ಮೊದಲ ಸಲ ಮಗಳ ಸೀಕ್ರೆಟ್ ಗುಣಗಳ ಬಗ್ಗೆ ಹಂಚಿಕೊಂಡ ರಾಣಿ ಮುಖರ್ಜಿ. ಏನಿದು ಟೋ ವಾಕಿಂಗ್ ಸಮಸ್ಯೆ?
ಬಾಲಿವುಡ್ ಕೃಷ್ಣ ಸುಂದರಿ ರಾಣಿ ಮುಖರ್ಜಿ ಮತ್ತು ಪತಿ ಚಿತ್ರ ನಿರ್ದೇಶಕ ಆದಿತ್ಯಾ ಚೋಪ್ರಾ 2015ರಲ್ಲಿ ಡಿಸೆಂಬರ್ 9ರಂದು ಮಗಳು ಅದಿರಾಗೆ ಜನ್ಮ ನೀಡಿದ್ದರು. ಅದಾದ ಮೇಲೆ ಎರಡನೇ ಮಗುವಿಗೆ ತುಂಬಾನೇ ಪ್ರಯತ್ನ ಪಟ್ಟರಂತೆ ಆದರೆ ಗರ್ಭಪಾತದ್ದಿಂದ ಕಳೆದುಕೊಂಡಿರು. ಹೀಗಾಗಿ ಏನೇ ಪ್ರೀತಿ ಇದ್ದರೂ ಸಂಪೂರ್ಣವಾಗಿ ಅಧಿರಾಳಿಗೆ ಕೊಡುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮಗಳ ಸೀಕ್ರೆಟ್ ಗುಣಗಳನ್ನು ಹಂಚಿಕೊಂಡಿದ್ದಾರೆ.
ಹೌದು! ಕರೀನಾ ಕಪೂರ್ ಹೋಸ್ಟ್ ಮಾಡಿರುವ ಕಾರ್ಯಕ್ರಮದಲ್ಲಿ ರಾಣಿ ಮುಖರ್ಜಿ ಭಾಗಿಯಾಗಿದ್ದರು ಆಗ ತಮ್ಮ ಮಗಳ ಬಗ್ಗೆ ಹಮ್ಮೆಯಿಂದ ಹೇಳಿದ್ದಾರೆ. 'ನನ್ನ ಮಗಳು ರೂಮಿನಲ್ಲಿ ಒಬ್ಬಲೇ ಸಮಯ ಕಳೆಯಬೇಕು ಅಂದ್ರೆ ತುಂಬಾ ನಯವಿನಯದಲ್ಲಿ ಅಮ್ಮ ಇದು Me time ಎನ್ನುತ್ತಾಳೆ ಆಗ ನಾನು ಹೊರ ಹೋಗುತ್ತೀನಿ. ಎಲ್ಲ ಮಕ್ಕಳಂತೆ ನನ್ನ ಮಗಳು ಪದೇ ಪದೇ ಪ್ರಶ್ನೆ ಕೇಳುವುದಿಲ್ಲ ಆಕೆನೇ ಅರ್ಥ ಮಾಡಿಕೊಳ್ಳುತ್ತಾಳೆ ಇಲ್ಲವಾದರೆ ನಾನು ಆಕೆಯ ಫ್ಯಾನ್ ರೀತಿ ಹಿಂದೆ ಹಿಂದೆ ಹೋಗಿ ಸಮಯ ಕಳೆಯಬೇಕು. ಮೀ ಟೈಂ ಅನ್ನೋ ಪದವನ್ನು ನನ್ನ ಗಂಡ ಹೇಳಿಕೊಟ್ಟಿರುವುದು. ಆಕೆ ಎನರ್ಜಿಯನ್ನು ನಾವು ಮ್ಯಾಚ್ ಮಾಡಲು ಸಾಧ್ಯವಿಲ್ಲ ಅಲ್ಲದೆ ಆಕೆ ಸಖತ್ ಕೂಲ್ ವ್ಯಕ್ತಿ' ಎಂದು ರಾಣಿ ಮುಖರ್ಜಿ ಮಾತನಾಡಿದ್ದಾರೆ.
