ಜಿಮ್‌, ವರ್ಕ್‌‌ಔಟ್‌ ಇಲ್ಲದೇ ಮಾಧವನ್‌ 21 ದಿನಗಳಲ್ಲಿ ತೂಕ ಇಳಿಸಿಕೊಂಡದ್ದು ಹೇಗೆ? ನಟನಿಂದ ಟಿಪ್ಸ್‌

By Suchethana D  |  First Published Jul 20, 2024, 3:27 PM IST

ಸಿನಿಮಾಕ್ಕಾಗಿ ತೂಕ ಹೆಚ್ಚಿಸಿಕೊಂಡ ನಟ ಮಾಧವನ್‌ 21 ದಿನಗಳಲ್ಲಿ ತೂಕ ಇಳಿಸಿಕೊಂಡಿದ್ದಾರೆ. ಅದು ಹೇಗೆ ಎನ್ನುವ ಅಭಿಮಾನಿಗಳ ಪ್ರಶ್ನೆಗೆ ನಟ ಟಿಪ್ಸ್‌ ಕೊಟ್ಟಿದ್ದೇನು?
 


ಸಾಮಾನ್ಯವಾಗಿ ನಟನಾ ಕ್ಷೇತ್ರದಲ್ಲಿ ಫಿಟ್‌ ಮತ್ತು ಫೈನ್‌ ಆಗಿರಬೇಕು. ಕೆಲವು ನಟರು ಸಿನಿಮಾಕ್ಕೆ ತಕ್ಕಂತೆ ತೂಕ ದಿಢೀರ್‌ ಏರಿಕೆ ಮಾಡಿಕೊಳ್ಳುವುದು ಇದೆ, ಇದೇ ವೇಳೆ ಸಿನಿಮಾಕ್ಕೆ ಅಗತ್ಯ ಬಿದ್ದರೆ ತೂಕ ಇಳಿಕೆ ಮಾಡಿಕೊಳ್ಳುತ್ತಾರೆ. ಕೆಲವು ನಟಿಯರು ಸಿನಿಮಾಕ್ಕೆ ಅಗತ್ಯ ಬಿದ್ದರೆ ಬಟ್ಟೆ ಬಿಚ್ಚಲು ರೆಡಿ ಎಂದು ಹೇಳುವುದು ಸಾಮಾನ್ಯವಾದರೆ, ನಟರು ಮಾತ್ರ ತೂಕವನ್ನು ಹೆಚ್ಚು-ಕಡಿಮೆ ಮಾಡಿಕೊಳ್ಳುವಲ್ಲಿ ನಿರತರಾಗಿರುತ್ತಾರೆ. ಪಾತ್ರಕ್ಕೆ ತಕ್ಕಂತೆ ತೂಕ ಏರಿಸಿಕೊಂಡ ನಟರು ದಿಢೀರನೆ ಸ್ಲಿಮ್‌ ಆಗುವುದು ಸುಲಭದ ಮಾತಲ್ಲ. ಹಾಗೆಂದು ಔಷಧಗಳನ್ನು ತಿಂದು ತೂಕ ಕಡಿಮೆ ಮಾಡಿಕೊಂಡು ಆರೋಗ್ಯ ಹಾಳುಮಾಡಿಕೊಳ್ಳುವುದೂ ಸಾಧ್ಯವಿಲ್ಲ. ಜಿಮ್‌, ವರ್ಕ್‌ಔಟ್‌ ಎಲ್ಲವೂ ಮಾಮೂಲು.

ಆದರೆ ಜಿಮ್‌, ವರ್ಕ್‌ಔಟ್‌, ವ್ಯಾಯಾಮ ಏನೂ ಇಲ್ಲದೇ ಕೇವಲ 21 ದಿನಗಳಲ್ಲಿ ತೂಕ ಕಡಿಮೆ ಹೇಗೆ ಮಾಡಿಕೊಳ್ಳಬಹುದು ಎನ್ನುವ ಟಿಪ್ಸ್‌ ಹೇಳಿಕೊಂಡಿದ್ದಾರೆ.  ಫಿಟ್ ಮತ್ತು ಡ್ಯಾಶಿಂಗ್ ಆಗಿರುವ ನಟ ಮತ್ತು ಚಲನಚಿತ್ರ ನಿರ್ಮಾಪಕ ಆರ್ ಮಾಧವನ್. ಅವರು ತಮ್ಮ  ನಿರ್ದೇಶನದ ರಾಕೆಟ್ರಿ: ದಿ ನಂಬಿ ಎಫೆಕ್ಟ್‌ಗಾಗಿ ತೂಕವನ್ನು ಹೆಚ್ಚಿಸಿಕೊಂಡಿದ್ದರು. ಅದಾದ ಬಳಿಕ ಸಣ್ಣಗಾದರು. ಈ ರಹಸ್ಯದ ಬಗ್ಗೆ ಅವರ ಅಭಿಮಾನಿಗಳು ವಿಪರೀತ ತಲೆ ಕೆಡಿಸಿಕೊಂಡಿದ್ದರು. ಇದೀಗ ನಟ,  ತಮ್ಮ ದೇಹದ ರೂಪಾಂತರದ ಹಿಂದಿನ ರಹಸ್ಯವನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.  

