಗಿದ್ದಾರೆ. ಇದು ನಿಜವೆಂದು ನಾವು ಭಾವಿಸಿದ್ದೆವು. ಇದು ಎಐ ಎನ್ನಲು ಸಾಧ್ಯವೇ ಇಲ್ಲ ಎಂದು ಅನೇಕ ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. ಸೂರ್ಯಾ ಮತ್ತು ಜ್ಯೋತಿಕಾ ನಂತ್ರ ಅತ್ಯಂತ ಬೆಸ್ಟ್ ಜೋಡಿ ಇವರು ಎಂದು ಬಳಕೆದಾರರು ಕಮೆಂಟ್ ಮಾಡಿದ್ದಾರೆ. ಇಬ್ಬರನ್ನು ಈ ಸ್ಥಾನದಲ್ಲಿ ನೋಡಲು ಕಾಯ್ತಿದ್ದೇವೆ, ಬೆಸ್ಟ್ ಕಪಲ್ ಹೀಗೆ ಫ್ಯಾನ್ಸ್, ರಶ್ಮಿಕಾ ಹಾಗೂ ವಿಜಯ್ ಜೋಡಿಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಟಿ ಕೀರ್ತಿ ಸುರೇಶ್ ಸಿನಿಮಾಗೆ ಗುಡ್ ಬೈ ಹೇಳಲಿದ್ದಾರೆ ಎಂಬುದಕ್ಕೆ ಇಲ್ಲಿದೆ ನೋಡಿ ಸಾಕ್ಷಿ!
ವಿಜಯ್ ಹಾಗೂ ರಶ್ಮಿಕಾ ತಾವಿಬ್ಬರು ಪ್ರೀತಿ ಮಾಡ್ತಿರೋದಾಗಿ ಎಲ್ಲಿಯೂ ಹೇಳಿಕೊಂಡಿಲ್ಲ. ಸಂದರ್ಶನವೊಂದರಲ್ಲಿ ವಿಜಯ್, ರಿಲೇಶನ್ಶಿಪ್ ನಲ್ಲಿ ಇರೋದಾಗಿ ಹೇಳಿದ್ದರು. ಸಹ ನಟಿ ಜೊತೆ ಸಂಬಂಧದಲ್ಲಿರುವ ಬಗ್ಗೆ ಹಾಗೂ ನಟಿಯರು ಮತ್ತು ಮದುವೆ ಬಗ್ಗೆ ಮಾತನಾಡಿದ್ದರು. ಆದ್ರೆ ಎಲ್ಲಿಯೂ ರಶ್ಮಿಕಾ ಹೆಸರನ್ನು ಬಾಯ್ಬಿಟ್ಟಿಲ್ಲ. ರಶ್ಮಿಕಾ ಕೂಡ, ವಿಜಯ್ ಪ್ರೀತಿ ಮಾಡ್ತಿರೋದಾಗಿ ಹೇಳಿಲ್ಲ. ಸದ್ಯ ವಿಜಯ್ ಹಾಗೂ ರಶ್ಮಿಕಾ, ಸಿನಿಮಾ ಶೂಟಿಂಗ್ ನಲ್ಲಿ ಬ್ಯೂಸಿಯಾಗಿದ್ದಾರೆ. ಪುಷ್ಪಾ 2 ಸಕ್ಸಸ್ ಮಧ್ಯೆಯೇ ಬಾಲಿವುಡ್ ಸಿನಿಮಾದಲ್ಲಿ ರಶ್ಮಿಕಾ ಬ್ಯುಸಿಯಾಗಿದ್ದಾರೆ.