
ಸೆಲೆಬ್ರಿಟಿಗಳು ಎಲ್ಲೇ ಹೋದ್ರೂ ಪಾಪರಾಜಿಗಳು ಮಾತ್ರವಲ್ಲ ಫ್ಯಾನ್ಸ್ ಜೊತೆ ಭಿಕ್ಷುಕರೂ ಅವರ ಹಿಂದೆ ಬರ್ತಾರೆ. ಬಾಲಿವುಡ್ ಸೆಲೆಬ್ರಿಟಿಗಳು ಫೋಟೋಕ್ಕೆ ಪೋಸ್ ನೀಡಿ, ಫ್ಯಾನ್ಸ್ ಅತ್ಯುತ್ಸಾಹವನ್ನು ಕಂಟ್ರೋಲ್ ಮಾಡಿ ಭಿಕ್ಷುಕರಿಗೆ ಆಹಾರ, ಹಣ ನೀಡಿ ಕಾರ್ ಹತ್ತುವ ಅನೇಕ ಸೆಲೆಬ್ರಿಟಿಗಳ ವಿಡಿಯೋ ಆಗಾಗ ವೈರಲ್ ಆಗ್ತಿರುತ್ತದೆ. ಈಗ ಸಾರಾ ಅಲಿ ಖಾನ್ (Sarah Ali Khan) ಸರದಿ. ಬಾಲಿವುಡ್ ನಟಿ ಸಾರಾ ಅಲಿ ಖಾನ್, ಹಿಂದೆ ಬರೋರೆಲ್ಲ ಭಿಕ್ಷುಕರು, ಅಸಹಾಯಕರು ಅಂತ ಭಾವಿಸಿದಂತಿದೆ. ಹಾಗಾಗಿ ಸೈಕಲ್ ಮೇಲೆ ಬಂದ ವ್ಯಕ್ತಿಗೆ ಬಿಸ್ಕಿಟ್ ನೀಡಲು ಮುಂದಾಗಿದ್ದಾರೆ. ಆದ್ರೆ ಆ ವ್ಯಕ್ತಿ ನೀಡಿದ ಪ್ರತಿಕ್ರಿಯೆ ಹಾಗೂ ಸಾರಾ ಅಲಿ ಖಾನ್ ರಿಯಾಕ್ಷನ್ ಸದ್ಯ ನೆಟ್ಟಿಗರ ಬಾಯಿಗೆ ಆಹಾರವಾಗಿದೆ. ಸಾರಾ ಅಲಿ ಖಾನ್ ಕ್ರಮವನ್ನು ನೆಟ್ಟಿಗರು ವಿರೋಧಿಸ್ತಿದ್ದಾರೆ.
ಮುಂಬೈ (Mumbai)ನ ಬಾಂದ್ರಾದಲ್ಲಿ ಸಾರಾ ಅಲಿ ಖಾನ್ ಕಾರು ಹತ್ತಲು ಮುಂದಾಗಿದ್ದಾರೆ. ಈ ವೇಳೆ ಸೈಕಲ್ ನಲ್ಲಿ ಅವರ ಬಳಿ ಬಂದ ವ್ಯಕ್ತಿಯನ್ನು ಗಮನಿಸಿದ್ದಾರೆ. ಸಾರಾ, ಕಾರ್ ನಲ್ಲಿದ್ದ ಎರಡು ಬಿಸ್ಕಿಟ್ ಪ್ಯಾಕೆಟ್ ತೆಗೆದು ಆ ವ್ಯಕ್ತಿಗೆ ನೀಡಲು ಮುಂದಾಗಿದ್ದಾರೆ. ಆದ್ರೆ ಆ ವ್ಯಕ್ತಿ ಅದನ್ನು ವಿರೋಧಿಸಿದ್ದಾರೆ. ನನಗೆ ಬಿಸ್ಕಿಟ್ ಬೇಡ ಎಂದಿದ್ದಾರೆ. ಇದನ್ನು ಕೇಳಿದ ಸಾರಾ ಸ್ವಲ್ಪ ಮುಜುಗರಕ್ಕೊಳಗಾಗಿದ್ದಾರೆ. ತಕ್ಷಣ ಬಿಸ್ಕಿಟ್ ಪ್ಯಾಕನ್ನು ಕಾರಿನಲ್ಲಿಟ್ಟು, ಕಾರ್ ಡೋರ್ ಹಾಕಿಕೊಂಡಿದ್ದಾರೆ.
