RRR ಸಿನಿಮಾ ಬಗ್ಗೆ ಪ್ರಶ್ನೆ : ತೆಲಂಗಾಣ ಪಿಯುಸಿ ಪ್ರಶ್ನೆ ಪತ್ರಿಕೆ ವೈರಲ್‌

By Anusha KbFirst Published May 12, 2022, 6:55 PM IST
Highlights
  • ತೆಲಂಗಾಣ ರಾಜ್ಯದ ಇಂಟರ್‌ಮಿಡಿಯೇಟ್ ಬೋರ್ಡ್ ಪರೀಕ್ಷೆ
  • ಜೂನಿಯರ್ ಎನ್‌ಟಿಆರ್‌ ಪಾತ್ರದ ಬಗ್ಗೆ ಪ್ರಶ್ನೆ
  • ಪ್ರಶ್ನೆ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್
     

ಹೈದರಾಬಾದ್‌: ತೆಲಂಗಾಣ ರಾಜ್ಯದ ಇಂಟರ್‌ಮಿಡಿಯೇಟ್ ಬೋರ್ಡ್ (ಪಿಯುಸಿ) ಪರೀಕ್ಷೆಗಳಲ್ಲಿ ರಾಜಮೌಳಿ ನಿರ್ದೇಶನದ 'RRR' ಸಿನಿಮಾದಲ್ಲಿ ಜೂನಿಯರ್ NTR ಪಾತ್ರದ ಕುರಿತು ಒಂದು ಪ್ರಶ್ನೆ ಕೇಳಲಾಗಿದ್ದು, ಇದರಿಂದ ಪ್ರಶ್ನೆ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇತಿಹಾಸದಲ್ಲಿ ರಾಜ ಮಹಾರಾಜರ ಪರಾಕ್ರಮಗಳ ಬಗ್ಗೆ ಪ್ರಶ್ನೆ ಕೇಳುವುದು ಮಾಮೂಲಿ ಆದರೆ ತೆಲಂಗಾಣ ಬೋರ್ಡ್‌ ಪರೀಕ್ಷೆಯಲ್ಲಿ ಸಿನಿಮಾ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಎಸ್‌ ಎಸ್‌ ರಾಜಮೌಳಿ ಅವರ ಇತ್ತೀಚಿನ ಚಿತ್ರ 'RRR' ಬಿಡುಗಡೆಯಾಗಿ 50 ದಿನಗಳ ಸಮೀಪಿಸುತ್ತಿದೆ, ಆದರೆ ಅದರ  ಕ್ರೇಜ್ ಮಾತ್ರ ಇನ್ನೂ ಚಾಲ್ತಿಯಲ್ಲಿದೆ. ಕೆಲವು ವೆಬ್ ವರದಿಗಳ ಪ್ರಕಾರ, ತೆಲಂಗಾಣದಲ್ಲಿ ತೆಲಂಗಾಣ ಪಬ್ಲಿಕ್ ಇಂಟರ್ಮೀಡಿಯೇಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಈ ಪ್ರಶ್ನೆ ಕೇಳಲಾಗಿದೆ. ವರದಿಯ ಪ್ರಕಾರ ಜೂನಿಯರ್ ಎನ್‌ಟಿಆರ್‌ ಅವರ 'ಆರ್‌ಆರ್‌ಆರ್' ಪಾತ್ರವಾಗಿರುವ ಚಿತ್ರದ ಕೊಮರಂ ಭೀಮ್ ಪಾತ್ರದ ಬಗ್ಗೆ ಪ್ರಶ್ನೆ ಕೇಳಲಾಗಿದೆ. 

In an examination question paper Asked about Jr ntr performance in RRR Movie....
That's the impact BHEEM character created all over the Country... pic.twitter.com/iJ9rqi0L1N

— Vishnu (@vishnuNtr9999)

10th question asked about komaram Bheem NTR. Library of Acting 🐐🐐 pic.twitter.com/w7NExuyAlU

— .RC 🦍 (@SK_Tarock)

ಪ್ರಶ್ನೆಯ ಡಿಟೇಲ್‌ ಈ ರೀತಿ ಇದೆ.

