KGF 2; ಚಿತ್ರೀಕರಣ ವೇಳೆ ಪ್ರಶಾಂತ್ ನೀಲ್ ಕಾಲೆಳೆದ ರವೀನಾ ಟಂಡನ್; ಮೇಕಿಂಗ್ ವಿಡಿಯೋ ವೈರಲ್

By Shruiti G Krishna  |  First Published May 8, 2022, 11:52 AM IST

ಇಡೀ ಕೆಜಿಎಫ್ ತಂಡ ಸಂಭ್ರಮದಲ್ಲಿ ತೇಲುತ್ತಿದೆ. ಈ ನಡುವೆ ಬಾಲಿವುಡ್ ಸ್ಟಾರ್ ರವೀನಾ ಟಂಡನ್ ಕ್ಯೂಟ್ ಮೇಕಿಂಗ್ ವಿಡಿಯೋ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ರಮಿಕಾ ಸೇನ್ ಆಗಿ ಮಿಂಚಿರುವ ರವೀನಾ ಟಂಡನ್ ಚಿತ್ರೀಕರಣ ವೇಳೆ ಪ್ರಶಾಂತ್ ನೀಲ್ ಕಾಲೆಳೆಯುತ್ತಿರುವ ವಿಡಿಯೋವನ್ನು ಶೇರ್ ಮಾಡಿದ್ದಾರೆ.


ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್-2 ದೇಶ-ವಿದೇಶಗಳಲ್ಲಿ ಸದ್ದು ಮಾಡುತ್ತಿದೆ. ಸಿನಿಮಾ ಬಿಡುಗಡೆಯಾಗಿ ಒಂದು ತಿಂಗಳು ಸಮೀಪಿಸುತ್ತಿದ್ದರೂ ಅನೇಕ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಈಗಾಗಲೇ ಕೋಟಿ ಕೋಟಿ ಬಾಚಿಕೊಂಡಿರುವ ಕೆಜಿಎಫ್-2 ಕಲೆಕ್ಷನ್ ಅಬ್ಬರ ಇನ್ನೂ ಮುಂದುವರೆದಿದೆ. ಭಾರತದ ಘಟಾನುಘಟಿ ಸ್ಟಾರ್‌ಗಳನ್ನು ಹಿಂದಿಕ್ಕಿ ಮುನ್ನುಗ್ಗುತ್ತಿರುವ ಕೆಜಿಎಫ್-2 ಸದ್ಯ ಹಿಂದಿ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ 2ನೇ ಸ್ಥಾನದಲ್ಲಿದೆ. ಆಮೀರ್ ಖಾನ್ ನಟನೆಯ ದಂಗಲ್, ಆರ್ ಆರ್ ಆರ್ ಕಲೆಕ್ಷನ್ ಹಿಂದಿಕ್ಕಿ 2ನೇ ಸಿನಿಮಾದಲ್ಲಿದೆ.

ಈ ಸಕ್ಸಸ್ ಇಡೀ ತಂಡಕ್ಕೆ ಸಂತಸ ತಂದಿದೆ. ಇಡೀ ಕೆಜಿಎಫ್ ತಂಡ ಸಂಭ್ರಮದಲ್ಲಿ ತೇಲುತ್ತಿದೆ. ಈ ನಡುವೆ ಬಾಲಿವುಡ್ ಸ್ಟಾರ್ ರವೀನಾ ಟಂಡನ್ ಕ್ಯೂಟ್ ಮೇಕಿಂಗ್ ವಿಡಿಯೋ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ರಮಿಕಾ ಸೇನ್ ಆಗಿ ಮಿಂಚಿರುವ ರವೀನಾ ಟಂಡನ್ ಚಿತ್ರೀಕರಣ ವೇಳೆ ಪ್ರಶಾಂತ್ ನೀಲ್ ಕಾಲೆಳೆಯುತ್ತಿರುವ ವಿಡಿಯೋವನ್ನು ಶೇರ್ ಮಾಡಿದ್ದಾರೆ. ರವೀನಾ ಟಂಡನ್ ಶೇರ್ ಮಾಡಿರುವ ವಿಡಿಯೋದಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಸೂಚನೆಗಳನ್ನು ನೀಡುತ್ತಿದ್ದಾರೆ. ಆಗ ರವೀನಾ ಟಂಡನ್ ಪ್ರಶಾಂತ್ ನೀಲ್ ಅವರನ್ನು ಟೀಸ್ ಮಾಡಿದ್ದಾರೆ. ಇದನ್ನು ನೋಡಿ ಪ್ರಶಾಂತ್ ನಗುತ್ತಾ ನಿಂತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಅರ್ಹತೆಗಿಂತ ಹೆಚ್ಚು ಹೊಗಳುತ್ತಾರೆ; KGF 2, RRR ಸಕ್ಸಸ್ ಬಗ್ಗೆ ನವಾಜುದ್ದೀನ್ ಸಿದ್ದಿಕಿ ಮಾತು

