
ಕೋವಿಡ್ ಸಮಯದಲ್ಲಿ ಹಾಗೂ ಕೋವಿಡೋತ್ತರ ಹಲವು ಜನರಿಗೆ ನೆರವಾಗಿ ಹಲವರ ಪಾಲಿಗೆ ದೇವರು ಎನಿಸಿಕೊಂಡಿರುವ ಬಾಲಿವುಡ್ ನಟ ಸೋನು ಸೂದ್, ಈಗ ಮುಸ್ಲಿಮರ ಒಂದು ವರ್ಗ ಆಹಾರದ ಮೇಲೆ ಉಗುಳಿ ಅದನ್ನು ಜನರಿಗೆ ನೀಡುವ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಗ್ರಾಹಕರಿಗೆ ನೀಡುವ ರೊಟ್ಟಿಗಳ ಮೇಲೆ ಉಗುಳಿ ಅದನ್ನೇ ಜನರಿಗೆ ನೀಡುತ್ತಿರುವ ಬಗ್ಗೆ ವ್ಯಾಪಕ ಟೀಕೆಗೆ ಒಳಗಾದ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ, ಅದರ ಸಮರ್ಥನೆ ಮಾಡಿಕೊಂಡಿರುವ ಸೋನು ಸೂದ್, ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ!
ಇಷ್ಟೇ ಅಲ್ಲದೇ ಆಹಾರದ ಮೇಲೆ ಉಗುಳುವುದನ್ನು ಶ್ರೀರಾಮಚಂದ್ರನಿಗೆ ಅವರು ಹೋಲಿಕೆ ಮಾಡಿದ್ದಾರೆ. ಶ್ರೀರಾಮನ ಬರುವಿಕೆಯನ್ನೇ ಕಾಯುತ್ತಿದ್ದ ಶಬರಿ, ಆತನಿಗೆ ನೀಡಲು ಒಳ್ಳೆಯ ಹಣ್ಣು ಕೊಡುವ ಸಂಬಂಧ ಅದನ್ನು ಕಚ್ಚಿ ಕಚ್ಚಿ ನೋಡಿದ್ದಳು. ಕಚ್ಚಿದ ಹಣ್ಣನ್ನೇ ಪ್ರೀತಿಯಿಂದ ರಾಮನಿಗೆ ತಿನಿಸಿದ್ದಳು. ಅವಳ ಭಕ್ತಿಗೆ ಸೋತ ಶ್ರೀರಾಮಚಂದ್ರ ಅದನ್ನೇ ಪ್ರೀತಿಯಿಂದ ಸೇವನೆ ಮಾಡಿದ್ದ. ಹಾಗಿದ್ದ ಮೇಲೆ ಮುಸ್ಲಿಮರು ಆಹಾರದಲ್ಲಿ ಉಗುಳಿ ಕೊಟ್ಟರೆ ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ. ಭಗವಾನ್ ರಾಮನು ಶಬರಿಯ ಹಣ್ಣುಗಳನ್ನು ತಿನ್ನಬಹುದಾದರೆ, ಉಗುಳಿದ ರೊಟ್ಟಿಗಳನ್ನು ಏಕೆ ತಿನ್ನಬಾರದು ಎಂದು ಬಾಲಿವುಡ್ ನಟ ಹೇಳಿದ್ದಾರೆ. ಇದು "ಮಾನವೀಯತೆಯ ಕ್ರಿಯೆ ಎಂದೂ ಸೇರಿಸಿದ್ದಾರೆ.
ಕಂಗನಾ ಜೊತೆ ನಟಿಸಿದ ಬಳಿಕ ಚಿರಾಗ್ ಪಾಸ್ವಾನ್ ಸಿನಿಮಾನೇ ಮಾಡಿಲ್ಲ ಯಾಕೆ? ಕಾರಣ ಹೇಳಿದ ಸಂಸದ
ಅಹಿಂಸೆಯಿಂದ ಹಿಂಸೆಯನ್ನು ಸೋಲಿಸಬಹುದು. ಮಾನವೀಯತೆ ಉಳಿಯಬೇಕು. ಜೈ ಶ್ರೀ ರಾಮ್ ಎಂದು ಸೋನು ಸೂದ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಆದರೆ ಇದು ಈಗ ವ್ಯಾಪಕ ಟೀಕೆಗೆ ಗುರಿಯಾಗಿದೆ. ಪ್ರಚಾರದ ಭರಾಟೆಯಲ್ಲಿ ಹೀಗೆ ನಟ ನಡೆದುಕೊಂಡಿರುವುದು ಅತ್ಯಂತ ಖೇದಕರ, ಶ್ರೀರಾಮಚಂದ್ರನನ್ನು ಆಹಾರದ ಮೇಲೆ ಉಗುಳುವ ಹಲಾಲ್‌ಗೆ ಹೋಲಿಕೆ ಮಾಡಿರುವುದು ಸರಿಯಲ್ಲ ಎಂದು ನಟನ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.
ನೀನು ಹಲವು ಜನರ ಬಾಯಲ್ಲಿ ದೇವರು ಎನಿಸಿಕೊಂಡವ. ಅಷ್ಟಕ್ಕೇ ಸೀಮಿತ ಆಗಿರು. ಪ್ರಚಾರ ಹುಚ್ಚಿಗಾಗಿ, ಎಲ್ಲ ವರ್ಗವನ್ನು ಓಲೈಕೆ ಮಾಡಿಕೊಳ್ಳಲು ಈ ರೀತಿಯಾಗಿ ಅತ್ಯಂತ ಹೇಯವಾಗಿ ವರ್ತಿಸಬೇಡ. ಹಿಂದೂಗಳು ಎಲ್ಲವನ್ನೂ ಸಹಿಸಿಕೊಳ್ಳುತ್ತಾರೆ ಎಂಬ ಕಾರಣಕ್ಕೆ ಇಂಥ ಅಸಭ್ಯ ಮಾತುಗಳನ್ನು ಸಹಿಸಲು ಸಾಧ್ಯವಿಲ್ಲ, ಇದೇ ಮಾತನ್ನು ಬೇರೆಯವರಿಗೆ ಹೇಳಿ ನೋಡು, ಆಗ ನಿನ್ನ ತಾಕತ್ತು ಗೊತ್ತಾಗುತ್ತದೆ ಎಂದು ಏಕವಚನದಲ್ಲಿಯೇ ನಟ ಸೋನು ಸೂದ್ ವಿರುದ್ಧ ವಾಗ್ದಾಳಿ ನಡೆಯುತ್ತಿದೆ. ಅನ್ಯಕೋಮಿನವರು ಹಿಂದೂಗಳ ದೇವರ ಮೇಲೆ ಸವಾರಿ ಮಾಡುತ್ತಿರುವುದು ಸಾಲದು ಎಂದು ಹಿಂದೂ ಎನಿಸಿಕೊಂಡಿರುವ ನೀವೇ ಹೀಗೆ ಯಾವುದೇ ಅಸಭ್ಯ ಸಂಪ್ರದಾಯಕ್ಕೆ ಹೋಲಿಕೆ ಮಾಡಿರುವುದು ನಾಚಿಕೆಗೇಡು ಎಂದು ಹಲವರು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ಮದ್ವೆಯಾದ ತಕ್ಷಣ ಮಗುವಾಗಿದ್ದು ಇದ್ಕೇ ಅಂತೆ! ನಟಿ ಅದಿತಿ ಮಾತಿಗೆ ತಾರಾ, ಶ್ರುತಿನೇ ನಾಚಿಕೊಂಡುಬಿಟ್ರು...
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.