68 ವಯಸ್ಸಾದ್ರೂ ಬತ್ತದ ರೇಖಾ ಬ್ಯೂಟಿ: ಗಂಡ- ಅತ್ತೆ ಕಾಟ ಇಲ್ದಿದ್ರೆ ಹೀಗೆ ಕಾಣೋದು ಅಂದ್ರು ಫ್ಯಾನ್ಸ್​!

By Suvarna News  |  First Published Aug 1, 2023, 3:31 PM IST

ವಯಸ್ಸು 68 ಆದರೂ ಸೌಂದರ್ಯ ಕಾಪಾಡಿಕೊಂಡಿದ್ದಾರೆ ನಟಿ ರೇಖಾ. ಇವರ ಸೌಂದರ್ಯದ ನಡುವೆ ಅತ್ತೆ-ಗಂಡನನ್ನು ಎಳೆದು ತಂದಿದ್ದಾರೆ ಟ್ರೋಲಿಗರು!
 


80-90ರ ದಶಕದಲ್ಲಿ ಬಾಲಿವುಡ್​ ಆಳಿದ ನಟಿ ರೇಖಾ. ಹಲವಾರು ಹಿಟ್​ ಚಿತ್ರಗಳನ್ನು, ಬ್ಲಾಕ್​ಬಸ್ಟರ್​ (Blockbuster) ಚಿತ್ರ ಕೊಟ್ಟವರು. ಎಷ್ಟೋ ಫ್ಯಾನ್ಸ್​ ನಿದ್ದೆ ಕದ್ದವರು. ವಯಸ್ಸಾದರೂ ಚಿರ ಯೌವನ ಇವರದ್ದು, ನಟಿ ರೇಖಾಗೆ ಈಗ  ವಯಸ್ಸು 68. ಆದರೂ ಇಂದಿಗೂ ಸೌಂದರ್ಯವನ್ನು ಕಾಪಾಡಿಕೊಂಡು ಬಂದಿದ್ದಾರೆ. ಅವರ ಮೊಗದಲ್ಲಿ ಅದೇ ವರ್ಚಸ್ಸು ಕಾಣಿಸುತ್ತದೆ. ಇವರ ಮತ್ತು ಅಮಿತಾಭ್​ ಬಚ್ಚನ್​ ಅವರ ಲವ್​ ಸ್ಟೋರಿ ಎಲ್ಲರಿಗೂ ತಿಳಿದದ್ದೇ. ಆದರೆ ಕೊನೆಗೂ ಅಮಿತಾಭ್​ ರೇಖಾ ಅವರಿಗೆ ಸಿಗಲೇ ಇಲ್ಲ. ಇದೇ ನೋವಿನಲ್ಲಿದ್ದ ನಟಿ, ದೆಹಲಿಯ ಖ್ಯಾತ ಕೈಗಾರಿಕೋದ್ಯಮಿ ಮುಖೇಶ್ ಅಗರ್​ವಾಲ್​ ಅವರನ್ನು 1990ರಲ್ಲಿ ವಿವಾಹವಾದರು. ಆಗ ಈ ಮದುವೆಯ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು.  ರೇಖಾಳ (Rekha) ಜೀವನದಲ್ಲಿ ಇದ್ದಕ್ಕಿದ್ದಂತೆ ಮುಖೇಶ್ ಬಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಸಕತ್​ ಸದ್ದು ಮಾಡಿತ್ತು. ಈ ಬಗ್ಗೆ ಪ್ರಶ್ನೆ ಕೇಳಿದ್ದಾಗ ರೇಖಾ, 'ನಾನು ನನ್ನ ವೃತ್ತಿಜೀವನದಲ್ಲಿ ಆ ಹಂತದಲ್ಲಿಯೇ ಇದ್ದೆ. ನಾನು ಮದುವೆಯಾಗಬೇಕು ಎಂದು ಭಾವಿಸಿದ್ದೆ. ನಾವು ಎಲ್ಲಿ ಭೇಟಿಯಾದೆವು, ಯಾವಾಗ ಭೇಟಿಯಾದೆವು, ಹೇಗೆ ಭೇಟಿಯಾದೆವು ಎಂಬುದು ಮುಖ್ಯವಲ್ಲ. ನಾವು ಭೇಟಿಯಾಗಿದ್ದೆವು. ನಾವು ಮದುವೆಯಾಗಿದ್ದೆವು ಎಂಬುದು ಮುಖ್ಯವಾಗಿತ್ತು. ಈ ಮದುವೆಯಿಂದ ನಾನು ಏನು ಕಲಿತೆ ಅಥವಾ ಕಳೆದುಕೊಂಡಿದ್ದೆ ಎಂದು ತಿಳಿಯುವುದು ಮುಖ್ಯ ಎಂದಿದ್ದರು.