'ನನ್ನ ಮಗಳನ್ನು ಬಿಟ್ಟು ಇರುವುದು ತುಂಬಾ ಕಷ್ಟ ಹೀಗಾಗಿ ಆಕೆಯ ಮೊದಲ ಸ್ಕೂಲ್ ದಿನ ನಾನು ಡ್ರಾಪ್ ಮಾಡಲಿಲ್ಲ ಆದರೆ ನನ್ನ ಅದೃಷ್ಟ ಮಗಳ ಸ್ಕೂಲ್ ಆರಂಭದವಾಗಿದ್ದು ಕೋವಿಡ್ ಸಮಯದಲ್ಲಿ ನನ್ನಷ್ಟು ಖುಷಿಯಾಗಿರುವ ವ್ಯಕ್ತಿ ಬೇರೆ ಯಾರೂ ಇಲ್ಲ. ಜನರ ನಡುವೆ ಇದ್ದಾಗ ಅಥವಾ ಪಬ್ಲಿಕ್‌ನಲ್ಲಿ ಇದ್ದಾಗ ರಂಪಾಟ ಮಾಡುವುದಿಲ್ಲ ಸೈಲೆಂಟ್ ಆಗಿ ಇರುತ್ತಾರೆ. ನನಗೆ ಇದುವರೆಗೂ ಆಕೆ ಸುಳ್ಳು ಹೇಳಿಲ್ಲ ಏನೇ ಆದರೂ ಮಮ್ಮಿ ಅಂತ ಮೊದಲು ನನ್ನ ಬಳಿ ಓಡಿ ಬರುತ್ತಾಳೆ' ಎಂದು ರಾಣಿ ಮುಖರ್ಜಿ ಹೇಳಿದ್ದಾರೆ.
2 ವರ್ಷ ಕೈ ಕಟ್ಟಾಕಿದ್ದಂತೆ ಆಗಿತ್ತು, ಯಾರಾದರೂ ನನ್ನನ್ನು ಸೇವ್ ಮಾಡಲಿ ಎಂದು ಕಾಯುತ್ತಿದ್ದೆ: ಚೈತ್ರಾ ವಾಸುದೇವನ್
'ನನ್ನ ಮಗಳು ಬೆಳೆಯುತ್ತಿದ್ದಂತೆ ಟೋ ವಾಕಿಂಗ್ (ಹಿಮ್ಮಡಿ ಅಥವಾ ಯಾವುದೇ ಕಾಲು ಭಾಗದ ಮೇಲೆ ಹೆಚ್ಚು ಅಥವಾ ಯಾವುದೇ ಭಾರವನ್ನು ಹಾಕದೇ ತನ್ನ ಕಾಲ್ಬೆರಳುಗಳ ಅಥವಾ ಅವರ ಪಾದದ ಚೆಂಡಿನ ಮೇಲೆ ನಡೆಯುವುದು) ಮಾಡುತ್ತಿದ್ದಳು. ಇದನ್ನು ಸರಿ ಮಾಡಲು ನಾನು ವೈದ್ಯರನ್ನು ಸಂಪರ್ಕ ಮಾಡಿದೆ ಏಕೆಂದರೆ ಸರಿಯಾದ ಸಮಯಕ್ಕೆ ಸರಿ ಮಾಡಿಲ್ಲ ಅಂದ್ರೆ ಮುಂದಕ್ಕೂ ಹಾಗೆ ವಾಕಿಂಗ್ ಮಾಡುತ್ತಾಳೆ ಅನ್ನೋ ಭಯ ಶುರುವಾಗಿತ್ತು' ಎಂದಿದ್ದಾರೆ ರಾಣಿ ಮುಖರ್ಜಿ.