ಈಗ, ನೀವು 'ಆರ್‌ಆರ್‌ಆರ್' ಚಲನಚಿತ್ರವನ್ನು ನೋಡಿದ್ದೀರಿ ಮತ್ತು ಕೋಮರಂ ಭೀಮ್ ಪಾತ್ರದಲ್ಲಿ ಜೂನಿಯರ್ ಎನ್‌ಟಿಆರ್ ಅವರ ಅಭಿನಯವನ್ನು ನೋಡಿದ್ದೀರಿ. ಚಿತ್ರದ ಅದ್ಭುತ ಯಶಸ್ಸಿನ ನಂತರ, ಪ್ರತಿಷ್ಠಿತ ಟಿವಿ ಚಾನೆಲ್‌ನಲ್ಲಿ ಜೂನಿಯರ್ ಎನ್‌ಟಿಆರ್ ಅವರನ್ನು ಸಂದರ್ಶನ ಮಾಡಲು ನಿಮಗೆ ಅವಕಾಶ ಸಿಕ್ಕಿತು ಎಂದು ಈಗ ಊಹಿಸಿಕೊಳ್ಳಿ. ಈಗ, ಚಿತ್ರದ ಯಶಸ್ಸಿನ ನಂತರ ಬರಹಗಾರ, ಜೂನಿಯರ್ ಎನ್‌ಟಿಆರ್ ಅವರೊಂದಿಗೆ ಕಾಲ್ಪನಿಕ ಸಂದರ್ಶನವನ್ನು ಹೊಂದಿದ್ದಾರೆ. ಕೆಳಗೆ ನೀಡಲಾದ ವಿವರಗಳನ್ನು ಬಳಸಿಕೊಳ್ಳಿ:

ಚಿತ್ರದ ಸ್ವರೂಪ
ಚಲನಚಿತ್ರ ನಿರ್ದೇಶಕರೊಂದಿಗಿನ ಅವರ ಸಂಬಂಧ.
ಚಿತ್ರದ ಸ್ಕ್ರಿಪ್ಟ್ ಬಗ್ಗೆ
ಇತರ ನಟರ ಒಳಗೊಳ್ಳುವಿಕೆಯ ಬಗ್ಗೆ
ಪ್ರೇಕ್ಷಕರ ಮೇಲೆ ಚಲನಚಿತ್ರದ ಪ್ರಭಾವ
ಚಿತ್ರದ ಬಗ್ಗೆ ಅವರ ಅಭಿಪ್ರಾಯಗಳು.

RRR Movie: ಆ ಒಂದು ಹಾಡಿಗೆ 17 ಟೇಕ್‌ಗಳನ್ನು ತೆಗೆದುಕೊಂಡಿದ್ದ ರಾಜಮೌಳಿ! 


ಇತ್ತ ಈ ಪ್ರಶ್ನೆ ಪತ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಜೂನಿಯರ್‌ ಎನ್‌ಟಿಆರ್ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದು, ಪ್ರಶ್ನೆ ಪತ್ರಿಕೆಯನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಮ್ಯಾನ್‌ ಆಫ್‌ ದ ಮಾರ್ಸ್‌ ಎನ್‌ಟಿಆರ್‌, ಪವರ್ ಅಪ್ ಜೂನಿಯರ್ ಎನ್‌ಟಿಆರ್ ಎಂದೆಲ್ಲಾ ಕಾಮೆಂಟ್ ಮಾಡುತ್ತಿದ್ದಾರೆ.

ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಬಗ್ಗೆ ನಂಬಿಕೆ ಇಲ್ಲ; ಸೌತ್ ಸಿನಿಮಾ ಸಕ್ಸಸ್ ಬಗ್ಗೆ ಅಭಿಷೇಕ್ ಬಚ್ಚನ್ ಮಾತು 

ಖ್ಯಾತ ನಿರ್ದೇಶಕ ಎಸ್ಎಸ್ ರಾಜಮೌಳಿ (SS Rajamouli) ಮುಟ್ಟಿದ್ದೆಲ್ಲಾ ಚಿನ್ನ ಎಂಬ ಮಾತಿದೆ. ಅವರ ಪ್ರತಿ ಸಿನಿಮಾನೂ ದಾಖಲೆಯ ಹೆಸರು ಬರೆಯುತ್ತೆ. ಇತ್ತೀಚೆಗೆ ಬಿಡುಗಡೆಯಾಗಿರೋ 'ಆರ್‌ಆರ್‌ಆರ್' (RRR) ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಗಲ್ಲಾಪೆಟ್ಟಿಗೆ ತುಂಬಿಸ್ತಿದೆ. ಈ ಸಿನಿಮಾದ ನಾಟು ನಾಟು ಹಾಡು ಮತ್ತು ಅದರ ಡ್ಯಾನ್ಸ್ ಸಖತ್ ಫೇಮಸ್. ಇದೇ ಹಾಡಿಗೆ ನಿರ್ದೇಶಕ ರಾಜಮೌಳಿ ನೃತ್ಯ ಮಾಡಿದ್ದಾರೆ. ಹೌದು! ಸ್ವಲ್ಪ ಟ್ರಿಕ್ಕಿ ಅನಿಸೋ ಈ ಪೆಪ್ಪಿ ಸಾಂಗ್‌ಗೆ ಸೆಲೆಬ್ರಿಟಿಗಳು ಸೇರಿದಂತೆ ಸಾಮಾನ್ಯ ಜನ ನೃತ್ಯ ಮಾಡಿ ಸೋಷಿಯಲ್ ಮೀಡಿಯಾಗಳಲ್ಲಿ (Social Media) ಪೋಸ್ಟ್ ಮಾಡ್ತಿದ್ದಾರೆ.

click me!