ಆಘಾತಕಾರಿ ವಿಷಯವೆಂದರೆ ಮುಖೇಶ್ ನೇಣು ಬಿಗಿದುಕೊಂಡು ತನ್ನ ಜೀವನವನ್ನು ಅಂತ್ಯಗೊಳಿಸಿದ್ದರು. ವ್ಯಾಪಾರದಲ್ಲಿ ನಷ್ಟ ಮತ್ತು ಅವರ ವೈವಾಹಿಕ ಜೀವನದಲ್ಲಿ ನಡೆಯುತ್ತಿರುವ ಸಮಸ್ಯೆಗಳಿಂದ ಆ ಸಮಯದಲ್ಲಿ ಅವರು ಒತ್ತಡದಲ್ಲಿದ್ದರು ಎಂದು ಹೇಳಲಾಗುತ್ತದೆ. ನಂತರ ಈ ಬಗ್ಗೆ ಸಾಕಷ್ಟು ಊಹಾಪೋಹಗಳು ಎದ್ದವು. ಅಲ್ಲಿಂದ ಇಲ್ಲಿಯವರೆಗೂ ರೇಖಾ ಒಂಟಿಯಾಗಿಯೇ ಬದುಕುತ್ತಿದ್ದಾರೆ. ಆದರೆ ಅವರು ಆಗಾಗ್ಗೆ ಸುದ್ದಿ ಮಾಡುತ್ತಲೇ ಇರುತ್ತಾರೆ. 68ರ ವಯಸ್ಸಿನಲ್ಲಿಯೂ ಅವರ ಸೌಂದರ್ಯದ ಕುರಿತು ಚರ್ಚೆ ಆಗುತ್ತಲೇ ಇರುತ್ತದೆ. ಈಗ ನಟಿಯ ವಿಡಿಯೋ ಒಂದು ಸಕತ್​ ವೈರಲ್​ ಆಗುತ್ತಿದೆ. ಈ ವಿಡಿಯೋದಲ್ಲಿ ನೋಡಿದರೆ ರೇಖಾ ಅವರಿಗೆ 68 ವರ್ಷ ವಯಸ್ಸಾಗಿದೆ ಎಂದು ಹೇಳಲು ಆಗುತ್ತಿಲ್ಲ.

