ಸಂದರ್ಶನದ ನೇರಪ್ರಸಾರದಲ್ಲಿಯೇ ನಿರೂಪಕಿ ಎದ್ರು ಶರ್ಟ್ ಬಿಚ್ಚಿ ಸುದ್ದಿಯಾಗಿದ್ದಾರೆ ನಟ ಶೈನ್ ಟಾಮ್ ಚಾಕೋ
ಮಲಯಾಳಂ ಸಿನಿಮಾ ರಂಗದಲ್ಲಿ ಖಳನಾಯಕನ ಪಾತ್ರಗಳಲ್ಲಿ ಮಿಂಚು ಹರಿಸಿರುವ ಶೈನ್ ಟಾಮ್ ಚಾಕೋ (Shine Tom Chacko), ಸಂದರ್ಶನವೊಂದರಲ್ಲಿ ನಿರೂಪಕಿಯನ್ನು ಮುಜುಗರಕ್ಕೆ ಸಿಲುಕಿರುವ ಘಟನೆ ನಡೆದಿದೆ. ತೆಲಗು ಟಿ.ವಿ. ಸಂದರ್ಶನವೊಂದರಲ್ಲಿ ಈ ಘಟನೆ ನಡೆದಿದೆ. ನಿರೂಪಕಿಯೊಬ್ಬರ ಅವರ ಸಂದರ್ಶನ ಮಾಡುತ್ತಿದ್ದ ವೇಳೆ ಶರ್ಟ್ ಬಟನ್ ಬಿಚ್ಚಿ ಮುಜುಗರಕ್ಕೆ ಸಿಲುಕಿಸಿರುವ ಘಟನೆ ಇದಾಗಿದೆ. ಇವರ ಅವಸ್ಥೆ ನೋಡಿ ನಿರೂಪಕಿಯೂ ಕಕ್ಕಾಬಿಕ್ಕಿಯಾದರು. ತೆಲುಗಿನ ಆನ್ಲೈನ್ ಪೋರ್ಟಲ್ ಮನಾ ಸ್ಟಾರ್ಸ್ಗೆ ಸಿನಿಮಾ ಕುರಿತು ಸಂದರ್ಶನ ನೀಡುವಾಗ ಈ ವಿಲಕ್ಷಣ ಘಟನೆ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social media) ವೈರಲ್ ಆಗುತ್ತಿದ್ದು, ಥಹರೇವಾರಿ ಕಮೆಂಟ್ಗಳ ಸುರಿಮಳೆಯಾಗುತ್ತಿದೆ.
ಮಲಯಾಳಂ (Malayalam) ಸಿನಿಮಾ ರಂಗದಲ್ಲಿ ಖಳನಾಯಕನ ಪಾತ್ರಗಳಲ್ಲಿ ಮಿಂಚುತ್ತಿರುವ ಶೈನ್, ಅನೇಕ ಸಂದರ್ಶನಗಳಲ್ಲಿ ಹಾಸ್ಯ ಚಟಾಕಿ ಹಾರಿಸುತ್ತಲೇ ಇರುತ್ತಾರೆ. ಈ ವಿಡಿಯೋದಲ್ಲಿಯೂ ಹಾಗೆಯೇ ಆಗಿದೆ. ಅಂದಹಾಗೆ ಆಗಿದ್ದೇನೆಂದರೆ, ಶೈನ್ ಟಾಮ್ ಚಾಕೋ ಸಂದರ್ಶನಕ್ಕೆ ಆಗಮಿಸಿದ್ದರು. ರಂಗಬಾಲಿ ನಿರ್ದೇಶಕ ಪವನ್ ಬಾಸಮಸೆಟ್ಟಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನಿರೂಪಕಿ ಅವರಿಗೆ ಪ್ರಶ್ನೆ ಕೇಳುತ್ತಿದ್ದರು. ಒಂದು ಹಂತದಲ್ಲಿ ಶೈನ್ ಧರಿಸಿದ್ದ ಶರ್ಟ್ ಕುರಿತು ಏನೋ ಮಾತುಕತೆಯಾಯಿತು. ಆಗ ಅವರು ದಿಢೀರ್ ಅಂತ ಶರ್ಟ್ ಬಟನ್ ಬಿಚ್ಚಲು ಆರಂಭಿಸಿದರು. ಈ ವೇಳೆ ಪಕ್ಕದಲ್ಲಿ ಕುಳಿತಿದ್ದ ಪವನ್ ತಡೆಯಲು ಯತ್ನಿಸಿದರು.