Tap to resize

Latest Videos

ಮದ್ವೆಯಾದ ತಕ್ಷಣ ಮಗುವಾಗಿದ್ದು ಇದ್ಕೇ ಅಂತೆ! ನಟಿ ಅದಿತಿ ಮಾತಿಗೆ ತಾರಾ, ಶ್ರುತಿನೇ ನಾಚಿಕೊಂಡುಬಿಟ್ರು...

ಜಿಮ್‌, ವರ್ಕೌಟ್‌ ಏನೂ ಇಲ್ಲದೇ ಕೇವಲ ಆಹಾರ ಕ್ರಮದಿಂದ ತೂಕ ಇಳಿಸಿಕೊಳ್ಳಲು ಸಾಧ್ಯ ಎನ್ನುವುದು ಅವರ ಮಾತು. ಅದಕ್ಕಾಗಿ ತಾವು ಮಾಡಿದ್ದೇನು ಎಂಬ ಬಗ್ಗೆ ನಟ ಹೇಳಿದ್ದಾರೆ. ಸಿನಿಮಾಕಕ್ಕಾಗಿ ತೂಕ ಏರಿಸಿಕೊಂಡ ಬಳಿಕ ಇಪ್ಪತ್ತೊಂದು ದಿನಗಳಲ್ಲಿ ತೂಕವನ್ನು ಕಡಿಮೆ ಮಾಡಿಕೊಂಡಿದ್ದೇನೆ. ಅದಕ್ಕಾಗಿ ನಾನು ಕೇವಲ ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿಕೊಂಡಿರುವೆ ಎಂದಿರುವ ನಟ ಅದರ ರಹಸ್ಯ ಹೇಳಿಕೊಂಡಿದ್ದಾರೆ.  ಮಧ್ಯಂತರ ಉಪವಾಸ, ಹೆಚ್ಚು ಹಸಿರು ತರಕಾರಿ, ಸೊಪ್ಪು, ಹೆಚ್ಚು ಹೊತ್ತು ಆಹಾರವನ್ನು ಅಗೆಯುವುದು... ಇಷ್ಟು ಮಾಡಿ ತೂಕ ಕಡಿಮೆ ಮಾಡಿಕೊಂಡಿರುವುದಾಗಿ ಹೇಳಿದ್ದಾರೆ.

ಇದರ ಬಗ್ಗೆ ಇನ್ನಷ್ಟು ಹೇಳಿರುವ ಅವರು,  ಸಂಜೆ 6:45ಕ್ಕೆ ತಮ್ಮ ಕೊನೆಯ ಊಟ ಮುಗಿಸಬೇಕು. ಅಂದ್ರೆ ರಾತ್ರಿ ಇಷ್ಟು ಹೊತ್ತಿನ ಮುಂಚೆ ಊಟ ಮುಗಿಸಬೇಕು.  ಇದರ ಮೇಲೆ ನೀರು ಕುಡಿಯುವುದು ಬಿಟ್ಟರೆ ಏನೂ ತಿನ್ನಬಾರದು. ಆಹಾರವನ್ನು 45-60 ಬಾರಿ ಅಗಿಯೇಕು.  ಇದರ ಜೊತೆ ಉತ್ತಮ ನಿದ್ರೆ, ಮುಂಜಾನೆಯ ದೀರ್ಘ ನಡಿಗೆ, ಮಲಗುವ ಮುನ್ನ 90 ನಿಮಿಷಗಳ ಮೊದಲೇ ಫೋನ್‌ ಅನ್ನು ಆಫ್‌ ಮಾಡಿಡುವ ಅಭ್ಯಾಸ ರೂಢಿ ಮಾಡಿಕೊಳ್ಳಬೇಕು ಎನ್ನುವುದು ಅವರ ಮಾತು. ತಾವು ಇವೆಲ್ಲವನ್ನೂ ಮಾಡಿರುವುದಾಗಿ ಹೇಳಿಕೊಂಡಿರೋ ನಟ,  ಹೆಚ್ಚಾಗಿ ಲಿಕ್ವಿಡ್‌ ಆಹಾರಗಳನ್ನು ಸೇವಿಸುತ್ತಿದ್ದೆ ಎಂದಿದ್ದಾರೆ.  ಆಹಾರದಲ್ಲಿ ಸಾಕಷ್ಟು ದ್ರವಗಳು ಮತ್ತು ಹಸಿರು ತರಕಾರಿಗಳನ್ನು ಬಳಸುತ್ತಿದ್ದೆ.  ಸಂಸ್ಕರಿಸಿದ ಆಹಾರಗಳಿಂದ ದೂರವಿದ್ದೆ.  

ಡೆಂಗ್ಯೂ ಹತ್ತಿರ ಸುಳಿಯದಂತೆ ಇಲ್ಲಿದೆ ದಿವ್ಯ ಔಷಧ: ಜ್ವರಕ್ಕೂ ರಾಮಬಾಣ- ವೈದ್ಯೆಯಿಂದ ಸುಲಭದ ಪರಿಹಾರ...
 

click me!