Tap to resize

Latest Videos

ವಿಡಿಯೋ ಶೇರ್ ಮಾಡಿ ರವೀನಾ, ನಾವೆಲ್ಲರೂ ತನ್ನ ಸ್ವೀಟ್ ಪ್ರಶಾಂತ್ ನೀಲ್ ಅವರಿಗೆ ಟೀಸ್ ಮಾಡುತ್ತಿರುವುದು. ಈ ಸುಂದರ ವಿಡಿಯೋಗೆ ಧನ್ಯವಾದಗಳು ಭುವನ್ ಗೌಡ ಎಂದು ಕ್ಯಾಪ್ಷನ್ ನೀಡಿದ್ದಾರೆ.

in her element!!🎬 , we all teasing my sweet ! thank you @bhuvanphotography for this clip. 🎬👍🏻 pic.twitter.com/YAutdIqtZu

— Raveena Tandon (@TandonRaveena)


KGF 2; ಬಾಕ್ಸ್ ಆಫೀಸ್‌ನಲ್ಲಿ ರಾಕಿ ರಣಾರ್ಭಟ, ರೆಕಾರ್ಡುಗಳು ಧೂಳಿಪಟ

 

ಕೆಜಿಎಫ್-2 ಸಿನಿಮಾದಲ್ಲಿ ರವೀನಾ ಡಂಟನ್ ಪಾತ್ರಕ್ಕೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರಧಾನಿ ರಮಿಕಾ ಸೇನ್ ಪಾತ್ರದಲ್ಲಿ ರವೀನಾ ಮಿಂಚಿದ್ದಾರೆ. ರವೀನಾ ಅವರಿಗೆ ಇದು ಎರಡನೇ ಕನ್ನಡ ಸಿನಿಮಾವಾಗಿದೆ. ಇಷ್ಟು ದೊಡ್ಡ ಮಟ್ಟದಲ್ಲಿ ಹಿಟ್ ನೀಡಿರುವ ಕೆಜಿಎಫ್-2 ಬಗ್ಗೆ ರವೀನಾ ಫುಲ್ ಖುಷ್ ಆಗಿದ್ದಾರೆ. ಇನ್ನು ಈ ಸಿನಿಮಾದಲ್ಲಿ ಅಬ್ಬರಿಸಿರುವ ಬಾಲಿವುಡ್ ಸ್ಟಾರ್ ಸಂಜಯ್ ದತ್ ಸಕ್ಸಸ್ ನ ಸಂಭ್ರಮದಲ್ಲಿದ್ದಾರೆ. ಅಧೀರ ಆಗಿ ಮಿಂಚಿರುವ ಸಂಜಯ್ ದತ್ ಅಭಿಮಾನಿಗಳ ಮನಗೆದ್ದಿದ್ದಾರೆ. ಕೆಜಿಎಫ್-2 ಕಲಾವಿದ ಆಯ್ಕೆ, ಅಭಿನಯ, ಮೇಕಿಂಗ್, ಸಂಗೀತ, ನಿರ್ದೇಶನ, ಆಕ್ಷನ್ ಪ್ರತಿಯೊಂದು ವಿಚಾರದಲ್ಲೂ ಅಭಿಮಾನಿಗಳ ಹೃದಯ ಗೆದ್ದಿದೆ. ಇದೀಗ ಇಡೀ ತಂಡ ಯಶಸ್ಸನ್ನು ಆಚರಣೆ ಮಾಡುತ್ತಿದೆ.

 

click me!