ನನ್ನ ಗಂಡ ಐಸಿಸ್ ಅಲ್ಲ, ಮಕ್ಕಳೇನು ಜಿಹಾದಿಗಳಾಗಲ್ಲ... ನಟಿ ಪ್ರಿಯಾಮಣಿ ಗರಂ ಗರಂ
ಆದರೆ, ಆ್ಯಂಕರ್ ಶೈನ್ರನ್ನು ಹುರಿದುಂಬಿಸುವ ಮೂಲಕ ಕಾಲೆಳೆಯಲು ಯತ್ನಿಸಿದರು. ಯಾವಾಗ ಶೈನ್ ಶರ್ಟ್ ಬಿಚ್ಚಲು ಮೇಲೆ ಏಳಲು ಪ್ರಯತ್ನಿಸುತ್ತಿದ್ದಂತೆ ಕಕ್ಕಾಬಿಕ್ಕಿಯಾದ ಆ್ಯಂಕರ್, ತಮ್ಮ ಮಾತನ್ನು ಹಿಂಪಡೆದು ಶೈನ್ ಅವರನ್ನು ತಡೆದರು. ಈ ವೇಳೆ ಶೈನ್ ಸುಮ್ಮನೆ ಕುಳಿತುಕೊಂಡರು.
ಅಂದಹಾಗೆ 40 ವರ್ಷದ ಶೈನ್ ಟಾಮ್ ಚಾಕೊ ಮಲಯಾಳಂ ಚಿತ್ರರಂಗದಲ್ಲಿ ಕೆಲಸ ಮಾಡುವ ಮಾಜಿ ಸಹಾಯಕ ನಿರ್ದೇಶಕ ಕೂಡ. ಇವರು ಸುಮಾರು 9 ವರ್ಷಗಳ ಕಾಲ ನಿರ್ದೇಶಕ ಕಮಲ್‌ಗೆ ಸಹಾಯಕರಾಗಿ ಕೆಲಸ ಮಾಡಿದ್ದರು. ನಂತರ ಅವರು ಗಡ್ಡಮಾ (Gaddama) ಚಿತ್ರದ ಮೂಲಕ ನಟನೆಗೆ ಕಾಲಿಟ್ಟರು. ಅವರು ಈ ಅದುತಾ ಕಾಲತು, ಅನ್ನಯುಮ್ ರಸೂಲುಮ್ ಮತ್ತು ಮಸಾಲಾ ರಿಪಬ್ಲಿಕ್ ಸೇರಿದಂತೆ ಹಲವಾರು ಚಲನಚಿತ್ರಗಳಲ್ಲಿ ಪೋಷಕ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಬಿನು ಎಸ್ ಕಾಲಡಿ ಅವರ ಫ್ಯಾಂಟಸಿ-ಹಾಸ್ಯ ಚಲನಚಿತ್ರದಲ್ಲಿ ಮೊದಲ ಪ್ರಮುಖ ಪಾತ್ರವನ್ನು ನಿರ್ವಹಿಸಿದರು.
ದಿ ಕೇರಳ ಸ್ಟೋರಿಯ ಬಳಿಕವೀಗ ಕೇರಳ ಫೈಲ್ಸ್: ವೇಶ್ಯೆ ಸುತ್ತ ಸುತ್ತುತ್ತೆ ಈ ಸಿನಿಮಾ...
ಅವರು ನಟಿಸಿದ್ದ ವರ ಗಡ್ಡಮಾ ಸೌದಿ ಅರೇಬಿಯಾದ ಮರುಭೂಮಿಯಲ್ಲಿ ಹಿಂಸಿಸಲ್ಪಟ್ಟ ಮತ್ತು ಗುಲಾಮನಂತೆ ನಡೆಸಿಕೊಳ್ಳುವ ವಲಸಿಗನ ಪಾತ್ರ ಅವರಿಗೆ ಸಕತ್ ಹೆಸರು ತಂದು ಕೊಟ್ಟಿತು. ನಂತರ ಶೈನ್ ಅವರು ಬಾಡಿ ಸ್ವ್ಯಾಪಿಂಗ್ ಕುರಿತು ವ್ಯವಹರಿಸುವ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು. ಇದು ಬಿಡುಗಡೆಯಾಗಿದ್ದು 2014ರಲ್ಲಿ. ಈ ಚಲನಚಿತ್ರವು 2014ರಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಲನಚಿತ್ರವಾಗಿ ಹೊರಹೊಮ್ಮಿತು. ನಂತರ ಶೈನ್ ಅವರು ಕಮ್ಮಟಿಪಾಡಂ (2016) ನಲ್ಲಿ ನೆಗೆಟಿವ್ ರೋಲ್ನಲ್ಲಿ (Negative role) ಕಾಣಿಸಿಕೊಂಡರು. ಅದೇ ವರ್ಷ ಅವರು ಆನ್ಮರಿಯ ಕಲಿಪ್ಪಿಲಾನು ಚಿತ್ರದಲ್ಲಿ ಗಮನಾರ್ಹ ಪಾತ್ರವನ್ನು ನಿರ್ವಹಿಸಿದರು. ದಮ್ ಮತ್ತು ಕಿಂಡರ್ ಇನ್ ಚಿತ್ರದಲ್ಲಿ ಆಂಟನಿಯಾಗಿ ಶೈನ್ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.