ಮಾಜಿ ಪೋರ್ನ್ ನಟಿ ಸನ್ನಿ‌ ಲಿಯೋನ್‌ಗಿದ್ದಾಳೆ ಒಬ್ಳು ಗರ್ಲ್ ಫ್ರೆಂಡ್!

Suvarna News   | Asianet News
Published : Jul 08, 2020, 04:24 PM ISTUpdated : Jul 08, 2020, 04:25 PM IST
ಮಾಜಿ ಪೋರ್ನ್ ನಟಿ ಸನ್ನಿ‌ ಲಿಯೋನ್‌ಗಿದ್ದಾಳೆ ಒಬ್ಳು ಗರ್ಲ್ ಫ್ರೆಂಡ್!

ಸಾರಾಂಶ

ಸನ್ನಿ ಲಿಯೋನ್ ಬೈ ಸೆಕ್ಷುಯಲ್. ಅಂದ್ರೆ ಉಭಯ ಲಿಂಗ ಕಾಮಿ. ಲಾಸ್ ಏಂಜಲೀಸ್‌ನಲ್ಲಿ ತಮ್ಮ ಗೆಳತಿಯ ಜೊತೆಗಿನ ಫೋಟೋಗಳನ್ನು ಇನ್‌ಸ್ಟಗ್ರಾಂನಲ್ಲಿ ಹಾಕೊಂಡಿದ್ದಾರೆ.  

ಇತ್ತೀಚೆಗೆ ಭಾರತದಿಂದ ಅಮೆರಿಕದ ಲಾದ್ ಏಂಜಲೀಸ್‌ಗೆ ಹೋಗಿದ್ದಾರೆ ಖ್ಯಾತ ನಟಿ ಸನ್ನಿ ಲಿಯೋನ್. ಅಲ್ಲಿ ತಮ್ಮ ಗೆಳತಿಯ ಜೊತೆಗೆ ಮೋಜು ಮಸ್ತಿ ಉಡಾಯಿಸ್ತಿದಾರೆ. ಸನ್ನಿಯ ಇನ್‌ಸ್ಟಗ್ರಾಂ ಅಕೌಂಟ್‌ಗೆ ಹೋದರೆ ಅಲ್ಲಿ ಆಕೆಯ ಜೊತೆ ಸನ್ನಿ ಬ್ಲ್ಯಾಕ್ ಬಿಕಿನಿಯಲ್ಲಿ ತಬ್ಬಿಕೊಂಡು ಫೊಟೋಗೆ ಪೋಸ್ ಕೊಡುತ್ತಿರುವ, ಸ್ವಿಮ್ಮಿಂಗ್ ಪೂಲ್‌ಗೆ ಜಿಗಿಯುತ್ತಿರುವ ವಿಡಿಯೋಗಳನ್ನು ನೋಡಬಹುದು.

ಸನ್ನಿ ಉಭಯ ಲಿಂಗ ಕಾಮಿ ಅಥವಾ ಬೈ ಸೆಕ್ಷುಯಲ್. ಅಂದರೆ ಗಂಡಿನ ಜೊತೆಗೂ ಹೆಣ್ಣಿನ ಜೊತೆಗೂ ಲೈಂಗಿಕ ಸುಖ ಹೊಂದಬಲ್ಲರು. ಹಾಗೆಂದು ಅವರೇ ಹೇಳಿಕೊಂಡಿದ್ದರು. ಪೋರ್ನ್ ಇಂಡಸ್ಟ್ರಿಯಲ್ಲಿ ಇರುವ ನಟಿಯರು ಹೀಗೆ ಉಭಯ ಕಾಮಿಗಳಾಗಿರುವುದು ಸಾಮಾನ್ಯ. ಆಕೆಯ ಪೋರ್ನ್ ಸಿನಿಮಾಗಳಲ್ಲಿ ಕೂಡ ಆಕೆ ಇಬ್ಬರ ಜೊತೆಗೂ ನಟಿಸಿದ್ದು ಇದೆ. ಆದರೆ ಸನ್ನಿ ತಾನು ಬಾಲಿವುಡ್‌ಗೆ ಬಂದು ಫೇಮಸ್ ಆದ ಮೇಲೂ ಹಾಗೆ ಹೇಳಿಕೊಂಡಿರುವ ಧೈರ್ಯವನ್ನು ಮೆಚ್ಚಲೇಬೇಕು. ಸಲಿಂಗಕಾಮಿ‌ ಆಗಿರುವ ಒಬ್ಬ ಫೇಮಸ್ ಬಾಲಿವುಡ್ ನಿರ್ದೇಶಕ ಕೂಡ ತಾನು ಹಾಗೆ ಎಂದು ಹೇಳಿಕೊಳ್ಳಲು ಹಿಂಜರಿದಿದ್ದರು.

