ಅಮ್ಮನಾದ ಬಳಿಕ ಇಂಗ್ಲೆಂಡ್​ ಪ್ರಧಾನಿಯಿಂದ ಆಹ್ವಾನ: ಲಂಡನ್​ಗೆ ಹಾರಿದ ಸೋನಮ್​ ಕಪೂರ್​

Published : Jun 29, 2023, 11:55 AM IST
ಅಮ್ಮನಾದ ಬಳಿಕ ಇಂಗ್ಲೆಂಡ್​ ಪ್ರಧಾನಿಯಿಂದ ಆಹ್ವಾನ: ಲಂಡನ್​ಗೆ ಹಾರಿದ ಸೋನಮ್​ ಕಪೂರ್​

ಸಾರಾಂಶ

ಅಮ್ಮನಾದ ಬಳಿಕ ಚಿತ್ರರಂಗದಿಂದ ದೂರವಾಗಿದ್ದ ನಟಿ ಸೋನಮ್​ ಕಪೂರ್​ ಅವರಿಗೆ ಇಂಗ್ಲೆಂಡ್​ ಪ್ರಧಾನಿಯಿಂದ ಕಾರ್ಯಕ್ರಮವೊಂದಕ್ಕೆ ಆಹ್ವಾನ ಬಂದಿದೆ.   

2018 ರಲ್ಲಿ  ಬಹುಕಾಲದ ಗೆಳೆಯ ಆನಂದ್ ಅಹುಜಾ ಅವರನ್ನು ವಿವಾಹವಾಗಿ ಇದೀಗ  ಗಂಡು ಮಗುವಿಗೆ ಜನ್ಮ ನೀಡಿದ ನಟಿ ಸೋನಮ್ ಕಪೂರ್ ಅಹುಜಾ ಚಿತ್ರಗಳಿಂದ ಸದ್ಯದ ಮಟ್ಟಿಗೆ ದೂರವಾಗಿದ್ದರು. ಸಾವರಿಯಾ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ಸೋನಂ ಕಪೂರ್ (Sonam Kapoor). ಸಿನಿಮಾಗಳಲ್ಲಿ ನಿರೀಕ್ಷೆಯಷ್ಟು ಬೆಳೆಯಲಿಲ್ಲ. ಅಪ್ಪ ಅನಿಲ್​ ಕಪೂರ್​ ಗಳಿಸಿದಷ್ಟು ಖ್ಯಾತಿ ಗಳಿಸಲಿಲ್ಲ.ಈಗ ಮಗ  'ವಾಯು' ಹುಟ್ಟಿದ ಬಳಿಕ ಚಿತ್ರರಂಗದಿಂದ ದೂರವಾಗಿದ್ದರು.   2019ರಲ್ಲಿ ರಿಲೀಸ್ ಆದ ‘ದಿ ಜೋಯಾ ಫ್ಯಾಕ್ಟರ್’ ಚಿತ್ರವೇ ಕೊನೆ. ಅದಾದ ಬಳಿಕ ಅವರು ಯಾವುದೇ ಚಿತ್ರಗಳಲ್ಲೂ ನಟಿಸಿಲ್ಲ. ಈಗ ನಾಲ್ಕು ವರ್ಷಗಳ ಬಳಿಕ  ‘ಬ್ಲೈಂಡ್’ ಚಿತ್ರಮಂದಿರದ ಮೂಲಕ ಕಮ್​ಬ್ಯಾಕ್​ ಆಗುವ ನಿರೀಕ್ಷೆಯಲ್ಲಿದ್ದರು. ಆದರೆ ಅವರಿಗೆ ಶಾಕಿಂಗ್​ ಎದುರಾಗಿದೆ. ಇದಕ್ಕೆ ಕಾರಣ ನಟಿಗೆ  ಯಾವುದೇ ಮಾಹಿತಿ ನೀಡದೆ, ‘ಬ್ಲೈಂಡ್’ ಚಿತ್ರವನ್ನು ಒಟಿಟಿಯಲ್ಲಿ ರಿಲೀಸ್ ಮಾಡಲು ನಿರ್ಮಾಪಕ ಸುಜಯ್ ಘೋಷ್ ನಿರ್ಧಾರ ತೆಗೆದುಕೊಂಡಿದ್ದು, ಇದು ನಟಿ ಸೋನಮ್​ ಅವರಿಗೆ ತುಂಬಾ ದುಃಖ ತಂದಿದೆ.  ಈ ವಿಚಾರದಲ್ಲಿ ನಿರ್ದೇಶಕರಾಗಲಿ, ನಿರ್ಮಾಪಕರಾಗಲಿ ಸೋನಂ ಅವರನ್ನು ಸಂಪರ್ಕಿಸಿಲ್ಲ ಎನ್ನಲಾಗಿದೆ. 