Tap to resize

Latest Videos

ಅಮಿತಾಭ್​ ರೇಖಾ ಪ್ರೇಮಕ್ಕೆ ಸಾಕ್ಷಿಯಾದ ಎರಡು ಉಂಗುರ: ರಹಸ್ಯ ಬಿಚ್ಚಿಟ್ಟ ನಟಿ

ಈ ವಿಡಿಯೋಗೆ ಸಾಕಷ್ಟು ಕಮೆಂಟ್​ಗಳು (Comments) ಬರುತ್ತಿವೆ. ಹೆಚ್ಚಿನವರು ಲವ್​ ಇಮೋಜಿಗಳಿಂದ ರೇಖಾ ಅವರ ಸೌಂದರ್ಯವನ್ನು ಹೊಗಳಿದ್ದರೆ, ಇನ್ನು ಕೆಲವರು ಮೇಕಪ್​ ಜಾಸ್ತಿ ಆಯಿತು ಎನ್ನುತ್ತಿದ್ದಾರೆ. ಇವರ ಸೌಂದರ್ಯಕ್ಕೂ ಮದುವೆಯ ಲೈಫ್​ಗೂ ಕನೆಕ್ಟ್​ ಮಾಡಿರುವ ಫ್ಯಾನ್ಸ್​, ಮದುವೆ- ಗಂಡ- ಅತ್ತೆ ಮಕ್ಕಳ ಕಾಟವಿಲ್ಲದಿದ್ದರೆ, ಮಕ್ಕಳನ್ನು ನೋಡಿಕೊಳ್ಳುವ ಟೆನ್ಷನ್​ ಇಲ್ಲದಿದ್ದರೆ ಯಾರು ಬೇಕಾದರೂ ಯುವತಿಯ ಹಾಗೆ ಕಾಣಿಸ್ತಾರೆ ಎನ್ನೋದಾ? ಒಟ್ಟಿನಲ್ಲಿ ರೇಖಾ ಅವರ ಸೌಂದರ್ಯ ಸದಾ ಹಾಟ್​ ವಿಷಯವಾಗಿಯೇ ಇರುತ್ತದೆ.

ಅಂದಹಾಗೆ ರೇಖಾ ಅವರ  ಜೀವನ ಸಾಕಷ್ಟು ನಿಗೂಢತೆಯಿಂದ  ಕೂಡಿದೆ. ತಮಿಳಿನ ಸೂಪರ್‌ಸ್ಟಾರ್ ಜೆಮಿನಿ ಗಣೇಶನ್ ಹಾಗೂ ನಟಿ ಕೆ ಪುಷ್ಪವಲ್ಲಿ ಅವರ ಮಗಳಾಗಿ ಜನಿಸಿದ್ದ ರೇಖಾ, ಸ್ವಂತ ಪರಿಶ್ರಮದಿಂದ ಮೇಲೆ ಬಂದವರು. ಸ್ಟಾರ್​ ಕಿಡ್​ ಎಂಬ ಹೆಸರಿನಿಂದ ಬಂದವರಲ್ಲ. 70ರ ದಶಕದ ವರೆಗೂ ತಮ್ಮ ಕುಟುಂಬದ ಹಿನ್ನೆಲೆಯನ್ನೇ ರೇಖಾ ಹೇಳಿಕೊಂಡಿರಲಿಲ್ಲ. ನಂತರ ಇವರ ಜೀವನ ನೋವಿನ ಸರಮಾಲೆಯಾಗಿಯೇ ಉಳಿತು. ಸೂಪರ್‌ಸ್ಟಾರ್ ಅಮಿತಾಭ್​ ಬಚ್ಚನ್ (Amithabh Bhacchan) ಮತ್ತು  ರೇಖಾ ಅವರ ಪ್ರೇಮಕಥೆ ಯಾವ ಸಿನಿಮಾಗೂ ಕಡಿಮೆಯೇನಿಲ್ಲ.  ಇದು ಜಗಜ್ಜಾಹೀರವಾಗಿದ್ದರೂ ಅಮಿತಾಭ್ ಮಾತ್ರ ಇದನ್ನು ಬಹಿರಂಗವಾಗಿ ಒಪ್ಪಿಕೊಳ್ಳಲೇ ಇಲ್ಲ, ಆದರೆ ರೇಖಾ ತಮ್ಮ ಪ್ರೇಮ ಕಥೆಯ ಬಗ್ಗೆ ಹಲವಾರು ವೇದಿಕೆಗಳಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ಅವರು ಬರೆದಿರುವ ತಮ್ಮ ಆತ್ಮಚರಿತ್ರೆ ‘ರೇಖಾ: ದಿ ಅನ್‌ಟೋಲ್ಡ್ ಸ್ಟೋರಿ’ಯಲ್ಲಿ (Rekha The Untold Story) ಇವರ ಜೀವನದ ಹಲವಾರು ಅಂಶಗಳು ಇವೆ.

ನಾಯಕ ಬಿಗಿದಪ್ಪಿ ಐದು ನಿಮಿಷ ಕಿಸ್​ ಮಾಡಿದ ಕರಾಳ ಅನುಭವ ಬಿಚ್ಚಿಟ್ಟ ನಟಿ ರೇಖಾ 

click me!