ಸನ್ನಿ ಲಿಯೋನ್‌ ತಮ್ಮ ಬರ್ತ್‌ಡೇಗೆ ಎರಡು ದಿನ ಮೊದಲು ಲಾಸ್‌ ಏಂಜಲೀಸ್‌ಗೆ ತೆರಳಿದ್ದರು. ಅದಕ್ಕೆ ಕಾರಣ ನೀಡಿರಲಿಲ್ಲ. ಆದರೆ ಮಕ್ಕಳು ಹಾಗೂ ಗಂಡನ ಜೊತೆಗೆ ಅಲ್ಲಿ ಸೇಫ್‌ ಆಗಿರಬಹುದು ಎಂಬ ಕಾರಣ ನೀಡಿದ್ದರು. ಬಹುಶಃ ಭಾರತದಲ್ಲಿ ಹೆಚ್ಚುತ್ತಿರುವ ಕೊರೋನಾ ವೈರಸ್‌ ಸೋಂಕಿನ ಪ್ರಕರಣಗಳು ಆಕೆಯ ನಿದ್ದೆ ಕೆಡಿಸಿರಬಹುದು. ಅಂತೂ ತಮ್ಮ ಬರ್ತ್‌ಡೇಯನ್ನು ಲಾಸ್ ಏಂಜಲೀಸ್‌ನ ತಮ್ಮ ವೈಭವೋಪೇತ ಮನೆಯಲ್ಲಿ ಆಚರಿಸಿಕೊಂಡಳು. ಸನ್ನಿ ಭಾರತದಲ್ಲಿ ಬಾಲಿವುಡ್‌ನಲ್ಲಿ ಫೇಮಸ್‌ ಆಗಿದ್ದರೂ ಮನಸ್ಸಿನಿಂದ ಎಂದೆಂದೂ ಅಮೆರಿಕನ್‌. ಆಕೆಯ ಪೌರತ್ವವೂ ಅಲ್ಲಿಯದೇ. ಆಕೆಯ ಮನೆಯೂ ಅಲ್ಲೇ ಇದೆ. 

ಸನ್ನಿ ಮೊದಲ ಸಾರಿ ಪೋರ್ನ್ ನೋಡಿದಾಗ ಏನ್ ಮಾಡಿದ್ರು? ಲಿಯೋನ್ ಫಸ್ಟ್ ಕಿಸ್ ಯಾರಿಗೆ? 