ಇದರ ನಡುವೆಯೇ, ಸೋನಂ ಅವರಿಗೆ ಸಂತಸದ ಸುದ್ದಿಯೊಂದು ಸಿಕ್ಕಿದೆ. ಅದೇನೆಂದರೆ, ಮಗುವಾದ ಬಳಿಕ ರೀ ಎಂಟ್ರಿ ಕೊಡುವ ಸಂದರ್ಭದಲ್ಲಿಯೇ ನಟಿಗೆ  ವಿವಿಧ ಜಾಗತಿಕ ವೇದಿಕೆಗಳಲ್ಲಿ ದೇಶವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿದೆ.  ನಟನೆಗೆ ಮರಳಲು ಸಜ್ಜಾಗುತ್ತಿರುವ ವೇಳೆಯೇ ನಟಿಗೆ ಇಂಗ್ಲೆಂಡ್​  ಪ್ರಧಾನ ಮಂತ್ರಿ ರಿಷಿ ಸುನಕ್ ಅವರು ಯುಕೆ-ಇಂಡಿಯಾ ವೀಕ್ 2023 ಕ್ಕೆ ನಟಿ ಸೋನಮ್​ ಕಪೂರ್​ ಅವರಿಗೆ ಆಹ್ವಾನ ಇತ್ತಿದ್ದಾರೆ.   ಸುನಕ್ ಅವರ ಅಧಿಕೃತ ನಿವಾಸ ಮತ್ತು 10 ಡೌನಿಂಗ್ ಸ್ಟ್ರೀಟ್‌ನಲ್ಲಿರುವ ಕಚೇರಿಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ.  ಇದು ಇಂಡಿಯಾ ಗ್ಲೋಬಲ್ ಫೋರಮ್‌ನ ಪ್ರಮುಖ ಈವೆಂಟ್ ಯುಕೆ-ಇಂಡಿಯಾ ವೀಕ್‌ನ (UK India Week) ಒಂದು ಭಾಗವಾಗಿದೆ, ಇದು ಜೂನ್ 26 ರಿಂದ ಜೂನ್ 30 ರವರೆಗೆ ಲಂಡನ್‌ನಲ್ಲಿ ನಡೆಯಲಿದ್ದು ಇದರಲ್ಲಿ ಸೋನಮ್ ಇಂದು ಪಾಲ್ಗೊಳ್ಳಲಿದ್ದಾರೆ.  ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ವೈರಲ್​ ಆಗಿದೆ. 

ಮಗುವಿಗೆ ಎದೆಹಾಲು ಉಣಿಸುತ್ತಾ ಸೌಂದರ್ಯದ ಕುರಿತು ಮಾತನಾಡಿದ ನಟಿ ಸೋನಂ ಕಪೂರ್​

ಇತ್ತೀಚೆಗಷ್ಟೇ ನಟಿ ಸೋನಮ್​  ಕಪೂರ್​ ಅವರು ಮಗುವಿಗೆ ಸ್ತನ್ಯಪಾನ ಮಾಡಿಸುವ ಮೂಲಕ ಜಾಗೃತಿ ಮೂಡಿಸಿ ಸಕತ್​ ಸುದ್ದಿಯಾಗಿದ್ದರು.  ಸುದ್ದಿಯಾಗಲು ಕಾರಣ, ಹಲವು ಸೆಲೆಬ್ರಿಟಿಗಳು  ತಮ್ಮ ಸೌಂದರ್ಯ ಎಲ್ಲಿ ಕುಗ್ಗುತ್ತದೆಯೋ ಎಂಬ ಭಯದಿಂದ  ಮಗುವನ್ನು ಪಡೆಯಲು ಹಿಂಜರಿಯುವುದು ಉಂಟು. ಇದೇ  ಕಾರಣಕ್ಕೆ ಕೆಲವು ಸೆಲೆಬ್ರಿಟಿಗಳು ಬಾಡಿಗೆ ತಾಯ್ತನದ (Surrogacy) ಮೊರೆ ಹೋಗಿರುವುದನ್ನು ನೋಡಿದ್ದೇವೆ.  ಇನ್ನು ಅಕಸ್ಮಾತ್​ ಮಗು ಹುಟ್ಟಿದರೆ ಎದೆಹಾಲನ್ನು ಕುಡಿಸಲು ಹಿಂದೇಟು ಹಾಕುವವರೂ ಇದ್ದಾರೆ.  ಆದರೆ ಸೌಂದರ್ಯಕ್ಕಿಂತ ಜೀವನದಲ್ಲಿ ಒಮ್ಮೆಯೋ, ಎರಡು ಬಾರಿಯೋ ಸಿಗುವ ತಾಯ್ತನದ ಸಂಪೂರ್ಣ ಸುಖವನ್ನು ಅನುಭವಿಸಬೇಕು ಎಂದು ಹೇಳುವ ಮೂಲಕ ಮಗುವಿಗೆ ಎದೆ ಹಾಲು ಉಣಿಸುವ ಕುರಿತು ಸೋನಮ್​ ಸಾಮಾಜಿಕ ಜಾಲತಾಣದಲ್ಲಿ ಅರಿವು ಮೂಡಿಸಿದ್ದರು. 