ನನ್ನ ಅರ್ಧ ವಯಸ್ಸಿನ ಹುಡುಗರು ಡೇಟಿಂಗ್‌ಗೆ ಕರೀತಿದ್ದಾರೆ.. 50 ಆದ್ರೂ ಮದುವೆಗೆ
ಸೋಶಿಯಲ್ ಮೀಡಿಯಾದಲ್ಲಿ ಈ ಕ್ಲಿಪ್ ವೈರಲ್ ಆಗಿದೆ. ಸಾರಾ ಅಲಿ ಖಾನ್ ಕಾರಿನ ಬಳಿ ಬಂದಿದ್ದ ವ್ಯಕ್ತಿ ಯಾರು, ಆತನಿಗೆ ಏನು ಬೇಕಾಗಿತ್ತು ಎಂಬುದು ಕ್ಲಿಪ್ ನಲ್ಲಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಬರೀ ಸಾರಾ ಅಲಿ ಖಾನ್ ಬಿಸ್ಕಿಟ್ ನೀಡಿದ್ದು ಹಾಗೇ ಆತ ಅದನ್ನು ನಿರಾಕರಿಸಿದ ಕ್ಲಿಪ್ ಇದೆ. ಸಾರಾ ಅಲಿ ಖಾನ್ ವಿಡಿಯೋ ನೋಡಿದ ಬಳಕೆದಾರರು ಸಾರಾ ಕೆಲ್ಸವನ್ನು ಖಂಡಿಸಿದ್ದಾರೆ. ಬೇಕಾದಷ್ಟು ಹಣವಿದೆ, ಆಸ್ತಿ ಇದೆ. ಸಾರಾ, ಬೇಡಿ ಬಂದವರಿಗೆ ಊಟ ನೀಡ್ಬಹುದಿತ್ತು ಇಲ್ಲ ಹಣ ನೀಡಬಹುದಿತ್ತು. ಆದ್ರೆ 10 ರೂಪಾಯಿ ಬಿಸ್ಕಿಟ್ ನೀಡಿದ್ದಾರೆ ಎನ್ನುವ ಕಮೆಂಟ್ ಎಲ್ಲ ಕಡೆ ಕಾಣ ಸಿಗ್ತಿದೆ. ಅಷ್ಟೇ ಅಲ್ಲ ಸೈಕಲ್ ನಲ್ಲಿ ಬಂದ ವ್ಯಕ್ತಿಯನ್ನು ಸಾರಾ ಹೇಗೆ ಭಿಕ್ಷುಕ ಎಂದುಕೊಂಡ್ರು? ಸೆಲೆಬ್ರಿಟಿ ಕೊಟ್ಟಿದ್ದೆಲ್ಲ ಜನರು ತೆಗೆದುಕೊಳ್ಳೋದಿಲ್ಲ. ಆರೋಗ್ಯ ಹಾಳು ಮಾಡುವ ಬಿಸ್ಕಿಟನ್ನು ಏಕೆ ನೀಡ್ಬೇಕಿತ್ತು ಅನ್ನೋದು ಮತ್ತೆ ಕೆಲವರ ವಾದ.
ಮತ್ತೊಂದಿಷ್ಟು ಮಂದಿ ಸಾರಾ ಅಲಿ ಖಾನ್ ಪರ ಮಾತನಾಡಿದ್ದಾರೆ. ಕಾರಿನಲ್ಲಿ ಏನಿದೆಯೋ ಅದನ್ನು ಸಾರಾ ನೀಡಿದ್ದಾರೆ. ಈಗಿನ ಭಿಕ್ಷುಕರಿಗೆ ಆಹಾರ ಬೇಡ. ಹಣ ಬೇಕು. ಅದೂ ಸೆಲೆಬ್ರಿಟಿಗಳಿಂದ 100, 500 ರೂಪಾಯಿ ಬೇಡಿಕೆ ಇಡ್ತಾರೆ, ಬಿಸ್ಕಿಟ್ ಆರೋಗ್ಯಕ್ಕೆ ಹಾನಿಕರ ಎಂಬುದು ಅವರಿಗೂ ಗೊತ್ತಾಗಿದೆ. ಬಾಲಿವುಡ್ ಸೆಲೆಬ್ರಿಟಿಗಳು ಸಕ್ಕರೆಯಿಂದ ದೂರ ಇರುವಂತೆ ಈ ಭಿಕ್ಷುಕರು ಕೂಡ ಸಕ್ಕರೆ ಸೇವನೆ ಮಾಡೋದಿಲ್ಲ ಅಂತ ಬಳಕೆದಾರರು ಕಮೆಂಟ್ ಮಾಡಿದ್ದಾರೆ. ಸಹಾಯ ಮಾಡಲು ಹೋಗಿ ಸಾರಾ ಟ್ರೋಲ್ ಆಗಿದ್ದಂತೂ ಸತ್ಯ.
ಬಾಲಯ್ಯರಿಂದ ಅನಿರೀಕ್ಷಿತ ಸರ್ಪ್ರೈಸ್.. ಅಖಂಡ 2 ಹೊಸ ರಿಲೀಸ್ ಡೇಟ್ ಫಿಕ್ಸ್: ಈ ಚಿತ್ರಗಳಿಗೆ ದೊಡ್ಡ ಹೊಡೆತ
ಇನ್ನು ಅವರ ಸಿನಿಮಾ ಬಗ್ಗೆ ಹೇಳೋದಾದ್ರೆ ಸಾರಾ ಅಭಿನಯದ ಎರಡು ಸಿನಿಮಾ 2025 ರಲ್ಲಿ ತೆರೆ ಕಂಡಿದೆ. ಸ್ಕೈ ಫೋರ್ಸ್ ಮತ್ತು ಮೆಟ್ರೋ ಇನ್ ಡಿನೋದಲ್ಲಿ ಸಾರಾ ನಟಿಸಿದ್ದಾರೆ. ಮಾರ್ಚ್ 4, 2026 ರಂದು ಪತಿ ಪತ್ನಿ ಔರ್ ವೋ 2 ತೆರೆಗೆ ಬರಲಿದೆ. ಇದಲ್ದೆ ಫಾರೆಸ್ಟ್ - ಫೋರ್ಸ್ ಆಫ್ ದಿ ಫಾರೆಸ್ಟ್ ಮೇ 2026 ರಲ್ಲಿ ಬಿಡುಗಡೆಯಾಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.