ಮೊದಲು ಪೋರ್ನ್ ಸಿನಿಮಾ ಮೂಲಕ ವಿಶ್ವಾದ್ಯಂತ ಸದ್ದು ಮಾಡಿದ ಈ ಮಾದಕ ಸುಂದರಿ ಯಾವತ್ತೂ ತನ್ನ ಹಿಸ್ಟರಿ ಬಗ್ಗೆ ಸಣ್ಣ ಪಾಪಪ್ರಜ್ಞೆಯನ್ನೂ ಹೊಂದಿದವಳಲ್ಲ. ಬದಲಾಗಿ ಉಳಿದೆಲ್ಲ ಪ್ರೊಫೆಶನ್ ಗಳ ಥರ ಅದೂ ಒಂದು ಫ್ರೊಫೆಶನ್ ಅಂತ ಅಂದುಕೊಂಡವಳು. ಬಾಲ್ಯದಲ್ಲಿ ಸ್ವತಃ ಪೋರ್ನ್ ಸಿನಿಮಾಗಳ ಬಗ್ಗೆ ಕುತೂಹಲಿಯಾಗಿದ್ದ ಈ ತುಂಬು ಚೆಲುವೆ, ತನ್ನ ಸಾಂಪ್ರದಾಯಿಕ ಫ್ಯಾಮಿಲಿಯಿಂದ ಬಂದ ತಾನು ಮುಂದೊಂದು ದಿನ ಈ ನೀಲಿ ಸಿನಿಮಾ ಜಗತ್ತಿನ ಅನಭಿಷಿಕ್ತ ರಾಣಿಯಾಗ್ತೀನಿ ಅಂತ ಕನಸೂ ಕಂಡವಳಲ್ಲ. ಆದರೆ ಅವಳ ಕುತೂಹಲ ಆಸಕ್ತಿಯಾಗಿ ಬದಲಾದದ್ದೇ ಅವಳು ನೀಲಿ ಜಗತ್ತಿನಲ್ಲಿ ತನ್ನ ಮೊದಲ ಹೆಜ್ಜೆಗಳನ್ನು ಇಡೋದಕ್ಕೆ ಕಾರಣವಾಯ್ತು. ಒಮ್ಮೆ ಆ ಇಂಡಸ್ಟ್ರಿಯ ಒಳ ಹೊಕ್ಕ ಸನ್ನಿ ಆಮೇಲೆ ಹಿಂತಿರುಗಿ ನೋಡಿದವಳಲ್ಲ. ಮೊದ ಮೊದಲು ಫ್ಯಾಮಿಲಿಯಿಮದ ಸಖತ್ ವಿರೋಧ ಬಂದರೂ ತನ್ನ ಆಸಕ್ತಿ, ತನ್ನ ಪ್ರೊಫೆಶನ್ ಅನ್ನು ಸಮರ್ಥಿಕೊಂಡು ಮುಂದುವರಿದಳು. ಒಂದು ಹಂತದ ಬಳಿಕ ಫ್ಯಾಮಿಲಿಯೂ ಅವಳನ್ನು ಒಪ್ಪಿಕೊಂಡದ್ದಾಯ್ತು. 

ಸನ್ನಿ ಲಿಯೋನ್ ನಂಬರ್ ಕೇಳಿ, ಸುದ್ದಿಯಾಗಿದ್ದ ಕಬೀರ್ ಬೇಡಿ! 

ಈಕೆ ಪೋರ್ನ್‌ ನಟಿಯಾಗುವ ಮುನ್ನ ಹಲವು ಕೆರಿಯರ್‌ಗಳನ್ನು ದಾಟಿ ಬಂದವಳು, ಬೇಕರಿಯಲ್ಲಿ ಕೆಲಸ ಮಾಡಿದಳು. ಟ್ಯಾಕ್ಸ್ ಮತ್ತು ರಿಟೈರ್‌ಮೆಂಟ್‌ ಸಂಸ್ಥೆಯೊಂದರಲ್ಲಿ ದುಡಿದಳು. ಇದಕ್ಕೂ ಮುನ್ನ ಪೀಡಿಯಾಟ್ರಿಕ್‌ ನರ್ಸ್ ಆಗಬೇಕೆಂದು ಬಯಸಿ ಆ ಕೋರ್ಸ್ ಮಾಡಿದ್ದಳು. ಆದರೆ ಇದ್ಯಾವುದೂ ಆಗಲಿಲ್ಲ. ಪೋರ್ನ್‌ ಇಂಡಸ್ಟ್ರಿ ಕೈಬೀಸಿ ಕರೆಯಿತು. ಬಯಸಿದ ಕೆಲಸ ಸಿಗದಿದ್ದಾಗ, ಸಿಕ್ಕಿದ ಕೆಲಸವನ್ನೇ ಅತ್ಯುತ್ತಮವಾಗಿ ಮಾಡಬೇಕು ಎಂಬುದಕ್ಕೆ ನಿದರ್ಶನ ಈಕೆ.

ಸನ್ನಿ ಲಿಯೋನ್‌ಗಿದ್ದಾಳೊಬ್ಬಳು ಗರ್ಲ್ ಫ್ರೆಂಡ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!