ಇನ್ನು ಸೋನಮ್​ ಅವರ ವೃತ್ತಿ ಜೀವನದ ಕುರಿತು ಹೇಳುವುದಾದರೆ, ಸಾವರಿಯಾ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ಸೋನಂ ಕಪೂರ್ (Sonam Kapoor) ಅವರಿಗೆ ಸಿನಿಮಾಗಳಲ್ಲಿ ನಿರೀಕ್ಷೆಯಷ್ಟು ಬೆಳೆಯಲಿಲ್ಲ. ಅಪ್ಪ ಅನಿಲ್​ ಕಪೂರ್​ ಗಳಿಸಿದಷ್ಟು ಖ್ಯಾತಿ ಗಳಿಸಲಿಲ್ಲ. ಈ ನಡುವೆಯೇ ಮದುವೆ, ಮಗು ಎಂದು ಬಿಜಿಯಾದ ನಟಿ  ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ಮಗುವಿನ ಜೊತೆ ಮುದ್ದಾದ ಫೋಟೋವನ್ನು ಹಂಚಿಕೊಂಡಿದ್ದರು. ಮಗುವಿನ ಹೆಸರಿನ ಔಚಿತ್ಯವನ್ನೂ ಅವರು ಬರೆದುಕೊಂಡಿದ್ದರು. ‘ನಮ್ಮ ಜೀವನಕ್ಕೆ ಹೊಸ ಉಸಿರು ಸೇರಿಸಲಾಗಿದೆ. ಭಗವಾನ್ ಹನುಮಾನ್ ಮತ್ತು ಭೀಮನ ರೂಪದಲ್ಲಿ ನಮ್ಮ ಶಕ್ತಿ ಮತ್ತು ಧೈರ್ಯದ ಸಂಕೇತ. ಅವರ ಪುತ್ರ ವಾಯು ಕಪೂರ್ ಅಹುಜಾಗೆ ಎಲ್ಲರ ಆಶೀರ್ವಾದವನ್ನು ಬಯಸುತ್ತಿದ್ದಾರೆ. ಹಿಂದೂ ಧರ್ಮದಲ್ಲಿರುವ ಪಂಚಭೂತಗಳಲ್ಲಿ ವಾಯುವೂ (Vayu) ಒಂದು. ವಾಯುವು ತನ್ನಲ್ಲಿರುವ ಪ್ರಬಲ ದೇವರು. ಅದಕ್ಕಾಗಿಯೇ ನಮ್ಮ ಮಗನಿಗೆ ವಾಯು ಎಂದು ಹೆಸರಿಟ್ಟಿದ್ದೇವೆ ಎಂದಿದ್ದರು.

ವಯಸ್ಸಿನ ಗುಟ್ಟು ತಿಳಿಸಿ ಹುಬ್ಬೇರಿಸುವಂತೆ ಮಾಡಿದ ಮಾಜಿ ಪೋರ್ನ್​ ಸ್ಟಾರ್​ ಸನ್ನಿ ಲಿಯೋನ್​
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

700 ಕೋಟಿಗೂ ಹೆಚ್ಚು ಆಸ್ತಿ, 10 ವರ್ಷ ಚಿಕ್ಕವನನ್ನು ಮದುವೆಯಾದ ನಟಿ, ಬೆಡ್‌ರೂಮ್ ಸೀಕ್ರೆಟ್ ಹೇಳಿದ್ಯಾರು?
ಪವನ್ ಕಲ್ಯಾಣ್, ಅಲ್ಲು ಅರ್ಜುನ್ ಜೊತೆ ರಾಜಮೌಳಿ ಯಾಕೆ ಸಿನಿಮಾ ಮಾಡಿಲ್ಲ? ಕಾರಣ ಕೇಳಿದ್ರೆ ಆಶ್ಚರ್ಯಪಡ್ತೀರಾ!